ಮನೆಗೆ ಬೀಗ ಹಾಕಿದ್ದಾಗ ಕಳ್ಳತನ – 1.70 ಲಕ್ಷ ಮೌಲ್ಯದ ನಗದು ಹಾಗೂ ಬೆಳ್ಳಿ ವಸ್ತುಗಳ ಕಳ್ಳತನ
ಬೆಂಗಳೂರು, ಜುಲೈ 14:2025 ನಗರದ ಯಲಹಂಕದ ಬೆಳ್ಳಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಿಲಯದಲ್ಲಿ ಕುಟುಂಬ ಸಮೇತ ಹೊರಗೆ ಹೋಗಿದ್ದಾಗ, ಮನೆಯಲ್ಲಿ ಬೀಗ ಹಾಕಿದ್ದುದನ್ನು ಬಹುಶಃ ಗಮನಿಸಿದ ಕಳ್ಳರು, ಗೇಟ್ ಹಾಗೂ ಬಾಗಿಲಿನ ಬೀಗವನ್ನು ಒಡೆದು ಒಳನುಗ್ಗಿ ಸುಮಾರು ₹1,70,000 ಮೌಲ್ಯದ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಹರೀಶ ಪದ್ಮನಾಭ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ 10 ಜುಲೈ 2025 ರಂದು ಬೆಳಿಗ್ಗೆ 11 ಗಂಟೆಗೆ ಬನಶಂಕರಿಗೆ ತೆರಳಿದ್ದರು. ಮನೆಗೆ ಬೀಗ ಹಾಕಿ ತೆರಳಿದ್ದ ಅವರು 11 ಜುಲೈ 2025 ರಂದು ಮಧ್ಯರಾತ್ರಿಯ ವೇಳೆ ಮನೆಗೆ ಹಿಂತಿರುಗಿದಾಗ ಗೇಟ್, ಬಾಗಿಲಿನ ಬೀಗಗಳು ಒಡೆಯಲಾಗಿದ್ದನ್ನು ಗಮನಿಸಿದರು. ತಕ್ಷಣವೇ ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಮೊದಲನೆ ಬೀರುವನ್ನು ಬಲವಂತವಾಗಿ ತೆರೆದು, ಅದರಲ್ಲಿ ಇಟ್ಟಿದ್ದ ₹1,00,000 ನಗದು, ₹20,000 ಚಿಲ್ಲರೆ ಹಣ ಹಾಗೂ ಸುಮಾರು 500ಗ್ರಾಂ ತೂಕದ…
ಮುಂದೆ ಓದಿ..
