ಸುದ್ದಿ 

ಗೆದ್ದ ಭಾರತ! ವಿಶ್ವಕಪ್ ಕಿರೀಟ ಮುಟ್ಟಿದ ಮಹಿಳಾ ಶೂರತೆ!

ಗೆದ್ದ ಭಾರತ! ವಿಶ್ವಕಪ್ ಕಿರೀಟ ಮುಟ್ಟಿದ ಮಹಿಳಾ ಶೂರತೆ! ಕ್ರಿಕೆಟ್ ಜಗತ್ತಿನಲ್ಲಿ ಇತಿಹಾಸ ನಿರ್ಮಾಣವಾಗಿದೆ! ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಮಹಿಳಾ ಒಡಿಐ ವರ್ಲ್ಡ್ ಕಪ್ 2025 ನಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ರೋಮಾಂಚಕ ಫೈನಲ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಅಂತರದಿಂದ ಅದ್ಭುತ ಗೆಲುವು ಸಾಧಿಸಿದೆ. ಭಾರತ ಮೊದಲಿಗೆ ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 298/7 ರನ್‌ಗಳನ್ನು ಕಲೆಹಾಕಿತು. ಸ್ಮೃತೀ ಮಂಧನಾ (92 ರನ್), ಹರ್ಮನ್‌ಪ್ರೀತ್ ಕೌರ್ (65 ರನ್), ಹಾಗೂ ದೀಪ್ತಿ ಶರ್ಮಾ (ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ) ಭಾರತ ಜಯದ ನಾಯಕಿಯರಾಗಿ ಮಿಂಚಿದರು. ದಕ್ಷಿಣ ಆಫ್ರಿಕಾ ತಂಡವು ಚೇಸಿಂಗ್ ವೇಳೆ 246 ರನ್‌ಗಳಿಗೆ ಸರ್ವನಾಶಗೊಂಡಿತು. ರೇಣುಕಾ ಸಿಂಗ್ ಠಾಕುರ್ ಅವರ ವೇಗದ ಬೌಲಿಂಗ್ ಎದುರಿಸಲು ಎದುರಾಳಿ ಬ್ಯಾಟರ್‌ಗಳು ಹೋರಾಟ ನಡೆಸಿದರೂ ಯಶಸ್ವಿಯಾಗಲಿಲ್ಲ.…

ಮುಂದೆ ಓದಿ..
ಸುದ್ದಿ 

ಕಲಘಟಗಿ ಪೊಲೀಸ್ರ ಚುರುಕು ಕಾರ್ಯ: ವಾಹನ ಬ್ಯಾಟರಿ ಕಳ್ಳರು ಸಿಕ್ಕು ಬಿದ್ದರು

ಕಲಘಟಗಿ ಪೊಲೀಸ್ರ ಚುರುಕು ಕಾರ್ಯ: ವಾಹನ ಬ್ಯಾಟರಿ ಕಳ್ಳರು ಸಿಕ್ಕು ಬಿದ್ದರು. ಕಲಘಟಗಿ ಪೊಲೀಸ್ ವಾಹನ ಬ್ಯಾಟರಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ 30ರಿಂದ 31ರ ಮಧ್ಯರಾತ್ರಿ ವೇಳೆ ಹಾಗೂ ಅಕ್ಟೋಬರ್ 25ರಿಂದ 26ರ ಮಧ್ಯೆ ಪಿರ್ಯಾದಿದಾರರ ಮನೆಯಿಂದ ಹತ್ತಿರ ಪಾರ್ಕ್ ಮಾಡಲಾಗಿದ್ದ ಲಾರಿಗಳಿಂದ ಒಟ್ಟು ಏಳು ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಪ್ರತಿಯೊಂದು ಬ್ಯಾಟರಿಯ ಮೌಲ್ಯ ರೂ.10,000 ಆಗಿದ್ದು, ಒಟ್ಟಾರೆ ರೂ.70,000 ಕಿಮ್ಮತ್ತಿನ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದರು. ಈ ಸಂಬಂಧ ಕಲಘಟಗಿ ಪೊಲೀಸ್ರ ಠಾಣೆಯಲ್ಲಿ 249/2025, ಕಲಂ 303(2) ಬಿ.ಎನ್.ಎಸ್.ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಪಿ.ಐ ಶ್ರೀಶೈಲ ಕೌಜಲಗಿ, ಸಿ.ಎನ್.ಕರ ವಿರಪ್ಪನವರ, ಪಿ.ಎಸ್.ಐ (ಅಪರಾಧ ವಿಭಾಗ) ಹಾಗೂ ಠಾಣಾ ಸಿಬ್ಬಂದಿಗಳ ತಂಡ ತ್ವರಿತ ಕ್ರಮ ಕೈಗೊಂಡು ಮೂವರು ಆರೋಪಿತರನ್ನು ಪತ್ತೆ ಮಾಡಿ ಬಂಧಿಸಿದೆ. ಬಂಧಿತರಿಂದ ಒಟ್ಟು 25 ವಾಹನ ಬ್ಯಾಟರಿಗಳು…

