ಸುದ್ದಿ 

ಮದುವೆ ಒತ್ತಾಯದಿಂದ ಮಹಿಳೆಯ ಕೊಲೆ: ಪ್ರೇಮಿಯಿಂದ ಎಂಟು ಬಾರಿ ಚಾಕು ಇರಿತ

Taluknewsmedia.com

Taluknewsmedia.comಮದುವೆ ಒತ್ತಾಯದಿಂದ ಮಹಿಳೆಯ ಕೊಲೆ: ಪ್ರೇಮಿಯಿಂದ ಎಂಟು ಬಾರಿ ಚಾಕು ಇರಿತ ಬೆಂಗಳೂರು, ನವೆಂಬರ್ 02: ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಕೋಪಗೊಂಡ ಪ್ರೇಮಿಯೊಬ್ಬಳು ಮಹಿಳೆಯ ಜೀವ ತೆಗಿದ ಘಟನೆ ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ಟೋಬರ್ 31ರ ರಾತ್ರಿ ಸುಮಾರು 9.30ರ ಸಮಯದಲ್ಲಿ ನಡೆದಿದ್ದ ಈ ಘಟನೆ ಈಗ ಬೆಳಕಿಗೆ ಬಂದಿದೆ. ರೇಣುಕಾ (ಮೃತರು) ಎಂದು ಗುರುತಿಸಲ್ಪಟ್ಟ ಮಹಿಳೆ ಸ್ಥಳದಲ್ಲೇ ಗಂಭೀರ ಗಾಯಗೊಂಡು ಬಳಿಕ ಮೃತಪಟ್ಟಿದ್ದಾರೆ. ಆರೋಪಿ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ರೇಣುಕಾ ಈಗಾಗಲೇ ಮದುವೆಯಾದ ಮಹಿಳೆ. ಪತಿಯಿಂದ ದೂರವಾಗಿ ಒಂದು ಮಗುವಿನೊಂದಿಗೆ ಸ್ವತಂತ್ರ ಜೀವನ ನಡೆಸುತ್ತಿದ್ದಳು. ಇದೇ ವೇಳೆ ಆಕೆಯ ನಿವಾಸದ ಬಳಿಯ ಬ್ಯಾನರ್ ಪ್ರಿಂಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕುಟ್ಟಿ ಎಂಬಾತನೊಂದಿಗೆ ಆಕೆಗೆ ಪರಿಚಯವಾಯಿತು. ಕಾಲ ಕ್ರಮೇಣ ಅವರ ಸ್ನೇಹ ಪ್ರೇಮ ಸಂಬಂಧವಾಗಿ ಮಾರ್ಪಟ್ಟಿತು. ಆದರೆ…

ಮುಂದೆ ಓದಿ..
ಕ್ರೈಂ ಸುದ್ದಿ ಸುದ್ದಿ 

ಮಂಗಳೂರಿನ ಕುಖ್ಯಾತ ರೌಡಿ ಟೊಪ್ಪಿ ನೌಫಾಲ್ ಹತ್ಯೆ!

Taluknewsmedia.com

Taluknewsmedia.comಮಂಗಳೂರಿನ ಕುಖ್ಯಾತ ರೌಡಿ ಟೊಪ್ಪಿ ನೌಫಾಲ್ ಹತ್ಯೆ! ಕೇರಳದ ಉಪ್ಪಳದಲ್ಲಿ ಮಾರಕಾಸ್ತ್ರಗಳಿಂದ ಬರ್ಬರ ದಾಳಿ ಮಂಗಳೂರು: ಮಂಗಳೂರಿನ ಕಖ್ಯಾತ ಗ್ಯಾಂಗ್‌ಸ್ಟರ್ ಟೊಪ್ಪಿ ನೌಫಾಲ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಕೇರಳದ ಉಪ್ಪಳ ಪ್ರದೇಶದಲ್ಲಿ ನಡೆದಿದೆ. ವರದಿಗಳ ಪ್ರಕಾರ, ನೌಫಾಲ್ ಮೇಲೆ ಹಲವರು ಸೇರಿಕೊಂಡು ಯೋಜಿತವಾಗಿ ದಾಳಿ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನೌಫಾಲ್ 2017ರಲ್ಲಿ ಮಂಗಳೂರಿನ ಫರಂಗಿಪೇಟೆಯಲ್ಲಿ ನಡೆದ ಅಡ್ಯಾರ್ ಜಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಅವನ ವಿರುದ್ಧ ಮಂಗಳೂರು ನಗರದಲ್ಲಿ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್ ವಲಯದಲ್ಲಿ ನೌಫಾಲ್ ಒಬ್ಬ ಅಪಾಯಕಾರಿ ರೌಡಿ ಅಂಶ ಎಂದು ಪರಿಗಣಿಸಲ್ಪಟ್ಟಿದ್ದನು. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಗ್ಯಾಂಗ್ ವೈಷಮ್ಯ ಅಥವಾ ಹಳೆಯ ವೈರಿ ಕೊಲೆ ಹಿನ್ನಲೆಯಲ್ಲಿ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಪ್ಪಳ ಪೊಲೀಸ್…

