ಸುದ್ದಿ 

ಕೊಡಿಗೆಹಳ್ಳಿ ವೇಶ್ಯಾವಾಟಿಕೆ ದಂಧೆ – ಮಹಿಳಾ ಸಂರಕ್ಷಣಾ ದಳದ ದಾಳಿ

ಬೆಂಗಳೂರು:23 ಆಗಸ್ಟ್ 2025ಬೆಂಗಳೂರು ನಗರದ ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚುವಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿಯಾಗಿದೆ. 2025ರ ಆಗಸ್ಟ್ 22ರಂದು ಸಂಜೆ 5.15ರ ಸುಮಾರಿಗೆ, ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಕೊಡುಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಪ್ರೈ ಅವರು ನೀಡಿದ ಮಾಹಿತಿಯ ಮೇರೆಗೆ, ಕೊಡಿಗೆಹಳ್ಳಿಯ ವಿದ್ಯಾರಣ್ಯಪುರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಯಿತು. ಪದ್ಮಾ (ಲೇಟ್ ಹೇಮಂತ್ ಕುಮಾರ್), ನಿವಾಸಿ – ನಂ.118, ವಿದ್ಯಾರಣ್ಯಪುರ, ಬೆಂಗಳೂರು, ಅವರು ತಮ್ಮ ಮನೆಯನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ಪತ್ತೆಯಾಗಿದೆ. ತನಿಖೆಯ ಪ್ರಕಾರ, ಅವರು ತಮ್ಮ ಮೊಬೈಲ್ ನಂಬರ್ 87929 79435 ಮುಖಾಂತರ ಗಿರಾಕಿಗಳನ್ನು ಸಂಪರ್ಕಿಸಿ, ಹೆಚ್ಚಿನ ಹಣ ಪಡೆದು ಸ್ಥಳೀಯ ಹಾಗೂ ಹೊರರಾಜ್ಯದ ಮಹಿಳೆಯರನ್ನು ಪುಸಲಾಯಿಸಿ, ಅಕ್ರಮ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದರು. ಅವರ ವಿರುದ್ಧ ಐಟಿಪಿ ಕಾಯ್ದೆ ಕಲಂ 3, 4, 5 ಹಾಗೂ ಬಿ.ಎನ್.ಎಸ್…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನ ಸಹಕಾರನಗರದಲ್ಲಿ 34 ವರ್ಷದ ವ್ಯಕ್ತಿ ಕಾಣೆ

ಬೆಂಗಳೂರು 23 ಆಗಸ್ಟ್ 2025ಸಹಕಾರನಗರದಲ್ಲಿ 34 ವರ್ಷದ ಕೃಪ ಎಂಬ ವ್ಯಕ್ತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕುಟುಂಬದವರ ಮಾಹಿತಿಯಂತೆ, ಆಗಸ್ಟ್ 19, 2025 ರಂದು ಮಧ್ಯಾಹ್ನ 12 ಗಂಟೆಗೆ ಗಾರೆ ಕೆಲಸಕ್ಕಾಗಿ ಸಹಕಾರನಗರಕ್ಕೆ ತೆರಳಿದ ಕೃಪ ಅವರು ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಕೈ ತಾಗಿದ್ದು, ಆಕೆ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಿದರು. ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಂದು ವಿಚಾರಣೆ ನಡೆಸುತ್ತಿದ್ದಾಗ ಭಯಗೊಂಡ ಕೃಪ ಓಡಿ ಹೋಗಿದ್ದು, ನಂತರ ಮನೆಗೆ ಮರಳಲಿಲ್ಲ. ಹಲವೆಡೆ ಹುಡುಕಿದರೂ ಅವರ ಪತ್ತೆಯಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಕೃಪ ಅವರ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, 5 ಅಡಿ ಎತ್ತರ. ಅವರು ಕನ್ನಡ, ತೆಲುಗು ಹಾಗೂ ತಮಿಳು ಮಾತನಾಡಲು ಬಲ್ಲವರು. ಕಾಣೆಯಾಗುವ ವೇಳೆ ಪರ್ಪಲ್ ಬಣ್ಣದ ಶರ್ಟ್ ಮತ್ತು ಗ್ರೇ ಬಣ್ಣದ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹೂಡಿಕೆ ಮೋಸ – ಯುವಕನಿಗೆ ರೂ.2.53 ಲಕ್ಷ ನಷ್ಟ

