ಸುದ್ದಿ 

ಮದುವೆಯ ನಂಬಿಕೆಯಲ್ಲಿ ವಂಚನೆ ಆರೋಪ : ಡಿ.ಜೆ. ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳೆಯ ದೂರು

Taluknewsmedia.com

Taluknewsmedia.comಮದುವೆಯ ನಂಬಿಕೆಯಲ್ಲಿ ವಂಚನೆ ಆರೋಪ : ಡಿ.ಜೆ. ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳೆಯ ದೂರು ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಹಾಗೂ ಬೆದರಿಕೆ ಹಾಕಿರುವ ಆರೋಪ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನಿಲ್ ವಿರುದ್ಧ ಕೇಳಿಬಂದಿದೆ. ಮೂಲಗಳ ಪ್ರಕಾರ, ಕಳೆದ ಒಂದು ವರ್ಷದಿಂದ ಇನ್ಸ್‌ಪೆಕ್ಟರ್ ಸುನಿಲ್ ಅವರು ಮುಸ್ಲಿಂ ಮಹಿಳೆಯೊಂದಿಗಿನ ಪರಿಚಯವನ್ನು ದುರುಪಯೋಗಪಡಿಸಿಕೊಂಡು, “ಮನೆ ಕೊಡ್ತೀನಿ, ಬ್ಯೂಟಿ ಪಾರ್ಲರ್ ಓಪನ್ ಮಾಡಿ ಕೊಡ್ತೀನಿ” ಎಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂಬ ಗಂಭೀರ ಆರೋಪ ಹೊರಬಿದ್ದಿದೆ. ಮದುವೆಯಾಗುವುದಾಗಿ ಭರವಸೆ ನೀಡಿದ ಇನ್ಸ್‌ಪೆಕ್ಟರ್, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳೋಣ ಎಂದು ಹೇಳಿ ಮಹಿಳೆಯನ್ನು ಮೋಸಗೊಳಿಸಿದ್ದಾರಂತೆ. ಮಹಿಳೆ ನೀಡಿರುವ ದೂರಿನ ಪ್ರಕಾರ, 8ನೇ ಮೈಲಿಯಲ್ಲಿರುವ ಇನ್ಸ್‌ಪೆಕ್ಟರ್ ಅವರ ಮನೆ ಹಾಗೂ ಹೊಟೆಲ್‌ಗೆ ಕರೆಸಿ ಹಲವು ಬಾರಿ ದೌರ್ಜನ್ಯ ಎಸಗಲಾಗಿದೆ. ಇದರ ಜೊತೆಗೆ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಲವಂತವಾಗಿ ಸೆರೆಹಿಡಿದು, ಅವುಗಳನ್ನು ಬಳಸಿ…

ಮುಂದೆ ಓದಿ..
ಸಿನೆಮಾ 

ಫುಡ್ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ನೇಪಾಳಿ ಗ್ಯಾಂಗ್‌ವೊಂದು ನಗರದ ಬೆಳ್ಳಂದೂರು ಪೊಲೀಸ್‌ಗಳ ಬಲೆಗೆ ಸಿಕ್ಕಿದೆ.

Taluknewsmedia.com

Taluknewsmedia.comಫುಡ್ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ನೇಪಾಳಿ ಗ್ಯಾಂಗ್‌ವೊಂದು ನಗರದ ಬೆಳ್ಳಂದೂರು ಪೊಲೀಸ್‌ಗಳ ಬಲೆಗೆ ಸಿಕ್ಕಿದೆ. ಮೂವರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಪಾರಸ್ ಸಿಂಗ್ (25), ಮುಕೇಶ್ ಸಾಯಿ (19), ಬಿಪಿನ್ ಕರ್ಕಿ (20) ಹಾಗೂ ಸಮೀರ್ ಲೋಹಾರ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನೇಪಾಳ ಮೂಲದವರಾಗಿದ್ದು, ನಗರದ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯುರಿಟಿ ಹಾಗೂ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಕೆಲಸದ ಹೊರತಾಗಿ ಫುಡ್ ಡೆಲಿವರಿ ಬಾಯ್‌ಗಳನ್ನೇ ಅಡ್ಡಗಟ್ಟಿ ಮೊಬೈಲ್, ಹಣವನ್ನು ಕಸಿದು ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕಳೆದ ಸೆಪ್ಟೆಂಬರ್ 13ರ ರಾತ್ರಿ ಕಸವನಹಳ್ಳಿ ರಸ್ತೆಯಲ್ಲಿ ಡೆಲಿವರಿ ಬಾಯ್ ಸುರೇಶ್ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ಪ್ರಕರಣದ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಬೆಳ್ಳಂದೂರು ಪೊಲೀಸರು ಬಲಿಷ್ಠ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಒಟ್ಟು 9…

