ಸುದ್ದಿ 

ಹೊಸಕೋಟೆ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಟಿಪ್ಪರ್‌ಗೆ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನ ಸ್ಥಿತಿ ಗಂಭೀರ

ಹೊಸಕೋಟೆ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್ ಟಿಪ್ಪರ್‌ಗೆ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನ ಸ್ಥಿತಿ ಗಂಭೀರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮಲ್ಲಿಮಾಕನಪುರ ಗ್ರಾಮದ ಬಳಿ ನಡೆದ ದುರ್ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತರನ್ನು ಉತ್ತರ ಭಾರತ ಮೂಲದ ಲೊಕೇಶ್ (25) ಮತ್ತು ವಿಮಲ್ (27) ಎಂದು ಗುರುತಿಸಲಾಗಿದೆ. ಪೊಲೀಸ್ ವರದಿಯ ಪ್ರಕಾರ, ಹೊಸಕೋಟೆ–ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಸವಾರರು ಓವರ್‌ಟೇಕ್ ಮಾಡಲು ಮುಂದಾದ ವೇಳೆ ಎದುರಿನಿಂದ ಬಂದ ಟಿಪ್ಪರ್ ಲಾರಿಯೊಂದಿಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬರನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಬಂಧ ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಸೌಲಭ್ಯಕ್ಕೆ ಚಾಲನೆ: ಪಾರದರ್ಶಕ ಆಡಳಿತದತ್ತ ಹೆಜ್ಜೆ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಸೌಲಭ್ಯಕ್ಕೆ ಚಾಲನೆ: ಪಾರದರ್ಶಕ ಆಡಳಿತದತ್ತ ಹೆಜ್ಜೆ ಗ್ರಾಮೀಣ ಆಡಳಿತವನ್ನು ಡಿಜಿಟಲ್‌ಗೊಳಿಸುವ ಮಹತ್ತರ ಹೆಜ್ಜೆಯಾಗಿ ರಾಜ್ಯ ಸರ್ಕಾರ “ಇ-ಸ್ವತ್ತು” ಯೋಜನೆಗೆ ಅಧಿಕೃತ ಚಾಲನೆ ನೀಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತಂದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಜಾರಿಯಾಗಿದೆ. ಹೊಸ ನಿಯಮಾವಳಿಗಳ ಪ್ರಕಾರ, ನಿರಾಕ್ಷೇಪಣ ಪತ್ರ (NOC), ಪರವಾನಗಿ, ತೆರಿಗೆ ಹಾಗೂ ಶುಲ್ಕಗಳ ನಿಗದಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿಗದಿಪಡಿಸಲಾಗಿದ್ದು, ರಾಜ್ಯದ 95.75 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ “ಇ-ಸ್ವತ್ತು” ಪ್ರಮಾಣಪತ್ರ ನೀಡುವ ದಾರಿಯನ್ನು ಸರ್ಕಾರ ತೆರೆದಿದೆ. ಹೊಸ ತಂತ್ರಾಂಶದ ಅಭಿವೃದ್ಧಿಯು ಹದಿನೈದು ದಿನಗಳೊಳಗೆ ಪೂರ್ಣಗೊಳ್ಳಲಿದ್ದು, ಗ್ರಾಮೀಣ ನಾಗರಿಕರು ನೇರವಾಗಿ ಆನ್‌ಲೈನ್ ಮೂಲಕ ಈ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ತೆರಿಗೆ ಲೆಕ್ಕಾಚಾರ ವಿಧಾನವನ್ನು ಸರಳಗೊಳಿಸಿರುವ ಸರ್ಕಾರ, ಇ-ಸ್ವತ್ತು ನಮೂನೆ ವಿತರಣೆ ಅವಧಿಯನ್ನು…

ಮುಂದೆ ಓದಿ..
ಅಂಕಣ 

ದೀಪ – ಪಟಾಕಿ ಮತ್ತು ಕತ್ತಲು…..

