ಚಿಕ್ಕಬೊಮ್ಮಸಂದ್ರದಲ್ಲಿ ಯುವಕ ನಾಪತ್ತೆ – ಪೋಷಕರು ಹಿಂಜರಿದ ಹೃದಯದಿಂದ ಹುಡುಕಾಟದಲ್ಲಿ
Taluknewsmedia.comಬೆಂಗಳೂರು, ಜುಲೈ 18:2025ಚಿಕ್ಕಬೊಮ್ಮಸಂದ್ರ ನಿವಾಸಿಯಾಗಿರುವ 26 ವರ್ಷದ ಯುವಕ ನಿತಿನ್ ಜಿ, ಜುಲೈ 8ರಂದು ಬೆಳಿಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದೇನೆಂದು ಮನೆಯಿಂದ ಹೊರಟು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಪೋಷಕರ ಪ್ರಕಾರ, ನಿತಿನ್ ಸೆಕ್ಯೂರಿಟಿ ಉದ್ಯೋಗಿಯಾಗಿದ್ದು, ಆಗಾಗ ವಾಪಸ್ ಮನೆಗೆ ತಡವಾಗಿ ಬರುತ್ತಿದ್ದವನಾಗಿದ್ದರೂ ಈ ಬಾರಿ ಬಂದುಬರುತ್ತದೆ ಎಂಬ ಯಾವುದೇ ಸುಳಿವು ನೀಡದೆ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ದಿನದಿಂದಲೇ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರು ಹಾಗೂ ಕೆಲಸದ ಸ್ಥಳದಲ್ಲಿ ವಿಚಾರಿಸಿದರೂ ಉಪಯೋಗವಾಗಿಲ್ಲ. ಹೆಚ್ಚುವರಿ ಮಾಹಿತಿ ಪ್ರಕಾರ, ನಿತಿನ್ ಕೊನೆಯದಾಗಿ ವೈಟ್ ಬಣ್ಣದ ಹಾಫ್ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದನು. ವಾಟ್ಸಾಪ್ ಮೆಸೇಜ್ ಗಳಲ್ಲಿ ಕೇವಲ ‘ಓಪನ್ ಆಗಿರುವ’ ಗುರುತು ಮಾತ್ರ ಕಂಡುಬರುತ್ತಿದ್ದು, ಪ್ರತಿಕ್ರಿಯೆ ಇಲ್ಲದಿರುವುದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪೋಷಕರು ಯಲಹಂಕ ಉಪನಗರ ಪೊಲೀಸರಲ್ಲಿ ದೂರು ನೀಡಿದ್ದು, ನಾಪತ್ತೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.…
ಮುಂದೆ ಓದಿ..
