ಜಯನಗರಕ್ಕೆ ಕೆಲಸಕ್ಕೆ ಹೋದ ಯುವತಿ ನಾಪತ್ತೆ: ‘ವಿಭ್’ ಎಂಬ ಯುವಕನ ಜೊತೆ ಹೋಗಿರಬಹುದೆಂದು ಅನುಮಾನ
ಬೆಂಗಳೂರು ಜುಲೈ 9 2025ಮೈಸೂರಿನ ಮಲ್ಲಿಕ್ಕಂಡ ನಿವಾಸಿಯಾದ 23 ವರ್ಷದ ರಾಜರಾಜೇಶ್ವರಿ ಎಂಬ ಯುವತಿ, ಜುಲೈ 5 ರಂದು ಬೆಳಿಗ್ಗೆ ಮನೆೆಯಿಂದ ಕೆಲಸಕ್ಕೆಂದು ಹೋಗಿ, ರಾತ್ರಿ ವಾಪಸ್ ಬಾರದೆ ನಾಪತ್ತೆಯಾಗಿರುವ ಘಟನೆ ನೆಡೆದಿದೆ. ರಾಜರಾಜೇಶ್ವರಿ ಕಳೆದ ಎರಡು ದಿನಗಳಿಂದ ಜಯನಗರದಲ್ಲಿರುವ ನೇತ್ರಾ ಧಾಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 5ರಂದು ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆಂದು ಮನೆ ಬಿಟ್ಟು ಹೋಗಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಅವರು ತಮ್ಮ ತಂದೆಗೆ ಕರೆ ಮಾಡಿ, “ನಾನು ಎನ್.ಇ.எಸ್ ಹತ್ತಿರ ಇದ್ದೇನೆ, ಬನ್ನಿ ಕರೆದುಕೊಂಡು ಹೋಗಿ” ಎಂದು ತಿಳಿಸಿದರು. ಆದರೆ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕರೆದರೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಿ, ಕೊನೆಗೆ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ವಿಭ್’ ಎಂಬ ಯುವಕನೊಂದಿಗೆ ಅವರ ಮಗಳು ಹೋಗಿರಬಹುದೆಂದು…
ಮುಂದೆ ಓದಿ..