ದೀಪ – ಪಟಾಕಿ ಮತ್ತು ಕತ್ತಲು….. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ……. ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು……. ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ,…… ಆಕಾಶದಲ್ಲಿ ಹಕ್ಕಿಯೊಂದು ಹಾರುತ್ತಾ ಕೇಳುತ್ತಿತ್ತು…. ಪ್ರೇಮಿಸುವ ಮನಸುಗಳೇ ಪ್ರೇಮವೆಂದರೇ ಗೊತ್ತೆ…. ಎತ್ತರದಲ್ಲಿ ಹಕ್ಕಿಯೊಂದು ಹಾರುತ್ತಾ ನುಡಿಯುತ್ತಿತ್ತು…… ತ್ಯಾಗ ಜೀವಿಗಳೇ ತ್ಯಾಗವೆಂದರೆ ಗೊತ್ತೆ….. ಮೋಡಗಳಲ್ಲಿ ಹಕ್ಕಿಯೊಂದು ಹಾರುತ್ತಾ ಹೇಳುತ್ತಿತ್ತು…… ಸ್ನೇಹಿತರೆ ಸ್ನೇಹವೆಂದರೆತಿಳಿದಿದೆಯೇ….. ಮೇಲೆ ಹಕ್ಕಿಯೊಂದು ಹಾರುತ್ತಾ ಪ್ರಶ್ನಿಸುತ್ತಿತ್ತು…… ಮನುಷ್ಯರೇ ಮಾನವೀಯತೆ ಎಂದರೆ ಗೊತ್ತಿದೆಯೇ….. ದೂರದಲ್ಲಿ ಹಕ್ಕಿಯೊಂದು ಹಾರುತ್ತಾ ಅನ್ನುತ್ತಿತ್ತು…… ಎಲೈ ಜೀವಿಗಳೆ ಸಂಬಂಧಗಳೆಂದರೆ ಗೊತ್ತೆ……. ಕೆಳಗಿನಿಂದ ಮನುಷ್ಯ ಹೇಳಿದ,ಹೌದು ಚೆನ್ನಾಗಿ ಗೊತ್ತು……. ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಉತ್ತರಿಸಿತು……. ಹೌದು ಅದೆಲ್ಲಾ ನನಗೂ ಕಾಣುತ್ತಿದೆ ಮೇಲಿನಿಂದ….. ಅವೆಲ್ಲಾ ನಿನ್ನ ಆಂತರ್ಯದಲ್ಲಿ ಬಂಧಿಯಾಗಿದೆ……. ಮಸುಕಾಗಿದೆ, ಮಂಕಾಗಿದೆ, ಮುಖವಾಡಧರಿಸಿದಂತಿದೆ…….. ಸರಿಸು ಮುಸುಕನ್ನು,ಒರೆಸು ಮಂಕನ್ನು,ಕಿತ್ತೊಗೆ ಮುಖವಾಡವನ್ನು…… ಆಗ ಗೋಚರಿಸುತ್ತದೆ ನಿನಗೆ ನಿಜವಾದಪ್ರೀತಿ, ಪ್ರೇಮ, ತ್ಯಾಗ,…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ?

ಬೆಂಗಳೂರು: ಲಾಡ್ಜ್‌ನಲ್ಲಿ ಯುವಕನ ನಿಗೂಢ ಸಾವು — ಪ್ರೇಮ ಸಂಬಂಧದ ಹಿನ್ನೆಲೆಯೇ? ಬೆಂಗಳೂರು ನಗರದಲ್ಲಿ ನಿಗೂಢ ಸಾವಿನ ಘಟನೆ ಬೆಳಕಿಗೆ ಬಂದಿದೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಲಾಡ್ಜ್‌ನಲ್ಲಿ ಪುತ್ತೂರು ಮೂಲದ 20 ವರ್ಷದ ಯುವಕ ತಕ್ಷಿತ್ ಶವವಾಗಿ ಪತ್ತೆಯಾದ ಘಟನೆ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿ ಪ್ರಕಾರ, ತಕ್ಷಿತ್ ಅಕ್ಟೋಬರ್ 9ರಂದು ವಿರಾಜಪೇಟೆಯ ಯುವತಿಯೊಂದಿಗಿದ್ದು, ಲಾಡ್ಜ್‌ನಲ್ಲಿ ರೂಮ್ ಮಾಡಿದ್ದ. ಇಬ್ಬರೂ ಹಿಂದೆ ಪಣಂಬೂರಿನ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದರು. ಆದರೆ ಬ್ಯಾಕ್‌ಲಾಗ್‌ಗಳಿಂದಾಗಿ ಕಾಲೇಜು ಬಿಟ್ಟು ಹೊರ ಬಂದಿದ್ದರು. ಬಳಿಕ ತಕ್ಷಿತ್ ಮೈಸೂರಿಗೆ ಓದಲು ಹೋಗುತ್ತಿದ್ದೇನೆಂದು ಹೇಳಿ, ವಾಸ್ತವದಲ್ಲಿ ಬೆಂಗಳೂರಿಗೆ ಬಂದಿದ್ದಾನೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಲಾಡ್ಜ್ ದಾಖಲೆ ಪ್ರಕಾರ, ತಕ್ಷಿತ್ ಮತ್ತು ಯುವತಿ ಕಳೆದ 8 ದಿನಗಳಿಂದ ರೂಮಿನಲ್ಲೇ ಇದ್ದು, ಸ್ವಿಗ್ಗಿ ಮೂಲಕ ಆಹಾರ ಪಾರ್ಸೆಲ್ ಮಾಡಿ ಸೇವಿಸುತ್ತಿದ್ದರು. ನಿನ್ನೆ ಸಂಜೆ ಇಬ್ಬರೂ ಆಹಾರ…

