ಸುದ್ದಿ 

7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ : SP ಬಿಚ್ಚಿಟ್ಟ ಶಾಕಿಂಗ್ ಸ್ಟೋರಿ…

7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ : SP ಬಿಚ್ಚಿಟ್ಟ ಶಾಕಿಂಗ್ ಸ್ಟೋರಿ ನೆನ್ನೆ ದಿನ ಮುರುಗೋಟ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ನೊಂದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆ ದೂರು ಪ್ರಕಾರ, ಒಬ್ಬ ವ್ಯಕ್ತಿ ಅವಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಜೊತೆಗೆ ಮತ್ತೊಬ್ಬ ವ್ಯಕ್ತಿ ಆರೋಪಿಗೆ ಸಹಾಯ ಮಾಡಿದ ಆರೋಪವೂ ದಾಖಲಾಗಿದೆ. ದೂರು ಬಂದ ತಕ್ಷಣ ಇಬ್ಬರು ಆರೋಪಿಗಳನ್ನೂ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನೊಂದ ಬಾಲಕಿಯ ವಿಚಾರಣೆಗಾಗಿ ಮಹಿಳಾ ಅಧಿಕಾರಿಯನ್ನು ನಾಮನಿರ್ದೇಶನ ಮಾಡಲಾಗಿದ್ದು, ಅವರ ಎದುರು ಬಾಲಕಿ ತನ್ನ ಹೇಳಿಕೆ ನೀಡಿದ್ದಾಳೆ. ಆರೋಪಿಗಳಾದ ಮಣಿಕಂಠ ಮತ್ತು ಈರಣ್ಣ ಈಗಾಗಲೇ ಬಂಧಿತರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ತಡವಾದ ದೂರು ಕುರಿತು SP ಹೇಳಿಕೆ:.. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಬಾಲಕಿಯರು ಶಾಕ್‌ಗೆ ಒಳಗಾಗುವ ಕಾರಣ ಮೊದಲಿಗೆ ವಿಷಯವನ್ನು ಹೇಳುವುದಿಲ್ಲ. ಹೇಳಿದ ಮೇಲೂ,…

ಮುಂದೆ ಓದಿ..
ರಾಜಕೀಯ ಸುದ್ದಿ 

ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ

ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ ಸತಿ ಅನಸೂಯ ದೇವಿಯವರ ಪೂಜೆ ಹಾಗೂ ಸಂಕೀರ್ತನ ಯಾತ್ರೆ ಆರಂಭವಾಗುತ್ತಿದೆ. ಈ ಸಂಕೀರ್ತನಾ ಯಾತ್ರೆಗೆ ಮುನ್ನ ಧಾರ್ಮಿಕ ಜಾಗೃತಿ ಸಭೆಯನ್ನು ಉದ್ದೇಶಿಸಿ, ಖ್ಯಾತ ವೈದ್ಯೆಯಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಾತನಾಡಲಿದ್ದಾರೆ. ನಮ್ಮ ಬೇಡಿಕೆಗಳು ಹಳೆಯದೇ. “ದತ್ತಪೀಠ ಬೇರೆ, ಬಾಬಾ ಬುಡನ್ ದರ್ಗಾ ಬೇರೆ” ಎನ್ನುವುದನ್ನು ಕಂದಾಯ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಈ ದಾಖಲೆಗಳ ಹಿನ್ನಲೆಯಲ್ಲಿ ಹಿಂದೂಗಳಿಗೆ ನ್ಯಾಯ ದೊರಕಬೇಕು. ಈಗ ಅರ್ಧ ನ್ಯಾಯ ಸಿಕ್ಕಿದೆ; ಪೂರ್ಣ ನ್ಯಾಯ ಸಿಗಬೇಕು. ಆ ಪೂರ್ಣ ನ್ಯಾಯ ಸಿಗುವವರೆಗೂ ಭಕ್ತಿ ಹಾಗೂ ಶಕ್ತಿಯ ಈ ಆಂದೋಲನವನ್ನು ಮುಂದುವರಿಸುವುದು ಅನಿವಾರ್ಯ. ದತ್ತಾತ್ರೇಯರೂ, ಸತಿ ಅನಸೂಯ ದೇವಿಯೂ ಕೂಡ ನಮ್ಮ ಈ ಆಶಯವನ್ನು ಆಶೀರ್ವದಿಸುತ್ತಿದ್ದಾರೆ. ಅವರ ಭಕ್ತರೂ ಪೂರ್ಣ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಾರೆ. ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವ ಅವಕಾಶ…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು: ಗೃಹಿಣಿ ಸಂಧ್ಯಾ ಕ್ರೂರ ಹತ್ಯೆ.