ಮುಂದೆ ಓದಿ..
ಸುದ್ದಿ 

ತವರು ಮನೆಯಿಂದ ಬರಲು ನಿರಾಕರಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಲೆ – ನಂತರ ಪೊಲೀಸ್ ಠಾಣೆಗೆ ಶರಣಾದ ಆರೋಪಿ

Taluknewsmedia.com

Taluknewsmedia.comತವರು ಮನೆಯಿಂದ ಬರಲು ನಿರಾಕರಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಲೆ – ನಂತರ ಪೊಲೀಸ್ ಠಾಣೆಗೆ ಶರಣಾದ ಆರೋಪಿ. ಯಾದಗಿರಿ: ಪತ್ನಿಯು ತವರು ಮನೆಯಿಂದ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪತಿ ಆಕೆಯನ್ನೇ ಕೊಲೆ ಮಾಡಿದ ಘಟನೆ ಸುರಪುರ ತಾಲೂಕಿನ ಡೋಣಿಗೇರಾದಲ್ಲಿ ನಡೆದಿದೆ. ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸ್ವಯಂ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮೃತ ಮಹಿಳೆಯನ್ನು ಮರಿಯಮ್ಮ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಸಂಗಪ್ಪ (40) ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ನಿವಾಸಿ. ಕಳೆದ ಕೆಲವು ತಿಂಗಳಿನಿಂದ ದಂಪತಿಗಳ ನಡುವೆ ಅನೇಕ ಗಲಾಟೆಗಳು ನಡೆಯುತ್ತಿದ್ದವು. ಇದರಿಂದ ಬೇಸತ್ತ ಮರಿಯಮ್ಮ ತವರು ಮನೆಗೆ ತೆರಳಿ ಅಲ್ಲೇ ವಾಸಿಸುತ್ತಿದ್ದಳು. ಶನಿವಾರ ರಾತ್ರಿ ಸಂಗಪ್ಪ ಪತ್ನಿಯನ್ನು ಮನೆಗೆ ಕರೆತರಲು ಡೋಣಿಗೇರಾದ ಆಕೆಯ ತವರು ಮನೆಗೆ ಹೋಗಿದ್ದಾನೆ. ಆದರೆ ಮರಿಯಮ್ಮ ಗಂಡನ ಮನೆಗೆ ಹಿಂತಿರುಗಲು ನಿರಾಕರಿಸಿದ್ದಾಳೆ. ಮಾತಿನ ಜಟಾಪಟಿಯು…

