ಸುದ್ದಿ 

ಆಟೋ ಚಾಲಕ ಮೂರ್ತಿ ಕಾಣೆ: ಕುಟುಂಬದಲ್ಲಿ ಆತಂಕದ ವಾತಾವರಣ

ಬೆಂಗಳೂರು, ಜುಲೈ 4, 2025: ನಗರದ ನಿವಾಸಿಯಾದ ಆಟೋ ಚಾಲಕ ಜಿ.ಮೂರ್ತಿ (54) ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದು, ಈ ಬಗ್ಗೆ ಪತ್ನಿಯವರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂರ್ತಿ ಅವರು ದಿನಾಂಕ 29 ಜೂನ್ 2025 ರಂದು ಬೆಳಿಗ್ಗೆ ಸುಮಾರು 08:00 ಗಂಟೆಗೆ ತಮ್ಮ ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟು ಹೊರಗೆ ತೆರಳಿದ್ದು, ಬಳಿಕ ಮನೆಗೆ ಹಿಂದಿರುಗಿಲ್ಲ. ಆತಂಕಗೊಂಡ ಕುಟುಂಬದವರು ತಕ್ಷಣವೇ ತಮ್ಮ ಆತ್ಮೀಯರು ಮತ್ತು ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕಾಣೆಯಾಗಿರುವ ಮೂರ್ತಿ ಅವರ ವಿವರಗಳು ಈ ಕೆಳಗಿನಂತಿವೆ: ಹೆಸರು: ಜಿ. ಮೂರ್ತಿ ವಯಸ್ಸು: 54 ವರ್ಷ ಎತ್ತರ: 5.5 ಅಡಿ ಮೈಬಣ್ಣ: ಕಪ್ಪು ಶರೀರದ ಸ್ಥಿತಿ: ಸದೃಢ ಕೂದಲು: ಕಪ್ಪು ಧರಿಸಿದ್ದ ಬಟ್ಟೆ: ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಪೈಪ್‌ ಕಳವು ಪ್ರಕರಣ – 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಕಳವು

ಬೆಂಗಳೂರು, ಜುಲೈ 4, 2025: ನಗರದ ಶಿವರಾಮ್ ಕಾರಂತ್ ಬಡಾವಣೆಯ ಸೆಕ್ಟರ್–6 ರಲ್ಲಿ ನಡೆದ ಪೈಪ್‌ಗಳ ಕಳವು ಪ್ರಕರಣದಿಂದ ನಿರ್ಮಾಣ ಕಂಪನಿಗೆ ಭಾರೀ ನಷ್ಟವಾಗಿದೆ. ಸುಮಾರು ₹1,00,000 ಮೌಲ್ಯದ ಮೆಟಲ್ ಮಿಶ್ರಿತ ಸಿಮೆಂಟ್ ಕೊಟಿಂಗ್ (ಡಿ.ಐ) ವಾಟರ್ ಪೈಪ್‌ಗಳು ಅನಾತುರವಾಗಿ ಕಳವಾದ ಘಟನೆಯ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್‌.ಎಂ.ಎನ್ ಕಂಸ್ಟ್ರಕ್ಷನ್ ಕಂಪನಿಯ ಆಡ್ಮಿನ್ ಅಧಿಕಾರಿಯೊಬ್ಬರು ನೀಡಿದ ದೂರಿನ ಪ್ರಕಾರ, ಕಳೆದ ಮೂರು ವರ್ಷಗಳಿಂದ ಅವರು ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಂಪನಿಗೆ ಸೇರಿದ ಸೆಕ್ಟರ್-6 ಲೇಔಟ್‌ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯಡಿಯಲ್ಲಿ ಸುಮಾರು 25 ಪೈಪ್‌ಗಳನ್ನು ಅಳವಡಿಸಲಾಗಿತ್ತು. ಜೂನ್ 29ರಂದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4:30ರವರೆಗೆ ಕಾರ್ಯಾಚರಣೆ ನಡೆಯಿತು. ಈ ವೇಳೆಯಲ್ಲಿ 16 ಪೈಪ್‌ಗಳನ್ನು ಸಂಪರ್ಕ ಮಾಡಲಾಗಿದ್ದು, ಉಳಿದ 9-10 ಪೈಪ್‌ಗಳನ್ನು ಸ್ಥಳದಲ್ಲಿಯೇ ಬಿಟ್ಟು ಮನೆಗೆ ತೆರಳಲಾಗಿತ್ತು. ಆದರೆ ಜೂನ್ 30ರಂದು ಬೆಳಿಗ್ಗೆ…

