ಕಾಂಗ್ರೆಸ್ ಸರ್ಕಾರದಲ್ಲೂ ‘ಕಮಿಷನ್ ರಾಜ’ ಮುಂದುವರಿಕೆ? ಗುತ್ತಿಗೆದಾರರಿಂದ ಭಾರೀ ಆರೋಪ
ಕಾಂಗ್ರೆಸ್ ಸರ್ಕಾರದಲ್ಲೂ ‘ಕಮಿಷನ್ ರಾಜ’ ಮುಂದುವರಿಕೆ? ಗುತ್ತಿಗೆದಾರರಿಂದ ಭಾರೀ ಆರೋಪ ಕಳೆದ ಬಾರಿಯ ಬಿಜೆಪಿ ಸರ್ಕಾರದ ಕಾಲದಲ್ಲಿ ನಡೆದಿದ್ದ “ಶೇ. 40 ಕಮಿಷನ್” ವಿವಾದ ಇದೀಗ ಮತ್ತೆ ಜೀವಂತವಾಗಿದೆ. ಆದರೆ ಈ ಬಾರಿ ಗುರಿ ಕಾಂಗ್ರೆಸ್ ಸರ್ಕಾರ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಗುತ್ತಿಗೆದಾರರು ಮತ್ತೆ ಗಂಭೀರ ಆರೋಪ ಮಾಡಿದ್ದಾರೆ — ಸರ್ಕಾರದ ವಸತಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿಗಳ ಅನುಮೋದನೆ, ಬಿಲ್ ರಿಲೀಸ್ ಹಾಗೂ ತಾಂತ್ರಿಕ ಅನುಮತಿ ಪಡೆಯಲು ಅಧಿಕಾರಿಗಳು ಶೇ.40 ರಷ್ಟು ಕಮಿಷನ್ ಬೇಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಮಂಜುನಾಥ್ ಅವರು ವಸತಿ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಸ್ಲಂ ಬೋರ್ಡ್‌ನ ಟೆಕ್ನಿಕಲ್ ಅಡ್ವೈಸರ್ ಬಾಲರಾಜ್ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿತು.ಆದರೆ ಆ ಆರೋಪಗಳು…
ಮುಂದೆ ಓದಿ..
