ಸಿನೆಮಾ ಸುದ್ದಿ 

ಡಾ. ಎಸ್. ನಾರಾಯಣ್ ನಿರ್ದೇಶನದ “ಮಾರುತ” ಸಿನಿಮಾ ಬಿಡುಗಡೆಯ ದಿನಾಂಕ ಮುಂದೂಡಿಕೆ – ನವೆಂಬರ್ 21ಕ್ಕೆ ಹೊಸ ದಿನಾಂಕ ನಿಗದಿ!

ಡಾ. ಎಸ್. ನಾರಾಯಣ್ ನಿರ್ದೇಶನದ “ಮಾರುತ” ಸಿನಿಮಾ ಬಿಡುಗಡೆಯ ದಿನಾಂಕ ಮುಂದೂಡಿಕೆ – ನವೆಂಬರ್ 21ಕ್ಕೆ ಹೊಸ ದಿನಾಂಕ ನಿಗದಿ! ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ, ಖ್ಯಾತ ನಿರ್ದೇಶಕ ಡಾ. ಎಸ್. ನಾರಾಯಣ್ ಅವರ ಬಹುನಿರೀಕ್ಷಿತ “ಮಾರುತ” ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಮೂಲತಃ ಅಕ್ಟೋಬರ್ 31ರಂದು ತೆರೆಗೆ ಬರಬೇಕಿದ್ದ ಈ ಚಿತ್ರ ಇದೀಗ ನವೆಂಬರ್ 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕೆ. ಮಂಜು ಮತ್ತು ರಮೇಶ್ ಯಾದವ್ ನಿರ್ಮಿಸಿರುವ ಈಶಾ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಮೂಡಿ ಬಂದಿರುವ “ಮಾರುತ” ಚಿತ್ರ ಈಗಾಗಲೇ ತನ್ನ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರಮಂದಿರಗಳ ಅಭಾವ ಮತ್ತು ಬಿಡುಗಡೆಯ ಹೋರಾಟದ ಹಿನ್ನೆಲೆ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ. “ಮಾರುತ” ಚಿತ್ರವನ್ನು ನಿರ್ದೇಶಿಸಿರುವ ಡಾ. ಎಸ್. ನಾರಾಯಣ್ ಅವರು…

ಮುಂದೆ ಓದಿ..
ಸುದ್ದಿ 

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ – ಮಹಾರಾಷ್ಟ್ರದ ಯುವಕ ಬಂಧನ!

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ – ಮಹಾರಾಷ್ಟ್ರದ ಯುವಕ ಬಂಧನ! ಸರ್ಕಾರಿ ಕಚೇರಿಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ವಿರಾಮ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆ ಇದೀಗ ವಿವಾದದ ಸುಳಿಗಾಳಿಯನ್ನು ಎಬ್ಬಿಸಿದೆ. ಈ ಹೇಳಿಕೆಯ ವಿರುದ್ಧ ಭುಗಿಲೆದ್ದಿದ್ದ ಕೆಲ ಹಿಂದೂಪರ ಸಂಘಟನೆಗಳ ಆಕ್ರೋಶವು ಇದೀಗ ಬೆದರಿಕೆ ಕರೆ ರೂಪದಲ್ಲಿ ಸಚಿವರಿಗೆ ತಲುಪಿತ್ತು. ಬೆದರಿಕೆ ಕರೆ ಮಾಡಿದ ಆರೋಪಿ ಮಹಾರಾಷ್ಟ್ರದ ಸೋಲಾಪುರ ಮೂಲದ ದಾನಪ್ಪ ಅಲಿಯಾಸ್ ದಾನೇಶ್. ಈತ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದನೆ ನಡೆಸಿದ್ದಾನೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ಸಂಬಂಧ, ಸಚಿವರ ಪರವಾಗಿ ಕಾಂಗ್ರೆಸ್ ಮುಖಂಡ ಮನೋಹರ್ ಅವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಬೆಂಗಳೂರು ಮತ್ತು ಕಲಬುರ್ಗಿ ಘಟಕಗಳ ಜಂಟಿ ಕಾರ್ಯಾಚರಣೆಯಡಿ ದಾನೇಶನ್ನು ಮಹಾರಾಷ್ಟ್ರದ ಲಾತೂರ್ ನಗರದಲ್ಲಿ ಬಂಧಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್!

ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್! ಚಿತ್ರದುರ್ಗ ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನೀರಿನ ಕ್ಯಾನ್ಗೆ ಎಣ್ಣೆ (ಮದ್ಯ) ಮಿಕ್ಸ್ ಮಾಡಿ ಕಚೇರಿಗೆ ತಂದಿದ್ದ ಸಿಬ್ಬಂದಿ, ಕಚೇರಿಯಲ್ಲೇ ಕುಡಿಯುತ್ತಾ ಪಾರ್ಟಿ ಮಾಡಿರುವುದು ಕ್ಯಾಮೆರಾಕ್ಕೆ ಸಿಕ್ಕಿದೆ. ಸೋರ್ಸ್‌ಗಳ ಪ್ರಕಾರ, ಸಿಬ್ಬಂದಿಯೋರ್ವ ಕಾರು ಖರೀದಿ ಮಾಡಿದ ಹಿನ್ನೆಲೆಯಲ್ಲಿ ಕಚೇರಿಯಲ್ಲೇ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಕಚೇರಿಯಂತಹ ಸರ್ಕಾರಿ ಸ್ಥಳದಲ್ಲೇ ಎಣ್ಣೆ ಪಾರ್ಟಿ ನಡೆದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡವಳಿಕೆಯನ್ನು ಖಂಡಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಳೆ ಸುರಿಯುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರತಿಕ್ರಿಯಿಸಿ, “ಘಟನೆಯ ವಿಚಾರ ತಿಳಿದು, ಕಾರು ಚಾಲಕ ಸೇರಿ ಐವರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಅಧೀಕ್ಷಕ ಸುನಿಲ್,…

ಮುಂದೆ ಓದಿ..
ವಿಶೇಷ ಸುದ್ದಿ 

ನಿಗೂಢ ಸಾವಿನಿಂದ ಕೊಲೆ ತನಿಖೆಯ ತನಕ..

ನಿಗೂಢ ಸಾವಿನಿಂದ ಕೊಲೆ ತನಿಖೆಯ ತನಕ.. ಮರತ್ತಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಏಪ್ರಿಲ್ 24 ರಂದು ಡಾ. ಕೃತಿಕಾ ರೆಡ್ಡಿ ಅವರ ಸಾವಿನ ಸುದ್ದಿ ವೈದ್ಯಕೀಯ ವಲಯದಲ್ಲಿ ನಡುಕ ಮೂಡಿಸಿತ್ತು. ಆರಂಭದಲ್ಲಿ “ಅಸಹಜ ಸಾವು” (UDR) ಎಂದು ದಾಖಲಿಸಲ್ಪಟ್ಟ ಈ ಪ್ರಕರಣ, ಈಗ ಸಂಪೂರ್ಣ ಕೊಲೆ ತನಿಖೆಯ ರೂಪ ಪಡೆದಿದೆ.ಆದಿಯಲ್ಲಿ ಕುಟುಂಬದವರು ಯಾವುದೇ ಅನುಮಾನ ವ್ಯಕ್ತಪಡಿಸದೆ ಮರಣೋತ್ತರ ಪರೀಕ್ಷೆಗೂ ವಿರೋಧಿಸಿದ್ದರು. ಆದರೆ ಪೊಲೀಸರ ಅನುಮಾನದಿಂದಾಗಿ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲಾಯಿತು — ಇದೇ ತಿರುವು ತನಿಖೆಗೆ ಹೊಸ ದಾರಿ ತೋರಿಸಿತು. ಎಫ್‌ಎಸ್‌ಎಲ್ ವರದಿ:ಪ್ರೊಪೋಫಾಲ್ ಓವರ್‌ಡೋಸ್‌ನ ಪತ್ತೆ…ಮೃತದೇಹದ ಬಳಿ ಪತ್ತೆಯಾದ ವೈದ್ಯಕೀಯ ಉಪಕರಣಗಳು ಮತ್ತು ಇಂಜೆಕ್ಷನ್‌ಗಳನ್ನು SOCO (Scene of Crime Officer) ತಂಡವು ವಶಪಡಿಸಿಕೊಂಡು ಎಫ್‌ಎಸ್‌ಎಲ್ (Forensic Science Laboratory) ಗೆ ಕಳುಹಿಸಿತು.ಫಲಿತಾಂಶಗಳು ಪೊಲೀಸರ ಅನುಮಾನಕ್ಕೆ ತಕ್ಕಂತೆ ಬಂದವು — ಕೃತಿಕಾ ರೆಡ್ಡಿಯವರ ಶರೀರದಲ್ಲಿ ಪ್ರೊಪೋಫಾಲ್…

ಮುಂದೆ ಓದಿ..
ಸುದ್ದಿ 

ವೀರೇಂದ್ರ ಪಪ್ಪಿಗೆ ಹೈಕೋರ್ಟ್‌ನಿಂದ ಭಾಗಶಃ ನೆಮ್ಮದಿ : ಇಡಿ ತನಿಖೆಗೆ ಕಾನೂನಿನ ಮಿತಿ ಸ್ಪಷ್ಟ!

