ಸುದ್ದಿ 

ನವೆಂಬರ್ ಕ್ರಾಂತಿ ನಿರೀಕ್ಷೆ: ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಚರ್ಚೆ, ಬಿಜೆಪಿಯಲ್ಲಿ ಅಧ್ಯಕ್ಷ ಬದಲಾವಣೆ ಮಾತು

Taluknewsmedia.com

Taluknewsmedia.comನವೆಂಬರ್ ಕ್ರಾಂತಿ ನಿರೀಕ್ಷೆ: ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಚರ್ಚೆ, ಬಿಜೆಪಿಯಲ್ಲಿ ಅಧ್ಯಕ್ಷ ಬದಲಾವಣೆ ಮಾತು ಬೆಂಗಳೂರು:ರಾಜ್ಯ ರಾಜಕೀಯ ವಲಯದಲ್ಲಿ “ನವೆಂಬರ್ ಕ್ರಾಂತಿ” ಎಂಬ ಮಾತು ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆ ಸುತ್ತ ಚರ್ಚೆ ನಡೆಯುತ್ತಿದ್ದರೆ, ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲೂ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ನಿರೀಕ್ಷೆ ತೀವ್ರವಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕುರಿತ ಚಕ್ರ ತಿರುಗುತ್ತಿರುವಾಗ, ಬಿಜೆಪಿಯಲ್ಲಿ ಬಿ.ವೈ. ವಿಜಯೇಂದ್ರ ಅವರ ನಾಯಕತ್ವ ಸುತ್ತ ಚರ್ಚೆ ಕೇಂದ್ರಿತವಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳು ಸಂಭವಿಸಬಹುದು ಎನ್ನುವ ಅಂಕಿ-ಜೋಕೆಗಳು ಕೇಳಿಬರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ನವೆಂಬರ್‌ನಿಂದ ಎರಡು ವರ್ಷ ಪೂರ್ಣಗೊಳ್ಳಲಿದ್ದಾರೆ. ಅವರು ಪಕ್ಷದ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರೂ, ಅವರನ್ನು ಬದಲಿಸಬೇಕೆಂಬ ಮಾತು ಕೆಲ ನಾಯಕರ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಹಿರಿಯ ನಾಯಕರೂ ಮೌನ ಸಮ್ಮತಿ ವ್ಯಕ್ತಪಡಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಲೋಕಸಭಾ…

ಮುಂದೆ ಓದಿ..
ಸುದ್ದಿ 

ದರ್ಶನ್‌ಗೆ ನ್ಯಾಯಾಲಯದ ಆದೇಶವೂ ಫಲ ನೀಡಲಿಲ್ಲ – ಜೈಲಿನಲ್ಲಿ ಸೌಲಭ್ಯಗಳ ಕೊರತೆಯೇ ಮುಂದುವರಿಕೆ..

Taluknewsmedia.com

Taluknewsmedia.comದರ್ಶನ್‌ಗೆ ನ್ಯಾಯಾಲಯದ ಆದೇಶವೂ ಫಲ ನೀಡಲಿಲ್ಲ – ಜೈಲಿನಲ್ಲಿ ಸೌಲಭ್ಯಗಳ ಕೊರತೆಯೇ ಮುಂದುವರಿಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ಗೆ ಹಾಸಿಗೆ, ಹೊದಿಕೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶವೂ ಅಸಡ್ಡೆಗೊಳಗಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಲಯದ ನಿರ್ದೇಶನಗಳ ಪಾಲನೆ ಆಗದೆ ಇರುವ ಕುರಿತು ಮತ್ತೆ ವಿವಾದ ಉಕ್ಕಿದೆ. ದರ್ಶನ್‌ನ ಅರ್ಜಿಯ ಮೇರೆಗೆ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೈಲಿನಲ್ಲಿನ ಸೌಲಭ್ಯಗಳ ಕುರಿತು ನೇರ ಪರಿಶೀಲನೆ ನಡೆಸಲು ಸೂಚನೆ ನೀಡಿದೆ.ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಸಹ, ಜೈಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ದರ್ಶನ್, ತನ್ನ ಮೇಲೆ ಹಿಂಸೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ದೂರಿದ್ದರು. ಸೆ.9ರಂದು ನೀಡಿದ್ದ ಆದೇಶದಂತೆ ಹಾಸಿಗೆ, ಹೊದಿಕೆ, ತಲೆದಿಂಬು ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕಿತ್ತು. ಆದರೆ, ಆದೇಶವನ್ನು ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ…