ಮುಂದೆ ಓದಿ..
ಸುದ್ದಿ 

ಅಬ್ಬಿಗೆರೆಯಲ್ಲಿ ವಿದ್ಯುತ್ ಉಪಕರಣಗಳ ಬ್ಯಾಟರಿ ಕಳ್ಳತನ – ಸಹಾಯಕ ಅಭಿಯಂತರರಿಂದ ಠಾಣೆಗೆ ದೂರು

ಬೆಂಗಳೂರು, ಜುಲೈ 4, 2025: ನಗರದ ಅಬ್ಬಿಗೆರೆ ಪ್ರದೇಶದಲ್ಲಿ ಡಾಸ್ ವಿದ್ಯುತ್ ಉಪಕರಣಗಳಲ್ಲಿ ಅಳವಡಿಸಲಾಗಿದ್ದ ಐದು ಬ್ಯಾಟರಿಗಳನ್ನು ಅಪರಿಚಿತರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಿ.ಇ.ಎಸ್.ಕಾಂನಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಂಜುನಾಥ್ ಎ.ಸಿ ಅವರು ದಿನಾಂಕ 02-07-2025 ರಂದು ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಬ್ಬಿಗೆರೆ ಪಾರ್ಕ್, ಅಬ್ಬಿಗೆರೆ ಹೋಳಿಗೆ ಮನೆ, ಹೆಚ್.ವಿ.ವಿ.ವಿ ವ್ಯಾಲಿ ಮತ್ತು ಕಲಾನಗರ ಎಂಟ್ರಿನ್ಸ್ ಘಟಕದಲ್ಲಿ ಅಳವಡಿಸಲಾಗಿದ್ದ 5 ಬ್ಯಾಟರಿಗಳನ್ನು 06-05-2025 ರಂದು ಕಳ್ಳತನ ಮಾಡಲಾಗಿದೆ. ಕಳವಾದ ಮಾಲಿನ ಮೌಲ್ಯವನ್ನು ರೂ. 42,480 ಎಂದು ಅಂದಾಜಿಸಲಾಗಿದೆ. ಸಂಸ್ಥೆಗೆ ನಷ್ಟ ಉಂಟುಮಾಡಿರುವ ಈ ಕೃತ್ಯ ಸಂಬಂಧಿಸಿ ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಕಳವಾದ ಬ್ಯಾಟರಿಗಳನ್ನು ಮರುಪಡೆಯುವಂತೆ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಕಾಣೆಯಾಗಿರುವ ಘಟನೆ: ಹುಡುಕಾಟ ಜೋರಾಗಿದೆ