ಚಿಕ್ಕಮಗಳೂರು: ಗೃಹಿಣಿ ಸಂಧ್ಯಾ ಕ್ರೂರ ಹತ್ಯೆ. ಚಿಕ್ಕಮಗಳೂರು ತಾಲ್ಲೂಕಿನ ಅರೆನೂರು ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ನಿಶ್ಚಿಂತೆಗೇ ಕೆಲಸ ಮಾಡುತ್ತಿದ್ದ ವೇಳೆ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಹತ್ಯೆಯಾದ ಗೃಹಿಣಿಯನ್ನು ಸಂಧ್ಯಾ (33) ಎಂದು ಗುರುತುಪಡಿಸಲಾಗಿದೆ. ಮೂಲಗಳ ಪ್ರಕಾರ, ಕಳೆದ ಕೆಲ ದಿನಗಳಿಂದ ಗಂಡನೊಂದಿಗೆ ಅಣಕಾಡುತ್ತಿದ್ದ ಸಂಧ್ಯಾ, ತವರುಮನೆಗೆ ತೆರಳಿದ್ದರು. ನಾಲ್ಕು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದರಿಂದ ಕುಟುಂಬದವರು ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನಿನ್ನೆ ಸಂಜೆ ಸಂಧ್ಯಾ ಅರೆನೂರು ಗ್ರಾಮದ ಮನೆಯತ್ತ ಹಿಂದಿರುಗಿದ್ದ ವೇಳೆ ಯಾವುದೇ ಅನಾಹುತದ ಶಂಕೆ ಯಾರಿಗೂ ಬಂದಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಮನೆ ಹಿಂಭಾಗದ ಕೆಲಸದಲ್ಲಿ ತೊಡಗಿದ್ದಾಗ ಅಜ್ಞಾತ ಹಂತಕ ಕುತ್ತಿಗೆ ಕುಯಿದು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬೇಟಿ ನೀಡಿದ ಆಲ್ದೂರು ಪೊಲೀಸರು ಪರಿಶೀಲನೆ ನಡೆಸಿದ್ದು, ಹತ್ಯೆಗೆ ನಿಖರ ಕಾರಣ ಏನೆಂಬುದು…

ಮುಂದೆ ಓದಿ..
ಸುದ್ದಿ 

ಹಾವೇರಿ ಎಕ್ಸಿಕ್ಯುಟಿವ್ ಇಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ: 3 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆ

ಹಾವೇರಿ ಎಕ್ಸಿಕ್ಯುಟಿವ್ ಇಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ: 3 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆ ನಗರಾಭಿವೃದ್ಧಿ ಕೋಶದ ಎಕ್ಸಿಕ್ಯುಟಿವ್ ಇಂಜಿನಿಯರ್ ಶೇಖಪ್ಪ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ವಿಸ್ತೃತ ಪರಿಶೀಲನೆ ಭಾರೀ ಚರ್ಚೆಗೆ ಕಾರಣವಾಗಿದೆ. ಹೆಚ್ಚಿನ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ತಂಡಗಳು ಎರಡು ವಿಭಾಗಗಳಾಗಿ ಕಾರ್ಯಾಚರಣೆ ನಡೆಸಿ, ಶೇಖಪ್ಪ ಅವರ ಬಸವೇಶ್ವರ ನಗರದಲ್ಲಿರುವ ಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದವು. ಪರಿಶೀಲನೆಯ ವೇಳೆ ಸುಮಾರು 10 ಲಕ್ಷ ರೂಪಾಯಿ ನಗದು, ದೊಡ್ಡ ಪ್ರಮಾಣದ ಚಿನ್ನಾಭರಣ, ಮತ್ತು ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಶೇಖಪ್ಪ ಅವರ ಬಳಿ 3 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಇರುವುದನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ, ದಾವಣಗೆರೆ, ಹಾವೇರಿ, ಹಾನಗಲ್ ಹಾಗೂ ಇತರ ಪ್ರದೇಶಗಳಲ್ಲಿ ಒಟ್ಟು 17 ನಿವೇಶನಗಳನ್ನು…

