ಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್ಐಟಿ ಬಳ್ಳಾರಿಯಲ್ಲಿ ತನಿಖೆ
ಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್ಐಟಿ ಬಳ್ಳಾರಿಯಲ್ಲಿ ತನಿಖೆ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ನಾಪತ್ತೆ ಪ್ರಕರಣ ಇದೀಗ ಬಳ್ಳಾರಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ಬಳ್ಳಾರಿಯಲ್ಲಿ ಸಕ್ರಿಯ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯ ರೊದ್ದಂ ಜುವೆಲರಿ ಮಾಲೀಕ ಗೋವರ್ಧನ ಅವರನ್ನು ಎಸ್ಐಟಿ ತಂಡ ವಿಚಾರಣೆಗೊಳಪಡಿಸಿದ್ದು, ಅವರ ಅಂಗಡಿ ಹಾಗೂ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಮೂಲತಃ 2019ರಲ್ಲಿ ಶಬರಿಮಲೆ ದೇವಾಲಯದ ದ್ವಾರಪಾಲಕರ ವಿಗ್ರಹಗಳ ಚಿನ್ನದ ಕವಚವನ್ನು ಮರುಲೇಪನ ಮಾಡಲು ತೆಗೆದುಕೊಂಡ ವೇಳೆ ಸುಮಾರು ನಾಲ್ಕೂವರೆ ಕೆಜಿ ಚಿನ್ನ ಕಾಣೆಯಾಗಿರುವುದಾಗಿ ಆ ಸಮಯದಲ್ಲಿ ವರದಿಯಾಗಿತ್ತು. ಬಳ್ಳಾರಿ ಮೂಲದ ಗೋವರ್ಧನ ಅವರು ಅಯ್ಯಪ್ಪ ದೇವಾಲಯಕ್ಕೆ ಹೊಸ ಚಿನ್ನದ ಲೇಪಿತ ದ್ವಾರ ತಯಾರಿಸಿದ್ದರು. ಈ ಕೆಲಸವನ್ನು ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಅವರ…
ಮುಂದೆ ಓದಿ..
