” ಅಬ್ ಕಿ ಬಾರ್ಟ್ರಂಪ್ ಕಿ ಸರ್ಕಾರ್ “
” ಅಬ್ ಕಿ ಬಾರ್ಟ್ರಂಪ್ ಕಿ ಸರ್ಕಾರ್ ” ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರತದ ಅಲಿಪ್ತ ನೀತಿಗೆ ವಿರುದ್ಧವಾಗಿತ್ತು. ಹಾಗೆಯೇ ಭಾರತದಂತ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಇನ್ನೊಂದು ರಾಷ್ಟ್ರದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದು ಉತ್ತಮ ನಡೆಯಾಗಿರಲಿಲ್ಲ. ಜೊತೆಗೆ ಇದು ಮೋದಿಯವರ ವಿದೇಶಾಂಗ ನೀತಿಯ ದೂರದೃಷ್ಟಿತ್ವ ಮತ್ತು ಗ್ರಹಿಕೆಯ ಕೊರತೆಯಲ್ಲಿನ ತಪ್ಪು ತೀರ್ಮಾನವಾಗಿತ್ತು. ಈಗ ಅದು ನಿಜವಾಗಿದೆ.ಕೊನೆಗೂ ಆ ಚುನಾವಣೆಯಲ್ಲಿ ಟ್ರಂಪ್ ಸೋತು ಜೋ ಬೈಡನ್ ಅಧ್ಯಕ್ಷರಾಗುತ್ತಾರೆ. ಅಲ್ಲಿಂದಲೇ ಭಾರತ ಅಮೆರಿಕಾದ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಕುಸಿಯತೊಡಗಿತು. ವಾಸ್ತವವಾಗಿ ಅಮೆರಿಕಾದ ಅಧ್ಯಕ್ಷರಲ್ಲಿಯೇ ಅತ್ಯಂತ ಕೆಳಮಟ್ಟದ ನೈತಿಕತೆಯನ್ನು ಹೊಂದಿರುವವರು ಡೊನಾಲ್ಡ್ ಟ್ರಂಪ್.…
ಮುಂದೆ ಓದಿ..