ಮುಂದೆ ಓದಿ..
ಸುದ್ದಿ 

ರಾಮೇಶ್ವರಂ ಕಫೆ ಮಾಲೀಕ ರಾಘವೇಂದ್ರ ರಾವ್ ವಿರುದ್ಧ ಎಫ್‌ಐಆರ್!

ರಾಮೇಶ್ವರಂ ಕಫೆ ಮಾಲೀಕ ರಾಘವೇಂದ್ರ ರಾವ್ ವಿರುದ್ಧ ಎಫ್‌ಐಆರ್! ಜನಪ್ರಿಯ ರಾಮೇಶ್ವರಂ ಕಫೆಯ ಮಾಲೀಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾವ್ ಹಾಗೂ ಹಿರಿಯ ಕಾರ್ಯನಿರ್ವಾಹಕ ಸುಮಂತ್ ಲಕ್ಷ್ಮಿನಾರಾಯಣ್ ವಿರುದ್ಧ ಬೆಂಗಳೂರಿನ ಪೊಲೀಸರು ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಬಿಲ್ಡರ್ ನೀಡಿದ ದೂರಿನ ಆಧಾರದ ಮೇಲೆ, ಅಪಾಯಕಾರಿ ಆಹಾರ ಮಾರಾಟ, ತಪ್ಪು ಮಾಹಿತಿ ನೀಡಿಕೆ, ಕ್ರಿಮಿನಲ್ ಪಿತೂರಿ ಹಾಗೂ ಇತರ ದೋಷಗಳು ಆರೋಪಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಪೊಂಗಲ್‌ನಲ್ಲಿ ಹುಳು:… ಜುಲೈ 24ರಂದು ಟರ್ಮಿನಲ್ 1ನಲ್ಲಿ ಇರುವ ಕೆಫೆಯ ಔಟ್‌ಲೆಟ್‌ನಲ್ಲಿ ಪೊಂಗಲ್ ಖರೀದಿಸಿದ ಮಾರತ್‌ಹಳ್ಳಿ ನಿವಾಸಿ ನಿಖಿಲ್ ಎನ್ ಅವರು, ಆಹಾರದಲ್ಲಿ ಹುಳು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಿಬ್ಬಂದಿ ಆಹಾರ ಬದಲಾಯಿಸಲು ಸಮ್ಮತಿಸಿದರೂ, ವಿಮಾನ ಹತ್ತುವ ತುರ್ತು ಕಾರಣದಿಂದ ನಿಖಿಲ್…

ಮುಂದೆ ಓದಿ..
ಸುದ್ದಿ 

ಗ್ರಾಮೀಣ ಭಾಗದ ಕೃಷಿಯ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಈ-ಖಾತಾ ಪ್ರಮಾಣಪತ್ರ ಸಿಗಲಿದ್ದು,