ಮುಂದೆ ಓದಿ..
ಸುದ್ದಿ 

ಬೆಳಗಾವಿ: ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿತ – ಐವರು ಗಾಯಾಳುಗಳು!

Taluknewsmedia.com

Taluknewsmedia.comಬೆಳಗಾವಿ: ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿತ – ಐವರು ಗಾಯಾಳುಗಳು! ಬೆಳಗಾವಿ, ನವೆಂಬರ್ 1: ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ನಡೆದ ಮೆರವಣಿಗೆಯ ವೇಳೆ ದುರ್ಘಟನೆ ಸಂಭವಿಸಿದೆ. ನಗರದ ಸದಾಶಿವನಗರದ ಚೆನ್ನಮ್ಮ ವೃತ್ತದ ಬಳಿ ಶನಿವಾರ ರಾತ್ರಿ ನಡೆದ ಘಟನೆಯಲ್ಲಿ ಐವರು ಯುವಕರಿಗೆ ಚಾಕು ಇರಿದು ಗಾಯಗಳಾಗಿವೆ. ದುಷ್ಕರ್ಮಿಗಳು ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಮೆರವಣಿಗೆಯ ವೇಳೆ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಭುವನೇಶ್ವರಿ ಮೂರ್ತಿಯನ್ನು ಹೊತ್ತುಕೊಂಡು ಯುವಕರು ನೃತ್ಯದಲ್ಲಿ ತಲ್ಲೀನರಾಗಿದ್ದರು. ಈ ವೇಳೆಯಲ್ಲಿ ಅಚಾನಕ್ ಆಗಿ ಕೆಲವರು ಗುಂಪಿನೊಳಗೆ ನುಗ್ಗಿ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ಕಣ್ಣಾರೆ ಸಾಕ್ಷಿಗಳು ತಿಳಿಸಿದ್ದಾರೆ. ಚಾಕು ಇರಿತದಿಂದ ಯುವಕರು ನೆಲಕ್ಕುಸಿದು ರಕ್ತಸ್ರಾವದಿಂದ ಅಸ್ತವ್ಯಸ್ತರಾದರು. ಗಂಭೀರವಾಗಿ ಗಾಯಗೊಂಡ ಐವರು ಯುವಕರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ವಿನಾಯಕ ಹಾಗೂ ನರ್ಜೀ ಪಠಾಣ್ ಗಾಯಗೊಂಡವರಾಗಿ ಗುರುತಿಸಲ್ಪಟ್ಟಿದ್ದಾರೆ.…