ಮುಂದೆ ಓದಿ..
ಸುದ್ದಿ 

ಸಿಡಿಲು ಬಡಿದು ಪುತ್ತೂರಿನಲ್ಲಿ ವ್ಯಕ್ತಿ ಸಾವು : ಗ್ರಾಮದಲ್ಲಿ ದುಃಖದ ವಾತಾವರಣ

Taluknewsmedia.com

Taluknewsmedia.comಸಿಡಿಲು ಬಡಿದು ಪುತ್ತೂರಿನಲ್ಲಿ ವ್ಯಕ್ತಿ ಸಾವು : ಗ್ರಾಮದಲ್ಲಿ ದುಃಖದ ವಾತಾವರಣ ದಕ್ಷಿಣ ಕನ್ನಡ, ಪುತ್ತೂರು: ಮಳೆಗಾಲದ ಆರ್ಭಟದ ನಡುವೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ದುರ್ಮರಣ ಹೊಂದಿರುವ ದಾರುಣ ಘಟನೆ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದಲ್ಲಿ ನಡೆದಿದೆ. ಸಿಡಿಲು ಬಡಿದು ಮೃತಪಟ್ಟವರು ವಾಮನ (40) ಎಂದು ಗುರುತಿಸಲಾಗಿದೆ. ವಾಮನ ಅವರು ನಿನ್ನೆ ಸಂಜೆ 5.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಕಸ್ಮಾತ್ ಸಿಡಿಲು ಬಡಿದು ಅವರ ದೇಹಕ್ಕೆ ತೀವ್ರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಕುಟುಂಬದವರು ಮತ್ತು ನೆರೆಹೊರೆಯವರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ವಾಮನ ಅವರ ಕುಟುಂಬ ತೀವ್ರ ಸಂಕಟದಲ್ಲಿದೆ. ಗ್ರಾಮದ ಜನರು ಹಾಗೂ ಸ್ಥಳೀಯ ಸಂಸ್ಥೆಗಳು ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರಿ ಪರಿಹಾರ ನೀಡುವಂತೆ ಮನವಿ…

