ಹಿಂದಿರುಗದ ಇಂಜಿನಿಯರಿಂಗ್ ವಿದ್ಯಾರ್ಥಿನಿ
ಬೆಂಗಳೂರು, ಜುಲೈ 9, 2025:ಯಲಹಂಕದ ಎಸ್.ವಿ.ಐ.ಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಕರಣಾ ಎಂಬ ಯುವತಿ ಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕರಣಾ, ರಾಜಾನುಕುಂಟೆ ಬಳಿಯ ಪಿಂಕ್ ಪರ್ಳ್ ಪಿಜಿಯಲ್ಲಿ ವಾಸವಿದ್ದು, ತನ್ನ 3-4 ಸ್ನೇಹಿತರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಜೂನ್ 7ರಂದು ಪರೀಕ್ಷೆ ಮುಗಿದ ನಂತರ ಊರಿಗೆ ಬರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ಆದರೆ ಇವರೆಗೆ ಮನೆಗೆ ಬಂದಿಲ್ಲ. ಅವರ ತಾಯಿ 11 ಜೂನ್ ರಂದು ಸಂಜೆ 5:30ಕ್ಕೆ ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರು ಕರಣಾಗೆ ಅತಿ ಸಮೀಪವಿದ್ದ ತಾರಕ್ ರೆಡ್ಡಿ ಎಂಬ ಯುವಕನ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಕರಣಾ ಕೊನೆಯ ಬಾರಿ ಯಾವ ಬಟ್ಟೆ ಧರಿಸಿದ್ದಾಳೆ ಎಂಬುದೂ ಕುಟುಂಬದವರಿಗೆ ತಿಳಿದಿಲ್ಲ. ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ನಂ.…
ಮುಂದೆ ಓದಿ..
