ಯಲಹಂಕದಲ್ಲಿ ಮಹಿಳಾ ಪೊಲೀಸರಿಗೆ ಬೈಕ್ ಸವಾರನಿಂದ ದೌರ್ಜನ್ಯ – ಒಬ್ಬನ ವಶಕ್ಕೆ ಪಡೆದು ಪ್ರಕರಣ ದಾಖಲು
ಯಲಹಂಕ, ಜುಲೈ 9:2025ಅನಂತಪುರ ಗೇಟ್ ಜಂಕ್ಷನ್ ಬಳಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರನೊಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಗೆ ದೌರ್ಜನ್ಯ ಎಸಗಿ, ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ ಘಟನೆ ಜುಲೈ 7ರಂದು ಬೆಳಗ್ಗೆ ಸಂಭವಿಸಿದೆ. ಘಟನೆ ವೇಳೆ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ, ಹೆಲ್ಮೆಟ್ ಇಲ್ಲದೆ ಹಾಗೂ ಮೊಬೈಲ್ ಬಳಸುತ್ತಾ ಬೈಕ್ ಓಡಿಸುತ್ತಿದ್ದ ಕೆಎ–50–ಇಎಚ್–1912 ಸಂಖ್ಯೆಯ ವಾಹನ ಸವಾರನನ್ನು ತಡೆಯುತ್ತಿದ್ದರು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾದ ಕಾರಣದಿಂದ ಎಫ್‌ಟಿವಿಆರ್ ಆ್ಯಪ್ ಮೂಲಕ ಪ್ರಕರಣ ದಾಖಲಿಸಲಾಗುತ್ತಿತ್ತು. ಆ ವೇಳೆ ಆರೋಪಿಯಾಗಿರುವ ಜೈ. ಬಗಿರಾಜು (27), ಯಲಹಂಕ ನಿವಾಸಿ, ತನ್ನ ಬೈಕ್ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಮಹಿಳಾ ಪೊಲೀಸರಿಂದ ಫೋಟೋ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ದಾಖಲೆ ಮಾಡಲು ಯತ್ನಿಸಿದನು. ಅಧಿಕಾರ ಕೇಳಿದ ವೇಳೆ, ಆತನ ನಡೆ ಕೆರಳಿತು. “ನೀನು ಎಷ್ಟು ಭಾರಿ ನನ್ನ ಮೇಲೆ ಅಧಿಕಾರ ತೋರಿಸುತ್ತೀಯ?…
ಮುಂದೆ ಓದಿ..
