ಸುದ್ದಿ 

ನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು

ನಾಗಮಂಗಲಿಗರು ಶುದ್ಧ ಕನ್ನಡ ಮಾತನಾಡುವ ಜನ : ವ.ನಂ.ಶಿವರಾಮು ನಾಗಮಂಗಲ : ಪ್ರಪಂಚದಲ್ಲಿ ಎಲ್ಲಾದರು ಕನ್ನಡ ಕೇಳಿದರೆ ಅದು ನಾಗಮಂಗಲದ ಜನರ ಧ್ವನಿ. ಶುದ್ಧ ಕನ್ನಡ ನಾಗಮಂಗಲ ಜನರಿಂದ ಮಾತ್ರ ಸಾಧ್ಯ ಎಂದು ಮೈಸೂರು ಇಪ್ರೊ ಜಾನಪದ ಮಹಾ ವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ.ವ.ನಂ.ಶಿವರಾಮು ಅಭಿಪ್ರಾಯ ಪಟ್ಟರು. ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಿನದ ಮಹತ್ವ ಕುರಿತು ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಭಾಷೆ ಒಂದು ಸಂಸ್ಕೃತಿ. ಕನ್ನಡತನದ ಸೊಗಡು ಸಮಾಜದಲ್ಲಿ ಆವರಿಸಿದ್ದಾಗ ಸಂಬಂಧಗಳಲ್ಲಿ ಗಟ್ಟಿತನ ಇತ್ತು. ಆಂಟಿ ಅಂಕಲ್ ಸಂಸ್ಕೃತಿ ಬಂದಮೇಲೆ ಕನ್ನಡ ಸೊರಗಿ ಅನೈತಿಕ ಸಂಬಂಧ ಅನಾಚಾರ ಅತ್ಯಾಚಾರ ಹೆಚ್ಚಾಗಲು ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಮಹಿಳೆಯರು ಮನಸ್ಸು ಮಾಡಿದರೆ ಮನೆ ಪೂರಾ ಕನ್ನಡವಾಗುತ್ತದೆ, ಕನ್ನಡ ಉಳಿಯುತ್ತದೆ. ಕನ್ನಡ…

ಮುಂದೆ ಓದಿ..
ಸುದ್ದಿ 

ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ

ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ ಸಾಗರ: ನಕಲಿ ಯೂಟ್ಯೂಬರ್‌ಗಳ ಬ್ಲ್ಯಾಕ್‌ಮೇಲ್‌ ಅಟ್ಟಹಾಸದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಗುರುವಾರ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ “ಯೂಟ್ಯೂಬ್ ಪತ್ರಕರ್ತ” ಎಂದು ಹೇಳಿಕೊಂಡು ಅಕ್ರಮ ಚಟುವಟಿಕೆ ನಡೆಸುವವರ ಸಂಖ್ಯೆ ತೀವ್ರವಾಗಿ ಏರಿದೆ. ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಕೆಲವರು ಬ್ಲ್ಯಾಕ್‌ಮೇಲ್, ಹಣದ ವಸೂಲಿ ಮತ್ತು ಬೆದರಿಕೆ ಕೃತ್ಯಗಳಲ್ಲಿ ತೊಡಗಿರುವುದು ಸಂಘದ ಗಮನಕ್ಕೆ ಬಂದಿದೆ. ಇವರಿಗೆ ನಿಜವಾದ ಪತ್ರಕರ್ತತ್ವ ಅಥವಾ ಪತ್ರಕರ್ತರ ಸಂಘದೊಂದಿಗೆ ಯಾವುದೇ ನಂಟಿಲ್ಲ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಲೇಔಟ್ ಮಾಲೀಕರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು ಇಂತಹ ನಕಲಿ ಪತ್ರಕರ್ತರ ಬಲಿಯಾಗುತ್ತಿದ್ದಾರೆ. “ನಿಮ್ಮ ವಿರುದ್ಧ ಯೂಟ್ಯೂಬ್‌ನಲ್ಲಿ ಸುದ್ದಿ ಹಾಕುತ್ತೇವೆ” ಎಂದು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಗ್ರಾಮಾಂತರ: DDLR ಕಚೇರಿಯಲ್ಲಿ ಭ್ರಷ್ಟಾಚಾರದ ಬೃಹತ್ ಬಯಲು — ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಗಂಭೀರ ಲಂಚದ ಆರೋಪ!