ಮುಂದೆ ಓದಿ..
ಸುದ್ದಿ 

ಪಟಾಕಿ ಆಟದಲ್ಲಿ ಎಚ್ಚರಿಕೆ — ಪಾವಗಡ ಬಾಲಕನಿಗೆ ಕಣ್ಣಿನ ಆಸ್ಪತ್ರೆ ಜೀವ ತುಂಬಿದ ಪಾಠ

Taluknewsmedia.com

Taluknewsmedia.comಪಟಾಕಿ ಆಟದಲ್ಲಿ ಎಚ್ಚರಿಕೆ — ಪಾವಗಡ ಬಾಲಕನಿಗೆ ಕಣ್ಣಿನ ಆಸ್ಪತ್ರೆ ಜೀವ ತುಂಬಿದ ಪಾಠ ಪಾವಗಡ, ಅ.21: ದೀಪಾವಳಿಯ ಸಂಭ್ರಮ ಕ್ಷಣದಲ್ಲಿ ಅಜಾಗರೂಕತೆ ಜೀವಪಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂಬುದನ್ನು ಪಾವಗಡದಲ್ಲಿ ನಡೆದ ಘಟನೆ ಮತ್ತೆ ನೆನಪಿಸಿದೆ. ಪಟಾಕಿಯಿಂದ ಗಾಯಗೊಂಡ 9 ವರ್ಷದ ಬಾಲಕ ನಾಣಿಗೆ ಪಟ್ಟಣದ ಶಾರದಾದೇವಿ ಕಣ್ಣಿನ ಆಸ್ಪತ್ರೆಯ ವೈದ್ಯರು ತಕ್ಷಣ ಚಿಕಿತ್ಸೆ ನೀಡಿ ದೃಷ್ಟಿ ಉಳಿಸಿದ ಘಟನೆ ಸಾಮಾಜಿಕ ವಲಯದಲ್ಲಿ ಸಂವೇದನೆ ಮೂಡಿಸಿದೆ. ಸ್ಥಳೀಯರು ಮತ್ತು ಸಾಮಾಜಿಕ ತಾಣ ಬಳಕೆದಾರರು ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ತುರ್ತು ಸೇವೆಗಾಗಿ ಅಭಿನಂದನೆ ಸಲ್ಲಿಸುತ್ತಿದ್ದು, “ಒಬ್ಬ ಬಾಲಕನ ದೃಷ್ಟಿ ಉಳಿದಿದೆ — ಇದು ದೀಪಾವಳಿಯ ನಿಜವಾದ ಬೆಳಕು” ಎಂದು ಶ್ಲಾಘಿಸಿದ್ದಾರೆ. ಈ ಘಟನೆ ಪೋಷಕರಿಗೆ ಎಚ್ಚರಿಕೆಯ ಘಂಟೆ ಬಾರಿಸಿದ್ದು, ಮಕ್ಕಳು ಪಟಾಕಿ ಹಚ್ಚುವಾಗ ಸುರಕ್ಷತಾ ಅಂತರ ಕಾಯ್ದುಕೊಳ್ಳಬೇಕು, ಕಣ್ಣಿನ ರಕ್ಷಣಾ ಕನ್ನಡಿ ಧರಿಸಬೇಕು ಎಂಬ ಸಲಹೆಗಳನ್ನು…

ಮುಂದೆ ಓದಿ..
ಸುದ್ದಿ 

ರಾಮನಗರ: ಹೆಂಡತಿಯ ಕಿರುಕುಳದಿಂದ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ಗಂಡ ಆತ್ಮಹತ್ಯೆ.

Taluknewsmedia.com

Taluknewsmedia.comರಾಮನಗರ: ಹೆಂಡತಿಯ ಕಿರುಕುಳದಿಂದ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ಗಂಡ ಆತ್ಮಹತ್ಯೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಸಂಭವಿಸಿದ ಹೃದಯವಿದ್ರಾವಕ ಘಟನೆಯೊಂದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ನಿವಾಸಿ ರೇವಂತ್ ಕುಮಾರ್ (30) ಎಂಬ ಯುವಕ, ಹೆಂಡತಿಯ ಕಿರುಕುಳವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತ ರೇವಂತ್ ಕುಮಾರ್ ಬಿಡದಿ ಕೈಗಾರಿಕಾ ಪ್ರದೇಶದ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕೇವಲ ಐದು ತಿಂಗಳ ಹಿಂದೆ ಮಲ್ಲಿಕಾ ಎಂಬುವವರನ್ನು ವಿವಾಹವಾಗಿದ್ದ ರೇವಂತ್, ವೈವಾಹಿಕ ಜೀವನದ ಅಸಮಾಧಾನ ಹಾಗೂ ನಿರಂತರ ಕಲಹದಿಂದ ಮನನೊಂದು ಸೋಮವಾರ ಬೆಳಿಗ್ಗೆ ರೈಲಿಗೆ ಸಿಲುಕಿ ಜೀವಬಲಿ ಪಡೆದಿದ್ದಾನೆ. ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದಾಗ, ರೇವಂತ್‌ನ ಮೊಬೈಲ್ ಫೋನ್ ಪತ್ತೆಯಾಯಿತು. ಮೊಬೈಲ್‌ನ್ನು ಪರಿಶೀಲಿಸಿದಾಗ ಆತ್ಮಹತ್ಯೆಗೆ ಕೆಲವೇ ಕ್ಷಣಗಳ ಮುನ್ನ ರೆಕಾರ್ಡ್ ಮಾಡಿದ್ದ ಸೆಲ್ಫಿ ವಿಡಿಯೋ ಸಿಕ್ಕಿದ್ದು, ಅದರಲ್ಲಿ ರೇವಂತ್ ತನ್ನ ನೋವು…

