ಸುದ್ದಿ 

ಆನ್‌ಲೈನ್ ಸಿಮೆಂಟ್ ಖರೀದಿಯಲ್ಲಿ ₹1.24 ಲಕ್ಷ ಮೋಸ

ನಗರದ ಮುರುಳಿ.ಜಿ ಎಂಬುವವರು ಆನ್‌ಲೈನ್ ಮೂಲಕ ಸಿಮೆಂಟ್ ಖರೀದಿಸಲು ಯತ್ನಿಸುತ್ತಿದ್ದ ವೇಳೆ ಉದ್ದೇಶಿತ ಮೋಸದ ಬಲಿಯಾದ ಘಟನೆ ವರದಿಯಾಗಿದೆ. ಕೇವಲ ಸಿಮೆಂಟ್ ಖರೀದಿಸೋಣ ಎಂಬ ಉದ್ದೇಶದಿಂದ ಆರಂಭವಾದ ಹುಡುಕಾಟ, ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಯಿತು. ಮರುಳಿ.ಜಿ ಅವರು ತಮ್ಮ ಕೆನರಾ ಬ್ಯಾಂಕ್ ಖಾತೆ ಮೂಲಕ ವ್ಯವಹಾರ ಮಾಡುತ್ತಿದ್ದು, ದಿನಾಂಕ 01 ಜೂನ್ 2025 ರಂದು ಇಂಟರ್ನೆಟ್‌ನಲ್ಲಿ “53 ಗ್ರೇಡ್ ಸಿಮೆಂಟ್” ಕುರಿತು ಹುಡುಕುತ್ತಿದ್ದಾಗ, ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡ ಅಭಿಷೇಕ್ ಕುಮಾರ್ ಮಂಡಲ್ ಎಂಬಾತನಿಂದ ಕರೆ ಬಂದಿದೆ. ಆತನು 7739604213, 7739628217, 7294003028 ನಂಬರ್‌ಗಳಿಂದ ಸಂಪರ್ಕಿಸಿ, ಸಿಮೆಂಟ್ ಸರಬರಾಜು ಮಾಡುವ ಭರವಸೆ ನೀಡಿದನು.ಮಹತ್ವದ ವಿವರವೆಂದರೆ, ವಂಚಕರು ಮುರುಳಿಗೆ ಬಿಲ್ (Invoice) ಪ್ರತಿಯನ್ನು ಕಳುಹಿಸಿ ವಿಶ್ವಾಸ ಮೂಡಿಸಿದರು. ಇದನ್ನು ನಂಬಿದ ಮುರುಳಿ ಅವರು ದಿನಾಂಕ 13 ಜೂನ್ 2025 ರಂದು ₹1,24,800 ಮೊತ್ತವನ್ನು Utkarsha Small Finance…