ಬೆಂಗಳೂರು:23 ಆಗಸ್ಟ್ 2025ಆನ್‌ಲೈನ್‌ನಲ್ಲಿ ಸುಲಭ ಲಾಭದಾಸೆ ಜಾಹೀರಾತಿಗೆ ಮರುಳಾದ ಯುವಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ವರದಿಯಾಗಿದೆ. ಶಶಿಕುಮಾರ್ ಅವರ ಹೇಳಿಕೆಯ ಪ್ರಕಾರ, 21-08-2025 ರಂದು http://hot.mkprosty/epromotions ಎಂಬ ಲಿಂಕ್ ಮೂಲಕ “ಹೂಡಿಕೆ ಮಾಡಿದರೆ 30% ಲಾಭ ದೊರೆಯುತ್ತದೆ” ಎಂಬ ಜಾಹೀರಾತನ್ನು ನೋಡಿ ನಂಬಿ, ತನ್ನ ICICI ಬ್ಯಾಂಕ್, SBI ಬ್ಯಾಂಕ್ ಮತ್ತು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗಳಿಂದ ಒಟ್ಟು ರೂ.2,53,000/- ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ನಂತರ ಯಾವುದೇ ಲಾಭ ನೀಡದೆ ಹಣ ವಾಪಸು ಕೊಡದೇ ತಲೆಮರೆಸಿಕೊಂಡ ಆರೋಪಿಗಳ ವಿರುದ್ಧ ಶಶಿಕುಮಾರ್ ಅವರು ಕೊಡುಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆನ್‌ಲೈನ್ ಹೂಡಿಕೆ ಮೋಸದ ಕುರಿತು ತನಿಖೆ ಕೈಗೊಂಡಿದ್ದಾರೆ

ಮುಂದೆ ಓದಿ..
ಸುದ್ದಿ 

ಶಾಂತಿನಿಕೇತನ ಶಾಲಾ ವಿದ್ಯಾರ್ಥಿ ಕಾಣೆ –ಕೊಡುಗೆಹಳ್ಳಿ ಪೊಲೀಸರಲ್ಲಿ ದೂರು

ಬೆಂಗಳೂರು 23 ಆಗಸ್ಟ್ 2025ಕಾಳೀಗ ಜಾಜರಾಗಿ ನಿವಾಸಿ ಮಲ್ಲಯ್ಯ ಅವರ 13 ವರ್ಷದ ಮಗ ಯುವರಾಜ ಕಾಣೆಯಾಗಿರುವ ಘಟನೆ ನಡೆದಿದೆ. ಯುವರಾಜನು ಭದ್ರಪ್ಪ ಲೇಔಟ್‌ನ ಶಾಂತಿನಿಕೇತನ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದು, 21-08-2025 ರಂದು ಬೆಳಿಗ್ಗೆ 7.45ಕ್ಕೆ ಸೈಕಲ್‌ನಲ್ಲಿ ಶಾಲೆಗೆ ತೆರಳಿದ್ದ. ಆದರೆ ಸಂಜೆ ಮನೆಗೆ ಮರಳದೆ, ಪೋಷಕರು ಹುಡುಕಾಟ ನಡೆಸಿದಾಗ ಮನೆಯ ಪಕ್ಕದ ರಸ್ತೆಯಲ್ಲಿ ಅವನ ಸೈಕಲ್ ಮತ್ತು ಶಾಲಾ ಬ್ಯಾಗ್ ಸಿಕ್ಕಿವೆ. ಸ್ನೇಹಿತರು, ಆಟದ ಮೈದಾನ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದರೂ ಬಾಲಕನ ಪತ್ತೆಯಾಗಿಲ್ಲ. ಕಾಣೆಯಾಗುವ ಸಮಯದಲ್ಲಿ ಅವನು ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ-ನೀಲಿ ಮಿಶ್ರಿತ ಶಾಲಾ ಸಮವಸ್ತ್ರ ಧರಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕೊಡುಗೆಹಳ್ಳಿ ಪೊಲೀಸರು ಯುವರಾಜನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ

ಮುಂದೆ ಓದಿ..
ಸುದ್ದಿ 

ಶಿಗ್ಗಾವಿಯಲ್ಲಿ ಮಟಕಾ ಜೂಜಾಟ ಪ್ರಕರಣ

ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಸವಣ್ಯನ ಸರ್ಕಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 22, 2025ರಂದು ಮುಂಜಾನೆ ಸುಮಾರು 10.30 ಗಂಟೆಯ ಸುಮಾರಿಗೆ ಪ್ರಕಾಶ್ ಪೀರಪ್ಪಾ ಪಡುವಳ್ಳಿ ಎಂಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಜನರಿಂದ ಹಣ ಪಡೆದು “₹1ಕ್ಕೆ ₹80 ಕೊಡುವುದಾಗಿ” ಹೇಳುತ್ತಾ ಒ.ಸಿ. ಚೀಟಿಗಳನ್ನು ಬರೆದು ಕೊಡುವ ಮೂಲಕ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದನೆಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಪೊಲೀಸ್ ಠಾಣೆಯ ಪಿಎಸ್ಐ–2 ಅವರು ಸರ್ಕಾರಿ ಪರವಾಗಿ ಸ್ವತಃ ತಾವೇ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಪ್ರಕರಣವು ಸಾರ್ವಜನಿಕ ವಿರೋಧಿ ಸ್ವರೂಪದ್ದಾಗಿದ್ದರಿಂದ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. : ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691

ಮುಂದೆ ಓದಿ..
ಅಂಕಣ 

ಸಮಾಜ ಸೇವೆ ಎಂದರೇನು ?

ಸಮಾಜ ಸೇವೆ ಎಂದರೇನು ? ನಿಸ್ವಾರ್ಥವೇ ?ತ್ಯಾಗವೇ ?ಸ್ವಾರ್ಥದ ಮುಖವಾಡವೇ ?ವೃತ್ತಿಯೇ ?ಹವ್ಯಾಸವೇ ?ಕರ್ತವ್ಯವೇ ?ವ್ಯಾಪಾರ ವ್ಯವಹಾರವೇ ?ಅಧಿಕಾರ ಹಣ ಪ್ರಚಾರದ ಮೋಹವೇ ?ಪಲಾಯನ ಮಾರ್ಗವೇ ?ನಾಯಕತ್ವದ ಪ್ರದರ್ಶನವೇ ?ಕೆಲಸವಿಲ್ಲದವರ ಅನಾವಶ್ಯಕ ಓಡಾಟವೇ ?ಹೊಟ್ಟೆ ಪಾಡಿನ ದಾರಿಯೇ ?ಬುದ್ದಿಯ ತೋರ್ಪಡಿಕೆಯೇ ?ಮನಸ್ಸಿನ ಅಹಂನ ತಣಿಸುವಿಕೆಯೇ ?ಜೀವನದ ಸಾಧನೆಯೇ ?ಅನುಭವದ ವಿಸ್ತರಣೆಯೇ ?ಜ್ಞಾನದ ಹಂಚಿಕೆಯೇ ?ಅಧ್ಯಾತ್ಮಿಕ ಧಾರ್ಮಿಕ ಉದ್ದೇಶವೇ ?ಬದುಕಿನ ಸಾರ್ಥಕತೆಯೇ ?ನಿರ್ಭಾವುಕ ಮನಸ್ಥಿತಿಯೇ ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಸಮಾಜ ಸಂಕೀರ್ಣವಾದಷ್ಟು ಸಮಾಜ ಸೇವೆ ವಿವಿಧ ಅರ್ಥಗಳನ್ನು ಪಡೆಯುತ್ತಿದೆ. ಮದರ್ ತೆರೇಸಾ ಅವರನ್ನು ಸಮಾಜ ಸೇವೆಯ ಬಹುದೊಡ್ಡ ಆದರ್ಶ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ಕೆಲವು ಧರ್ಮಾಧಾರಿತ ವ್ಯಕ್ತಿಗಳ ಮತಾಂತರ ಆರೋಪಗಳ ನಡುವೆಯೂ ಸಮಾಜ ಸೇವೆಗೆ ಇವರು ಒಂದು ಮಾದರಿ. ಕೊಲ್ಕತ್ತಾದ ಬೀದಿಗಳಲ್ಲಿ ಮಲಗಿದ್ದ ಅನಾಥ ಕುಷ್ಠರೋಗಿಗಳ ಸೇವೆಗೆ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಸೇವೆ ಸಲ್ಲಿಸುತ್ತಾ…