ಮುಂದೆ ಓದಿ..
ಸುದ್ದಿ 

ವಾಕಿಂಗ್ ವೇಳೆ ಹೃದಯಾಘಾತ ಶಂಕೆ: ವ್ಯಕ್ತಿ ಸ್ಥಳದಲ್ಲೇ ಸಾವು

Taluknewsmedia.com

Taluknewsmedia.comವಾಕಿಂಗ್ ವೇಳೆ ಹೃದಯಾಘಾತ ಶಂಕೆ: ವ್ಯಕ್ತಿ ಸ್ಥಳದಲ್ಲೇ ಸಾವು ಮೈಸೂರಿನ ಹೆಬ್ಬಾಳ್ ಬಡಾವಣೆಯ ಬಸವನಗುಡಿ ಸರ್ಕಲ್ ಬಳಿ ಬೆಳಗಿನ ವಾಕಿಂಗ್ ವೇಳೆ ನಡೆದ ದಾರುಣ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಸುಮಾರು 60 ವರ್ಷದ ವ್ಯಕ್ತಿ ಫುಟ್‌ಪಾತ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸ್ಥಳಕ್ಕೆ ಹೆಬ್ಬಾಳ್ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ, ಮೃತನ ಗುರುತಿನ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಹೃದಯಾಘಾತವೇ ಸಾವಿಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯು ಅಪರಿಚಿತರಾಗಿದ್ದು, ಅವರ ಕುರಿತು ಯಾವುದೇ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಂದ ಸಹಕಾರ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕಾರ್ಪೊರೇಟರ್ ಶ್ರೀನಿವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಹೆಬ್ಬಾಳ್ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಪೊಲೀಸರು ಮನವಿ…

ಮುಂದೆ ಓದಿ..
ಸುದ್ದಿ 

ಶಾಂತಿನಗರದಲ್ಲಿ ದುರಂತ ಅಪಘಾತ: ಬೈಕ್ ಸವಾರರನ್ನು ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – ಇಬ್ಬರ ದುರ್ಮರಣ

Taluknewsmedia.com

Taluknewsmedia.comಶಾಂತಿನಗರದಲ್ಲಿ ದುರಂತ ಅಪಘಾತ: ಬೈಕ್ ಸವಾರರನ್ನು ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – ಇಬ್ಬರ ದುರ್ಮರಣ ಬೆಂಗಳೂರು, ನವೆಂಬರ್ 02: ನಗರದ ಶಾಂತಿನಗರ ಬಸ್ ನಿಲ್ದಾಣದ ಸಮೀಪ ನಡುರಾತ್ರಿ ವೇಳೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ರೆಡ್ ಸಿಗ್ನಲ್‌ನ ಬಳಿ ನಿಂತಿದ್ದ ಎರಡು ಬೈಕ್‌ಗಳಿಗೆ ರಿಚ್ಮಂಡ್ ಸರ್ಕಲ್ ದಿಕ್ಕಿನಿಂದ ಬಂದ ಆಂಬ್ಯುಲೆನ್ಸ್ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಇಸ್ಮಾಯಿಲ್ (40) ಹಾಗೂ ಸಮೀನ ಬಾನು ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ತೀವ್ರತೆ ಇಷ್ಟು ಭೀಕರವಾಗಿದ್ದು, ಆಂಬ್ಯುಲೆನ್ಸ್ ಸುಮಾರು 50 ಮೀಟರ್ ದೂರಕ್ಕೆ ಬೈಕ್‌ಗಳನ್ನು ಎಳೆದೊಯ್ದ ನಂತರ ರಸ್ತೆ ಬದಿಯ ಪೊಲೀಸ್ ಚೌಕಿಗೆ ಗುದ್ದಿದೆ ಎಂದು ಸಾಕ್ಷಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ…

ಮುಂದೆ ಓದಿ..
ಸುದ್ದಿ 

ರಾಯಚೂರು ಪಿಡಿಒ ಅಮಾನತು ಪ್ರಕರಣದಲ್ಲಿ ಕೆಎಸ್‌ಎಟಿ ತಡೆ — ಸರ್ಕಾರಕ್ಕೆ ಮುಖಭಂಗ

Taluknewsmedia.com

Taluknewsmedia.comರಾಯಚೂರು ಪಿಡಿಒ ಅಮಾನತು ಪ್ರಕರಣದಲ್ಲಿ ಕೆಎಸ್‌ಎಟಿ ತಡೆ — ಸರ್ಕಾರಕ್ಕೆ ಮುಖಭಂಗ ಬೆಂಗಳೂರು: ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅಮಾನತುಗೊಂಡಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಅವರ ಅಮಾನತು ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) ತಾತ್ಕಾಲಿಕ ತಡೆ ನೀಡಿದೆ. ಪ್ರವೀಣ್ ಕುಮಾರ್ ಅವರನ್ನು ರಾಜಕೀಯ ಒತ್ತಡದ ಹಿನ್ನೆಲೆ ಏಕಪಕ್ಷೀಯವಾಗಿ ಅಮಾನತು ಮಾಡಲಾಗಿದೆ ಎಂಬ ಆಕ್ಷೇಪದ ಮೇರೆಗೆ, ಕಚೇರಿಯ ಕಾನೂನು ತಂಡವು ನ್ಯಾಯಮಂಡಳಿಯ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೆಎಸ್‌ಎಟಿ, ರಾಜ್ಯ ಸರ್ಕಾರದ ಆದೇಶಕ್ಕೆ ಅಕ್ಟೋಬರ್ 30 ರಂದು ತಡೆ ನೀಡಿರುವ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್’ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. “ಯಾವುದೇ ರೀತಿಯ ರಾಜಕೀಯ ಬೆದರಿಕೆ ಅಥವಾ ಒತ್ತಡದಿಂದ ಆರ್‌ಎಸ್‌ಎಸ್‌ನ ದೇಶ ನಿರ್ಮಾಣದ ಆದರ್ಶಗಳನ್ನು…