ಬೆಂಗಳೂರು ಗ್ರಾಮಾಂತರ: DDLR ಕಚೇರಿಯಲ್ಲಿ ಭ್ರಷ್ಟಾಚಾರದ ಬೃಹತ್ ಬಯಲು — ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಗಂಭೀರ ಲಂಚದ ಆರೋಪ! ರಾಜ್ಯದಲ್ಲಿ ದಿನದಿಂದ ದಿನಕ್ಕೆ ಭ್ರಷ್ಟಾಚಾರದ ಪ್ರಮಾಣ ತಾರಕಕ್ಕೇರಿದ್ದು, ಸರ್ಕಾರಿ ಕಚೇರಿಗಳಲ್ಲಿ ಲಂಚವೇ ನಿಯಮವಾದಂತಾಗಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಭವನದಲ್ಲಿರುವ ಭೂ ದಾಖಲೆಗಳ ಉಪ ನಿರ್ದೇಶಕರ (DDLR) ಕಚೇರಿಯಿಂದಲೇ ಭ್ರಷ್ಟಾಚಾರದ ದುರ್ಗಂಧ ಹೊರಬಿದ್ದಿದೆ. ಬಡ ರೈತರ ಹಕ್ಕಿನ ದಾಖಲೆಗಳನ್ನು ನೀಡುವ ಹೆಸರಿನಲ್ಲಿ ಲಂಚದ ಅಬ್ಬರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ, ಉಪ ನಿರ್ದೇಶಕಿ ಕುಸುಮಲತಾ ಅವರು ಯಾವುದೇ ಕೆಲಸಕ್ಕಾಗಿ ಲಂಚವಿಲ್ಲದೆ ಚಲಿಸುವುದೇ ಇಲ್ಲ ಎಂಬ ಮಾತು ಕಚೇರಿಯಲ್ಲೇ ಸಾಮಾನ್ಯವಾಗಿದೆ. ರೈತರಿಗೆ ದಾಖಲೆ ಪ್ರತಿಯನ್ನು ನೀಡಲು ಅಥವಾ ಅಂತಿಮ ಆದೇಶ ನೀಡಲು ₹50,000ರಿಂದ ₹1 ಲಕ್ಷದವರೆಗೆ ಲಂಚ ಬೇಡಿಕೆ ಇಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಇನ್ನಷ್ಟು ಅಘಾತಕಾರಿ ಸಂಗತಿ ಏನೆಂದರೆ — ಫೋನ್ ಪೇ,…

ಮುಂದೆ ಓದಿ..
ಸುದ್ದಿ 

ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….

