ಮಲ್ಲೇಶ್ವರಂನಲ್ಲಿ ವಿದ್ಯಾರ್ಥಿನಿಯ ಹತ್ಯೆ : ಪ್ರೇಮ ವಿಚಾರವೇ ಹಿನ್ನೆಲೆ
Taluknewsmedia.comಮಲ್ಲೇಶ್ವರಂನಲ್ಲಿ ವಿದ್ಯಾರ್ಥಿನಿಯ ಹತ್ಯೆ : ಪ್ರೇಮ ವಿಚಾರವೇ ಹಿನ್ನೆಲೆ! ನಗರದ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಬಳಿ ನಡೆದ ಭೀಕರ ಘಟನೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೃತ ಯುವತಿ ಯಾಮಿನಿ ಪ್ರಿಯಾ, ಬಿ.ಫಾರ್ಮಸಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ಬೆಳಿಗ್ಗೆ ಪರೀಕ್ಷೆಗೆ ತೆರಳಿದ್ದ ಅವರು ಮಧ್ಯಾಹ್ನ ಕಾಲೇಜು ಮುಗಿಸಿ ಮನೆಗೆ ಹಿಂದಿರುಗುವ ವೇಳೆ ದುಷ್ಕರ್ಮಿಯ ದಾಳಿಗೆ ಬಲಿಯಾದರು. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಘ್ನೇಶ್ ಎಂಬ ಯುವಕ ಯಾಮಿನಿ ಪ್ರಿಯಾಳ ಮೇಲೆ ಪ್ರೇಮಾಸಕ್ತಿ ತೋರಿಸಿದ್ದಾನೆ. ಆದರೆ ಯುವತಿ ಆತನ ಪ್ರೇಮ ಪ್ರಸ್ತಾವನೆಗೆ ಒಪ್ಪದಿದ್ದ ಕಾರಣ ಕೋಪದಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಬೈಕ್‌ನಲ್ಲಿ ಬಂದ ಆರೋಪಿಯು ಹಿಂದಿನಿಂದಲೇ ಯುವತಿಯ ಮೇಲೆ ದಾಳಿ ನಡೆಸಿ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸಾಕ್ಷಿಗಳು ತಿಳಿಸಿದ್ದಾರೆ.…
ಮುಂದೆ ಓದಿ..