ಮುಂದೆ ಓದಿ..
ಸುದ್ದಿ 

ಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್‌ಐಟಿ ಬಳ್ಳಾರಿಯಲ್ಲಿ ತನಿಖೆ

Taluknewsmedia.com

Taluknewsmedia.comಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್‌ಐಟಿ ಬಳ್ಳಾರಿಯಲ್ಲಿ ತನಿಖೆ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ನಾಪತ್ತೆ ಪ್ರಕರಣ ಇದೀಗ ಬಳ್ಳಾರಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಬಳ್ಳಾರಿಯಲ್ಲಿ ಸಕ್ರಿಯ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯ ರೊದ್ದಂ ಜುವೆಲರಿ ಮಾಲೀಕ ಗೋವರ್ಧನ ಅವರನ್ನು ಎಸ್‌ಐಟಿ ತಂಡ ವಿಚಾರಣೆಗೊಳಪಡಿಸಿದ್ದು, ಅವರ ಅಂಗಡಿ ಹಾಗೂ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಮೂಲತಃ 2019ರಲ್ಲಿ ಶಬರಿಮಲೆ ದೇವಾಲಯದ ದ್ವಾರಪಾಲಕರ ವಿಗ್ರಹಗಳ ಚಿನ್ನದ ಕವಚವನ್ನು ಮರುಲೇಪನ ಮಾಡಲು ತೆಗೆದುಕೊಂಡ ವೇಳೆ ಸುಮಾರು ನಾಲ್ಕೂವರೆ ಕೆಜಿ ಚಿನ್ನ ಕಾಣೆಯಾಗಿರುವುದಾಗಿ ಆ ಸಮಯದಲ್ಲಿ ವರದಿಯಾಗಿತ್ತು. ಬಳ್ಳಾರಿ ಮೂಲದ ಗೋವರ್ಧನ ಅವರು ಅಯ್ಯಪ್ಪ ದೇವಾಲಯಕ್ಕೆ ಹೊಸ ಚಿನ್ನದ ಲೇಪಿತ ದ್ವಾರ ತಯಾರಿಸಿದ್ದರು. ಈ ಕೆಲಸವನ್ನು ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಅವರ…

ಮುಂದೆ ಓದಿ..
ಸುದ್ದಿ 

ಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ!

Taluknewsmedia.com

Taluknewsmedia.comಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ! ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ಮನೆ ಮುಂದೆ ಅಲಂಕಾರ ಗಿಡದಂತೆ ಬೆಳೆಸಲಾಗಿದ್ದ ಗಾಂಜಾ ಗಿಡವನ್ನು ಪೊಲೀಸರು ಪತ್ತೆಹಚ್ಚಿ, ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಘಟನೆ ಅಕ್ಟೋಬರ್ 29ರಂದು ನಡೆದಿದೆ. ಗ್ರಾಮದ ನಿವಾಸಿ ಸುರೇಶ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯ ಮುಂಭಾಗದಲ್ಲಿ ಸೀರೆಗಳಿಂದ ಸುತ್ತು ಕಟ್ಟಿ ಮಧ್ಯದಲ್ಲಿ ಐದು ಗಾಂಜಾ ಗಿಡಗಳನ್ನು ಅಲಂಕಾರ ಗಿಡದಂತೆಯೇ ಬೆಳೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರಿಂದ ಬಂದ ನಿಖರ ಮಾಹಿತಿಯ ಮೇರೆಗೆ, ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸುಮಾರು 9 ಕೆ.ಜಿ ತೂಕದ ಮತ್ತು ₹3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಹಿನ್ನೆಲೆ ತಹಶೀಲ್ದಾರ್ ಚೇತನ, ಸಿಡಿಪಿಒ ಪ್ರದೀಪ್ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿ…