ಕಣಿ……. ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….. ಖರೇನೇ ಹೇಳ್ತೀನಿ,ಸುಳ್ಳಾಡಂಗಿಲ್ಲ ನಾ, ನೋಟಿನ ಬಣ್ಣ ಬದಲಾಗೈತಿಮನ್ಸರ ಬದುಕೂ ಬದಲಾಗ್ತೈತಿ,ರಾಜನ ಪ್ರಭುತ್ವ ಕುಣಿತೈತಿ,ಭ್ರಷ್ಟರ ಮನಸ್ಸು ಕುದಿತೈತಿ,ಬಡವನ ಪ್ರಾಣ ಕುಸಿತೈತಿ. ಕಣಿ ಹೇಳ್ತೀನಿ ಅಕ್ಕ ಕಣಿ,…. ತರಕಾರಿ ಮಾರೌರ್ರು –ಹಣ್ಣು ಮಾರೌರ್ರು,ಮೀನು ಕೋಳಿ ಮಾರೌರ್ರು –ಪಾತ್ರೆ ಪಗಡೆ ಮಾರೌರ್ರು,ಕೂಲಿ ಮಾಡೌರ್ರು –ಮಂತ್ರ ತಂತ್ರ ಮಾಡೌರ್ರು,ಕಟಿಂಗ್ ಮಾಡೌರ್ರು –ಇಸ್ತ್ರೀ ಮಾಡೌರ್ರು,ಬದುಕು ಕುಸಿತೈತಿ…. ಕಂಪ್ಯೂಟರ್ ಮಾರೌರ್ರು –ಆನ್ ಲೈನ್ ವ್ಯಾಪಾರ ಮಾಡೌರ್ರು,ಈಗಾಗ್ಲೇ ಕಲಿತೌರ್ರು –ಒಂದಕ್ಕೆರಡು ಲಾಭ ಮಾಡೌರ್ರು,ದಲ್ಲಾಳಿ ಮಾಡೌರ್ರುಬದುಕು ಕುಣಿತೈತಿ. ಕಣಿ ಹೇಳ್ತೀನಿ ತಾಯಿ ಕಣಿ,…… ಕಾಂಚಾನ ಕುಣಿತೈತಿ –ಮನ್ಸತ್ವ ನೆಗಿತೈತಿ,ರಾಜಾನ ಕನಸು ದೊಡ್ಡದೈತಿ,ಬಡವನ ಆಯಸ್ಸು ಸಣ್ಣದೈತಿ,…. ನೂರ್ಕಳ್ರು ತಪ್ಪಿಸ್ಕಂಡ್ರು ಅಮಾಯಕನಿಗೆ ಹೊಡಿಬ್ಯಾಡ್ರಿ ಅಂತೈತಿ,ಕಾಲ ಬದಲಾಗೈತಿ,ಒಬ್ ಕಳ್ಳನ್ ಹಿಡಿಯಾಕ ಸಾವ್ರ ಅಮಾಯಕ್ರಿಗೆ ಹೊಡ್ದೈತಿ. ಕಣಿ ಹೇಳ್ತೀನಿ ಯಪ್ಪಾ ಕಣಿ,…. ಬಡವಾನ ಮನ್ಸಾಗ ಗೊಂದಲೈತಿ,ವ್ಯಾಪಾರಿ ಮುಖದಾಗ ನಗುವೈತಿ,ಹಾಲು ವಿಷವಾಗ್ತೈತಿ –ಕಾಲ ಉರುಳಾಗ್ತೈತಿ,ಕಳ್ರು…

ಮುಂದೆ ಓದಿ..
ಅಂಕಣ 

ತಾಯಿ ಭಾಷೆ…..ಕನ್ನಡ ರಾಜ್ಯೋತ್ಸವ……..

