ಜಮೀನು ದಾರಿ ವಿವಾದದಿಂದ ಹಲ್ಲೆ – ತ್ಯಾವಕನಹಳ್ಳಿಯಲ್ಲಿ ಸಂಬಂಧಿಕರ ಕೈಗಳಿಂದ ಯುವಕನಿಗೆ ಗಂಭೀರ ಗಾಯ
ತ್ಯಾವಕನಹಳ್ಳಿ, ಜುಲೈ 8, 2025: ತ್ಯಾವಕನಹಳ್ಳಿ ಗ್ರಾಮದಲ್ಲಿ ಜಮೀನಿಗೆ ದಾರಿ ವಿಚಾರವಾಗಿ ಉಂಟಾದ ಗಲಾಟೆ ಹಲ್ಲೆ ಗೆ ದಾರಿಯಾಗಿ, ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸೇರಿಕೊಳ್ಳುವಂತಾಗಿದೆ. ಸಂಬಂಧಿಕರ ಮಧ್ಯೆ ನಡೆಯುತ್ತಿರುವ ಜಮೀನಿನ ಹಕ್ಕು ವಿವಾದ ಹಿನ್ನಲೆಯಲ್ಲಿ ಈ ದೌರ್ಜನ್ಯ ನಡೆದಿದ್ದು, ಸ್ಥಳೀಯ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನಂದ್ ರವರು ನೀಡಿದ ಮಾಹಿತಿ ಪ್ರಕಾರ, ತ್ಯಾವಕನಹಳ್ಳಿ ಗ್ರಾಮದಲ್ಲಿನ ಸರ್ವೆ ನಂ. 217/2 ಮತ್ತು 117ಬಿ2 ಜಮೀನಿನಲ್ಲಿ ದಾರಿ ಸಂಬಂಧಿತ ವಿಚಾರವನ್ನು ಮಾನ್ಯ ನ್ಯಾಯಾಲಯದ ಮುಂದೆ ವಿಚಾರಣೆಗೆ ಇಟ್ಟಿರುವುದಾದರೂ, ಆರೋಪಿತರಾದ ದೊಡ್ಡಪ್ಪ ವೆಂಕಟಸ್ವಾಮಿ ಮತ್ತು ಆತನ ಅಳಿಯ ಗೊಪಾಲ್ ಅವರು ಈ ವಿಚಾರವಾಗಿ ಗಲಾಟೆ ಮಾಡುತ್ತಿದ್ದರು. ದಿನಾಂಕ 23 ಜೂನ್ 2025 ರಂದು ಬೆಳಿಗ್ಗೆ 9.45ರ ಸುಮಾರಿಗೆ, ಆನಂದ್ ರವರ ಜಮೀನಿನಲ್ಲಿ ಇದ್ದಾಗ, ಆರೋಪಿಗಳು ಸ್ಥಳಕ್ಕೆ ಬಂದು, ಜಮೀನಿಗೆ ದಾರಿ ಬಿಡುವಂತೆ ಕೇಳಿದ ಮಾತಿಗೆ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದರು.…
ಮುಂದೆ ಓದಿ..