ಮುಂದೆ ಓದಿ..
ಸುದ್ದಿ 

ಸೈಬರ್ ಬ್ಲ್ಯಾಕ್‌ಮೇಲ್ ಮತ್ತು ಯುವಜನ ಮನೋವೈಕಲ್ಯ: ಮಂಗಳೂರಿನ ದಾರುಣ ಘಟನೆ ನೀಡುವ ಎಚ್ಚರಿಕೆ

Taluknewsmedia.com

Taluknewsmedia.comಸೈಬರ್ ಬ್ಲ್ಯಾಕ್‌ಮೇಲ್ ಮತ್ತು ಯುವಜನ ಮನೋವೈಕಲ್ಯ: ಮಂಗಳೂರಿನ ದಾರುಣ ಘಟನೆ ನೀಡುವ ಎಚ್ಚರಿಕೆ ಮಂಗಳೂರು ನಗರದ ಇತ್ತೀಚಿನ ಘಟನೆ ಮತ್ತೊಮ್ಮೆ ನಮ್ಮ ಸಾಮಾಜಿಕ ಮಾಧ್ಯಮ ಮತ್ತು ಸೈಬರ್ ನೈತಿಕತೆಯ ದೌರ್ಬಲ್ಯವನ್ನು ಬಹಿರಂಗಪಡಿಸಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಅಭಿಷೇಕ್ ಎಂಬ ಯುವಕ ತನ್ನ ಜೀವ ಕೊಟ್ಟು ಬರೆದ “ಡೆತ್ ನೋಟ್” ಮೂಲಕ ನಾಲ್ವರು ವ್ಯಕ್ತಿಗಳು, ಸೇರಿದಂತೆ ನಿರೀಕ್ಷಾ ಎಂಬ ಯುವತಿಯು, ತನ್ನ ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಪ್ರಕರಣವು ಕೇವಲ ಒಂದು ಅಪರಾಧ ಘಟನೆಯಲ್ಲ — ಇದು ಡಿಜಿಟಲ್ ಯುಗದ ಅಪರಿಚಿತ ಭೀತಿಯ ಒಂದು ಚಿತ್ರ. ಇಂದಿನ ತಲೆಮಾರಿನ ಯುವಕರು ಸಾಮಾಜಿಕ ಸಂಬಂಧಗಳಿಗಿಂತ ಹೆಚ್ಚಾಗಿ ಡಿಜಿಟಲ್ ಸಂಪರ್ಕಗಳಲ್ಲಿ ನಂಬಿಕೆ ಇಡುತ್ತಾರೆ. ಆದರೆ ಈ ಸಂಪರ್ಕಗಳು ಕೆಲವೊಮ್ಮೆ ದುರ್ಬಳಕೆಯಾಗಿ ಜೀವ ಹಾನಿಗೆ ಕಾರಣವಾಗಬಹುದು ಎಂಬುದು ಈ ಘಟನೆಯ ಸಾರಾಂಶ.…