ಮುಂದೆ ಓದಿ..
ಸುದ್ದಿ 

ಜಾತಿ ಸಮೀಕ್ಷೆಯ ಹೆಸರಿನಲ್ಲಿ ಶಿಕ್ಷಕರಿಗೆ ನರಕಯಾತನೆ! ಆನೇಕಲ್‌ನಲ್ಲಿ ಶಿಕ್ಷಕಿಗೆ ಹೃದಯಾಘಾತ

Taluknewsmedia.com

Taluknewsmedia.comಜಾತಿ ಸಮೀಕ್ಷೆಯ ಹೆಸರಿನಲ್ಲಿ ಶಿಕ್ಷಕರಿಗೆ ನರಕಯಾತನೆ! ಆನೇಕಲ್‌ನಲ್ಲಿ ಶಿಕ್ಷಕಿಗೆ ಹೃದಯಾಘಾತ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ಶಿಕ್ಷಕರನ್ನು ದಿನರಾತ್ರಿ ಓಡಿಸುತ್ತಿರುವ ಅಮಾನವೀಯ ಪರಿಸ್ಥಿತಿ ಬೆಳಕಿಗೆ ಬಂದಿದೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕಿ ಯಶೋಧ ಅವರಿಗೆ ಸಮೀಕ್ಷೆಯ ವೇಳೆ ಹೃದಯಾಘಾತ ಸಂಭವಿಸಿದೆ. ಊಟ–ನೀರು ಇಲ್ಲದೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಠಾತ್ ಕುಸಿದು ಬಿದ್ದ ಶಿಕ್ಷಕಿಯನ್ನು ತುರ್ತುವಾಗಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದಾರೆ. ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದರೂ ಸಮೀಕ್ಷೆ ಕಾರ್ಯವನ್ನು ಸರ್ಕಾರ ಬಲವಂತವಾಗಿ ಮುಂದುವರೆಸುತ್ತಿದೆ. ಶಾಲಾ ಶಿಕ್ಷಕರಿಗೆ ಅವರ ಮೂಲ ಬೋಧನಾ ಕಾರ್ಯವನ್ನು ಬಿಟ್ಟು ಮನೆ ಮನೆ ಓಡಾಡುವ ಸಮೀಕ್ಷೆ ಕಾರ್ಯವನ್ನು ನೀಡಿದ್ದು, ಇದರಿಂದ ಅವರು ತೀವ್ರ ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬಿಸಿಲು, ಮಳೆ, ಧೂಳು, ದಾಹ – ಯಾವುದಕ್ಕೂ ವಿಶ್ರಾಂತಿ…

ಮುಂದೆ ಓದಿ..
ಸುದ್ದಿ 

ವಿಜಯಪುರದಲ್ಲಿ ಡಬಲ್ ಮರ್ಡರ್: ಕಲ್ಲಿನಿಂದ ಜಜ್ಜಿ ಯುವಕರ ನರ್ಹತ್ಯೆ!

Taluknewsmedia.com

Taluknewsmedia.comವಿಜಯಪುರದಲ್ಲಿ ಡಬಲ್ ಮರ್ಡರ್: ಕಲ್ಲಿನಿಂದ ಜಜ್ಜಿ ಯುವಕರ ನರ್ಹತ್ಯೆ! ವಿಜಯಪುರ: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ದ್ವಿಹತ್ಯೆ ಘಟನೆ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಳೆಯ ವೈಷಮ್ಯ ಹಿನ್ನೆಲೆ ಇಬ್ಬರು ಯುವಕರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಭೀಕರ ಘಟನೆ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆದಿದೆ. ಹತ್ಯೆಗೆ ಒಳಗಾದವರು ಸಾಗರ್ ಬೆಳುಂಡಗಿ (25) ಮತ್ತು ಇಸಾಕ್ ಖುರೇಶಿ (24) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲೆಮಾಡಿದ ಆರೋಪದ ಮೇಲೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಾಹಿತಿಯ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಇದೇ ಗ್ರಾಮದ ಈರಣ್ಣಗೌಡ ಎಂಬವರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಸಾವಿಗೀಡಾದ ಸಾಗರ್ ಮತ್ತು ಇಸಾಕ್‌ ಹೆಸರು ಪ್ರಸ್ತಾಪವಾಗಿತ್ತು. ಇತ್ತೀಚೆಗೆ ಚಿಕಿತ್ಸೆ ಫಲಕಾರಿಯಾಗದೆ ಈರಣ್ಣಗೌಡ ಮೃತಪಟ್ಟಿದ್ದರಿಂದ, ಅದೇ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಆಡಳಿತಕ್ಕೆ ನೂತನ ವೇಗ