ಗ್ರಾಮೀಣ ಭಾಗದ ಕೃಷಿಯ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಈ-ಖಾತಾ ಪ್ರಮಾಣಪತ್ರ ಸಿಗಲಿದ್ದು, ಗ್ರಾಮೀಣ ಜನರಿಗೆ ತಮ್ಮ ಆಸ್ತಿಗಳ ದಾಖಲೆಗಳನ್ನು ಸುಲಭವಾಗಿ ಹಾಗೂ ಡಿಜಿಟಲ್ ರೂಪದಲ್ಲಿ ಪಡೆಯುವ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಕಲ್ಪಿಸಿದೆ. ಈ ಈ-ಸ್ವತ್ತು ತಂತ್ರಾಂಶದ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ನಮೂನೆ 11A ಹಾಗೂ 11B ಡಿಜಿಟಲ್ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯ ಪ್ರಾರಂಭವಾಗಿದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ನಿಯಮಗಳು 2025 ಆಧಾರದ ಮೇಲೆ ಈ ಪ್ರಕ್ರಿಯೆ ಇನ್ನಷ್ಟು ಸುಗಮಗೊಂಡಿದೆ. ಈ ಹೊಸ ವ್ಯವಸ್ಥೆಯ ಪ್ರಮುಖ ಬದಲಾವಣೆಗಳಲ್ಲಿ, ಸಾರ್ವಜನಿಕರು ತಮ್ಮ ಮನೆಯಿಂದಲೇ ಈ-ಸ್ವತ್ತು ಪೋರ್ಟಲ್ ಮೂಲಕ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ. ನಿಗದಿತ ಅವಧಿಯೊಳಗೆ ದಾಖಲೆ ನೀಡದಿದ್ದರೆ ಸ್ವಯಂ ಚಾಲಿತ ಅನುಮೋದನೆ ಸಿಗುವ ವ್ಯವಸ್ಥೆಯೂ ಇದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ತೆರಿಗೆಗೆ ಒಳಪಡುವ…

ಮುಂದೆ ಓದಿ..
ಸುದ್ದಿ 

ನವ ವಿವಾಹಿತೆ ಲತಾ ನಾಪತ್ತೆ: ವಾಟ್ಸಪ್‌ನಲ್ಲಿ ‘ಡೆತ್ ನೋಟ್’ ಬರೆದು ಕಾಣೆಯಾಗಿದ್ದರಿಂದ ಸಂಚಲನ

ನವ ವಿವಾಹಿತೆ ಲತಾ ನಾಪತ್ತೆ: ವಾಟ್ಸಪ್‌ನಲ್ಲಿ ‘ಡೆತ್ ನೋಟ್’ ಬರೆದು ಕಾಣೆಯಾಗಿದ್ದರಿಂದ ಸಂಚಲನ ನವ ವಿವಾಹಿತೆಯೊಬ್ಬಳು ವಾಟ್ಸಪ್‌ನಲ್ಲಿ ‘ಡೆತ್ ನೋಟ್’ ಬರೆದು ನಾಪತ್ತೆಯಾಗಿರುವ ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಗುರುರಾಜ್ ಎಂಬುವವರನ್ನು 2025ರ ಏಪ್ರಿಲ್ 14ರಂದು ವಿವಾಹವಾಗಿದ್ದ ಲತಾ ಈಗ ಕಾಣೆಯಾಗಿರುವುದು ಕುಟುಂಬ ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ವಾಟ್ಸಪ್‌ನಲ್ಲಿ ಬರೆದಿರುವ ನೋಟ್‌ನಲ್ಲಿ ಲತಾ ಪತಿ ಸೇರಿದಂತೆ ಐವರು ತಮಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. “ನಾನು ಮತ್ತೆ ನಮ್ಮ ಮನೆಯಲ್ಲಿ ಹುಟ್ಟಿ ಬರುತ್ತೇನೆ, ಪಾಪಿಗಳಿಗೆ ಶಿಕ್ಷೆ ಕೊಡಿಸಿ…” ಎಂದು ನೋಟ್‌ನಲ್ಲಿ ಬರೆದಿರುವುದರಿಂದ ಪ್ರಕರಣ ಗಂಭೀರ ತಿರುವು ಪಡೆದಿದೆ. ನಾಪತ್ತೆಯಾಗಿರುವ ದಿನದ ಬೆಳಗ್ಗೆ ಲತಾ ಮನೆ ತೊರೆದಿದ್ದು, ನಂತರದಿಂದ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ಲತಾ ಹುಡುಕಾಟ ಕಾರ್ಯಾಚರಣೆ ಈಗಾಗಲೇ ಆರಂಭಗೊಂಡಿದೆ. ವಾಟ್ಸಪ್ ಮೆಸೇಜ್‌ಗಳ…