ತಾಯಿ ಭಾಷೆ….. ಕನ್ನಡ ರಾಜ್ಯೋತ್ಸವ…….. ಕರ್ನಾಟಕ ಎಂಬುದೇನುಹೆಸರೇ ಬರಿಯ ಮಣ್ಣಿಗೆ,ಮಂತ್ರ ಕಣಾ ಶಕ್ತಿ ಕಣಾತಾಯಿ ಕಣಾ ದೇವಿ‌ ಕಣಾಬೆಂಕಿ ಕಣಾ ಸಿಡಿಲು ಕಣಾಕಾವ ಕೊಲುವ ಒಲವ ಬಲವಾಪಡೆದ ಚೆಲುವ ಚೆಂಡಿ ಕಣಾಋಷಿಯ ಕಾಣ್ಬ ಕಣ್ಣಿಗೆ,ರಾಷ್ಟ್ರ ಕವಿ ಕುವೆಂಪು…. ತಾಯಿ ಭಾಷೆ ಉಳಿಯದಿದ್ದರೆ ನಮ್ಮ ಬದುಕು ಸಹಜವಾಗಿ ಉಳಿಯುವುದು ಕಷ್ಟ. ಅದು ಅಸಹಜವಾಗಿ ಬೆಳೆಯುತ್ತದೆ. ಭಾಷೆ ಎಂಬುದು ಭಾವ ಕಡಲು,ಭಾಷೆ ಎಂಬುದು ಒಡಲಾಳದ ಉಸಿರು,ಭಾಷೆ ಎಂಬುದು ಸಂಸ್ಕೃತಿಯ ಬೇರು, ಭಾಷೆ ಎಂಬುದು ಸಂಪರ್ಕ ಮಾಧ್ಯಮ,ಭಾಷೆ ಎಂಬುದು ಸಾಂಸ್ಕೃತಿಕ ವಾಹಕ, ಭಾಷೆ ಎಂಬುದು ಜ್ಞಾನದ ಹೆಬ್ಬಾಗಿಲು, ಭಾಷೆ ಎಂಬುದು ಬದುಕು ರೂಪಿಸುವ ಸಾಧನ,ಒಟ್ಟಾರೆ ಭಾಷೆ ಎಂಬುದು ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನ ಜೀವದ್ರವ್ಯ……….. ನವಂಬರ್ ೧ ಕನ್ನಡ ರಾಜ್ಯೋತ್ಸವ…. ಭಾರತದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆ ಸ್ಥಾಪಿತವಾಗಿರುವುದೇ ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ. ಭಾಷೆಯೇ ಇಲ್ಲಿನ ಬಹುತ್ವ ಸಂಸ್ಕೃತಿಯ ಪ್ರತಿಬಿಂಬ. ಕನ್ನಡ ನಮ್ಮ…

ಮುಂದೆ ಓದಿ..
ಸುದ್ದಿ 

ಚಿನ್ನ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಸ್ನೇಹಿತನ ಹತ್ಯೆ!

ಚಿನ್ನ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಸ್ನೇಹಿತನ ಹತ್ಯೆ! ಬೆಂಗಳೂರು ನಗರದ ಕೋಣನಕುಂಟೆ ಪ್ರದೇಶದ ಕೃಷ್ಣಪ್ಪ ಲೇಔಟಿನಲ್ಲಿ ದುರ್ಘಟನೆ ಸಂಭವಿಸಿದೆ. ತಾಯಿಯ ಚಿನ್ನ ಕಳುವಾದ ಪ್ರಕರಣದ ಬಗ್ಗೆ ನಡೆದ ವಾಗ್ವಾದದಲ್ಲಿ ಪ್ರೀತಂ ಎನ್ನುವ ಯುವಕ ತನ್ನ ಆಪ್ತ ಸ್ನೇಹಿತ ರಾಹುಲ್‌ ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಮಾಹಿತಿಯ ಪ್ರಕಾರ, ಪ್ರೀತಂ ಮತ್ತು ರಾಹುಲ್ ಇಬ್ಬರೂ ಹತ್ತಿರದ ಸ್ನೇಹಿತರು. ಸುಮಾರು 10 ದಿನಗಳ ಹಿಂದೆ ಪ್ರೀತಂನ ತಾಯಿಯ 3 ಗ್ರಾಂ ಚಿನ್ನ ಕಾಣೆಯಾಗಿತ್ತು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದವು. ಪ್ರೀತಂ ರಾಹುಲ್‌ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೆ, ರಾಹುಲ್ ಕೂಡ ಚಿನ್ನ ಕದ್ದಿದ್ದು ಪ್ರೀತಂ ಎಂದೇ ಹೇಳಿದ್ದ. ಘಟನೆಯ ದಿನ ರಾಹುಲ್ ಪ್ರೀತಂನ ಬ್ಯಾಗಿನಲ್ಲಿ ಚಿನ್ನ ಕಂಡು, “ನಿನ್ನ ಮಗನೇ ಕಳ್ಳ” ಎಂದು ಪ್ರೀತಂನ ತಾಯಿಗೆ ಹೇಳಿದ್ದಾನೆ ಎನ್ನಲಾಗಿದೆ. ಈ ಮಾತಿನಿಂದ ಆಕ್ರೋಶಗೊಂಡ ಪ್ರೀತಂ ರೋಷದ ಅಲೆಯಲ್ಲಿ…