ಮುಂದೆ ಓದಿ..
ಸುದ್ದಿ 

ನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್!

ನಕಲಿ ನೋಟು ಗ್ಯಾಂಗ್ ಪತ್ತೆ – ಜಯನಗರ ಪೊಲೀಸರ ಸ್ಟ್ರಾಂಗ್ ಆಪರೇಶನ್! “ಮೂರು ಪಟ್ಟು ಹಣ ಕೊಡುತ್ತೇವೆ” ಎಂಬ ಆಮಿಷವೊಡ್ಡಿ ಜನರನ್ನು ಭಾರಿ ಮಟ್ಟದಲ್ಲಿ ವಂಚಿಸುತ್ತಿದ್ದ ತಿರುನೆಲ್ವೇಲಿ ಮೂಲದ ನಕಲಿ ನೋಟು ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಸಿಕ್ಕಿದೆ. ಜಯನಗರ ಠಾಣೆಯ ಪೊಲೀಸರು ಸೂಕ್ತ ಮಾಹಿತಿಯ ಆಧಾರದ ಮೇಲೆ ನಡೆಸಿದ ನಿಖರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ರೆಡ್‌ಹ್ಯಾಂಡ್ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಗ್ಯಾಂಗ್ ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿಯೂ ತಮ್ಮ ವಂಚನಾ ಜಾಲವನ್ನು ವಿಸ್ತರಿಸಲು ಮುಂದಾಗಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಉರುಲು ಬಲ ಬಿಚ್ಚಿ, ಆರೋಪಿಗಳನ್ನು ಹಣದ ವ್ಯವಹಾರದ ವೇಳೆಯಲ್ಲೇ ಕೈಕಟ್ಟಿದ್ದಾರೆ. ಆರೋಪಿಗಳು “10 ಲಕ್ಷ ಅಸಲಿ ನೋಟು ಕೊಡಿ, ನಾವು ನಿಮಗೆ 30 ಲಕ್ಷ ‘ಕೋಟಾ ನೋಟು’ ನೀಡುತ್ತೇವೆ” ಎಂದು ಜನರಿಗೆ ಆಮಿಷವೊಡ್ಡುತ್ತಿದ್ದರು. ನಂಬಿಕೆ ಮೂಡಿಸಲು ಅಸಲಿ ನೋಟುಗಳ ಬಂಡಲ್‌ನ ಮೇಲ್ಭಾಗ ಮತ್ತು…

ಮುಂದೆ ಓದಿ..
ಸುದ್ದಿ 

ಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ!