ಮುಂದೆ ಓದಿ..
ಸುದ್ದಿ 

ಇನ್ನು ಸಿಮ್ ಇದ್ದರೆಷ್ಟೋ ಮೆಸೇಜಿಂಗ್ ಆ್ಯಪ್‌ ಬಳಕೆಗೂ ಅಡ್ಡಿ: ಕೇಂದ್ರ ಸರ್ಕಾರ ನಿರ್ಧೇಶನ

ಇನ್ನು ಸಿಮ್ ಇದ್ದರೆಷ್ಟೋ ಮೆಸೇಜಿಂಗ್ ಆ್ಯಪ್‌ ಬಳಕೆಗೂ ಅಡ್ಡಿ: ಕೇಂದ್ರ ಸರ್ಕಾರ ನಿರ್ಧೇಶನ ಆ್ಯಪ್‌ಗಳ ದುರ್ಭಳಕೆ, ಸೈಬರ್ ಅಪರಾಧ ತಡೆಯಲು ಹೊಸ ಕ್ರಮ – 6 ತಿಂಗಳ ಒಳಗೆ ವಾಟ್ಸ್ಆ್ಯಪ್ ಮೆಸೇಜಿಂಗ್‌ಗೂ ಲಾಗಿನ್ ಅಗತ್ಯ ಬೆಂಗಳೂರು: ಆನ್‌ಲೈನ್‌ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇದೀಗ ಪ್ರಮುಖ ಕ್ರಮ ಕೈಗೆತ್ತಿಕೊಳ್ಳಲು ಮುಂದಾಗಿದೆ. ಇದೀಗ ಮೊಬೈಲ್ ಸಿಮ್‌ ಇದ್ದರೆ ಸಾಕು, ಅನೇಕ ಮೆಸೇಜಿಂಗ್ ಆ್ಯಪ್‌ಗಳನ್ನು ಸುಲಭವಾಗಿ ಬಳಸಬಹುದಾದ ವ್ಯವಸ್ಥೆಗೆ ಅಡ್ಡಿ ಬರುವ ಸಾಧ್ಯತೆ ಇದೆ. ಸೈಬರ್ ಅಪರಾಧ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುವ ಕೆಲಸವನ್ನು ಆರಂಭಿಸಿದ್ದು, ಎಲ್ಲಾ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಲಾಗಿನ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ತಯಾರಿ ನಡೆಸುತ್ತಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್ಬುಕ್ ಮೆಸೆಂಜರ್, ಇನ್ಸ್ಟಾಗ್ರಾಂ, ಎಕ್ಸ್ (ಟ್ವಿಟ್ಟರ್) ಸೇರಿದಂತೆ ಎಲ್ಲಾ ಆ್ಯಪ್‌ಗಳಲ್ಲಿ ಲಾಗಿನ್ ಇಲ್ಲದೆ ಸೇವೆ ಸಿಗಬಾರದೆನ್ನುವುದು ಸರ್ಕಾರದ ಉದ್ದೇಶ. ಸುಮಾರು 90…

ಮುಂದೆ ಓದಿ..
ಸುದ್ದಿ 

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್: ಪಿರಿಯಾಪಟ್ಟಣ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುವ ವೇಳೆ ಬಂಧನ

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್: ಪಿರಿಯಾಪಟ್ಟಣ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುವ ವೇಳೆ ಬಂಧನ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಕಂದಾಯ ಇಲಾಖೆಯ ಸರ್ವೇಯರ್ ರವೀಂದ್ರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪೋಡಿ ದುರಸ್ತಿ ಹಾಗೂ ದಾಖಲೆ ತಿದ್ದುಪಡಿ ಮಾಡಿಕೊಡುವ ಹೆಸರಿನಲ್ಲಿ ಅವರು ಲಂಚ ಕೇಳುತ್ತಿದ್ದರೆಂಬ ಮಾಹಿತಿ ಹಿನ್ನೆಲೆ ಕಾರ್ಯಾಚರಣೆ ನಡೆದಿದೆ. ಜಮೀನಿನ ಮಾರ್ಗ ರಸ್ತೆಯತ್ತ ಹೋಗುತ್ತದೆ ಎಂದು ಭೀತಿಗೊಳಿಸಿ, ಕೆಲಸ ಮಾಡಿಕೊಡುವುದಾಗಿ ಹೇಳಿ ಒಟ್ಟು 1 ಲಕ್ಷ ರೂ. ಲಂಚ ಕೇಳಿದ್ದ ಸರ್ವೇಯರ್, 30 ಸಾವಿರ ರೂ. ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ತಂಡ ಕೈಕಡವಿ ಹಿಡಿದಿದೆ. ಲೋಕಾಯುಕ್ತ ಎಸ್‌.ಪಿ. ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ವಿಜಯಕುಮಾರ್ ಅವರ ನೇತೃತ್ವದ ತಂಡ ಹುಣಸೂರಿನ ಬಾರ್‌ನಲ್ಲಿ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆಯನ್ನು ನಡೆಸಿತು. ಹಣ ಸ್ವೀಕರಿಸುವ ಕ್ಷಣದಲ್ಲೇ ಸರ್ವೇಯರ್ ರವೀಂದ್ರನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಲಂಚದ…