Taluknewsmedia.com

Taluknewsmedia.comಬೆಂಗಳೂರು ಆಡಳಿತಕ್ಕೆ ನೂತನ ವೇಗ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಬೆಂಗಳೂರು ನಗರ ಪಾಲಿಕೆ ವಾರ್ಡ್ ವಿಂಗಡಣೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ 5 ನಗರಪಾಲಿಕೆ ರಚಿಸಿ, ವಾರ್ಡ್ ವಿಂಗಡಣೆ ಮಾಡಲಾಗಿದೆ. ಐದು ನಗರ ಪಾಲಿಕೆಗಳಿಗೆ ಒಟ್ಟು 368 ವಾರ್ಡ್‌ಗಳಾಗಿ ಮರುವಿಂಗಡಣೆ ಮಾಡಲಾಗಿದೆ. ಆಡಳಿತ ಶಕ್ತಿಯನ್ನು ವೃದ್ಧಿಸಿ, ಜನಸ್ನೇಹಿ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸ್ಥಳೀಯ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗಲಿದೆ. ಪಾಲಿಕೆಯ ಹೊಸ ವಾರ್ಡ್‌ಗಳ ಮೂಲಕ ಯುವ ನಾಯಕತ್ವ ಬೆಳೆಯಲಿದೆ.

ಮುಂದೆ ಓದಿ..
ಸುದ್ದಿ 

ದೇಶವನ್ನು ನಡುಗಿಸಿದ ₹150 ಕೋಟಿ ಸೈಬರ್ ವಂಚನೆ – ಎಚ್ಚರಿಕೆಯ ಘಂಟೆ!

Taluknewsmedia.com

Taluknewsmedia.comದೇಶವನ್ನು ನಡುಗಿಸಿದ ₹150 ಕೋಟಿ ಸೈಬರ್ ವಂಚನೆ – ಎಚ್ಚರಿಕೆಯ ಘಂಟೆ! ಹಾಸನದ ಬೇಲೂರಿನ 28 ವರ್ಷದ ಸಯ್ಯದ್ ಅರ್ಫಾತ್ ಬಂಧನ.. ದಾವಣಗೆರೆಯ ಪೊಲೀಸರು ಶ್ಲಾಘನೀಯ ಕಾರ್ಯಾಚರಣೆ – ಹಣ ಹಿಂತಿರುಗಿದ ಮೊದಲ ಪ್ರಕರಣ! ದಾವಣಗೆರೆ: ಆನ್‌ಲೈನ್ ವಂಚನೆಗಳಿಂದ ಜನರ ಬದುಕು ತತ್ತರಿಸುತ್ತಿರುವ ಕಾಲದಲ್ಲಿ, ದಾವಣಗೆರೆಯ ಸೈಬರ್ ಪೊಲೀಸ್ ಠಾಣೆ ಎಚ್ಚರಿಕೆಯ ಗಂಟೆ ಬಾರಿಸಿರುವಂತೆ ದೊಡ್ಡ ಸೈಬರ್ ಅಪರಾಧ ಜಾಲವನ್ನು ಭೇದಿಸಿದೆ. ಹಾಸನದ ಬೇಲೂರಿನ 28 ವರ್ಷದ ಸಯ್ಯದ್ ಅರ್ಫಾತ್ ಬಂಧನದೊಂದಿಗೆ ₹150 ಕೋಟಿ ರೂಪಾಯಿ ಸೈಬರ್ ದೋಚಾಟದ ಗೂಢಚರ್ಯೆ ಬಯಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಗಾಜಿಯಾಬಾದ್, ಶ್ರೀನಗರ, ಏಲೂರು, ಮುಂಬೈ, ಬೆಂಗಳೂರು ಸೇರಿದಂತೆ ಹಲವೆಡೆ ವಂಚನೆ ನಡೆಸುತ್ತಿದ್ದ ಈ ಗ್ಯಾಂಗ್, ಕೇವಲ 25 ದಿನಗಳಲ್ಲಿ ₹150 ಕೋಟಿಯನ್ನು ಬ್ಯಾಂಕ್ ಖಾತೆಗಳಲ್ಲಿ ಹಾಕಿಸಿಕೊಂಡು ₹132 ಕೋಟಿಯನ್ನು ಎತ್ತಿಕೊಂಡಿದೆ! ಈ ಹಣ ಯಾರ ಕೈ ಸೇರಿದೆ ಎಂಬ ಪ್ರಶ್ನೆ…