ಮುಂದೆ ಓದಿ..
ಸುದ್ದಿ 

ಮಂಡ್ಯ: ಶಾಲಾ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದ ಮಹಿಳಾ ಪೊಲೀಸ್ ಅಧಿಕಾರಿ

ಮಂಡ್ಯ: ಶಾಲಾ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದ ಮಹಿಳಾ ಪೊಲೀಸ್ ಅಧಿಕಾರಿ ಮಂಡ್ಯ — ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಮಂಡ್ಯ ಮಹಿಳಾ ಪೊಲೀಸ್ ಠಾಣಾಧಿಕಾರಿಗಳು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಸೈಬರ್ ಅಪರಾಧಗಳ ಅಪಾಯಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ಅವರು ಮಾತನಾಡಿ, “ಮಕ್ಕಳ ಭವಿಷ್ಯವನ್ನು ಕಾನೂನು ರಕ್ಷಿಸುತ್ತದೆ, ಆದರೆ ನಾವು ಕಾನೂನಿನ ಅರಿವು ಹೊಂದಿದಾಗ ಮಾತ್ರ ಅದರ ಫಲ ಸಿಗುತ್ತದೆ,” ಎಂದು ಹೇಳಿದರು. ಅವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮದ ಸರಿಯಾದ ಬಳಕೆ, ಅಜಾಗರೂಕತೆಯಿಂದಾಗುವ ಅಪಾಯಗಳು ಮತ್ತು ಆನ್‌ಲೈನ್ ಮೋಸಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆ: ರಜೆಗೆ ಬಂದಿದ್ದ ಯೋಧನ ದುರ್ಘಟನೆ ಸಾವು

ಬಾಗಲಕೋಟೆ: ರಜೆಗೆ ಬಂದಿದ್ದ ಯೋಧನ ದುರ್ಘಟನೆ ಸಾವು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನನ್ನು ಹನುಮಂತ ಹಟ್ಟಿ (26) ಎಂದು ಗುರುತಿಸಲಾಗಿದೆ. ಅವರು ಬಾದಾಮಿ ತಾಲೂಕಿನ ಸೋಮನಕೊಪ್ಪ ಗ್ರಾಮದ ನಿವಾಸಿ. ಮಾಹಿತಿಯ ಪ್ರಕಾರ, ಹನುಮಂತ ಹಟ್ಟಿ ಭಾರತೀಯ ಸೇನೆಯ RRMEG ರೆಜಿಮೆಂಟ್‌ನಲ್ಲಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ರಜೆಗಾಗಿ ಸ್ವಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಕೆರೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಹಾಗೂ ಯೋಧನ ಕುಟುಂಬದಲ್ಲಿ ಆಘಾತ ಮೂಡಿಸಿದೆ.

ಮುಂದೆ ಓದಿ..
ಸುದ್ದಿ 

ಶ್ರೀರಂಗಪಟ್ಟಣ: ಪಿ.ಹೊಸಹಳ್ಳಿ ಬಳಿ ಭೀಕರ ರಸ್ತೆ ದುರಂತ — ಕಾರಿಗೆ ಬೆಂಕಿ, ವ್ಯಕ್ತಿ ಸಜೀವ ದಹನ!