ಮುಂದೆ ಓದಿ..
ರಾಜಕೀಯ ಸುದ್ದಿ 

“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ..

“ಈ ‘ಬ್ರೆಕ್‌ಫಾಸ್ಟ್ ರಾಜಕೀಯ’ ಅನ್ನೋ ವಿಷಯವೇನು ಗೊತ್ತಾ? ಕೆಲವರಿಗೆ ಕುಲಗೆಟ್ಟ ಸಂಬಂಧಗಳನ್ನೂ, ಒಳಗಿನ ಗಲಾಟೆಯನ್ನೂ ಒಮ್ಮೆಯೇ ಸರಿಪಡಿಸಿಬಿಡುವಂಥ ಮಹಾ ತಂತ್ರ ಅಂತ ಭ್ರಮೆ. ಆದರೆ ಇದು ಕೇವಲ ಸಿನಿಮಾದ ಇಂಟರ್‌ವಲ್‌—ವಿರಾಮ ಮಾತ್ರ. ನಿಜ ಜೀವನದಲ್ಲಿ ಇದು ಒಬ್ಬ ಬೃಹತ್ ನಾಟಕ. ಈ ನಾಟಕದಿಂದ ಜನರಿಗೆ ಏನೂ ಪ್ರಯೋಜನವಾಗೋದಿಲ್ಲ. ಜನರಿಗೆ ನಾಟಕ ಬೇಕಾಗಿಲ್ಲ, ಅಭಿವೃದ್ಧಿ ಬೇಕು, ಸಮಸ್ಯೆಗಳ ಪರಿಹಾರ ಬೇಕು. ನನ್ನ ವಾದವೇನೆಂದರೆ— ಕಾಂಗ್ರೆಸ್ ಇಂದು ದೇಶದಿಂದ ಮಾಯವಾಗೋ ಕಾಲ ಬಂದಿದೆ.ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಯಾವ ತೀರ್ಮಾನವನ್ನು ತೆಗೆದುಕೊಳ್ಳಲು ಸಹ ಸ್ಥಿತಿಯಲ್ಲ. ವಿವೇಕರಹಿತ ನಾಯಕತ್ವದಡಿ ಈ ದೇಶವನ್ನು ಆಳೋ ಸಾಧ್ಯತೆಯೇ ಇಲ್ಲ. ಇನ್ನೊಂದು ಎರಡು–ಮೂರು ವರ್ಷಗಳಲ್ಲಿ ಕಾಂಗ್ರೆಸ್ ಹುಡುಕಿದ್ರೂ ಸಿಗೋದಿಲ್ಲ ಅನ್ನೋ ಪರಿಸ್ಥಿತಿ ಬರುತ್ತದೆ. ಹೀಗಿದ್ದಾಗ ‘ಹೈಕಮಾಂಡ್ ತೀರ್ಮಾನ’ ಅಂತ ಹೇಳೋದು ಸುಳ್ಳು. ದಾವಣಗೆರೆಯಲ್ಲಿ ಎಚ್.ಸಿ. ಮಹಾದೇವಪ್ಪ ಅವರೇ ಹೇಳಿದ್ರು – ‘ಸಿದ್ದರಾಮಯ್ಯ ಅವರು ಐದು ವರ್ಷ…

ಮುಂದೆ ಓದಿ..