ಮುಂದೆ ಓದಿ..
ಸುದ್ದಿ 

ನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು

Taluknewsmedia.com

Taluknewsmedia.comನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು ನಾಗಮಂಗಲ : ಪ್ರಪಂಚದಲ್ಲಿ ಎಲ್ಲಾದರು ಕನ್ನಡ ಕೇಳಿದರೆ ಅದು ನಾಗಮಂಗಲದ ಜನರ ಧ್ವನಿ. ಶುದ್ಧ ಕನ್ನಡ ನಾಗಮಂಗಲ ಜನರಿಂದ ಮಾತ್ರ ಸಾಧ್ಯ ಎಂದು ಮೈಸೂರು ಇಪ್ರೊ ಜಾನಪದ ಮಹಾ ವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ.ವ.ನಂ.ಶಿವರಾಮು ಅಭಿಪ್ರಾಯ ಪಟ್ಟರು. ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಿನದ ಮಹತ್ವ ಕುರಿತು ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಭಾಷೆ ಒಂದು ಸಂಸ್ಕೃತಿ. ಕನ್ನಡತನದ ಸೊಗಡು ಸಮಾಜದಲ್ಲಿ ಆವರಿಸಿದ್ದಾಗ ಸಂಬಂಧಗಳಲ್ಲಿ ಗಟ್ಟಿತನ ಇತ್ತು. ಆಂಟಿ ಅಂಕಲ್ ಸಂಸ್ಕೃತಿ ಬಂದಮೇಲೆ ಕನ್ನಡ ಸೊರಗಿ ಅನೈತಿಕ ಸಂಬಂಧ ಅನಾಚಾರ ಅತ್ಯಾಚಾರ ಹೆಚ್ಚಾಗಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಮಹಿಳೆಯರು ಮನಸ್ಸು ಮಾಡಿದರೆ ಮನೆ ಪೂರಾ ಕನ್ನಡವಾಗುತ್ತದೆ, ಕನ್ನಡ ಉಳಿಯುತ್ತದೆ. ಕನ್ನಡ…

ಮುಂದೆ ಓದಿ..
ಸುದ್ದಿ 

ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ

Taluknewsmedia.com

Taluknewsmedia.comಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ ಸಾಗರ: ನಕಲಿ ಯೂಟ್ಯೂಬರ್‌ಗಳ ಬ್ಲ್ಯಾಕ್‌ಮೇಲ್‌ ಅಟ್ಟಹಾಸದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಗುರುವಾರ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ “ಯೂಟ್ಯೂಬ್ ಪತ್ರಕರ್ತ” ಎಂದು ಹೇಳಿಕೊಂಡು ಅಕ್ರಮ ಚಟುವಟಿಕೆ ನಡೆಸುವವರ ಸಂಖ್ಯೆ ತೀವ್ರವಾಗಿ ಏರಿದೆ. ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಕೆಲವರು ಬ್ಲ್ಯಾಕ್‌ಮೇಲ್, ಹಣದ ವಸೂಲಿ ಮತ್ತು ಬೆದರಿಕೆ ಕೃತ್ಯಗಳಲ್ಲಿ ತೊಡಗಿರುವುದು ಸಂಘದ ಗಮನಕ್ಕೆ ಬಂದಿದೆ. ಇವರಿಗೆ ನಿಜವಾದ ಪತ್ರಕರ್ತತ್ವ ಅಥವಾ ಪತ್ರಕರ್ತರ ಸಂಘದೊಂದಿಗೆ ಯಾವುದೇ ನಂಟಿಲ್ಲ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಲೇಔಟ್ ಮಾಲೀಕರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು ಇಂತಹ ನಕಲಿ ಪತ್ರಕರ್ತರ ಬಲಿಯಾಗುತ್ತಿದ್ದಾರೆ. “ನಿಮ್ಮ ವಿರುದ್ಧ ಯೂಟ್ಯೂಬ್‌ನಲ್ಲಿ ಸುದ್ದಿ ಹಾಕುತ್ತೇವೆ” ಎಂದು…

ಮುಂದೆ ಓದಿ..