ಶ್ರೀರಂಗಪಟ್ಟಣ: ಪಿ.ಹೊಸಹಳ್ಳಿ ಬಳಿ ಭೀಕರ ರಸ್ತೆ ದುರಂತ — ಕಾರಿಗೆ ಬೆಂಕಿ, ವ್ಯಕ್ತಿ ಸಜೀವ ದಹನ! ಶ್ರೀರಂಗಪಟ್ಟಣ ತಾಲೂಕಿನ ಪಿ.ಹೊಸಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಯುವಕ ಸಜೀವವಾಗಿ ದಹನವಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಶ್ರೀರಂಗಪಟ್ಟಣದಿಂದ ಹುಣಸೂರು ದಿಕ್ಕಿಗೆ ತೆರಳುತ್ತಿದ್ದ ಇನೋವಾ ಕಾರಿಗೆ, ಎದುರು ದಿಕ್ಕಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಈ ದುರಂತದಲ್ಲಿ ಹುಣಸೂರು ಮೂಲದ ಚಂದ್ರಶೇಖರ್ (30) ಎಂಬವರು ಕಾರಿನೊಳಗೇ ಸಜೀವವಾಗಿ ಸುಟ್ಟು ಭಯಾನಕ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಸ್ಥಳೀಯರು ಘಟನೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.…

ಮುಂದೆ ಓದಿ..
ಸುದ್ದಿ 

ನೆಲಮಂಗಲ: ರಸ್ತೆ ದುರಸ್ತಿ ವಿಚಾರದಲ್ಲಿ ಘರ್ಷಣೆ – ಮೂವರ ಮೇಲೆ ದಾಳಿ ಆರೋಪ

ನೆಲಮಂಗಲ: ರಸ್ತೆ ದುರಸ್ತಿ ವಿಚಾರದಲ್ಲಿ ಘರ್ಷಣೆ – ಮೂವರ ಮೇಲೆ ದಾಳಿ ಆರೋಪ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ರಸ್ತೆ ದುರಸ್ತಿ ಕಾರ್ಯದ ವೇಳೆ ವಾಗ್ವಾದ ಉಂಟಾಗಿ, ಅದು ನಂತರ ಹಲ್ಲೆಗೆ ತಿರುಗಿದ ಘಟನೆ ನಡೆದಿದೆ. ಮಳೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹಳ್ಳಗಳು ಹಾಗೂ ಗುಂಡಿಗಳು ಉಂಟಾಗಿದ್ದರಿಂದ, ಸ್ಥಳೀಯರು ಸ್ವಯಂ ಪ್ರೇರಿತರಾಗಿ ಮಣ್ಣು ಹಾಕಿ ರಸ್ತೆ ಸರಿಪಡಿಸಲು ಮುಂದಾಗಿದ್ದರು. ಆದರೆ ಇದೇ ವಿಚಾರದಲ್ಲಿ ಅನುಮತಿ ರಸ್ತೆ ಸಂಬಂಧ ಘರ್ಷಣೆ ಉಂಟಾಗಿ, ನಾಗರತ್ನಮ್ಮ ಎಂಬುವವರ ಮೇಲೆ ಪ್ರೇಮ್ ಕುಮಾರ್, ಜಯಮ್ಮ ಹಾಗೂ ಮಹಿಮೆಗೌಡ ಎಂಬ ಮೂವರು ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಸ್ಥಳದಲ್ಲಿ ಇದ್ದ ಮತ್ತೊಬ್ಬ ಮಹಿಳೆ ಘಟನೆಗೆ ಸಂಬಂಧಿಸಿದ ವಿಡಿಯೋ ಚಿತ್ರೀಕರಿಸುತ್ತಿದ್ದಾಗ, ಆರೋಪಿಗಳು ಆಕೆಯ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಗ್ರಾಮಸ್ಥರ ಪ್ರಕಾರ, ಈ ರಸ್ತೆ ಊರಿನ ಎಲ್ಲರೂ ಬಳಸುವ…

ಮುಂದೆ ಓದಿ..