ಜಮೀನಿನ ಕಬಳಿಕೆ, ನಕಲಿ ದಾಖಲೆ, ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಆರೋಪ – ಆನೇಕಲ್ ತಾಲ್ಲೂಕಿನಲ್ಲಿ ಗಂಭೀರ ಆರೋಪ
ಆನೇಕಲ್, 5 ಜುಲೈ 2025:ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ಹಾಲೇನಹಳ್ಳಿ ಗ್ರಾಮದ ನಿವಾಸಿ ಟಿ. ಪಿಳ್ಳಪ್ಪ ಅವರು ದಿನಾಂಕ 04-08-2025 ರಂದು ಮಧ್ಯಾಹ್ನ 2 ಗಂಟೆಗೆ ಆನೇಕಲ್ ಪೊಲೀಸ್ ಠಾಣೆಗೆ ಹಾಜರಾಗಿ ಗಂಭೀರ ಆರೋಪಗಳ ನೊಳಗೊಂಡು ದೂರು ಸಲ್ಲಿಸಿದ್ದಾರೆ. ದೂರಿನ ಪ್ರಕಾರ, ಪಿಳ್ಳಪ್ಪ ಅವರು ಹಾಗೂ ಅವರ ಕುಟುಂಬಕ್ಕೆ ಬಗ್ಗನದೊಡ್ಡಿ ಗ್ರಾಮದ ಹಳೇ ಸರ್ವೆ ನಂ. 96 (ಹೊಸ ಸರ್ವೆ ನಂ. 116 ಮತ್ತು 117) ರಲ್ಲಿರುವ 8 ಎಕರೆ ಜಮೀನು ಆದಿಕರ್ಣಾಟಕ ಜನಾಂಗಕ್ಕೆ ಸೇರಿದ PTCL ಕಾಯ್ದೆ ವ್ಯಾಪ್ತಿಗೆ ಒಳಪಟ್ಟ ಜಮೀನಾಗಿದೆ. ಈ ಜಮೀನಿಗೆ ಸಂಬಂಧಿಸಿದಂತೆ ಅವರು ಚಂದ್ರಶೇಖರ್.ಸಿ ಎಂಬುವವರಿಗೆ ದಿನಾಂಕ 17-03-2020-21 ರಂದು GPA ಮೂಲಕ ನಂಬಿಕೆ ಇಟ್ಟು ನಿಯೋಜಿಸಿದರೂ, ಅವರು ದಾಖಲೆಗಳನ್ನು ತಪ್ಪಾಗಿ ಉಪಯೋಗಿಸಿದ ಬಗ್ಗೆ ದೂರುದಲ್ಲಿದೆ. ಮೂರು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ, GPA ರದ್ದತಿ ಮಾಡಿ,…
ಮುಂದೆ ಓದಿ..
