ಅಂಕಣ 

ಓದು ಮತ್ತು ಮಾನವೀಯ ಪ್ರಜ್ಞೆ…..ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ?…..

ಓದು ಮತ್ತು ಮಾನವೀಯ ಪ್ರಜ್ಞೆ….. ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ?….. ಈ ರೀತಿಯ ಅನುಮಾನ ಬಲವಾಗುತ್ತಿದೆ.ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ.ತುಂಬಿದ ಕೊಡ ತುಳುಕಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಅದು ನಮ್ಮಲ್ಲಿ ಜೀವಪರ ನಿಲುವನ್ನೂ, ವಿನಯವನ್ನು, ಪ್ರಬುದ್ದತೆಯನ್ನು, ತಾಳ್ಮೆಯನ್ನು ಮತ್ತು ಒಟ್ಟಾರೆ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತದೆ…… ಆದರೆ,ಅದೇ ಓದು ಬಹಳಷ್ಟು ಜನರಲ್ಲಿ ಅಹಂಕಾರವನ್ನು,ಸಣ್ಣ ಮನಸ್ಸನ್ನು, ಅಸೂಯಾಪರ ಗುಣವನ್ನು, ಕ್ಷುಲ್ಲಕ ವ್ಯಕ್ತಿತ್ವವನ್ನು ರೂಪಿಸುವ ಸಾಧ್ಯತೆ ಇದೆ.ನಾನು ಎಲ್ಲರಿಗಿಂತ ಹೆಚ್ಚು ಓದಿದ್ದೇನೆ‌‌. ಎಲ್ಲಾ ಶ್ಲೋಕಗಳು, ಅಧ್ಯಾಯಗಳು, ಮಂತ್ರಗಳು, ಕಾಲಂಗಳು ನನಗೆ ನೆನಪಿದೆ, ನಾನು ಅದನ್ನು ಅತ್ಯಂತ ಸಮರ್ಥವಾಗಿ ನೆನಪಿಟ್ಟು ವಾದಿಸಬಲ್ಲೆ, ನನ್ನ ಸಹವರ್ತಿಗಳಿಗೆ ಆ ಮಟ್ಟದ ನೆನಪು ಮತ್ತು ಜ್ಞಾನ ಇಲ್ಲ, ಅವರ ವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಸಹಜ…

ಮುಂದೆ ಓದಿ..
ಅಂಕಣ 

ಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ………

ಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ……… ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು…………… ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬಿಡುತ್ತಾರೆ. ಅದು ಎಷ್ಟು ಆಳವಾಗಿ ಇರುತ್ತದೆಯೆಂದರೆ ಎಷ್ಟೋ ಮುಗ್ಧ ಮನಸ್ಸುಗಳು ಅಲ್ಲಿಂದ ಹೊರ ಬರುವ ದಾರಿಯನ್ನೇ ಗುರುತಿಸಲು ವಿಫಲರಾಗುತ್ತಾರೆ. ಒಂದು ವೇಳೆ ಪ್ರೀತಿಯ ಆಳದಲ್ಲಿ ಅವರಿಗೆ ಒಂದಷ್ಟು ಕಷ್ಟ, ಬೇಸರ, ಜಗಳ, ಅಸಮಾಧಾನ, ನಿರಾಸೆಯ ಅನುಭವವಾದರು ಪ್ರೀತಿ ಎಂಬ ಭಾವ ತೀವ್ರತೆ ಅದನ್ನೆಲ್ಲಾ ಹೇಗೋ ಸಹಿಸಿಕೊಳ್ಳುತ್ತದೆ. ಕೊನೆಗೆ ತೀರಾ ಹೊಂದಾಣಿಕೆ ಸಾಧ್ಯವಾಗದಿದ್ದರೆ ಮುಂದೆ ಬಿಡುಗಡೆ ಹೊಂದಬಹುದು ಅಥವಾ ಅದು ಕೋಪವಾಗಿ ಪರಿವರ್ತನೆ ಹೊಂದಿ ಬೇರೆ ಬೇರೆಯಾಗಬಹುದು. ಇದೊಂದು ಸಹಜ ಪ್ರಕ್ರಿಯೆ.ಆದರೆ ಪ್ರೀತಿಯಲ್ಲಿ ಇದನ್ನು ಮೀರಿದ ಈ ಎರಡು ಘಟನೆಗಳು ಪ್ರೀತಿಸುವ ಜೀವಗಳನ್ನು ವಯಸ್ಸು, ಲಿಂಗದ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಎಂ.ಡಿ.ಎಂ.ಎ ಮಾರಾಟ – ಇಬ್ಬರು ವಿದೇಶಿಯರ ವಿರುದ್ಧ ಎನ್‌ಡಿಪಿಎಸ್ ಕೇಸು ದಾಖಲು