ವೀರೇಂದ್ರ ಪಪ್ಪಿಗೆ ಹೈಕೋರ್ಟ್‌ನಿಂದ ಭಾಗಶಃ ನೆಮ್ಮದಿ : ಇಡಿ ತನಿಖೆಗೆ ಕಾನೂನಿನ ಮಿತಿ ಸ್ಪಷ್ಟ! ಬೆಂಗಳೂರು : ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ವೀರೇಂದ್ರ ಪತ್ನಿ ಆರ್.ಡಿ. ಚೈತ್ರಾ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿದರೂ, ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ನ್ಯಾಯಪೀಠ ಇಡಿ ಕ್ರಮಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಪ್ರಮುಖ ಸ್ಪಷ್ಟತೆ ನೀಡಿದೆ. ಹೈಕೋರ್ಟ್ ತೀರ್ಪಿನಲ್ಲಿ, ಪಿಎಂಎಲ್ ಕಾಯ್ದೆಯ ಅಡಿಯಲ್ಲಿ ತನಿಖೆ ಕೈಗೊಳ್ಳುವ ಸಂದರ್ಭಗಳಲ್ಲಿ ಕಾನೂನಿನ ಗಡಿ ಹಾಗೂ ಪ್ರಕ್ರಿಯೆಯ ಕಡ್ಡಾಯ ಅನುಸರಣೆಯ ಅಗತ್ಯವಿದೆ ಎಂದು ತಿಳಿಸಿದೆ. ಇದು ಮುಂದೆ ನಡೆಯುವ ತನಿಖೆಯಲ್ಲಿ ವೀರೇಂದ್ರ ಪಪ್ಪಿ ಕಾನೂನಾತ್ಮಕ ಹಕ್ಕುಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುವಂತಾಗಿದೆ. ಕನಕಪುರದ ಹಾರೋಹಳ್ಳಿ ಠಾಣೆ ಪ್ರಕರಣ ಆಧಾರವಾಗಿದ್ದರೂ, ಇಡಿ ತನಿಖೆ ಕಾನೂನಿನ ಪ್ರಕ್ರಿಯೆಯಂತೆ ಮುಂದುವರಿಯಬೇಕು ಮತ್ತು ವೈಯಕ್ತಿಕ…

ಮುಂದೆ ಓದಿ..
ಸುದ್ದಿ 

ಕರ್ನಾಟಕದ ಅತೀ ದೊಡ್ಡ ಅಬಕಾರಿ ಹಗರಣ – ನೂರು ಕೋಟಿ ರೂ. ಸಿಎಲ್-7 ಲೈಸೆನ್ಸ್ ವಂಚನೆ!

ಕರ್ನಾಟಕದ ಅತೀ ದೊಡ್ಡ ಅಬಕಾರಿ ಹಗರಣ – ನೂರು ಕೋಟಿ ರೂ. ಸಿಎಲ್-7 ಲೈಸೆನ್ಸ್ ವಂಚನೆ! ಬೆಂಗಳೂರು: ರಾಜ್ಯದ ಅಬಕಾರಿ ಇಲಾಖೆಯಲ್ಲಿ ನೂರು ಕೋಟಿಗೂ ಹೆಚ್ಚು ಮೊತ್ತದ ಸಿಎಲ್-7 ಲೈಸೆನ್ಸ್ ಹಗರಣ ಬಯಲಾಗಿದೆ. ಲೈಸೆನ್ಸ್ ನೀಡುವಲ್ಲಿ ನಡೆದಿರುವ ಭಾರೀ ಅಕ್ರಮಗಳಿಂದ ಈಗ 20ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳು ಜೈಲು ಸೇರುವ ಸಾಧ್ಯತೆ ಇದೆ ಎಂಬ ಸುದ್ದಿಯು ಬಣ್ಣ ಬದಲಿಸಿದೆ. ಕೆ.ಆರ್.ಪುರಂ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಕಲಿ ಬಾರ್ ಮತ್ತು ಲಾಡ್ಜ್ ಲೈಸೆನ್ಸ್‌ಗಳು ಪ್ರಚಲಿತದಲ್ಲಿದ್ದವು ಎಂದು ತಿಳಿದುಬಂದಿದೆ. ಇಲಾಖೆಯ ಕೆಲ ಅಧಿಕಾರಿಗಳೇ ಸಿಎಲ್-2, ಸಿಎಲ್-7 ಹಾಗೂ ಸಿಎಲ್-9 ಲೈಸೆನ್ಸ್‌ಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ನೀಡಿರುವುದು ಬಹಿರಂಗವಾಗಿದೆ. ಲಂಚಕ್ಕಾಗಿ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಬಾರ್, ವೈನ್ ಶಾಪ್ ಹಾಗೂ ಲಾಡ್ಜ್‌ಗಳಿಗೆ ಅಕ್ರಮವಾಗಿ ಪರವಾನಗಿ ನೀಡಲಾಗಿದೆ ಎನ್ನಲಾಗಿದೆ. ದೆಹಲಿಯ ಅಬಕಾರಿ ಹಗರಣವನ್ನು ಮೀರಿಸುವ ಮಟ್ಟದ ಈ ಅಕ್ರಮ ಈಗ…