ಮುಂದೆ ಓದಿ..
ಸುದ್ದಿ 

ಹಾನಗಲ್ ಹತ್ತಿರದ ಡೊಳ್ಳೇಶ್ವರ ವ್ಯಕ್ತಿ ಕಾಣೆ

ಆಗಸ್ಟ್ 18 ನೇ ತಾರೀಕು ಹಾನಗಲ್ ಸಮೀಪದ ಡೊಳ್ಳೇಶ್ವರ ಗ್ರಾಮದ 60 ವರ್ಷದ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ಎನ್ನುವ ವ್ಯಕ್ತಿ ಕಾಣೆಯಾದ ಪ್ರಕರಣಕಾಣೆಯಾದ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ಅವರು ಗುತ್ತೆವ್ವಾ ನಿಂಗಪ್ಪ ಕಚಾವೇರ ಎನ್ನುವ ವರದಿಗಾರರ ಅಣ್ಣ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ವಯಾ: 60 ವರ್ಷ. ಜಾತಿ: ಹಿಂದೂ ಗಂಗಾಮತ, ಉದ್ಯೋಗ: ಬಿಕ್ಷೆ ಬೇಡುವುದು, ಸಾ: ಗೊಂದಿ. ತಾ: ಹಾನಗಲ್ಲ ಇವನು ದಿನಾಂಕ: 18-07-2025 ರಂದು ಮುಂಜಾನೆ 10-00 ಘಂಟೆಯ ಸುಮಾರಿಗೆ ತನ್ನ ವಾಸದ ಮನೆಯಿಂದ ಹಾನಗಲ್ ಗೆ ಬಿಕ್ಷೆ ಮಾಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇವನು ಈವರೆಗೂ ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಕಾರಣ ತನ್ನ ಅಣ್ಣ ಹುಲ್ಲಪ್ಪ ಈತನನ್ನು ಹುಡುಕಿ ಕೊಡುವಂತೆ ವರದಿಗಾರರು ಆಡುರು ಪೊಲೀಸ ಠಾಣೆಗೆ ದೂರನ್ನು ನೀಡಿದ್ದು ಪೊಲೀಸರು ವ್ಯಕ್ತಿಯನ್ನು ಹುಡುಕಲು ಕಾರ್ಯನಿರತರಾಗಿದ್ದಾರೆ. : ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್…

ಮುಂದೆ ಓದಿ..
ಸುದ್ದಿ 

ಸವಣೂರಿನ ಬಳಿ ಬೈಕ್ ವ್ಯಕ್ತಿಗೆ ಡಿಕ್ಕಿ ಆಕ್ಸಿಡೆಂಟ್ :

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೆವರಮೆಳಹಳ್ಳಿ ಕ್ರಾಸ್ ನ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ. ದಿನಾಂಕ: 16-08-2025 ರಂದು ಸಂಜೆ 6-30 ಗಂಟೆ ಸುಮಾರಿಗೆ ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ಹೋಗಿರುವ ರಸ್ತೆಯಲ್ಲಿ ಮೋಟರ್ ಸೈಕಲ್ ನಂಬರ ಕೆ.ಎ. 27 ಇಎಸ್ 3282 ನೇದ್ದರ ಸವಾರ ಪ್ರಶಾಂತ ಶೇಖಪ್ಪ ದೇಸಾಯಿ ಸಾ|| ತೆವರಮೆಳಹಳ್ಳಿ ಈತನು ತನ್ನ ಮೋಟಾ‌ರ್ ಸೈಕಲ್ ನ್ನು ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಿರೀಶ ಕಿತ್ತೂರಮಠ ಎನ್ನುವ ವ್ಯಕ್ತಿಗೆ ಹಿಂದಿನಿಂದ ಡಿಕ್ಕಿ ಮಾಡಿದ್ದು ಡಿಕ್ಕಿ ಮಾಡಿದ ಪರಿಣಾಮ ಗಿರೀಶನಿಗೆ ತಲೆಗೆ, ಮುಖಕ್ಕೆ, ಹಣೆಗೆ ಗಾಯಗಳು ಆಗಿದ್ದು ಜೊತೆಗೆ ಬೈಕ್ ಸವಾರನಾದ ಪ್ರಶಾಂತ ದೇಸಾಯಿ ಈತನಿಗೂ…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಅಮಾಯಕ ವ್ಯಕ್ತಿ ಮೇಲೆ ಚಾಕು ಇರಿತ ಹಲ್ಲೆ ಯತ್ನ