ಬೆಂಗಳೂರು, ಜುಲೈ 12 :2025 ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಅಕ್ರಮ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ವಿದೇಶಿಯರನ್ನು ಬಂಧಿಸಿದ್ದಾರೆ.‌ ದಿನಾಂಕ 10/07/2025 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು, ಯಲಹಂಕದ ವಿದ್ಯಾರಣ್ಯಪುರ ಹತ್ತಿರದ ಒಂದು ಮನೆಯಲ್ಲಿರುವ ಇಬ್ಬರು ವಿದೇಶೀಯರು – 1) ಅಡ್ಮಾಕೋ ಬ್ರೈಟ್ ಮತ್ತು 2) ಎಂಕೆಟಾಯಿ ಕೊಫಿ ಎಂಬವರು ತಮ್ಮ ವಸತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮೆಥಾಂಫೆಟಮಿನ್/ಎಂ.ಡಿ.ಎಂ.ಎ ಅನ್ನು ಸಂಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದಾಗಿ ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಮಾದಕ ವಸ್ತುಗಳು ಅಕ್ರಮವಾಗಿ ಸಿಕ್ಕಿದ್ದು, ಆರೋಪಿಗಳು ಎನ್‌ಡಿಪಿಎಸ್ ಆಕ್ಟ್ 1985 ಪ್ರಕಾರ…

ಮುಂದೆ ಓದಿ..
ಸುದ್ದಿ 

ಸೈಟ್ ಹೆಸರಿನಲ್ಲಿ ₹33.25 ಲಕ್ಷ ವಂಚನೆ ಜೀವ ಬೆದರಿಕೆ ನೀಡಿದ ವ್ಯಕ್ತಿಗೆ ವಿರುದ್ಧ ಎಫ್‌ಐಆರ್

ಬೆಂಗಳೂರು, ಜುಲೈ 12:2025 ನಗರದ ನಿವಾಸಿ ಯುವತಿಗೆ ಸೈಟ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿ, ನಂತರ ಜೀವ ಬೆದರಿಕೆ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಮಾರನಹಳ್ಳಿ ಗ್ರಾಮದ ರವಿಕುಮಾರ್ ಎಸ್.ವಿ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಜನಿ ಡಿ ಕೆ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಅಪ್ಪ-ಅಮ್ಮನೊಂದಿಗೆ ವಾಸವಾಗಿದ್ದು, ಸುಮಾರು 5 ವರ್ಷಗಳಿಂದ ರವಿಕುಮಾರ್ ಎಸ್.ವಿ ಎಂಬ ವ್ಯಕ್ತಿಯ ಪರಿಚಯದಲ್ಲಿದ್ದರು. ಈತನು ಅವರ ಅಣ್ಣ ಹರೀಶಕುಮಾರ್ ಅವರ ಸ್ನೇಹಿತನಾಗಿದ್ದರಿಂದ ಆಗಾಗ ಅವರ ಮನೆಯಲ್ಲಿ ಬರುತ್ತಿದ್ದನು. ರಜನಿ ಡಿ ಕೆ ಅವರ ಕುಟುಂಬವು ಎರಡು ವರ್ಷಗಳ ಹಿಂದೆ ದೊಡ್ಡ ಜಾಲ ಗ್ರಾಮದ ಜಮೀನನ್ನು ಮಾರಾಟ ಮಾಡಿ ₹50 ಲಕ್ಷ ಹಣ ಪಡೆದಿತ್ತು. ಈ ಹಣದಿಂದ ಅವರು ಸೈಟ್ ಖರೀದಿಸಲು ಇಚ್ಛಿಸಿದರು. ಈ ಸಂದರ್ಭದಲ್ಲಿ ರವಿಕುಮಾರ್ ಎಸ್.ವಿ “ನಾನು ನಿಮಗೆ ಉತ್ತಮ…