ಮುಂದೆ ಓದಿ..
ಅಂಕಣ 

ಬುದ್ದಿವಂತಿಕೆ ಮತ್ತು ಹೃದಯವಂತಿಕೆ……

Taluknewsmedia.com

Taluknewsmedia.comಬುದ್ದಿವಂತಿಕೆ ಮತ್ತು ಹೃದಯವಂತಿಕೆ…… ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ……..……ಒಂದು X ಸಾಮಾಜಿಕ ಜಾಲತಾಣದ ಟ್ವೀಟ್… ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನವೇ ಹೊರತು ಅದೇ ಜ್ಞಾನವಲ್ಲ, ಅರಿವಲ್ಲ, ಮೌಲ್ಯವಲ್ಲ, ಬದುಕಲ್ಲ. ಅಕ್ಷರ ಕಲಿಕೆ ಎಂಬುದು ಅಡುಗೆ ಮಾಡುವ, ಹೊಲಿಗೆ ಮಾಡುವ, ವಾಹನ ಚಾಲನೆ ಮಾಡುವ, ಮನೆ ಕಟ್ಟುವ, ಭೇಟೆಯಾಡುವ ರೀತಿಯ ಒಂದು ಕೌಶಲವೇ ಹೊರತು ಅದು ಎಲ್ಲವನ್ನೂ ಒಳಗೊಂಡ ವಿಶೇಷ ಅತಿಮಾನುಷ ಶಕ್ತಿಯೇನು ಅಲ್ಲ. ಅಕ್ಷರ ಕಲಿಯದೆಯೂ ವ್ಯಕ್ತಿತ್ವವಿದೆ, ಜ್ಞಾನವಿದೆ, ನಾಗರೀಕತೆಯಿದೆ ಬದುಕಿದೆ, ಹಾಗೆಯೇ ಅಕ್ಷರ ಕಲಿತೂ ಅಜ಼್ಞಾನವಿದೆ, ಮೋಸವಿದೆ, ಅಮಾನವೀಯತೆಯಿದೆ, ಅನಾಗರಿಕತೆ ಇದೆ…… ಅಕ್ಷರಸ್ಥರ ಈಗಿನ ಮೋಸ, ವಂಚನೆ, ದುಷ್ಟತನ, ಭ್ರಷ್ಟಾಚಾರ, ಜಾತಿವಾದ, ಶೋಷಣೆ, ಅಪನಂಬಿಕೆ ಎಲ್ಲವನ್ನೂ ಗಮನಿಸಿದಾಗ ಅನಕ್ಷರಸ್ಥರ ಕೈ, ಬಾಯಿ, ಮೆದುಳು, ಮನಸ್ಸು, ಹೃದಯ, ನಾಲಿಗೆ, ನಂಬಿಕೆ,…

ಮುಂದೆ ಓದಿ..
ಸುದ್ದಿ 

ಪುತ್ತೂರಿನಲ್ಲಿ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಅವ್ಯವಸ್ಥೆ – ಜನರ ಜೀವಕ್ಕೆ ಆಟ!

Taluknewsmedia.com

Taluknewsmedia.comಪುತ್ತೂರಿನಲ್ಲಿ ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಅವ್ಯವಸ್ಥೆ – ಜನರ ಜೀವಕ್ಕೆ ಆಟ! ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆದ ‘ಅಶೋಕ ಜನಮನ’ ಕಾರ್ಯಕ್ರಮವು ಇಂದು ಸಂಪೂರ್ಣ ಅವ್ಯವಸ್ಥೆಯ ಚಿತ್ರಣ ಕಂಡುಬಂದಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ ವೇಳೆ ನೂಕುನುಗ್ಗಲು ಉಂಟಾಗಿ ಮಹಿಳೆಯರು, ಮಕ್ಕಳಿಗೆ ಸೇರಿದಂತೆ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಕಾರ್ಯಕ್ರಮ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದಿದ್ದು, ಸ್ಥಳದ ಸಾಮರ್ಥ್ಯಕ್ಕಿಂತ ಹಲವರೆಷ್ಟು ಹೆಚ್ಚು ಜನರನ್ನು ಒಳಗೆ ಬಿಡಲಾಗಿತ್ತು. ಜನಸಂದಣಿ, ಕೆಸರು ತುಂಬಿದ ಮೈದಾನ ಮತ್ತು ಕುಡಿಯುವ ನೀರಿನ ಕೊರತೆಯಿಂದಾಗಿ ಜನತೆ ಪರದಾಡಿದರು. ಆಮ್ಲಜನಕದ ಕೊರತೆಯಿಂದ ಯೋಗೀತ, ಆಮೀನಾ ಪಾಟ್ರಕೋಡಿ, ನೇತ್ರಾವತಿ ಇರ್ದೆ, ಲೀಲಾವತಿ ಕಡಬ, ವಸಂತಿ ಬಲ್ನಾಡ್, ಕುಸುಮ, ರತ್ನವತಿ ಪೆರಿಗೇರಿ, ಅಫೀಲಾ ಪಾಟ್ರಕೋಡಿ, ಸ್ನೇಹಪ್ರಭಾ, ಜಸೀಲಾ ಸೇರಿ ಅನೇಕರು ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ…

ಮುಂದೆ ಓದಿ..
ಸುದ್ದಿ 

ಮೈಸೂರು : ಮನೆ ಸಾಲದ ತೊಳಲಾಟದಲ್ಲಿ ಸೈನಿಕನ ದುರ್ಘಟನೆ!

