ನಾಗಮಂಗಲದಲ್ಲಿ ಜಮೀನು ವಿವಾದದಿಂದ ಹಲ್ಲೆ – ವ್ಯಕ್ತಿಗೆ ಪ್ರಾಣ ಬೆದರಿಕೆ..
ನಾಗಮಂಗಲದಲ್ಲಿ ಜಮೀನು ವಿವಾದದಿಂದ ಹಲ್ಲೆ – ವ್ಯಕ್ತಿಗೆ ಪ್ರಾಣ ಬೆದರಿಕೆ ಜಮೀನು ಉಳುಮೆ ವಿಷಯದಲ್ಲಿ ಉಂಟಾದ ವಿವಾದದಿಂದ ಮೂವರು ಸೇರಿ ಒಬ್ಬ ವ್ಯಕ್ತಿಗೆ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ ಘಟನೆ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಶಂಕರಪ್ಪ ಅವರು ತಮ್ಮ ಊರಿನಲ್ಲಿ ವಾಸವಾಗಿದ್ದು, ಅಕ್ಟೋಬರ್ 1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೋರಪ್ಪನ ನಿಂಗಪ್ಪಣರವರ ಮನೆಯ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಗ್ರಾಮಸ್ಥರಾದ ಡಿ.ಬಿ. ಕುಮಾರ್ ಬಿನ್ ಬೋರೇಗೌಡ, ಅವರ ಮಗ ದಿನೇಶ್ ಕೆ., ಮತ್ತು ಪತ್ನಿ ಜಯಮ್ಮ ಎಂಬವರು ಶಂಕರಪ್ಪರೊಂದಿಗೆ ಜಮೀನು ಉಳುಮೆ ಕುರಿತಾಗಿ ಜಗಳಕ್ಕೆ ಇಳಿದಿದ್ದಾರೆ. ವಾಗ್ವಾದದ ವೇಳೆ ದಿನೇಶ್ ಶಂಕರಪ್ಪ ಅವರ ಮುಖ ಮತ್ತು ಕತ್ತಿನ ಮೇಲೆ ಕೈಯಿಂದ ಹೊಡೆದರೆ, ಕುಮಾರ್ ದೊಣ್ಣೆಯಿಂದ ಅವರ ಬೆನ್ನಿಗೆ ಹಾಗೂ ಕಾಲಿಗೆ ಹೊಡೆದಿದ್ದಾರೆ.…
ಮುಂದೆ ಓದಿ..