ಮುಂದೆ ಓದಿ..
ಸುದ್ದಿ 

ಜೆಡಿಎಸ್ ಪಕ್ಷದ ಸಭೆ : ಗ್ರೇಟರ್ ಬೆಂಗಳೂರು ಅಥಾರಿಟಿ ವಾರ್ಡ್ ವಿಭಜನೆಗೆ ಆಕ್ಷೇಪಣೆ ಸಲ್ಲಿಕೆ ಮತ್ತು ಆಕಾಂಕ್ಷಿಗಳ ಪಟ್ಟಿ ಸಿದ್ಧತೆ.

Taluknewsmedia.com

Taluknewsmedia.comಜೆಡಿಎಸ್ ಪಕ್ಷದ ಸಭೆ : ಗ್ರೇಟರ್ ಬೆಂಗಳೂರು ಅಥಾರಿಟಿ ವಾರ್ಡ್ ವಿಭಜನೆಗೆ ಆಕ್ಷೇಪಣೆ ಸಲ್ಲಿಕೆ ಮತ್ತು ಆಕಾಂಕ್ಷಿಗಳ ಪಟ್ಟಿ ಸಿದ್ಧತೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವಾರ್ಡ್‌ಗಳ ವಿಭಜನೆಯಲ್ಲಿನ ನ್ಯೂನತೆಗಳ ಕುರಿತು ಆಕ್ಷೇಪಣೆ ಸಲ್ಲಿಸುವ ವಿಷಯ ಹಾಗೂ ಮುಂಬರುವ ಜಿಬಿಎ ಚುನಾವಣೆಗೆ ಜೆಡಿಎಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿ ಸಿದ್ಧತೆ ಕುರಿತಂತೆ ಇಂದು ಜೆಪಿ ಭವನದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯನ್ನು ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಶ್ರೀ ಎಚ್. ಎಂ. ರಮೇಶ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ನಗರ ಮುಖಂಡರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಪ್ರಮುಖ ಮುಖಂಡರು ಭಾಗವಹಿಸಿದರು. ಸಭೆಯಲ್ಲಿ 50 ಮಂದಿ ಆಕಾಂಕ್ಷಿಗಳ ಪ್ರಾಥಮಿಕ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ಪಕ್ಷದ ವರಿಷ್ಠ…

ಮುಂದೆ ಓದಿ..
ಅಂಕಣ 

ಬಸವ ಸಂಸ್ಕೃತಿ ಅಭಿಯಾನ……..