ಮುಂದೆ ಓದಿ..
ಸುದ್ದಿ 

ಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ

ಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ ಯಾದಗಿರಿ: ಮುದ್ನಾಳ ಗ್ರಾಮ ಪಂಚಾಯಿತಿಯ ಪಿಡಿಒ ನೀಲಕಂಠ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಅಕ್ರಮ ಚಟುವಟಿಕೆಗೆ ಬೆಂಬಲ ನೀಡಿದ ಇಒ ಹಾಗೂ ಜಿಲ್ಲಾ ಪಂಚಾಯಿತಿ ಪಿಡಿ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಬೇಡಿಕೆ ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “2021-22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಗೋದಾಮಿನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ, ₹18.64 ಲಕ್ಷ ಪಾವತಿಸಿ ಭಾರೀ ಅವ್ಯವಹಾರ ನಡೆದಿದೆ,” ಎಂದು ಆರೋಪಿಸಿದರು. ಅವರು ಮುಂದುವರಿದು, “ಜಿಲ್ಲಾ ಪಂಚಾಯಿತಿ ಸಿಇಒ ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಇಒ ನಿರ್ಲಕ್ಷ್ಯ ತೋರಿದ್ದಾರೆ. ಈ ಮೂಲಕ ಅಧಿಕಾರಿಗಳೂ ಅಕ್ರಮಕ್ಕೆ…

ಮುಂದೆ ಓದಿ..
ಸುದ್ದಿ 

ಉಡುಪಿ ಎಎಸ್ಐ ವಿಶ್ವನಾಥ್ ಅವರ ಅಕಾಲಿಕ ನಿಧನ — ಪೊಲೀಸ್ ಇಲಾಖೆಯಲ್ಲಿ ಶೋಕದ ಮಳೆ

ಉಡುಪಿ ಎಎಸ್ಐ ವಿಶ್ವನಾಥ್ ಅವರ ಅಕಾಲಿಕ ನಿಧನ — ಪೊಲೀಸ್ ಇಲಾಖೆಯಲ್ಲಿ ಶೋಕದ ಮಳೆ ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಘಟಕದಲ್ಲಿ ಕಳೆದ 32 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಎಎಸ್ಐ ವಿಶ್ವನಾಥ್ ಅವರು ಇಂದು ಅಕಸ್ಮಿಕ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೃತ್ತಿ ಜೀವನದ ಕೊನೆಯ ಹಂತದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶ್ವನಾಥ್ ಅವರ ನಿಧನವು ಸಹೋದ್ಯೋಗಿಗಳು ಹಾಗೂ ಪೊಲೀಸ್ ಇಲಾಖೆಗೆ ಭಾರೀ ಆಘಾತ ತಂದಿದೆ. ಕರ್ತವ್ಯನಿಷ್ಠೆ, ವಿನಯಶೀಲತೆ ಮತ್ತು ಮಾನವೀಯ ಗುಣಗಳಿಂದ ಎಲ್ಲರ ಮನ ಗೆದ್ದಿದ್ದ ಅವರು, ಇಲಾಖೆಯಲ್ಲಿ ಶಿಸ್ತಿನ ಮಾದರಿಯಾಗಿದ್ದರು ಎಂದು ಸಹೋದ್ಯೋಗಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ನಿಧನದಿಂದ ದುಃಖಿತಗೊಂಡ ಉಡುಪಿ ಜಿಲ್ಲಾ ಪೊಲೀಸ್ ಕುಟುಂಬ, ಬಂಧು-ಮಿತ್ರರು ಮತ್ತು ಜನಸಾಮಾನ್ಯರು ಅವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲೆಂದು ಪ್ರಾರ್ಥಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ…