ಆನೇಕಲ್, ಜುಲೈ 4, 2025: ಆನೇಕಲ್ ಪಟ್ಟಣದ ಎ.ಕೆ. ಕಾಲೋನಿ, ಜೈಭೀಮ್ ನಗರದಲ್ಲಿರುವ ನಿವಾಸಿ ವೆಂಕಟೇಶ್ ಅವರ 17 ವರ್ಷದ ಮಗಳು ಭವ್ಯ ಜೂನ್ 30ರಂದು ಬೆಳಿಗ್ಗೆ ಮನೆಯಿಂದ ಹೊರಟ್ಟಿದ ಬಳಿಕ ಕಾಣೆಯಾಗಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಷಕರ ಮಾಹಿತಿ ಪ್ರಕಾರ, ಭವ್ಯ ಆನೇಕಲ್ ಅಕ್ಷಯ ಪಿಯು ಕಾಲೇಜಿನಲ್ಲಿ 1ನೇ ಪಿಯುಸಿ ವ್ಯಾಸಂಗಿಸುತ್ತಿದ್ದಳು. ದಿನಾಂಕ 30/06/2025 ರಂದು ಬೆಳಿಗ್ಗೆ 9:30 ಗಂಟೆಗೆ ತಂದೆ ವೆಂಕಟೇಶ್ ರವರು ದಿನನಿತ್ಯದ ರೀತಿಯಲ್ಲಿ ಮಗಳನ್ನು ಕಾಲೇಜಿಗೆ ಬಿಟ್ಟು ಬಂದು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅದೇ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಲೇಜು ಸಿಬ್ಬಂದಿಯಿಂದ ಮಗಳ ಪತ್ತೆಯಾಗಿಲ್ಲ ಎಂಬ ಮಾಹಿತಿಯನ್ನು ಪತ್ನಿಗೆ ದೂರವಾಣಿ ಮೂಲಕ ತಿಳಿಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆ, ಕುಟುಂಬಸ್ಥರು ಗಾಬರಿಗೊಂಡು ಆತ್ಮೀಯರು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರು. ಆದರೆ ಎಲ್ಲೆಡೆ…

ಮುಂದೆ ಓದಿ..
ಸುದ್ದಿ 

ಚಿಕ್ಕಜಾಲದಲ್ಲಿ ಅಕ್ರಮ ಮದ್ಯ ಮಾರಾಟ ದಿನಸಿ ಅಂಗಡಿಯಲ್ಲಿ ದಾಳಿ ನಡೆಸಿದ ಪೊಲೀಸರು

ಬೆಂಗಳೂರು, ಜುಲೈ 4 2025: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಹಳ್ಳಿ ಗ್ರಾಮದಲ್ಲಿ ಇರುವ ದಿನಸಿ ಅಂಗಡಿಯೊಂದರಲ್ಲಿ ಯಾವುದೇ ಲೈಸೆನ್ಸ್ ಇಲ್ಲದಿರುವದೇ ಆದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಂಜೆ ಸುಮಾರು 5:15ರ ಸಮಯದಲ್ಲಿ ಪಿಎಸ್‌ಐ ಚಂದ್ರಶೇಖರ್.ಆರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಎನ್‌ಎಂ 10798 ಲಕ್ಷ್ಮಣ, ಎನ್‌ಎಂ 11929 ಶಂಕರ್ ಹಾವನೂರು ಮತ್ತು ಎನ್‌ಎಂ 22733 ರವರೊಂದಿಗೆ ಗಸ್ತು ಮಾಡುತ್ತಿದ್ದ ವೇಳೆ ಚನ್ನಹಳ್ಳಿ ಗ್ರಾಮದ ಆಶ್ವತ್ಥ ಕಟ್ಟೆಯ ಹತ್ತಿರವಿರುವ “ಮುನಯ್ಯಾ ಸ್ಮಾರ” ಎಂಬ ದಿನಸಿ ಅಂಗಡಿಯಲ್ಲಿಯೊಂದು ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಚಿಕ್ಕಜಾಲ ಪೊಲೀಸರು ಅಂಗಡಿಗೆ ದೌಡಾಯಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನ ಹೆಸರು ಮುನಿಯಣ್ಣ, ತಂದೆ ಜಯರಾಮಪ್ಪ, ವಯಸ್ಸು 36 ವರ್ಷ, ವಿಳಾಸ…

