ಬದಲಾವಣೆ………ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು…….
ಬದಲಾವಣೆ……… ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು……. ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು…… ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು….. ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು…….. ಭ್ರಷ್ಟಾಚಾರದ ಕೂಪವಾಗುತ್ತಿರುವ ಸರ್ಕಾರಿ ಕಚೇರಿಗಳು……. ಅಪಘಾತಗಳ ತವರೂರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು….. ಮೌಢ್ಯಗಳ ಮಹಲುಗಳಾಗುತ್ತಿರುವ ಎಲ್ಲಾ ಧರ್ಮಗಳ ದೇವಮಂದಿರಗಳು…… ಗುಲಾಮಿ ಮನೋಭಾವ ಸೃಷ್ಟಿಸುತ್ತಿರುವ ಐಟಿಬಿಟಿ ಕಂಪನಿಗಳು……. ವಿವೇಚನಾ ಶಕ್ತಿಯನ್ನೇ ನಾಶ ಮಾಡುತ್ತಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು……… ಉದ್ಯೋಗಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ವಿದೇಶಿ ಕಂಪನಿಗಳು…… ಮೋಸ, ವಂಚನೆ, ಕುತಂತ್ರಗಳ ಕಣಗಳಾಗುತ್ತಿರುವ ರಾಜಕೀಯ ಪಕ್ಷಗಳು….. ದುಷ್ಟ ಜನಪ್ರತಿನಿಧಿಗಳು ಆಯ್ಕೆಯಾಗಲು ವೇದಿಕೆಯಾಗುತ್ತಿರುವ ಚುನಾವಣೆಗಳು…… ಅಪರಾಧಿಗಳ ಸೃಷ್ಟಿಗೆ ಕಾರಣವಾಗುತ್ತಿರುವ ಪೊಲೀಸ್ ಸ್ಟೇಷನ್ ಮತ್ತು ಜೈಲುಗಳು…… ಮೂಢನಂಬಿಕೆಗಳಿಗೆ ದಾಸರನ್ನಾಗಿ ಮಾಡುತ್ತಿರುವ ಮಠಮಾನ್ಯಗಳು……. ಸೀಡ್ಲೆಸ್ ಯುವ ಜನಾಂಗದ ಸೃಷ್ಟಿಗೆ ಕಾರಣವಾಗುತ್ತಿರುವ ಮೊಬೈಲ್, ಲ್ಯಾಪ್ಟಾಪ್ ಮುಂತಾದ ಗ್ಯಾಜೆಟ್ ಗಳು……. ದೇಹ ಮತ್ತು ಮನಸ್ಸುಗಳ ಮೇಲೆ ನಿಯಂತ್ರಣ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ಮಾಡುತ್ತಿರುವ…
ಮುಂದೆ ಓದಿ..