ಮುಂದೆ ಓದಿ..
ಸುದ್ದಿ 

ಡಂಬಲ್ಸ್ ಹೊಡೆತದಿಂದ ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ

ಡಂಬಲ್ಸ್ ಹೊಡೆತದಿಂದ ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ಬೆಂಗಳೂರು: ನಗರದಲ್ಲಿ ಡಂಬಲ್ಸ್‌ನಿಂದ ಹೊಡೆದು ವ್ಯಕ್ತಿಯೊಬ್ಬನ ಹತ್ಯೆ ಮಾಡಿದ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದವರು ಭೀಮೇಶ್ ಬಾಬು (41) ಎಂದು ಗುರುತಿಸಲಾಗಿದೆ. ಆರೋಪಿಯು ಸೋಮಲ ವಂಶಿ, ಆಂಧ್ರದ ವಿಜಯವಾಡ ಮೂಲದವನಾಗಿದ್ದಾನೆ. ಮಾಹಿತಿ ಪ್ರಕಾರ, ಇಬ್ಬರೂ ಒಂದು ಡೇಟಾ ಸಂಗ್ರಹ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯು ಸಿನಿಮಾ ಚಿತ್ರೀಕರಣದ ವಿಡಿಯೋ ಶೇಖರಣೆ ಮತ್ತು ಸಂಪಾದನೆ ಕಾರ್ಯಗಳಲ್ಲಿ ತೊಡಗಿಕೊಂಡಿತ್ತು. ದಿನನಿತ್ಯ ಆಧಾರದ ಮೇಲೆ ವಿಡಿಯೋ ಸಂಗ್ರಹ ಮಾಡುವ ಕೆಲಸದಲ್ಲಿ ನಿರತರಾಗಿದ್ದ ಇಬ್ಬರೂ ಕಂಪನಿಯಲ್ಲೇ ರಾತ್ರಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ದಿನ ರಾತ್ರಿ ಸುಮಾರು 1.30ರ ಸುಮಾರಿಗೆ, ಇಬ್ಬರ ನಡುವೆ ಅಲ್ಪ ವಿಷಯಕ್ಕೆ ವಾದ-ವಿವಾದ ಉಂಟಾಗಿದೆ. ಕೋಪದ ರಭಸದಲ್ಲಿ ವಂಶಿ ಡಂಬಲ್ಸ್‌ನಿಂದ ಭೀಮೇಶ್‌ನ ತಲೆಗೆ ಹೊಡೆದು, ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ. ಘಟನೆಯ…

ಮುಂದೆ ಓದಿ..
ಸುದ್ದಿ 

ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ?

ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ? ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು — “ಪೊಲೀಸರು ಲಂಚ ಸ್ವೀಕರಿಸುವುದು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುತ್ತದೆ” ಎಂದು ಹೇಳಿಕೆ ನೀಡಿರುವುದು ಜನರ ಗಮನ ಸೆಳೆದಿದೆ. ಆದರೆ ಜನಸಾಮಾನ್ಯರ ಮನದಲ್ಲಿ ಎದ್ದಿರುವ ಪ್ರಶ್ನೆ — ಲಂಚ ಕೊಡುವ ವ್ಯವಸ್ಥೆ, ಲಂಚಕ್ಕೆ ಕಾರಣವಾಗುವ ಪೋಸ್ಟಿಂಗ್ ಮಾಫಿಯಾ ಬಗ್ಗೆ ಯಾರು ಮಾತನಾಡುತ್ತಾರೆ? ಸಾಮಾನ್ಯ ಪೋಲೀಸ್ ಅಧಿಕಾರಿ ಅಥವಾ ಪಿಡಿಓ ಮಟ್ಟದ ನೌಕರರು ಅಧಿಕಾರಕ್ಕೆ ಬಂದ ಕೂಡಲೇ ಲಕ್ಷಾಂತರ ರೂಪಾಯಿ ನೀಡಿ ಪೋಸ್ಟಿಂಗ್ ಪಡೆಯಬೇಕಾಗುತ್ತದೆ ಎಂಬುದು ಮುಚ್ಚಿದ ರಹಸ್ಯವಲ್ಲ. ಹೀಗಾಗಿ ಆ ಹಣವನ್ನು ವಾಪಸ್ ಪಡೆಯಲು ಕೆಲವರು ಜನರಿಂದ ಲಂಚ ತಗೊಳ್ಳುತ್ತಾರೆ. ನಂತರ ಸರ್ಕಾರದವರು “ಲಂಚ ತಗೊಳ್ಳಬೇಡಿ” ಎಂಬ ನೈತಿಕ ಪಾಠ ಹೇಳುವುದು ಜನರ ಕಿವಿಗೆ ವ್ಯಂಗ್ಯವಾಗಿ ಕೇಳುತ್ತದೆ. ಜನರ ಕೋಪದ ಧ್ವನಿಯೇ ಹೀಗಿದೆ..…