ಮುಂದೆ ಓದಿ..
ಸುದ್ದಿ 

ವಿದ್ಯಾನಗರ ಕ್ರಾಸ್ ಬಳಿ ದ್ವಿಚಕ್ರ ವಾಹನ ಕಳ್ಳತನ: ಮಹಿಳೆ ದೂರು

ದಿನಾಂಕ: ಜುಲೈ 4 2025ಸ್ಥಳ: ಉತ್ತನಹಳ್ಳಿ ರಸ್ತೆ, ವಿದ್ಯಾನಗರ ಕ್ರಾಸ್, ಬೆಂಗಳೂರು ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕಾರ್ತಿಕ್ ಫಿಟ್ನೆಸ್ ಅರೇನಾ ಬಳಿ ನಡೆದ ಈ ಘಟನೆ ಬಗ್ಗೆ ವಿದ್ಯಾನಗರ ಠಾಣೆಗೆ ಸಂಬಂಧಿಸಿದ ಮಹಿಳೆ ದೂರು ನೀಡಿದ್ದಾರೆ.ಪಾಂಗೋಡಿ ಅವರ ವರದಿಯ ಪ್ರಕಾರ, 13/06/2025 ರಂದು ಬೆಳಿಗ್ಗೆ 08:30 ಗಂಟೆಗೆ ಅವರು ತಮ್ಮ ಗಂಡನನ್ನು ಹಾಗೂ ಮಗನನ್ನು ಕೆಲಸದ ನಿಮಿತ್ತ ಉತ್ತನಹಳ್ಳಿ ರಸ್ತೆಯಲ್ಲಿರುವ ಕಾರ್ತಿಕ್ ಫಿಟ್ನೆಸ್ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದರು. ನಂತರ ಅವರು ವಾಹನವನ್ನು ಅಲ್ಲೇ ನಿಲ್ಲಿಸಿ ಉಳಿದ ಕೆಲಸಕ್ಕೆ ತೆರಳಿದ್ದರು. ಆದರೆ, 14/06/2025 ರಂದು ಮುಂಜಾನೆ 03:50ಕ್ಕೆ ಮರಳಿ ಬಂದು ನೋಡಿದಾಗ, ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವು ಕಾಣೆಯಾಗಿತ್ತು. ಕಳ್ಳತನಗೊಂಡ ವಾಹನದ ವಿವರಗಳು ಈ ರೀತಿಯದ್ದಾಗಿವೆ: ನೋಂದಣಿ ಸಂಖ್ಯೆ: KA50EB7741 ಚಾಸಿಸ್ ನಂಬರ್: ME4JF39HKJT079435 ಮೌಲ್ಯ: ರೂ. 25,000/- ಪಾಂಗೋಡಿ ಅವರ…

ಮುಂದೆ ಓದಿ..
ಸುದ್ದಿ 

ಮಗನೊಂದಿಗೆ ಜಗಳದ ಬಳಿಕ ಕಾಣೆಯಾದ ಘಟನೆ – ತಾಯಿ, ತಂದೆ ಪೊಲೀಸ್ ಠಾಣೆಗೆ ದೂರು

ಬೆಂಗಳೂರು, ಜುಲೈ 4 2025: ನಗರದ ನಿವಾಸಿಯೊಬ್ಬರು ತಮ್ಮ ಮಗನ ಗೊಂದಲದ ನಂತರ ಆತ ಮನೆಬಿಟ್ಟು ಹೋಗಿದ್ದು, ಇದುವರೆಗೆ ವಾಪಸ್ಸು ಬರದೆ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ. ಜಯಸ್ವಾಮಿ ಪೊಲೀಸ್ ಠಾಣೆಗೆ ಬಂದು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಹೆಂಡತಿ ಕನ್ಯಾಕುಮಾರಿ ಅವರೊಂದಿಗೆ ಮನೆಯಲ್ಲಿದ್ದರು. ದಿನಾಂಕ 29/06/2025 ರಂದು ಬೆಳಿಗ್ಗೆ ಸುಮಾರು 08:30ರ ಸುಮಾರಿಗೆ, ಮನೆ ಕೆಲಸದ ವಿಷಯವಾಗಿ ಅವರ ಮತ್ತು ಮಗನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಯಿತು. ಜಗಳದ ನಂತರ ಮಗನು ಕೋಪಗೊಂಡು ತನ್ನ ಮೊಬೈಲ್‌ಫೋನ್‌ನ್ನು ಸಹ ಮನೆದಲ್ಲೇ ಬಿಟ್ಟು ಹೋಗಿದ್ದಾನೆ. ಜಯಸ್ವಾಮಿ ಅವರು ತಮ್ಮ ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿದ ನಂತರ, ಮನೆಗೆ ಬಂದು ಅವರ ಮಗಳು ಮತ್ತು ಅಳಿಯರು ಹುಡುಕಾಟ ನಡೆಸಿದರೂ ಮಗನ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಯಾವುದೇ ಮಾಹಿತಿ ಸಿಗದೆ ತೀವ್ರ ಆತಂಕಕ್ಕೊಳಗಾದ…