ಮುಂದೆ ಓದಿ..
ಸುದ್ದಿ 

ದೇವಾಲಯದ ಹುಂಡಿಯಿಂದ ಹಣ ಕಳವು – ಅರ್ಚಕರಿಂದ ಚಿಕ್ಕಜಾಲ ಪೊಲೀಸ್ ದೂರು

ಬೆಂಗಳೂರು ಜುಲೈ 12 –2025ಸೋಣ್ಣಪ್ಪನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಘಟನೆ ದಾಖಲಾಗಿದೆ. ಸುಮಾರು 22 ವರ್ಷಗಳಿಂದ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯೊಬ್ಬರು, ಜುಲೈ 7ರಂದು ನೆಲಗುಳಿ ಗ್ರಾಮದ ವಾರ್ಷಿಕ ಜಾತ್ರೆಗೆ ಪೂಜಾರ್ಥ ತೆರಳಿದ್ದರು. ಅವರು ಇರುವಾಗ, ಅವರ ಸಹೋದರರು ದೇವಸ್ಥಾನದಲ್ಲಿ ಸಂಜೆ ಪೂಜೆಯನ್ನು ನೆರವೇರಿಸಿ, ರಾತ್ರಿ 8:30ಕ್ಕೆ ಬಾಗಿಲು ಹಾಕಿ ಮನೆಗೆ ಹಿಂದಿರುಗಿದ್ದರು. ಆದರೆ ಜುಲೈ 8ರಂದು ಬೆಳಿಗ್ಗೆ 6:30ಕ್ಕೆ ಅರ್ಚಕರು ದೇವಾಲಯಕ್ಕೆ ಬಂದು ಬಾಗಿಲು ತೆರೆಯುತ್ತಲೇ ಹುಂಡಿಯ ಹಣ ಕಳ್ಳತನಗೊಂಡಿರುವುದು ಬೆಳಕಿಗೆ ಬಂದಿದೆ. ಅವರು ಕೂಡಲೇ ದೇವಸ್ಥಾನ ಸಮಿತಿಗೆ ವಿಷಯವನ್ನು ತಿಳಿಸಿದ್ದು, ಕಳುವಾದ ಹಣದ ಅಂದಾಜು ಮೌಲ್ಯ ₹2500 ಆಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಅರ್ಚಕರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ…

ಮುಂದೆ ಓದಿ..
ಸುದ್ದಿ 

ಕೆಲಸದ ಹೆಸರಿನಲ್ಲಿ ಮನೆ ಬಿಟ್ಟು ಹೋದ ಮಹಿಳೆ ಕಾಣೆಯಾಗಿದ್ದಾಳೆ

ಬೆಂಗಳೂರು, ಜುಲೈ 12:2025 ನಗರದ ಯಲಹಂಕ ಪ್ರದೇಶದಲ್ಲಿ 48 ವರ್ಷದ ಮಹಿಳೆಯೊಬ್ಬರು ಕೆಲಸಕ್ಕೆಂದು ಹೊರಟು ಮನೆಗೆ ಮರಳದೆ ಕಾಣೆಯಾಗಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಹಿಳೆಯ ಪುತ್ರಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಗೆ ಸೇರಿದ ಗಾಯತ್ರಿ ಎಂಬವರು ಕಳೆದ 13 ವರ್ಷಗಳಿಂದ ತಮ್ಮ ಪತಿ, ಪುತ್ರ ಹಾಗೂ ಕುಟುಂಬದೊಂದಿಗೆ ಯಲಹಂಕದ ಬಾಡಿಗೆ ಮನೆಯಲ್ಲಿ ವಾಸವಾಗುತ್ತಿದ್ದರು. ದಿನಾಂಕ 22-06-2025 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟ ಅವರು ಇನ್ನೂ ಮನೆಗೆ ಮರಳಿಲ್ಲ. ಕಾಣೆಯಾದ ಮಹಿಳೆ ಮದ್ಯಪಾನಕ್ಕೆ ದಾಸಳಾಗಿರುತ್ತಾಳೆ ಮತ್ತು ಆಗಾಗ್ಗೆ ಮನೆಯಿಂದ ಹೊರಹೋಗುವ ಅಭ್ಯಾಸವಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಾರಿ ಅವರು ವಾಪಸಾಗದೆ ಇರುವುದರಿಂದ ಸಂಬಂಧಿಕರು ಹಾಗೂ ಕೆಲಸದ ಸ್ಥಳಗಳಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರಿಂದ ತೀವ್ರ ಆತಂಕಗೊಂಡ ಕುಟುಂಬದವರು, 08-07-2025 ರಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಜಮೀನಿನಲ್ಲಿ ಅತಿಕ್ರಮ: ಬೀಗ ಮುರಿದು ಒಳಪ್ರವೇಶ – ಎರಡು ಲಕ್ಷ ನಷ್ಟ