ಮುಂದೆ ಓದಿ..
ಸಿನೆಮಾ ಸುದ್ದಿ 

“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ

“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ ನಿರ್ದೇಶಕ, ನಟ ಹಾಗೂ ನಿರ್ಮಾಪಕನಾಗಿ ಮೂವರು ಪಾತ್ರಗಳಲ್ಲಿ ಮಿಂಚಿರುವ ರವಿ ಗೌಡ ಅವರ “I Am God” ಸಿನಿಮಾ ಈಗ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ ಈ ಸಿನಿಮಾ, ಟ್ರೇಲರ್ ಬಿಡುಗಡೆಗೊಂಡ ನಂತರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಶೀರ್ಷಿಕೆ ಕೇಳುತ್ತಿದ್ದಂತೆಯೇ ಯಾರಿಗಾದರೂ ನೆನಪಾಗುವುದು ರಿಯಲ್‌ ಸ್ಟಾರ್ ಉಪೇಂದ್ರ. ಇದೇ ಉಪ್ಪಿ ಅವರ ಶಿಷ್ಯನಾದ ರವಿ ಗೌಡ, ಅವರ ಪಾಠದಿಂದ ಪ್ರೇರಿತನಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಪೇಂದ್ರ ಅವರ “ಉಪ್ಪಿ 2” ಸಿನಿಮಾದಲ್ಲಿ ಸಹಾಯಕನಾಗಿ ಕೆಲಸಮಾಡಿದ ನಂತರ, “ಸ್ವಂತ ಚಿತ್ರ ನಿರ್ದೇಶನ” ಎಂಬ ಕನಸನ್ನು ಸಾಕಾರಗೊಳಿಸಿರುವುದು ಈ ಸಿನಿಮಾ ಮೂಲಕ. ಮೈಸೂರಿನಲ್ಲಿ ನಡೆದ ಟ್ರೇಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಕೈಯಿಂದಲೇ…

ಮುಂದೆ ಓದಿ..
ಸುದ್ದಿ 

ಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ

ಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ ನಂಜನಗೂಡು: ಪತಿಯನ್ನ ಕೊಲ್ಲಲು ಪತ್ನಿಯೇ ಸ್ಕೆಚ್ ಹಾಕಿ, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ನಂಜನಗೂಡು ಪೊಲೀಸರ ಸೂಕ್ಷ್ಮ ತನಿಖೆಯಿಂದ ಸಿಕ್ಕಿಬಿದ್ದ ಈ ಕಿಲಾಡಿ ಪತ್ನಿಯ ಆಟ ಇದೀಗ ಎಲ್ಲರ ಚರ್ಚೆಗೆ ಕಾರಣವಾಗಿದೆ. ಪತಿಯನ್ನ ಮುಗಿಸಲು ಪತ್ನಿ ತನ್ನ ಸಹೋದರನ ಸಹಾಯದಿಂದ ಸಂಚು ರೂಪಿಸಿದ್ದಾಳೆ. ಆದರೆ ನಂಜನಗೂಡು ಠಾಣೆ ಪೊಲೀಸರು ಬಲವಾದ ಸುಳಿವುಗಳ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ಸಂಗೀತಾ, ಆಕೆಯ ಸಹೋದರ ಸಂಜಯ್, ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕ — ಈ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಪತಿಯನ್ನ ಕೊಲ್ಲಲು ಸಂಚು ರೂಪಿಸಿದರೂ, ಯೋಜನೆ ಪೂರ್ಣವಾಗಿ ಸಫಲವಾಗಲಿಲ್ಲ. ಗಾಯಗೊಂಡ ಪತಿ ರಾಜೇಂದ್ರ ಪ್ರಸ್ತುತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

