ನಿಮಿಷಾ ಪ್ರಿಯ……. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು
ನಿಮಿಷಾ ಪ್ರಿಯ……. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು,ಮದುವೆಗೋ ಮಸಣಕೋ, ಹೋಗೆಂದ ಕಡೆಗೋಡು, ಪದ ಕುಸಿಯೇ ನೆಲವಿಹುದು ಮಂಕು ತಿಮ್ಮ,……. ಡಿವಿಜಿ.ದೂರದ ಯೆಮೆನ್ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹೋದ ಕೇರಳದ ಪಾಲಕ್ಕಾಡಿನ ನಿಮಿಷಾ ಪ್ರಿಯ ಎಂಬ ದಾದಿ, ಬದುಕಿನ ಆಕಸ್ಮಿಕ ಹೊಡೆತಕ್ಕೆ ಸಿಲುಕಿ ಕೊಲೆ ಆರೋಪದ ಅಪರಾಧ ಸಾಬೀತಾಗಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿ, ಸಾವು ಬದುಕಿನ ನಡುವೆ ದಿನಗಳನ್ನು ದೂಡುತ್ತಾ ಯಾವುದೇ ಕ್ಷಣದಲ್ಲಿ ನೇಣುಗಂಬಕ್ಕೇರುವ ಅಥವಾ ಬಿಡುಗಡೆಯಾಗಿ ಹೊಸ ಬದುಕಿನೊಂದಿಗೆ ತನ್ನ ಹುಟ್ಟೂರಿಗೆ ಬರುವ ಅತ್ಯಂತ ತೆಳುವಾದ ಗೆರೆಯ ಮಧ್ಯೆ ನಿಂತಿದ್ದಾಳೆ. ಕೆಲವು ವಿಷಯಗಳೇ ಹಾಗೆ. ಇದ್ದಕ್ಕಿದ್ದಂತೆ ತುಂಬಾ ಪ್ರಚಾರಕ್ಕೆ ಬಂದು ಬಿಡುತ್ತವೆ. ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಿದ್ದರೂ ಕೆಲವೊಂದು ಘಟನೆಗಳು ಮಾತ್ರ ವಿಶೇಷ ಮಹತ್ವವನ್ನು ಪಡೆಯುತ್ತವೆ. ಉದಾಹರಣೆಗೆ ದೆಹಲಿಯಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ನಡೆದಿದ್ದರು ಜ್ಯೋತಿಸಿಂಗ್ ಎಂಬ ನಿರ್ಭಯ…
ಮುಂದೆ ಓದಿ..