ಮುಂದೆ ಓದಿ..
ಸುದ್ದಿ 

ಟಿಕ್‌ಟಾಕ್ ಮಾಲ ಟ್ರೇಡಿಂಗ್ ಹೂಡಿಕೆ ವಂಚನೆ: ಮಹಿಳೆಯಿಂದ ಲಕ್ಷಾಂತರ ರೂಪಾಯಿ ವಂಚನೆ

ಬೆಂಗಳೂರು, ಜೂನ್ 20: ಸಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆರಂಭವಾದ ಆಫರ್‌ ಒಂದು ಮಹಿಳೆಯ ಜೀವನದಲ್ಲಿ ತೊಂದರೆ ತಂದಿದ್ದು, ಸುಮಾರು ಲಕ್ಷಕ್ಕೂ ಹೆಚ್ಚು ಮೊತ್ತದ ಹಣವನ್ನು ಸೈಬರ್ ವಂಚಕರು ಮೋಸದಿಂದ ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗಿರಿ ಯವರಿಗೆ ಫೇಸ್‌ಬುಕ್‌ನಲ್ಲಿ ಇಮ್ಮಾ ವಿಲ್ಸನ್ ಎಂಬ ಮಹಿಳೆ ದಿನಾಂಕ 31.10.2024 ರಂದು ಸಂಪರ್ಕಿಸಿ, ಟಿಕ್‌ಟಾಕ್ ಮಾಲ್ ಟ್ರೇಡಿಂಗ್ ಕುರಿತು ಮಾಹಿತಿ ನೀಡಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿದ್ದಳು. ಹಣವಿಲ್ಲದ ಕಾರಣದಿಂದ ಗಿರಿ ಯವರು ಹೂಡಿಕೆಗೆ ನಿರಾಕರಣೆ ನೀಡಿದಾಗ, ಇಮ್ಮಾ ವಿಲ್ಸನ್ ತಾವೇ ಗಿರಿಯವರ ಹೆಸರಿನಲ್ಲಿ USD 5,000 (ಅಂದರೆ ₹4.15 ಲಕ್ಷದಿಂದ ಅಧಿಕ) ಹೂಡಿಕೆ ಮಾಡಿರುವಂತೆ ತೋರಿಸಿ, ಅದರಿಂದ USD 25,000 ಲಾಭವಾಯಿತೆಂದು ಸುಳ್ಳು ಭರವಸೆ ನೀಡಿದ್ದಾಳೆ.ಈ ಲಾಭದ ಪ್ರಭಾವದಿಂದ ಪ್ರಭಾವಿತರಾದ ಗಿರಿ, ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಹಾಗೂ ಯುಕೋ ಬ್ಯಾಂಕ್ ಖಾತೆ…

ಮುಂದೆ ಓದಿ..
ಸುದ್ದಿ 

ಅಬುಧಾಬಿಯಲ್ಲಿ ಉದ್ಯೋಗದ ಹೆಸರಿನಲ್ಲಿ ನರ್ಸ್‌ಗೆ ಲಕ್ಷಾಂತರ ರೂ. ಸೈಬರ್ ವಂಚನೆ.

ಬೆಂಗಳೂರು: ಜೂನ್ 19 ವಿದೇಶದಲ್ಲಿ ಕೆಲಸದ ಆಸೆ ಇಟ್ಟುಕೊಂಡಿದ್ದ ಮಹಿಳಾ ನರ್ಸ್‌ರೊಬ್ಬರು shine.com ಮೂಲಕ ಅಬುಧಾಬಿಯಲ್ಲಿ ಉದ್ಯೋಗ ದೊರಕಿಸುವುದಾಗಿ ನಂಬಿಸಿ ದುಷ್ಕರ್ಮಿಗಳು ಹಾಕಿದ ಸೈಬರ್ ವಂಚನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ವಂಚನೆ ಘಟನೆಯಿಂದಾಗಿ ಆರ್ತಿ ಯವರು ಸುಮಾರು ರೂ.98,224 ರೂಪಾಯಿ ಕಳೆದುಕೊಂಡಿದ್ದಾರೆ.ಆರ್ತಿಯು ಅಬುಧಾಬಿಯಲ್ಲಿ ಸ್ಟಾಫ್ ನರ್ಸ್ ಕೆಲಸಕ್ಕಾಗಿ ಹುಡುಕುತ್ತಿದ್ದು, ಲಿಂಕ್ಡಿಇನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ 2025ರ ಮೇ 12ರಂದು ಬೆಳಿಗ್ಗೆ 11:05ಕ್ಕೆ, shine.com ತಾಣದಿಂದ ಕವಿತಾ ಎಂಬ ಮಹಿಳೆ ಕರೆಮಾಡಿ, ಅಬುಧಾಬಿಯಲ್ಲಿ ಉದ್ಯೋಗ ನೀಡುವುದಾಗಿ ತಿಳಿಸಿ UPI ID: Sea08@upi ಗೆ ರೂ.6,500 ರೆಜಿಸ್ಟ್ರೇಷನ್ ಶುಲ್ಕವಾಗಿ ಪಾವತಿಸಲು ಹೇಳಿದ್ದರು.ನಂತರ, ಅವರು HR ವಿಭಾಗದ ಸೆಂಥಿಲ್ ಎಂಬ ವ್ಯಕ್ತಿಯ ಸಂಪರ್ಕವನ್ನು ನೀಡಿದ್ದು, ಆ ವ್ಯಕ್ತಿಯೂ ವಂಚನೆಗೆ ಕೈಜೋಡಿಸಿದ್ದ. ಅವರು ಹಂತ ಹಂತವಾಗಿ ಹಣವನ್ನು ಬೇಡುತ್ತಾ, ಇತ್ಯರ್ಥವಿಲ್ಲದ ದಾಖಲೆಗಳ ಹೆಸರಿನಲ್ಲಿ ಮತ್ತಷ್ಟು ಮೊತ್ತಗಳನ್ನು – ರೂ.22,585, ರೂ.28,808 ಮತ್ತು ರೂ.40,331…

