ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಪ್ರಕರಣ; ಒಬ್ಬನ ವಿರುದ್ಧ ಎಫ್‌ಐಆರ್
Taluknewsmedia.com ತೋರವಿಹಕ್ಕಲ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿದ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.ಪೊಲೀಸರ ಪ್ರಕಾರ, ದಿನಾಂಕ 17-06-2025 ರಂದು ಸಂಜೆ 4.30 ಗಂಟೆ ಸುಮಾರಿಗೆ, ಯುವಕನೊಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಧೂಮಪಾನ ಮಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಅನುಮಾನ ಉಂಟಾಯಿತು. ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿತನು ಮಾದಕ ಪದಾರ್ಥವಾದ ಗಾಂಜಾವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡನು.ತಕ್ಷಣ ಫಿರ್ಯಾದಿದಾರರು ಆರೋಪಿತನನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಆರೋಪಿತನು ಗಾಂಜಾ ಸೇವನೆ ಮಾಡಿರುವುದನ್ನು ದೃಢಪಡಿಸಿ ಲಿಖಿತ ಅಭಿಪ್ರಾಯ ನೀಡಿದರು. ಆ ಬಳಿಕ ಆರೋಪಿತನನ್ನು ಠಾಣೆಗೆ ಕರೆತಂದು, ಎನ್.ಡಿ.ಪಿ.ಎಸ್ ಕಾಯ್ದೆಯ ಸೆಕ್ಷನ್ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ಪರವಾಗಿ ಪೋಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.ಈ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿ ಇದೆ ಎಂದು…
ಮುಂದೆ ಓದಿ..