Taluknewsmedia.com

Taluknewsmedia.comಬಸವ ಸಂಸ್ಕೃತಿ ಅಭಿಯಾನ…….. ಮತ್ತೆ ಸಂಘಟನಾತ್ಮಕ ಚಟುವಟಿಕೆಯಲ್ಲಿ ಗರಿಗೆದರಿದ ಲಿಂಗಾಯತ ಧರ್ಮ ಸುದ್ದಿಯಲ್ಲಿ…… ತುಂಬಾ ಹಳೆಯ ಬೇಡಿಕೆಯಾದರೂ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಹೆಚ್ಚು ಪ್ರಚಾರ ಪಡೆದ ಲಿಂಗಾಯತ ಧರ್ಮದ ಹೋರಾಟ ಮತ್ತೊಮ್ಮೆ ಬಿರುಸು ಪಡೆದಿದೆ. ವಾಸ್ತವವಾಗಿ ಅದು ಲಿಂಗಾಯತ ಧರ್ಮವಲ್ಲ ಮಾನವ ಧರ್ಮ ಮತ್ತು ಇನ್ನೂ ಮುಂದೆ ಸಾಗಿ ಜೀವಪರ ನಿಲುವಿನ ಪ್ರಾಕೃತಿಕ ಧರ್ಮ…. ಜಗತ್ತಿನಲ್ಲಿ ಜೀಸಸ್ ಕ್ರೈಸ್ಟ್ ಅವರನ್ನು ಸಮಾನತೆಯ ವಿಷಯದಲ್ಲಿ ಮೇಲ್ಮಟ್ಟದಲ್ಲಿ ನೋಡಲಾಗುತ್ತದೆ.” ಶತ್ರುಗಳನ್ನು ಪ್ರೀತಿಸಿ – ನೆರೆಹೊರೆಯವರನ್ನು ಪ್ರೀತಿಸಿ ” ಎಂದು ಹೇಳುವ ಮೂಲಕ ಪ್ರೀತಿಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತಾರೆ. ಆದರೆ ‌ವಚನ ಸಂಸ್ಕೃತಿ ಒಂದು ಹಂತದಲ್ಲಿ ಅದನ್ನು ಮೀರಿ ಸಮಾನತೆಯನ್ನು ಪ್ರತಿಪಾದಿಸುತ್ತದೆ ” ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು “ 12 ನೆಯ ಶತಮಾನದ ಆ ಕರ್ಮಠ ಕಾಲದಲ್ಲಿಯೇ ಅಸ್ಪೃಶ್ಯರಿಗು ಬ್ರಾಹ್ಮಣರಿಗು ಮದುವೆ ಸಂಬಂಧ ಏರ್ಪಡಿಸುವುದು, ಈಗಿನ ಸಮಾಜದಲ್ಲೇ ವೇಶ್ಯಯರನ್ನು ನಿಕೃಷ್ಟವಾಗಿ…

ಮುಂದೆ ಓದಿ..
ಸುದ್ದಿ 

ಮಂಡ್ಯ : ಮಳೆಗೆ ಮಂಡ್ಯ ಜನ ಕಂಗೆಟ್ಟು – ಸಚಿವರ ಭೇಟಿ, ಪರಿಹಾರ ಭರವಸೆ ಮಾತ್ರ!

Taluknewsmedia.com

Taluknewsmedia.comಮಂಡ್ಯ : ಮಳೆಗೆ ಮಂಡ್ಯ ಜನ ಕಂಗೆಟ್ಟು – ಸಚಿವರ ಭೇಟಿ, ಪರಿಹಾರ ಭರವಸೆ ಮಾತ್ರ! ಸಕ್ಕರೆನಾಡು ಮಂಡ್ಯ ಜಿಲ್ಲೆ ಮತ್ತೆ ವರುಣನ ಕೋಪಕ್ಕೆ ತತ್ತರಿಸಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡು ಜನರು ನರಳುತ್ತಿದ್ದಾರೆ. ರೈತರ ದುಡಿಮೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ದೊಡ್ಡ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಲಾವೃತಗೊಂಡ ಮಂಡ್ಯದ ಕೆರೆ ಅಂಗಳದಲ್ಲಿರುವ ಕೆ.ಹೆಚ್.ಬಿ. ಬಡಾವಣೆಗೆ ಸಚಿವ ಎನ್. ಚಲುವರಾಯಸ್ವಾಮಿ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದರು. ಅವರೊಂದಿಗೆ ಶಾಸಕ ಗಣಿಗ ಪಿ. ರವಿಕುಮಾರ್, ಡಿಸಿ, ಎಸ್ಪಿ, ಸಿಇಓ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಸಚಿವರು ಮಾತನಾಡುತ್ತಾ, “ಮಂಡ್ಯದಲ್ಲೂ ಶ್ರೀರಂಗಪಟ್ಟಣ, ದಸರಗುಪ್ಪೆ ಸೇರಿದಂತೆ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಕೆ.ಹೆಚ್.ಬಿ ಕಾಲೋನಿಗೂ ನೀರು ನುಗ್ಗಿದ್ದು, ತಡೆಗೋಡೆ ನಿರ್ಮಿಸಲು 41 ಕೋಟಿ ರೂ. ಟೆಂಡರ್ ಕರೆಯಲಾಗಿದೆ,” ಎಂದರು.…

ಮುಂದೆ ಓದಿ..