ಮುಂದೆ ಓದಿ..
ಸುದ್ದಿ 

ಸ್ಟುಡಿಯೋ ಕಳ್ಳತನ: ಎರಡು ಕ್ಯಾಮೆರಾ ಹಾಗೂ ನಗದು ಕಳವು – ಒಟ್ಟು ನಷ್ಟ ₹90,000

ಬೆಂಗಳೂರು, ಜೂನ್ 19: ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಬಳಿಯಲ್ಲಿರುವ ಸಾಯಿ ಡಿಜಿಟಲ್ ಸ್ಟುಡಿಯೋದಲ್ಲಿ ಕಳ್ಳತನ ನಡೆದಿರುವ ಘಟನೆ ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿದೆ. ಹುಳಿಮಾವು ಪೊಲೀಸ್ ಠಾಣೆಗೆ ನೀಡಲಾದ ದೂರಿನ ಪ್ರಕಾರ, ಶಿವರಾಜ್ ಮದ್ದರಕಿ ಅವರು ತಮ್ಮ ಅಂಗಡಿಯ ಬಾಗಿಲು ದಿನಾಂಕ 16.06.2025 ರಂದು ರಾತ್ರಿ 10 ಗಂಟೆಗೆ ಮುಚ್ಚಿ ಮನೆಗೆ ತೆರಳಿದ್ದರು. ಆದರೆ ಮರು ದಿನ ಬೆಳಿಗ್ಗೆ ಸುಮಾರು 9:30 ಗಂಟೆಗೆ ಅಂಗಡಿಗೆ ಬಂದಾಗ ಶಟರ್ ಅರ್ಧ ತೆರೆಯಲ್ಪಟ್ಟಿದ್ದು, ಬೀಗವನ್ನು ಕೀಳಿಟ್ಟು ಒಡೆದು ಹಾಕಲಾಗಿದೆ ಎಂಬುದು ಅವರಿಗೆ ಗೊತ್ತಾಯಿತು. ಅಂಗಡಿಯೊಳಗೆ ಪರಿಶೀಲಿಸಿದಾಗ, ಎರಡು ಪ್ರಮುಖ ಕ್ಯಾಮೆರಾಗಳು ಮತ್ತು ₹10,000 ನಗದು ಕಳವಾಗಿರುವುದು ತಿಳಿಯಿತು. ಕಳ್ಳತನವಾದ ಕ್ಯಾಮೆರಾಗಳ ಅಂದಾಜು ಮೌಲ್ಯ ₹80,000 ಎಂದು ಹೆಸರಿಸಲಾಗಿದೆ. ಒಟ್ಟೂ ₹90,000 ಮೌಲ್ಯದ ವಸ್ತುಗಳು ಕಳವುಗೊಂಡಿವೆ.ಈ ಕುರಿತು ಹುಳಿಮಾವು ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿವರಾಜ್…