ಮುಂದೆ ಓದಿ..
ಸುದ್ದಿ 

ಯಲಹಂಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಮತ್ತು ತಾಯಿಗೆ ಹಲ್ಲೆ – ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು, ಜೂಲೈ 4 2025 ನಗರದ ಯಲಹಂಕದ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಮತ್ತು ಅವಳ ತಾಯಿಯ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ ದಾರುಣ ಘಟನೆ ನಡೆದಿದೆ. ಈ ಘಟನೆ ಜೂನ್ 27ರಂದು ಬೆಳಿಗ್ಗೆ ಸುಮಾರು 11ರಿಂದ 12ರ ಮಧ್ಯೆ ನಡೆದಿದೆ. ಹಲ್ಲೆಗೊಳಗಾದವರ ಪ್ರಕಾರ, ಹತ್ತನೇ ತರಗತಿಯಲ್ಲಿ ಓದುತ್ತಿರುವ ರಚಿಯಾ ಮತ್ತು ಅವರ ತಾಯಿ ಶಾಲೆಯ ಆವರಣದಲ್ಲಿ ಇದ್ದಾಗ, ಸಿಮ್ರಾನ್ ಎಂಬ ವಿದ್ಯಾರ್ಥಿನಿಯ ತಾಯಿ ಹಾಗೂ ಮತ್ತೊಬ್ಬ ಮಹಿಳೆ ಪುಂಡತನ ಮೆರೆದಿದ್ದಾರೆ. ಇಬ್ಬರ ಮೇಲೂ ಎದೆ ಭಾಗ ಹಾಗೂ ಖಾಸಗಿ ಭಾಗಗಳಲ್ಲಿ ಹೊಡೆದು ಮಾನಸಿಕ ಹಾಗೂ ದೈಹಿಕ ತೊಂದರೆ ಉಂಟುಮಾಡಲಾಗಿದೆ. ಸಿಮ್ರಾನ್ ರೇಷ್ಮಾ ರವರ ಪ್ರಕಾರ, ಹಲ್ಲೆಗೊಳಗಾದಾಗ ಬಟ್ಟೆ ಹರಿದಿದ್ದು, ಸಾರ್ವಜನಿಕ ಸ್ಥಳದಲ್ಲೇ ತೀವ್ರ ಅವಮಾನ ಅನುಭವಿಸಿದ್ದಾರೆ. ಇದೇ ವೇಳೆ ಆರೋಪಿಗಳು, “ನೀವು ಯಾರಾದರೂ ಬಳಿ ದೂರು ನೀಡಿದರೆ ಕೊಂದು ಹಾಕುತ್ತೇವೆ” ಎಂದು ಜೀವ ಬೆದರಿಕೆ…

ಮುಂದೆ ಓದಿ..
ಸುದ್ದಿ 

ಅನುಬಂಧಿತ ನ್ಯಾಯಾಲಯದ ಆರೋಪಿಗೆ ಜಾಮೀನಿನ ಬಳಿಕ ಹಾಜರಾಗದ ಹಿನ್ನಲೆಯಲ್ಲಿ ಪೊಲೀಸರು ಬಂಧನೆ ಮಾಡಿದರು