ಮುಂದೆ ಓದಿ..
ಸುದ್ದಿ 

ಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ

ಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ ಶಿವಮೊಗ್ಗ: ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗೃಹಿಣಿಯ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಬಂದಿದೆ. ಕಳೆನಾಶಕ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಕಳೆದುಕೊಂಡ ಪೂಜಾ (30) ಎಂಬ ಮಹಿಳೆಯ ಸಾವು ಪ್ರಕರಣದ ಆರೋಪಿಗಳು — ಪತಿ ಶರತ್, ಅತ್ತೆ, ಮಾವ ಮತ್ತು ನಾದಿನಿ — ಇಬ್ಬರು ದಿನ ಕಳೆದರೂ ಇನ್ನೂ ಪೊಲೀಸರ ಬಲೆಗೆ ಸಿಕ್ಕಿಲ್ಲ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹತ್ತಿರದ ಶಂಕರಳ್ಳಿ ಈಶ್ವರಪ್ಪ ಅವರ ಪುತ್ರಿ ಪೂಜಾಳಿಗೆ, ಮೂರು ವರ್ಷಗಳ ಹಿಂದೆ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬುವನೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಗಂಡು ಮಗು ಇದೆ. ಆದರೆ ಮದುವೆಯ ಬಳಿಕ ಪೂಜಾಳಿಗೆ ಗಂಡ ಹಾಗೂ ಅತ್ತೆಮಾವಂದಿರಿಂದ ನಿರಂತರ ಕಿರುಕುಳ ಎದುರಾಗುತ್ತಿತ್ತು…

ಮುಂದೆ ಓದಿ..
ಸುದ್ದಿ 

ಶ್ರೀರಂಗಪಟ್ಟಣದ ದಾರುಣ ಘಟನೆ: ನಾಲೆಯ ನೀರುಪಾಲಾದ ವಿದ್ಯಾರ್ಥಿಗಳು – ಓರ್ವ ಬಾಲಕಿ ಸಾವು, ಮೂವರು ನಾಪತ್ತೆ

ಶ್ರೀರಂಗಪಟ್ಟಣದ ದಾರುಣ ಘಟನೆ: ನಾಲೆಯ ನೀರುಪಾಲಾದ ವಿದ್ಯಾರ್ಥಿಗಳು – ಓರ್ವ ಬಾಲಕಿ ಸಾವು, ಮೂವರು ನಾಪತ್ತೆ ಮಂಡ್ಯ ಜಿಲ್ಲೆ, ನ. 2 – ಶ್ರೀರಂಗಪಟ್ಟಣ ತಾಲೂಕಿನ ರಾಮಸ್ವಾಮಿ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ದುರ್ಘಟನೆಯಲ್ಲಿ ಶಾಲಾ ಮಕ್ಕಳ ಆರು ಮಂದಿ ನಾಲೆಗೆ ಇಳಿದು, ಅವರ ಪೈಕಿ ಒಬ್ಬ ಬಾಲಕಿ ಸಾವನ್ನಪ್ಪಿದ್ದು ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಕೊಂಡು ನಾಪತ್ತೆಯಾಗಿದ್ದಾರೆ. ಮೃತ ಬಾಲಕಿ ಮೈಸೂರಿನ ಉದಯಗಿರಿಯ ಹಾಜಿರ ನಿಶ್ವಾನ್ ಅರಬಿಕ್ ಶಾಲೆಯ ವಿದ್ಯಾರ್ಥಿನಿ ಆಯಿಶ ಅಫ್ರೀನ್ (14) ಎಂದು ಗುರುತಿಸಲಾಗಿದೆ. ಅದೇ ಶಾಲೆಯ ತರ್ಬೀನ್ (13), ಅಮೀನಾ (13) ಮತ್ತು ಅನಿಷಾ (14) ಎಂಬ ಮೂವರು ಬಾಲಕಿಯರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಅಲ್ಪಿಯಾ (22) ಮತ್ತು ಮುಹಮ್ಮದ್ ಗೌಸ್ (13) ಎಂಬ ಇಬ್ಬರನ್ನು ಸ್ಥಳೀಯರು ಸಮಯಕ್ಕೆ ತಕ್ಕಂತೆ ರಕ್ಷಿಸಿದ್ದು, ಅವರನ್ನು ಮೈಸೂರಿನ ಕೆ.ಆರ್.…

ಮುಂದೆ ಓದಿ..