ಮುಂದೆ ಓದಿ..
ಸುದ್ದಿ 

ಮೈಲಸಂದ್ರದಲ್ಲಿ ಗಾಂಜಾ ಮಾರಾಟದ ಯತ್ನ – ಯುವಕನ ಬಂಧನ

ಬೆಂಗಳೂರು, ಜೂನ್ 19 – ಬೆಂಗಳೂರು ನಗರದ ಮೈಲಸಂದ್ರ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೀನ್ ಹೌಸ್ ಲೇಔಟ್‌ನ ಮುಂಭಾಗದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದ್ದು, ಸದರಿ ಘಟನೆ ಕುರಿತಂತೆ ದರ್ಶನ್ ಅಲಗೂರು ಪಿ.ಎಸ್.ಐ. ಅವರು ಹೇಳಿಕೆ ಕೊಟ್ಟಿದ್ದಾರೆ.ದರ್ಶನ್ ಅಲಗೂರು ಪಿ.ಸಿ.ಐ ಗೆ ಖಚಿತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಮಧ್ಯಾಹ್ನ 12:00 ಗಂಟೆಗೆ ಮೈಲಸಂದ್ರ ಪ್ರದೇಶದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿ ಲಭಿಸಿತು. ತ್ವರಿತ ಕ್ರಮವಾಗಿ, ಮಾನ್ಯ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಂದ ಮೌಖಿಕ ಅನುಮತಿ ಪಡೆದು, ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮಧ್ಯಾಹ್ನ 1:45ರ ಸುಮಾರಿಗೆ ಶಂಕಿತ ವ್ಯಕ್ತಿಯ ಚಲನವಲನ ಗಮನಿಸಿದರು. ಆಟೋದಲ್ಲಿ ಬಂದು ಇಳಿದ ಯುವಕನು, ಪೊಲೀಸರು ಸಮೀಪಿಸುತ್ತಿದ್ದಂತೆ ತನ್ನ…

ಮುಂದೆ ಓದಿ..
ಸುದ್ದಿ 

ಅಪಘಾತದ ನಾಟಕವಾಡಿ ₹50,000 ಸುಲಿಗೆ: ಕಾರು ಸುತ್ತುವರಿದು ಬೆದರಿಸಿದ ಘಟನೆ ಬೆಂಗಳೂರು ತಿಲಕ್ ನಗರದಲ್ಲಿ ನಡೆದಿದೆ.

ಬೆಂಗಳೂರು, ಜೂನ್ 18, 2025: ನಗರದ ಬನ್ನೇರುಘಟ್ಟ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ಕಾರು ಚಾಲಕನೊಬ್ಬರನ್ನು ಅಪಘಾತದ ನೆಪದಲ್ಲಿ ರಸ್ತೆಯ ಮಧ್ಯೆ ತಡೆದು ನಿಲ್ಲಿಸಲ್ಪಟ್ಟು, ಅಪರಿಚಿತರ ಗುಂಪೊಂದು ಕಾರು ಸುತ್ತುವರಿದು ಬೆದರಿಕೆ ಹಾಕಿ ₹50,000 ಹಣವನ್ನು ಕ್ಯೂಆರ್ ಕೋಡ್‌ ಮೂಲಕ ಬಲವಂತವಾಗಿ ಪಡೆದಿದ್ದಾರೆ. ಇಂತಹ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಸನ್ನ ಕುಮಾರ್ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ದಿನಾಂಕ 02/06/2025 ರಂದು ಸಂಜೆ 5:00 ಗಂಟೆಯ ಸುಮಾರಿಗೆ ತಮ್ಮ ಕಾರಿನಲ್ಲಿ ಬನ್ನೇರುಘಟ್ಟ ರಸ್ತೆಯ ಕಚೇರಿಯಿಂದ ಮನೆಗೆ ಹೋಗುತ್ತಿದ್ದರು. ತಿಲಕ್ ನಗರದ ಈಸ್ಟ್ ಎಂಡ್ ಮುಖ್ಯರಸ್ತೆಯ ಕೆಫೆ ಕೃಷ್ಣಂ ಬಳಿ ರಸ್ತೆ ಬದಿಯಿಂದ ಅಸಾಧಾರಣ ರೀತಿಯಲ್ಲಿ ಬರುತ್ತಿದ್ದ ಒಂದು ವಾಹನ ಪ್ರಸನ್ನ ರವರ ಕಾರಿನ ಹಿಂದಿನ ಚಕ್ರಕ್ಕೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿದರು.ಅತಂತ್ರ ಸ್ಥಿತಿಯಲ್ಲಿ ಪ್ರಸನ್ನ ರವರು ಏನಾಗುತ್ತಿದೆ ಎಂದು ನೋಡುತ್ತಿದ್ದ ಹಾಗೆಯೆ ತಕ್ಷಣವೇ ಕೆಲವರು ಅವರ…