ಬೆಂಗಳೂರು, ಜುಲೈ 4, 2025 ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಗಿದ್ದೆಗೌಡನಕೊಪ್ಪಲು ಗ್ರಾಮದ ನಿವಾಸಿ ಸಿದ್ದಗಂಗಾಚಾರಿ ಅಲಿಯಾಸ್ ಬಾಲು (ವಯಸ್ಸು 38), ಅಪರಾಧ ಪ್ರಕರಣವೊಂದರಲ್ಲಿ ಶರತ್ತುಬದ್ಧ ಜಾಮೀನು ಪಡೆದು ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ, ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಿದ್ದಗಂಗಾಚಾರಿ ಮೇಲೆ ಹಿಂದಿನ 0303/2017-392 ಸಂಖ್ಯೆ ಹೊಂದಿರುವ ಪ್ರಕರಣದಡಿಯಲ್ಲಿ ಐಪಿಸಿ ಸೆಕ್ಷನ್ 392 ಅಡಿಯಲ್ಲಿ ದೋಷಾರೋಪಣೆಗೊಳಗಾಗಿದ್ದು, ಈ ಕುರಿತಾಗಿ 7ನೇ ಎ.ಸಿ.ಜೆ.ಎಂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ (ಸಿಸಿ ಸಂಖ್ಯೆ: 24387/2022). ಪ್ರಕರಣದ ವಿಚಾರಣೆ ದಿನಾಂಕಗಳು 24-12-2024, 05-04-2025 ಹಾಗೂ ಮುಂದಿನ ದಿನಾಂಕ 18-07-2025ಕ್ಕೆ ನಿಗದಿಯಾಗಿದೆ. ಆದಾಗ್ಯೂ, ಆರೋಪಿತನು ನ್ಯಾಯಾಲಯಕ್ಕೆ ಹಾಜರಾಗದೆ ತನ್ನ ವಿಳಾಸ ಖಾಲಿ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿತನಿಗೆ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು. ಪೊಲೀಸರು ಗುಪ್ತಚರ ಮಾಹಿತಿ ಆಧರಿಸಿ ಜುಲೈ 1ರಂದು ಮಧ್ಯಾಹ್ನ 1 ಗಂಟೆಗೆ…

ಮುಂದೆ ಓದಿ..
ಅಂಕಣ 

ಯಾವುದು ಮುಖ್ಯ – ಯಾವುದು ತಪ್ಪು ದಾರಿ……..ಆಗಬೇಕಾದ ಕೆಲಸಗಳು – ನಾವು ಸದಾ ಚರ್ಚಿಸುತ್ತಿರುವ ವಿಷಯಗಳು…..

ಯಾವುದು ಮುಖ್ಯ – ಯಾವುದು ತಪ್ಪು ದಾರಿ……..ಆಗಬೇಕಾದ ಕೆಲಸಗಳು – ನಾವು ಸದಾ ಚರ್ಚಿಸುತ್ತಿರುವ ವಿಷಯಗಳು…….ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು……. 1) ತೀವ್ರವಾಗಿ ಕುಸಿಯುತ್ತಿರುವ ಜನರ ಆರೋಗ್ಯ……. 2) ಅತ್ಯಂತ ವೇಗವಾಗಿ ನಾಶವಾಗುತ್ತಿರುವ ಪರಿಸರ ರಕ್ಷಣೆ…. 3) ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ಕಾರಣ ಅಭಿವೃದ್ಧಿಯ ಅಸಮರ್ಪಕ ನಿರ್ವಹಣೆ…. 4) ಚುನಾವಣಾ ರಾಜಕೀಯದ ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆ ದ್ವೇಷ ಅಸೂಯೆಗಳ ಗೂಡಾಗಿ ಮನಸ್ಸುಗಳು ಒಡೆಯುತ್ತಿವೆ. ಅದನ್ನು ಒಂದುಗೂಡಿಸುವ ಪ್ರಯತ್ನ ಆಗಬೇಕಿದೆ…. 5) ಜಾತಿ ಪದ್ದತಿಯ ನಿರ್ಮೂಲನೆಗೆ ಸಣ್ಣ ಪ್ರಮಾಣದ ಪ್ರಯತ್ನಗಳಾದರು ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ….. 6) ಭಾರತೀಯ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಹಿಂಸಾತ್ಮಕ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಬೇಕಿದೆ…. 7) ಅರ್ಹತೆಗೆ ತಕ್ಕಂತ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸಿ ಹೊಟ್ಟೆಪಾಡಿನ ಉದ್ಯೋಗಗಳೇ ಹೆಚ್ಚಾಗುತ್ತಿರುವುದು ನಿರುದ್ಯೋಗ ಹೆಚ್ಚಾಗಲು ಕಾರಣವಾಗಿ ಭವಿಷ್ಯದಲ್ಲಿ ಆಗುವ…

ಮುಂದೆ ಓದಿ..