ಬೆಂಗಳೂರು, ಜುಲೈ 12: 2025 ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿನಲ್ಲಿ ಅಕ್ರಮ ಪ್ರವೇಶ ಹಾಗೂ ಹಾನಿ ನಡೆದಿದೆ ಎಂಬ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯ್ ಕುಮಾರ್ ಪಿ ಎಂ ಅವರ ಹೇಳಿಕೆಯಂತೆ, ಅವರ ತಾಯಿಯವರಾದ ಲಕ್ಷ್ಮಮ್ಮ ಅವರು 1968ರಲ್ಲಿ ಅಮೃತಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂ 106/7 ರಲ್ಲಿ 14 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನಿನಲ್ಲಿ ಒಂದು ಭಾಗವನ್ನು ಶಾಲೆ ನಿರ್ಮಾಣಕ್ಕಾಗಿ ಲೀಸ್‌ಗೆ ನೀಡಲಾಗಿದ್ದು, ಉಳಿದ ಜಮೀನು ಕುಟುಂಬದ ಸದಸ್ಯರ ಸ್ವಾಧೀನದಲ್ಲಿದೆ. 09 ಜುಲೈ 2025 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಚಕ್ರಪಾಣಿ ಎಂಬವರು ಜೇಸಿಬಿ ಯಂತ್ರದ ಸಹಿತ ಸ್ಥಳಕ್ಕೆ ಆಗಮಿಸಿ, ಯಾವುದೇ ಪರವಾನಿಗೆಯಿಲ್ಲದೇ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು, ಗೋಡೆಗಳನ್ನು ಧ್ವಂಸಗೊಳಿಸಿದಂತೆ ವರದಿಯಾಗಿದೆ. ಈ ಘಟನೆದಿಂದ ದೂರುದಾರರಿಗೆ ₹2 ಲಕ್ಷದಷ್ಟಿನ ಆಸ್ತಿ ಹಾನಿಯು ಸಂಭವಿಸಿದ್ದು,…

ಮುಂದೆ ಓದಿ..
ಸುದ್ದಿ 

ಅಭಿಯುಕ್ತನನ್ನು ಬಂಧಿಸಿದ ಪೊಲೀಸ್ ಇಲಾಖೆ – ನ್ಯಾಯಾಲಯದ ಶರತ್ತು ಉಲ್ಲಂಘಿಸಿದ್ದಕ್ಕಾಗಿ ವಾರೆಂಟ್ ಜಾರಿಗೆ ಕ್ರಮ