ಮುಂದೆ ಓದಿ..
ಅಂಕಣ 

ವಿಚಿತ್ರ ಸ್ವಾರ್ಥದ ನ್ಯಾಯ ನೀತಿ…..

ನನ್ನ ತಾಯಿ ದೈವೀ ಸ್ವರೂಪಿ,ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ,ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು,ನನ್ನ ಹೆಂಡತಿ ಪ್ರೀತಿಯ ಸಾಗರ,ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ,ನನ್ನ ಅತ್ತಿಗೆ ಮಮತಾಮಯಿ,ನನ್ನ ತಂಗಿ ಕರುಣಾಮಯಿ,ನನ್ನ ಗಂಡ ದಕ್ಷ ಪ್ರಾಮಾಣಿಕ,ನನ್ನ ಮಗ ಮಗಳು ಅತ್ಯಂತ ಸಹೃದಯಿಗಳು,………..ಹೀಗೆ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮವರ ಬಗ್ಗೆ ಅದರಲ್ಲೂ ರಕ್ತ ಸಂಬಂಧಿಗಳ ಬಗ್ಗೆ ಹೇಳುತ್ತಿರುತ್ತಾರೆ.( ಕೆಲವು ಅಪರೂಪದ ಅಪವಾದಗಳು ಇರಬಹುದು )ಆದರೆ ಬಹುತೇಕ ಜನರ ಅಭಿಪ್ರಾಯ ಇದೇ ಆಗಿರುತ್ತದೆ.ಹಾಗಾದರೆ ಇಷ್ಟೊಂದು ಒಳ್ಳೆಯವರಿಂದ ಕೂಡಿರುವ ನಮ್ಮ ಸಮಾಜ ಅತ್ಯಂತ ಆದರ್ಶ ನಾಗರಿಕ ಸಮಾಜವಾಗಿರಬೇಕಿತ್ತಲ್ಲವೇ ?ಈ ಭ್ರಷ್ಟಾಚಾರ, ಮೋಸ, ವಂಚನೆ, ನಂಬಿಕೆ ದ್ರೋಹ, ಡಾಕ್ಟರ್, ಲಾಯರ್, ಪೋಲೀಸ್, ರಾಜಕಾರಣಿ, ಕಂಟ್ರಾಕ್ಟರ್ ಮುಂತಾದ ಸಮಾಜದ ಎಲ್ಲಾ ಕ್ಷೇತ್ರದ ಜನರ ಮೇಲೆ ಅನುಮಾನ ಏಕೆ. ಇವರೆಲ್ಲರೂ ನಮ್ಮ ತಾಯಿ, ತಂಗಿ, ಅಣ್ಣ, ಅಕ್ಕ, ಅಪ್ಪ, ಅಮ್ಮ, ಮಕ್ಕಳಲ್ಲಿ…

ಮುಂದೆ ಓದಿ..
ಅಂಕಣ 

ಶೋಷಿತರ ಧ್ವನಿಯನ್ನು ನೆನೆಯುತ್ತಾ…….