ಸವಣೂರು ನಗರದಲ್ಲಿ ಇತ್ತೀಚಿಗೆ ಮತ್ತೆ ರೌಡಿಸಂ ನ್ ಸದ್ದು ಹೆಚ್ಚಾಗುತ್ತಿದೆ ಆಗಸ್ಟ್ 17 ನೆ ತಾರೀಕು ಸವಣೂರಿನ ಪ್ರಮುಖ ನಗರದಲ್ಲಿ ಅಮಾಯಕ ಕಾರ್ಮಿಕ ವ್ಯಕ್ತಿಯ ಮೇಲೆ ಇಬ್ಬರು ಗ್ಯಾಂಗ್ ಗೆಳೆಯರ ಅಟ್ಟ್ಯಾಕ್ ಈ ಪ್ರಕರಣದಲ್ಲಿ ಆಸ್ಲಾಮ ನಜೀರ್ಅಹ್ಮದ್ ರಾಯಚೂರು ಎಂಬಾತ ವ್ಯಕ್ತಿ ಕೆಲವು ದಿನಗಳ ಹಿಂದೆ ಸವಣೂರ ಶಹರದಲಿ.. ನೂರಹ್ಮದ ಅಕ್ಕಿ ಇವರ ಮನೆಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದಾಗ ನೂರಅಹ್ಮದ ಅಕ್ಕಿ ಮತ್ತು ಅವರ ತಮ್ಮ ಜಗಳ ಮಾಡುವ ಸಮಯದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಆಸ್ಲಾಮ್ ಅವರ ಜಗಳವನ್ನು ಬಿಡಿಸಿದ್ದನು. ಈ ಸಂಬಂದ ಇದರಲ್ಲಿ 1 ನೇ ಆರೋಪಿಯಾದ ನೂರಅಹ್ಮದ್ ಅಕ್ಕಿ ಈ ಜಗಳವನ್ನು ಮಾಡಲು ನಿನೇ ಕಾರಣ ಅಂತಾ ಗೌಂಡಿ ಆಸ್ಲಾಮ್ ಮೇಲೆ ಸಂಶಯ ಪಡುತ್ತಾ ಬಂದಿದ್ದನು. ಹೀಗಿರುವಾಗ ದಿನಾಂಕ: 17-08-2025 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ನೂರಅಹ್ಮದ್ಅಕ್ಕಿ ಅವನ ಗೌಂಡಿ ಆದ ಆಸ್ಲಾಮ್…

ಮುಂದೆ ಓದಿ..
ಸುದ್ದಿ 

ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ..

ಮುಳಬಾಗಿಲು: ಮನುಷ್ಯ ಆರೋಗ್ಯದ ಕೊರತೆ ಉಂಟಾದಾಗ ಮಾತ್ರ ಅದು ಎಷ್ಟು ಮುಖ್ಯ ಎಂಬುದು ಅರಿವಾಗುತ್ತದೆ ಎಂದು ಮುಳಬಾಗಿಲು ಫುಡ್ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ ಹೇಳಿದರು ನಗರದ ಎಸ್ ಬಿ ಐ ಬ್ಯಾಂಕ್ ಮುಂದೆ ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಆರೋಗ್ಯ ಭದ್ರತೆ ಒದಗಿಸಿದೆ. ಆದರೆ,ಹಿರಿಯ ನಾಗರಿಕರ ತಮ್ಮ ಜೀವನ ಕೊನೆಗಳಿಗೆಗೆ ಬೇಕಾದ ಅವಶ್ಯಕತೆಗಳಿಗೆ ಮಕ್ಕಳು ಭದ್ರತೆಯಾಗಬೇಕು ಎಂದರು.ಅನೇಕ ಪ್ರಕರಣದಲ್ಲಿ ಮಕ್ಕಳು ಪೋಷಕರಿಂದ ಅವರ ಅಸ್ತಿ, ಅಂತಸ್ತನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಂಡು ಕೊನೆಗೆ ಅವರನ್ನು ಬೀದಿಗೆ ತಳ್ಳುವ ನೂರಾರು ಘಟನೆಗಳು ಈಗಾಗಲೇ ನಡೆದಿದೆ. ಈ ಬಗ್ಗೆ ಹಿರಿಯ ನಾಗರೀಕರು ಎಚ್ಚರಿಕೆ…

ಮುಂದೆ ಓದಿ..