ದಲೈಲಾಮಾ 90…….ಉತ್ತರಾಧಿಕಾರಿಯ ಹುಡುಕಾಟದಲ್ಲಿ ಮೌಢ್ಯ………
ಜಗತ್ತಿನ ಮಾನವ ಇತಿಹಾಸದಲ್ಲಿ ಕೆಲವೇ ಕೆಲವು ಅತ್ಯುತ್ತಮ ತತ್ವಜ್ಞಾನಿಗಳಲ್ಲಿ ಭಾರತದ ಸಿದ್ದಾರ್ಥ ಎಂಬ ಗೌತಮ ಬುದ್ಧರು ಒಬ್ಬರು.ಅವರ ಚಿಂತನೆಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸಹಜತೆ, ಅನುಭಾವಿಕತೆ, ದೇಹ ಮತ್ತು ಮನಸ್ಸುಗಳ ದಂಡನೆಯಿಂದ ಸಿಗುವ ಅನುಭವ ಎಲ್ಲವನ್ನು ಒಳಗೊಂಡ ಜೀವಪರ ನಿಲುವಿನ ಅತ್ಯಂತ ಮಾನವೀಯ ನಡೆನುಡಿಗಳು ಅಡಕವಾಗಿದೆ.ಅಂತಹ ಬುದ್ಧರ ಚಿಂತನೆಗಳ ಪ್ರಭಾವದಿಂದ ಬೌದ್ಧ ಧರ್ಮ ವಿಶ್ವದ ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ. ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ, ತೈವಾನ್, ಭೂತಾನ್, ಭಾರತ, ಶ್ರೀಲಂಕಾ, ನೇಪಾಳ, ಇಂಡೋನೇಷ್ಯಾ, ಸಿಂಗಾಪುರ, ಥಾಯ್ಲೆಂಡ್, ಟಿಬೆಟ್ ಮುಂತಾದ ದೇಶಗಳಲ್ಲಿ ಬೌದ್ಧ ಧರ್ಮ ಪೂರ್ಣವಾಗಿ ಮತ್ತು ಕೆಲವು ಕಡೆ ಭಾಗಶಃ ಆಚರಣೆಯಲ್ಲಿದೆ. ಇದೀಗ ಟಿಬೆಟ್ ನ ಧರ್ಮಗುರು ದಲೈಲಾಮ ಅವರಿಗೆ 90 ವರ್ಷ ಆದ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿಯ ಹುಡುಕಾಟ ಪ್ರಾರಂಭವಾಗಿದೆ. ಅದರಲ್ಲಿ ವಿಶೇಷತೆ ಏನು ಎಂದರೆ, ಉತ್ತರಾಧಿಕಾರಿಯನ್ನು ಪುನರ್ಜನ್ಮದ ನಂಬಿಕೆಯ ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ. ಅಂದರೆ…
ಮುಂದೆ ಓದಿ..