ಇಸಂಗಳನ್ನು ಮೀರಿ ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕಾದ ಸನ್ನಿವೇಶದಲ್ಲಿ…..ಕಮ್ಯುನಿಸ್ಟ್ ಜಗತ್ತಿನ ಗ್ಲಾಮರಸ್ ಹೀರೋ ಆರ್ನೆಸ್ಟ್ ಚೆಗುವಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ,ಜೂನ್ 14………ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ ಮುಕ್ತ ಮಾರುಕಟ್ಟೆಯ ಹೊಸ ಪೀಳಿಗೆ ಮುಖ್ಯವಾಹಿನಿಯಲ್ಲಿ ಮಹತ್ವ ಪಡೆದಿರುವಾಗ ಕಾರ್ಲ್ ಮಾರ್ಕ್ಸ್, ಮಾವೋ, ಸ್ಟಾಲಿನ್, ಕ್ಯಾಸ್ಟ್ರೋ ಮುಂತಾದವರು ಈ ಕೊಳ್ಳುಬಾಕ ಸಂಸ್ಕೃತಿಯ ಜನರ ನಡುವೆ ವಿಲನ್ ರೀತಿಯಲ್ಲಿ ಬಿಂಬಿತವಾಗುತ್ತಿರುವಾಗ, ಬಹುತೇಕ ಯುವ ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮವಾಗಿ ಸೂಕ್ಷ್ಮತೆ ಕಳೆದುಕೊಂಡಿರುವಾಗ, ಈಗಲೂ ಈ ವ್ಯವಸ್ಥೆಯ ಬಂಡಾಯಗಾರರಿಗೆ ” ಚೆ ” ಅತ್ಯಂತ ಆಕರ್ಷಕ ಮತ್ತು ಸ್ಪೂರ್ತಿದಾಯಕವಾಗಿದ್ದಾರೆ.ಚೆಗುವಾರ ಅವರ ಹೋರಾಟದ ಹಾದಿಯನ್ನು ಮೆಚ್ಚುತ್ತಲೇ ಅವರ ಅಭಿಮಾನಿಗಳಾಗಿ ಈಗಲೂ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಪಿಕ್ಚರ್ ಚೆಗುವಾರ ಆಗಿರುವುದನ್ನು ಕಾಣಬಹುದು.ಆಧುನಿಕ ಸಂಕೀರ್ಣ ಜೀವನಶೈಲಿಯ ಮೋಹಕ್ಕೆ ಒಳಗಾಗಿ ವಸ್ತು ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ವ್ಯಾಪಾರವಾಗಿಸಿರುವಾಗ ಪ್ರತಿಯೊಬ್ಬರು…

ಮುಂದೆ ಓದಿ..
ಅಂಕಣ 

ಅಪ್ಪನ ದಿನ……..ತಂದೆ ಎಂಬ ಪಾತ್ರವ ಕುರಿತು……ಅಪ್ಪಾ…………ಸ್ವಲ್ಪ ಇಲ್ಲಿ ನೋಡಪ್ಪಾ…….

ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾವಲಂಬನೆ ಸಾಧ್ಯವಾದ ನಂತರ ಸ್ವಲ್ಪ ಬದಲಾವಣೆ ಕಾಣುತ್ತಿದೆ. )ಈ ದೇಶದ ಇಂದಿನ ಎಲ್ಲಾ ಪರಿಸ್ಥಿತಿಗಳ ಬಹುಮುಖ್ಯ ಪಾತ್ರದಾರಿ ಅಪ್ಪ, ಅಮ್ಮ ಪೋಷಕ ಪಾತ್ರದಾರಿ ಮಾತ್ರ.ಇವತ್ತಿನ ಸಂದರ್ಭದಲ್ಲಿ ನಿಮಗೆ ನಮ್ಮ ಒಟ್ಟು ವ್ಯವಸ್ಥೆಯ ಬಗ್ಗೆ ಹೆಮ್ಮೆಯಿದ್ದರೆ ಅದಕ್ಕೆ ಅಪ್ಪ ಕಾರಣ ಅಥವಾ ಇದರ ಬಗ್ಗೆ ಅತೃಪ್ತಿ, ಅಸಹನೆ ಇದ್ದರೆ ಅದಕ್ಕೂ ಅಪ್ಪನೇ ಕಾರಣ.ಅಪ್ಪ, ಈ ಸಂಬಂಧವನ್ನು ಅರ್ಥೈಸುವುದು ಹೇಗೆ.ಸ್ವಂತ ಮಕ್ಕಳು ಅಪ್ಪನನ್ನು ಆಕಾಶಕ್ಕೆ ಏರಿಸುತ್ತವೆ, ನನ್ನ ಅಪ್ಪನಂತ ಅಪ್ಪ ಯಾರೂ ಇಲ್ಲ, ಆತನೇ ಪ್ರತ್ಯಕ್ಷ ದೇವರು, ನನ್ನ ಸ್ಪೂರ್ತಿ, ನನ್ನ ಮಾರ್ಗದರ್ಶಕ, ನನ್ನ ಬದುಕು ಕಲಿಸಿದವ ಮುಂತಾಗಿ ವರ್ಣಿಸುತ್ತಾರೆ. ( ಕೆಲವು…

ಮುಂದೆ ಓದಿ..
ಅಂಕಣ 

ಮರಣವೇ ಮಹಾ ನವಮಿ…….ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ..

ಮರಣವೇ ಮಹಾ ನವಮಿ…….ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ ನಡೆದ ಬೋಯಿಂಗ್ ಡ್ರೀಮ್ ಲೈನರ್ 787 ವಿಮಾನದ 265 ಕ್ಕೂ ಹೆಚ್ಚು ಜನರ ಸಾವಿನ ದುರ್ಘಟನೆ ನಮ್ಮ ಬದುಕಿಗೆ ಹೇಗೆಲ್ಲಾ ಪಾಠವಾಗಬಹುದು…….. ಏಕೆಂದರೆ ಆಧುನಿಕ ಕಾಲದಲ್ಲಿ ಅಪಘಾತಗಳೆಂಬುದು ಬಹುತೇಕ ಸಾಮಾನ್ಯ ಸಹಜ. ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ಹೇಗೆ ನಾವು ಸುರಕ್ಷಿತೆಗಾಗಿ, ಅಧೀಕೃತವಾಗಿ ಜೀವವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ಅನಧೀಕೃತವಾಗಿ ನಮ್ಮ ಬೆನ್ನ ಹಿಂದೆಯೇ ನೆರಳಿನಂತೆ ಸಾವು ಎಂಬ ಅಂತಿಮ ಸತ್ಯವೂ ಹಿಂಬಾಲಿಸುತ್ತಿರುತ್ತದೆ. ಬದುಕಿನ ಪ್ರಯಾಣದಲ್ಲಿ ಅದೂ ಸಹ ಜೊತೆಗಾರ…….ಅದರಲ್ಲೂ ನಾವು ವಿದೇಶಕ್ಕೆ ಹೋಗಬೇಕಾದರೆ ಸಧ್ಯದಲ್ಲಿ ಇರುವ ಅತ್ಯಂತ ಸುಲಭ, ಸುರಕ್ಷಿತ ಪ್ರಯಾಣದ ಮಾರ್ಗವೆಂದರೆ ವಾಯುಯಾನ ಮಾತ್ರ. ಸಮುದ್ರ ಮತ್ತು ರಸ್ತೆ ತೀರಾ ಅವಾಸ್ತವಿಕ. ನೀವು ಅನಿವಾರ್ಯವಾಗಿ ವಿಮಾನದಲ್ಲಿ ಅದರಲ್ಲಿ ಸಂಚರಿಸಲೇಬೇಕು ಅಂತಹ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಈ ರೀತಿಯ ಅಪಘಾತವು ಕೂಡ ಆಕಸ್ಮಿಕ ಮತ್ತು ಅನಿರೀಕ್ಷಿತವೇ…

ಮುಂದೆ ಓದಿ..