ಮದುವೆಯಾದ 9 ತಿಂಗಳಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಯುವತಿಯ ಬಲಿ! ದೊಡ್ಡಬಳ್ಳಾಪುರ: ಮದುವೆಯಾದ ಕೇವಲ ಒಂಬತ್ತು ತಿಂಗಳಲ್ಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್‌ ಡ್ಯಾಂ ಹತ್ತಿರ ನಡೆದಿದೆ. 28 ವರ್ಷದ ಪುಷ್ಪಾ ಆತ್ಮಹತ್ಯೆಗೆ ಶರಣಾದ ದುರ್ಘಟಿತೆ. ಮೃತಳಾದ ಪುಷ್ಪಾ ತಪಸೀಹಳ್ಳಿ ಗ್ರಾಮದ ವೇಣು ಎಂಬುವವರ ಪತ್ನಿ. ಒಂದೂವರೆ ವರ್ಷಗಳ ಹಿಂದೆ ಇವರ ವಿವಾಹ ನಡೆದಿತ್ತು. ಆದರೆ ಮದುವೆಯ ನಂತರದಿಂದಲೇ ಪತಿ, ಅತ್ತೆ, ಮಾವ ಹಾಗೂ ಇತರ ಕುಟುಂಬಸ್ಥರಿಂದ ವರದಕ್ಷಿಣೆ ಮತ್ತು ನಿವೇಶನಕ್ಕಾಗಿ ನಿರಂತರ ಕಿರುಕುಳ ಎದುರಿಸುತ್ತಿದ್ದಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಮೊದಲು ಪುಷ್ಪಾ ಸೆಲ್ಫಿ ವಿಡಿಯೋ ಮಾಡಿ ತನ್ನ ಜೀವ ತ್ಯಾಗದ ನಿರ್ಧಾರವನ್ನು ದಾಖಲಿಸಿರುವುದು ಘಟನೆಗೆ ಮತ್ತಷ್ಟು ಭಾರಿತನ ನೀಡಿದೆ. ವಿಡಿಯೋದಲ್ಲಿ ಪುಷ್ಪಾ ಪತಿಯ ಕುಟುಂಬದವರು ನೀಡಿದ ಕಿರುಕುಳ ಮತ್ತು ಅವಮಾನವನ್ನು ವಿವರಿಸಿದ್ದಾಳೆ ಎನ್ನಲಾಗಿದೆ. ಮದುವೆಯಾದ…

ಮುಂದೆ ಓದಿ..
ಅಂಕಣ 

ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ……

ದೀಪಾವಳಿ………. ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ…… ಜ್ಞಾನದ ಮರು ಪೂರಣ…… ಜ್ಞಾನ – ಬುದ್ದಿ – ತಿಳಿವಳಿಕೆ…..ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ……… ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಮುಗಿದ ಹೋಗುವ ಮತ್ತು ಎಂದೂ ಮುಗಿಯದ ವಸ್ತುಗಳು ಎಂದು…. ಜ್ಞಾನ ಮೊದಲ ಪಟ್ಟಿಯಲ್ಲಿ ಸೇರುತ್ತದೆ. ಆದರೆ ಅದರ ವಿಶೇಷತೆ ಎಂದರೆ ಅದಕ್ಕೆ ಎರಡನೇ ಪಟ್ಟಿಯಲ್ಲಿಯೂ ಸ್ಥಾನ ಕಲ್ಪಿಸಬಹುದು. ಅದು ವ್ಯಕ್ತಿಗಳ ಶ್ರಮ, ಸಾಧನೆ ಮತ್ತು ಪ್ರಯತ್ನದ ಮೇಲೆ ಅವಲಂಬಿಸಿರುತ್ತದೆ…… ಒಂದಷ್ಟು ಜನ ಜ್ಞಾನ ಎಂದರೆ ಹಣ ಅಧಿಕಾರ ಆಸ್ತಿ ಸಂಪಾದನೆ ಎಂದು ಭಾವಿಸಿರುತ್ತಾರೆ. ಅದರ ಆಧಾರದ ಮೇಲೆ ಜ್ಞಾನವನ್ನು ಅಳೆಯುತ್ತಾರೆ. ಎಷ್ಟು ಯಶಸ್ವಿಯಾಗುವರೋ ಅಷ್ಟು ಜ್ಞಾನಿಗಳು ಎಂಬ ಅರ್ಥದಲ್ಲಿ……. ಇನ್ನೊಂದಿಷ್ಟು ಜನ ಅಕ್ಷರ ಕಲಿಕೆಯ ಮೂಲಕ ಅಂಕಗಳ ಆಧಾರದ…

ಮುಂದೆ ಓದಿ..
ಸುದ್ದಿ 

ಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ?

ಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ? ಬೆಂಗಳೂರು ನಗರದ ವಿದ್ಯಾಮಾನ್ಯನಗರದಲ್ಲಿ ನಡೆದ ಸಿಲಿಂಡರ್ ಸ್ಫೋಟದಿಂದ ಮಾಜಿ ಸೈನಿಕ ಜನಾರ್ದನ್ ಅವರಿಗೆ ಗಂಭೀರ ಗಾಯವಾದ ಘಟನೆ ಸಾಮಾಜಿಕವಾಗಿ ದೊಡ್ಡ ಪ್ರಶ್ನೆಯನ್ನು ಎತ್ತಿದೆ – ನಮ್ಮ ಮನೆಗಳಲ್ಲಿ ಅನಿಲ ಸುರಕ್ಷತೆ ಬಗ್ಗೆ ನಾವು ಎಷ್ಟು ಜಾಗೃತರಾಗಿದ್ದೇವೆ? ಮಾಜಿ ಸೈನಿಕರು ದೇಶಕ್ಕಾಗಿ ಜೀವ ಪಣಕ್ಕಿಟ್ಟವರು. ಇಂತಹ ವ್ಯಕ್ತಿ ನಾಗರಿಕ ಜೀವನದಲ್ಲಿ ಅಸಾವಧಾನತೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಜೀವಕ್ಕೆ ಹಾನಿಯಾಗುತ್ತಿರುವುದು ಅತ್ಯಂತ ದುಃಖಕರ. ಈ ಘಟನೆ ಕೇವಲ ಒಂದು ಮನೆಯ ದುರಂತವಲ್ಲ, ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆ. ಪ್ರತಿ ಮನೆಗೂ ಅನಿಲ ಸೋರಿಕೆ ಪತ್ತೆ ಸಾಧನಗಳು, ಸರಿಯಾದ ಸಿಲಿಂಡರ್ ನಿರ್ವಹಣೆ ಮತ್ತು ನಿಯಮಿತ ಸುರಕ್ಷತಾ ಪರಿಶೀಲನೆ ಅಗತ್ಯವಾಗಿದೆ. ನಾಗರಿಕರು ಅನಿಲದ ವಾಸನೆ ಕಂಡುಬಂದಾಗ ತಕ್ಷಣವೇ ಗ್ಯಾಸ್ ವಾಲ್ವ್ ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದೇ, ತುರ್ತು ಸಂಖ್ಯೆಗೆ ಕರೆಮಾಡುವ…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ!

ಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ! ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ, ಅಶ್ಲೀಲ ಹಾಗೂ ವಿಭಜನೆ ಉಂಟುಮಾಡುವ ಭಾಷೆ ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿವಾದಕ್ಕೆ ಒಳಗಾದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯ ವಿರುದ್ಧ ಮತ್ತೊಮ್ಮೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿಜಯಪುರ ಜಿಲ್ಲೆಗೆ 2 ತಿಂಗಳ ಕಾಲ ಪ್ರವೇಶ ನಿಷೇಧ ವಿಧಿಸಿದ್ದ ಆಡಳಿತ, ಇದೀಗ ಬಾಗಲಕೋಟೆ ಜಿಲ್ಲೆಯ ಸೀಮೆಯಿಂದ ಕೂಡ ಸ್ವಾಮೀಜಿಯನ್ನು ತೆರಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಕೇವಲ ಒಂದು ಗಂಟೆಯೊಳಗೆ ಮಠವನ್ನು ಖಾಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಡಿವೈಎಸ್‌ಪಿ ಗಜಾನನ ಸುತಾರ ಹಾಗೂ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಸ್ವಾಮೀಜಿಗೆ ಅಧಿಕೃತ ನೋಟಿಸ್ ಹಸ್ತಾಂತರಿಸಿದ್ದಾರೆ. ವಿಜಯಪುರ ಪ್ರವೇಶಕ್ಕೆ ನಿರ್ಬಂಧ…

ಮುಂದೆ ಓದಿ..
ಸಿನೆಮಾ ಸುದ್ದಿ 

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್, ಜೈಲು ಪರಿಸ್ಥಿತಿಯನ್ನು ಕುರಿತು ಹಲವು ದೂರನ್ನು ಮಾಡುತ್ತಿದ್ದರು. ಆದರೆ ಇದೀಗ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ವರದಿ ಅವರ ಹೇಳಿಕೆಗಳ ನಿಜಾಸತ್ಯ ಬಯಲು ಮಾಡಿದೆ. ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ, ಸೆಲ್‌ ವ್ಯವಸ್ಥೆ ಹಾಗೂ ದಿನನಿತ್ಯದ ಪರಿಸ್ಥಿತಿ ಪರಿಶೀಲಿಸಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 10 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ನೀಡಿದ ಅನೆಕ ಆರೋಪಗಳಿಗೆ ವಿರುದ್ಧವಾಗಿ ಹಲವಾರು ನಿಜಾಂಶಗಳು ಬಯಲಾಗಿದೆ. ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಎರಡು ಶೌಚಾಲಯಗಳ ವ್ಯವಸ್ಥೆ ಇದೆ. ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂಬ ಅವರ ಆರೋಪಕ್ಕೆ ಸಂಬಂಧಿಸಿ, ವಿಚಾರಣಾಧೀನ…

ಮುಂದೆ ಓದಿ..