ಮುಂದೆ ಓದಿ..
ಸುದ್ದಿ 

ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ: ವಿಕ್ಟೋರಿಯಾ ಆಸ್ಪತ್ರೆ ಜನರಲ್ ಸರ್ಜನ್ ಆರೋಪಿ 6 ತಿಂಗಳ ಬಳಿಕ ಅರೆಸ್ಟ್

ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ: ವಿಕ್ಟೋರಿಯಾ ಆಸ್ಪತ್ರೆ ಜನರಲ್ ಸರ್ಜನ್ ಆರೋಪಿ 6 ತಿಂಗಳ ಬಳಿಕ ಅರೆಸ್ಟ್ ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ್ದ ಘಟನೆ 6 ತಿಂಗಳ ಬಳಿಕ ಎಫ್ಎಸ್ಎಲ್ ವರದಿ ಮೂಲಕ ಬಹಿರಂಗವಾಗಿದೆ. ಬೆಂಗಳೂರಿನಿಂದ ಮಣಿಪಾಲಕ್ಕೆ ತೆರಳಿದ್ದ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ. ಮಾಹಿತಿಯ ಪ್ರಕಾರ, ಡಾ. ಮಹೇಂದ್ರ ಮತ್ತು ಡಾ. ಕೃತಿಕಾ ರೆಡ್ಡಿ ಇಬ್ಬರೂ 2024ರ ಮೇ 26ರಂದು ಕುಟುಂಬ ಒಪ್ಪಂದದ ಮೂಲಕ ಮದುವೆಯಾಗಿದ್ದರು. ಡಾ. ಕೃತಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡೆರ್ಮೆಟಾಲಜಿಸ್ಟ್ ಆಗಿದ್ದರೆ, ಡಾ. ಮಹೇಂದ್ರ ಜನರಲ್ ಸರ್ಜನ್ ಆಗಿದ್ದರು. ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಲೋ ಶುಗರ್ ಸಮಸ್ಯೆಗಳಿದ್ದವು. ಆದರೆ ಕುಟುಂಬಸ್ಥರು ಈ ಅಸೌಖ್ಯವನ್ನು ಗಮನಿಸದೆ ಮದುವೆ ಮಾಡಿದ್ದಾರೆಂಬುದು ಆರೋಪವಾಗಿದೆ.…

ಮುಂದೆ ಓದಿ..
ಅಂಕಣ 

ಅನ್ನ ದೇವರ ಮುಂದೆಅನ್ಯ ದೇವರು ಉಂಟೆ,ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ…