Taluknewsmedia.com

Taluknewsmedia.comಮೈಸೂರು : ಮನೆ ಸಾಲದ ತೊಳಲಾಟದಲ್ಲಿ ಸೈನಿಕನ ದುರ್ಘಟನೆ! ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆ ನಿರ್ಮಾಣಕ್ಕಾಗಿ ಪಡೆದಿದ್ದ ಸಾಲ ತೀರಿಸಲಾಗದೆ ಪರದಾಡುತ್ತಿದ್ದ ಭೂ ಸೇನೆಯ ಸೈನಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು ನಂಜಾಪುರದ ನಿವಾಸಿ ಎಂ. ಚಂದ್ರಶೇಖರ್ (35). ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಂದ್ರಶೇಖರ್ ಅವರು ಎರಡು ವರ್ಷಗಳ ಹಿಂದೆ ಹುಣಸೂರಿನ ಹೊಸ ಬಡಾವಣೆಯಲ್ಲಿ ಹೊಸ ಮನೆ ನಿರ್ಮಿಸಿದ್ದರು. ಈ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿಯಿಂದ ಸಾಲ ತೆಗೆದುಕೊಂಡಿದ್ದರು. ಸಾಲದ ಬಾಧೆ ತೀರಿಸಲಾಗದೆ ಮನಸ್ಸಿಗೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಕಳೆದ 10 ವರ್ಷಗಳಿಂದ ಜಮ್ಮು–ಕಾಶ್ಮೀರ, ಆಗ್ರಾ ಹಾಗೂ ಚೀನಾ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸುಮಾರು ಒಂದು ತಿಂಗಳ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ…

ಮುಂದೆ ಓದಿ..
ಸುದ್ದಿ 

ಶಿಕ್ಷಕನ ಅಮಾನವೀಯ ವರ್ತನೆಗೆ ಜನರ ಆಕ್ರೋಶ

Taluknewsmedia.com

Taluknewsmedia.comಶಿಕ್ಷಕನ ಅಮಾನವೀಯ ವರ್ತನೆಗೆ ಜನರ ಆಕ್ರೋಶ ಚಿತ್ರದುರ್ಗ: ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ 9 ವರ್ಷದ ಬಾಲಕನ ಮೇಲೆ ಶಿಕ್ಷಕ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಉಂಟುಮಾಡಿದೆ. ಶಿಕ್ಷಕ ವಿರೇಶ್ ಹೀರೇಮಠ್ ಬಂಧನವಾದ ನಂತರವೂ ಜನರ ಕೋಪ ಕಡಿಮೆಯಾಗಿಲ್ಲ. ಸಂಸ್ಥೆಯ ಗೌರವ ಹಾಳು ಮಾಡುವಂತಹ ಈ ಘಟನೆಗೆ ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ನಾಗರಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. “ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕನೇ ಹಿಂಸಾತ್ಮಕ ನಡೆ ತೋರಿದ್ದಾನೆ – ಇಂತಹವರ ವಿರುದ್ಧ ಕಠಿಣ ಕ್ರಮ ಅಗತ್ಯ” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಮಾಜದ ಹಲವಾರು ವರ್ಗಗಳು ಈ ಘಟನೆಯನ್ನು “ಮಾನವೀಯತೆ ಮರೆತ ಕ್ರೂರ ಕೃತ್ಯ” ಎಂದು ವರ್ಣಿಸುತ್ತಿವೆ. ಶಿಕ್ಷಣ ಕ್ಷೇತ್ರದ ಮಂದಿ ಕೂಡಾ ಇಂತಹ ಘಟನೆಗಳು ಶಾಲಾ ಶಿಸ್ತಿಗೆ ಕಲೆ ತರಿಸುತ್ತವೆ ಎಂದು ವಿಷಾದಿಸಿದ್ದಾರೆ. ಶಿಕ್ಷಕರ ಸಂಘಗಳೂ ಕೂಡಾ “ಅಪರಾಧಿ…

ಮುಂದೆ ಓದಿ..