ಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ..
Taluknewsmedia.comಇದು ಸಾಧ್ಯವೇ…….. ನಿನ್ನೆಯ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪರ್ಯಾಯವಾಗಿ ನನ್ನ ಮನದಲ್ಲಿ ನಡೆದ ಛಾಯಾ ಸಚಿವ ಸಂಪುಟ ( Shadow Cabinet ) ಸಭೆಯಲ್ಲಿ ತೆಗೆದುಕೊಂಡ ಕೆಲವು ಬಹುಮುಖ್ಯ ತೀರ್ಮಾನಗಳು…… 1) ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಅರೆ ಸರ್ಕಾರಿ ಅಧಿಕಾರಿಗಳು, ಅಧಿಕಾರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳು ಇನ್ನು ಮುಂದೆ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಅಧಿಕೃತ ಕೆಲಸಕ್ಕೆ ಸರ್ಕಾರಿ ವಾಹನಗಳಲ್ಲಿಯೇ ಪ್ರಯಾಣಿಸಬೇಕು, ಅನಾರೋಗ್ಯವಾದಾಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಇವರಿಗೆ ಬಹುತೇಕ ಉಚಿತ ಮತ್ತು ಕೆಲವರಿಗೆ ರಿಯಾಯಿತಿ ನೀಡಿ ಅತ್ಯಂತ ಕಡಿಮೆ ಬೆಲೆಗೆ ಈ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಈ ಮುಖಾಂತರ ಸರ್ಕಾರಿ ಶಾಲೆ, ಆಸ್ಪತ್ರೆ ಮತ್ತು ಸಾರಿಗೆಯ ಗುಣಮಟ್ಟವನ್ನು ಅಂತರಾಷ್ಟ್ರೀಯ ದರ್ಜೆಗೆ ಏರಿಸುವುದಲ್ಲದೆ, ಹೆಚ್ಚು ಜವಾಬ್ದಾರಿಯುತ ಮತ್ತು ಮೌಲ್ಯಯುತವಾಗಿ ಮಾಡುವ ಪ್ರಯತ್ನದ ಭಾಗವಾಗಿ ಈ ಯೋಜನೆ ಜಾರಿಯಾಗಿರುತ್ತದೆ. ಇದು ಇನ್ನು…
ಮುಂದೆ ಓದಿ..