” ಅನ್ನ ದೇವರ ಮುಂದೆಅನ್ಯ ದೇವರು ಉಂಟೆ,ಅನ್ನವಿರುವತನಕ ಪ್ರಾಣವು,ಜಗದೊಳಗನ್ನವೇ ದೈವ ಸರ್ವಜ್ಞ…….” ವಿಶ್ವ ಆಹಾರ ದಿನದ ಸಂದರ್ಭದಲ್ಲಿ…..ಅಕ್ಟೋಬರ್ 16….. ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ” ವಿಶ್ವ ಆಹಾರ ದಿನ ” ಆಚರಿಸಲಾಗುತ್ತಿದೆ. ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನ ಬೆಂಗಳೂರು ಮತ್ತು ಕೊಡಗಿನ ಶ್ರೀ ಎಂ. ಯುವರಾಜ್ ಮತ್ತು ಶ್ರೀ ಮೋಹನ್ ಕುಮಾರ್ ಅವರ ಸುಮಾರು ಹದಿನೈದು ವರ್ಷಗಳ ಸತತ ಪರಿಶ್ರಮದಿಂದ ಅಧಿಕೃತವಾಗಿ ಇನ್ನು ಮುಂದೆ ಪ್ರತಿವರ್ಷ ವಿಶ್ವ ಆಹಾರ ದಿನವನ್ನು ಸರ್ಕಾರ ಮಟ್ಟದಲ್ಲಿ ಆಚರಿಸಲಾಗುತ್ತದೆ ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅದಕ್ಕಾಗಿ ನಮಗೂ ಹೆಮ್ಮೆ ಇದೆ. ಈ ನಿಟ್ಟಿನಲ್ಲಿ ಇಂದು ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಆ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ನಾವು ಸಲ್ಲಿಸುತ್ತಿರುವ ಮನವಿ…

ಮುಂದೆ ಓದಿ..
ಸುದ್ದಿ 

ರಾಜ್ಯಾದ್ಯಂತ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!

ರಾಜ್ಯಾದ್ಯಂತ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ! ರಾಜ್ಯದಾದ್ಯಂತ ಭ್ರಷ್ಟಾಚಾರಕ್ಕೆ ವಿರುದ್ಧವಾಗಿ ಲೋಕಾಯುಕ್ತದ ಭಾರಿ ಆಪರೇಷನ್! ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ, ಬೀದರ್, ಉತ್ತರ ಕನ್ನಡ ಮತ್ತು ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಶೋಧ ಕಾರ್ಯ ನಡೆದಿದೆ. ಬೆಂಗಳೂರು ನಗರದಲ್ಲಿ ಮೂರು ಕಡೆ ದಾಳಿ ಬೆಂಗಳೂರು ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ 6 ಗಂಟೆಗೆ ಮೂವರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಮೆಡಿಕಲ್ ಅಧಿಕಾರಿ ಮಂಜುನಾಥ್, ಜಿ.ವಿ. ಪಿಯು ಬೋರ್ಡ್ ನಿರ್ದೇಶಕಿ ಸುಮಂಗಳ, ಸರ್ವೇಯರ್ ಅಧಿಕಾರಿ ಗಂಗಾ ಮರೀಗೌಡ ಇವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತದ ನಾಲ್ಕು ತಂಡಗಳು ಶೋಧ…

ಮುಂದೆ ಓದಿ..
ಸುದ್ದಿ 

ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಎಟಿಎಂ ಕಳ್ಳತನ ಪ್ರಕರಣವು ಸಾಮಾಜಿಕ ವಲಯದಲ್ಲೂ ಚರ್ಚೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಎಟಿಎಂ ಕಳ್ಳತನ ಪ್ರಕರಣವು ಸಾಮಾಜಿಕ ವಲಯದಲ್ಲೂ ಚರ್ಚೆಯಾಗಿದೆ. ಜನರು ಪೊಲೀಸರ ತ್ವರಿತ ಕ್ರಮವನ್ನು ಶ್ಲಾಘಿಸಿದ್ದಾರೆ. ಹೊಸದುರ್ಗ ಪಟ್ಟಣದ ಜನರು ಎಚ್ಚರಿಕೆಯಿಂದ ವರ್ತಿಸಿ ಸಮಯಕ್ಕೆ ಸರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿರುವುದು ಪ್ರಮುಖ ಪಾತ್ರ ವಹಿಸಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತ ತೇಜುಕುಮಾರ್ ಅಂತರರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಳ್ಳತನ ಚಟುವಟಿಕೆಯ ಪ್ರಮುಖ ಸದಸ್ಯನಾಗಿದ್ದು, ಕರ್ನಾಟಕ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿಯೂ ಎಟಿಎಂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನಿಂದ ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ಮುಂದುವರಿದಿದೆ. ನಾಗರಿಕರು ತಮ್ಮ ಸುತ್ತಮುತ್ತ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಬ್ಯಾಂಕ್ ಎಟಿಎಂ ಕೇಂದ್ರಗಳಲ್ಲಿ ಹೆಚ್ಚುವರಿ ಸಿಸಿಟಿವಿ ನಿಗಾ ಹಾಗೂ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕದ ಅಗತ್ಯವಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೊಲೀಸರ ಧೈರ್ಯ, ತ್ವರಿತ ಕ್ರಮ ಮತ್ತು…

ಮುಂದೆ ಓದಿ..