ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ: ವಿಕ್ಟೋರಿಯಾ ಆಸ್ಪತ್ರೆ ಜನರಲ್ ಸರ್ಜನ್ ಆರೋಪಿ 6 ತಿಂಗಳ ಬಳಿಕ ಅರೆಸ್ಟ್
ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ: ವಿಕ್ಟೋರಿಯಾ ಆಸ್ಪತ್ರೆ ಜನರಲ್ ಸರ್ಜನ್ ಆರೋಪಿ 6 ತಿಂಗಳ ಬಳಿಕ ಅರೆಸ್ಟ್ ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ್ದ ಘಟನೆ 6 ತಿಂಗಳ ಬಳಿಕ ಎಫ್ಎಸ್ಎಲ್ ವರದಿ ಮೂಲಕ ಬಹಿರಂಗವಾಗಿದೆ. ಬೆಂಗಳೂರಿನಿಂದ ಮಣಿಪಾಲಕ್ಕೆ ತೆರಳಿದ್ದ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ. ಮಾಹಿತಿಯ ಪ್ರಕಾರ, ಡಾ. ಮಹೇಂದ್ರ ಮತ್ತು ಡಾ. ಕೃತಿಕಾ ರೆಡ್ಡಿ ಇಬ್ಬರೂ 2024ರ ಮೇ 26ರಂದು ಕುಟುಂಬ ಒಪ್ಪಂದದ ಮೂಲಕ ಮದುವೆಯಾಗಿದ್ದರು. ಡಾ. ಕೃತಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡೆರ್ಮೆಟಾಲಜಿಸ್ಟ್ ಆಗಿದ್ದರೆ, ಡಾ. ಮಹೇಂದ್ರ ಜನರಲ್ ಸರ್ಜನ್ ಆಗಿದ್ದರು. ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಲೋ ಶುಗರ್ ಸಮಸ್ಯೆಗಳಿದ್ದವು. ಆದರೆ ಕುಟುಂಬಸ್ಥರು ಈ ಅಸೌಖ್ಯವನ್ನು ಗಮನಿಸದೆ ಮದುವೆ ಮಾಡಿದ್ದಾರೆಂಬುದು ಆರೋಪವಾಗಿದೆ.…
ಮುಂದೆ ಓದಿ..
