ಕಂಬದಹಳ್ಳಿಯಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಪತ್ತೆ: ಮೂರು ಮಂದಿ ವಿರುದ್ಧ ಪ್ರಕರಣ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಹಿಂದ್ರಾ ಬೊಲೆರೂ ಮ್ಯಾಕ್ಸ್ ಪಿಕಪ್ ಗೂಡ್ಸ್ ವಾಹನವೊಂದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ.ಮಾರುತಿ ಪಿಎಸ್‌ಐ ಅವರು ಸ್ಥಳೀಯ ಬಾತ್ಮಿದಾರರಿಂದ ಪಡೆದ ಮಾಹಿತಿಯಂತೆ, ಮಹೀಂದ್ರ ಬೊಲೆರೊ ಮ್ಯಾಕ್ಸ್ ಪಿಕಪ್ (ನಂ. ಕೆಎ-53 ಎಬಿ-6149) ವಾಹನದಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಶ್ರವಣಬೆಳಗೊಳದ ದಾರಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಕೇಶವೇಗೌಡ, ಪರಶುರಾಮ್ ರಾಥೋಡ್ ಮತ್ತು ಚಾಲಕ ಶೇಷಗಿರಿಯವರ ಸಹಾಯದಿಂದ ತಪಾಸಣೆಗೆ ಮುಂದಾದಾಗ, ಆರೋಪಿಗಳು ವಾಹನ ನಿಲ್ಲಿಸಿ ಓಡಲು ಯತ್ನಿಸಿದರು. ಆದರೆ ಅವರನ್ನು ಸ್ಥಳದಲ್ಲಿಯೇ ಬಂಧಿಸಲಾಯಿತು.ವಾಹನದ ಹಿಂಭಾಗವನ್ನು ಪರಿಶೀಲಿಸಿದಾಗ, 03 ಎಮ್ಮೆಗಳು, 01 ಎಮ್ಮೆ ಕರು, 01 ಹೆಚ್.ಎಫ್ ಹಸು ಮತ್ತು 01 ಜೆರ್ಸಿ ಹಸು, ಒಟ್ಟು 06 ಜಾನುವಾರುಗಳು ಕ್ರೂರವಾಗಿ ತುಂಬಲಾಗಿದ್ದು, ಆಹಾರ ಮತ್ತು…
ಮುಂದೆ ಓದಿ..