ಬೆಂಗಳೂರು, ಜುಲೈ 12:2025 ಅಮೃತಹಳ್ಳಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಅವರು ವಾರೆಂಟ್ ಕರ್ತವ್ಯದಲ್ಲಿ ತೊಡಗಿದ್ದ ಸಂದರ್ಭ, ನ್ಯಾಯಾಲಯದ ಶರತ್ತುಗಳನ್ನು ಉಲ್ಲಂಘಿಸಿ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಭಿಷೇಕ್ ಎಂಬ ಆರೋಪಿಯನ್ನು ಅಮೃತಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೂರು ವರ್ಷ ಹಳೆಯದಾದ ಪ್ರಕರಣ ಸಂಖ್ಯೆ 217/2023 (ಸೆಕ್ಷನ್ 323, 324, 341, 504, 506 ರ along with 34 IPC) ನಿಂದ ಪ್ರತ್ಯಕ್ಷವಾಗಿ ಹೊರಬಂದಿರುವ ಈ ಆರೋಪಿಯು, ಹಿಂದೆ ನ್ಯಾಯಾಲಯದಿಂದ ಶರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದನು. ಆದರೆ, ನಂತರ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಈ ಕಾರಣದಿಂದಾಗಿ ನ್ಯಾಯಾಲಯವು ಆತನ ವಿರುದ್ಧ ವಾರೆಂಟ್ ಜಾರಿಗೆ ಒಪ್ಪಿಗೆ ನೀಡಿತ್ತು. ಜುಲೈ 9ರಂದು ಬೆಳಿಗ್ಗೆ 6:30ಕ್ಕೆ, ಪ್ರಕರಣದ ಪ್ರಕಾರ ಮುಖ್ಯ ಪೇದೆ ಹಾಗೂ ಹೆಡ್ ಕಾನ್ಸ್‌ಟೇಬಲ್ ರವಿ ಲಮಾಣಿ ಅವರನ್ನು ಕರ್ತವ್ಯಕ್ಕೆ ನೇಮಕಗೊಳಿಸಲಾಗಿತ್ತು. ಬಾತ್ಮಿದಾರರಿಂದ ದೊರಕಿದ ಖಚಿತ ಮಾಹಿತಿ ಆಧರಿಸಿ, ಬೆಳಗ್ಗೆ…

ಮುಂದೆ ಓದಿ..
ಸುದ್ದಿ 

ಚಿಗುರು ಆಸ್ಪತ್ರೆಯಲ್ಲಿ ನಸುಕಿನಲ್ಲಿ ನಗದು ಕಳ್ಳತನ – ಸಿಸಿ ಟಿವಿಯಲ್ಲಿ ಸೆರೆ ಸಿಕ್ಕ ದುಷ್ಕರ್ಮಿ

ದಿನಾಂಕ: ಜುಲೈ 12, 2025ಸ್ಥಳ: ಚಿಗುರು ಆಸ್ಪತ್ರೆ, ಬೆಂಗಳೂರು ನಗರದ ಚಿಗುರು ಆಸ್ಪತ್ರೆಯಲ್ಲಿ ಜುಲೈ 9 ರಂದು ನಸುಕಿನ ಜಾವ ಸುಮಾರು 3:25 ಗಂಟೆ ಸಮಯದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬರು ರಿಸೆಪ್ಷನ್ ಕೌಂಟರ್‌ನ ಬೀಗ ಮುರಿದು ರೂ. 83,400 ನಗದು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ವ್ಯವಸ್ಥಾಪಕ ಸದಸ್ಯರೊಬ್ಬರು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ ಬಂದಾಗ ಕೌಂಟರ್‌ನ ಬೀಗ ಮುರಿದಿರುವುದನ್ನು ಗಮನಿಸಿದ ಅವರು ತಕ್ಷಣವೇ ಸುತ್ತಮುತ್ತ ನೋಡಿದರೂ ಯಾರನ್ನೂ ಕಾಣಲಾಗಲಿಲ್ಲ. ಬಳಿಕ ಸೆಕ್ಯುರಿಟಿ ಸಿಬ್ಬಂದಿಯನ್ನು ವಿಚಾರಿಸಿದರೂ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನು ತಲೆಗೆ ಟೋಪಿ ಧರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿ, ರಿಸೆಪ್ಷನ್ ಕೌಂಟರ್‌ನ ಬೀಗ ಮುರಿದು ನಗದು ಹಣವನ್ನು ಕದ್ದೊಯ್ದಿರುವುದು ದೃಢಪಟ್ಟಿದೆ. ಆಸ್ಪತ್ರೆಯ ನಿರ್ವಹಣಾ ಮಂಡಳಿ ಸದಸ್ಯರು ಚರ್ಚಿಸಿ, ಈ ರಾಜನಕುಂಟೆ…

ಮುಂದೆ ಓದಿ..