ಅಂಗಡಿ ನೀಡುವ ನೆಪದಲ್ಲಿ ₹6.3 ಲಕ್ಷ ವಂಚನೆ – ವ್ಯಕ್ತಿ ವಿರುದ್ಧ ಎಫ್‌ಐಆರ್
Taluknewsmedia.comಬೆಂಗಳೂರು, ಜುಲೈ 21:2025 ಸ್ವ ಉದ್ಯೋಗಕ್ಕಾಗಿ ಅಂಗಡಿ ತೆಗೆಯಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು, ಅಂಗಡಿಯನ್ನು ನೀಡುವ ಭರವಸೆ ನೀಡಿದ ವ್ಯಕ್ತಿಯಿಂದ ₹6.30 ಲಕ್ಷ ವಂಚಿತರಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.ಶಮೀಲ ಎಂಎಸ್ ಪ್ರಕಾರ, ದಿನಾಂಕ 25-08-2023 ರಂದು ಫಿರೋಜ್ ಎಂಬ ವ್ಯಕ್ತಿ ಅಂಗಡಿ ನೀಡುವುದಾಗಿ ಭರವಸೆ ನೀಡಿ ₹5,000 ಟೋಕನ್ ಮೊತ್ತವನ್ನು Google Pay ಮೂಲಕ ಪಡೆದನು. ನಂತರ ಹಂತ ಹಂತವಾಗಿ ವಿವಿಧ ದಿನಾಂಕಗಳಲ್ಲಿ – ನಗದು, ಆನ್‌ಲೈನ್ ಪಾವತಿ ಮತ್ತು ಅಮೇಜಾನ್ ಪೇ ಮೂಲಕ ಒಟ್ಟು ₹6.3 ಲಕ್ಷ ಪಾವತಿಸಲಾಯಿತು. ಆದರೆ ಹಣ ಪಡೆದ ನಂತರ, ಫಿರೋಜ್ ಅಂಗಡಿಯನ್ನು ಬೇರೆಯವರಿಗೆ ಮಾರಾಟ ಮಾಡುವುದಾಗಿ ಹೇಳಿ ಹಣ ಹಿಂದಿರುಗಿಸಲು ನಿರಾಕರಿಸಿದನು. ಇದೇ ವಿಚಾರವಾಗಿ 17-09-2024 ರಂದು ಹಣ ಕೇಳಲು ಹೋದ ದೂರುದಾರರೊಂದಿಗೆ ಫಿರೋಜ್ ಅವಾಚ್ಯ ಶಬ್ದಗಳಿಂದ ಮಾತನಾಡಿ ಜೀವ ಬೆದರಿಕೆ ಹಾಕಿದ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, NCR…
ಮುಂದೆ ಓದಿ..
