ಸುದ್ದಿ 

ಮದುವೆಯಾಗಿ ಬಿಡುತ್ತೇನೆ” ಎಂಬ ಭರವಸೆಯಿಂದ ದೈಹಿಕ ಶೋಷಣೆ – ಮಹಿಳೆ ಕಾನೂನು ಸಹಾಯಕ್ಕೆ

ಬೆಂಗಳೂರು, ಜುಲೈ 14:2025 ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬನು ಮದುವೆಯಾಗುತ್ತೇನೆ ಎಂಬ ಸುಳ್ಳು ಭರವಸೆಯೊಂದಿಗೆ ಮಹಿಳೆಯನ್ನು ದೈಹಿಕವಾಗಿ ಬಳಸಿಕೊಂಡು, ಬಳಿಕ ತಿರಸ್ಕರಿಸಿದ ಘಟನೆ ನಡೆದಿದೆ. ಯುವತಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾರೆ. ರಾಧಿಕಾ ಎಂಬುವವರು, ತಿರುಪತಿಯಲ್ಲಿ ವಾಸವಿದ್ದ ಸಮಯದಲ್ಲಿ ಫೇಸ್‌ಬುಕ್‌ನಲ್ಲಿ ಸುರೇಶ್ ಎಂ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿದ್ದು, ನಂತರದ ದಿನಗಳಲ್ಲಿ ಆತನು ತಿರುಪತಿಗೆ ಬಂದು ರಾಧಿಕಾಳ ಪೋಷಕರಿಗೆ ಮದುವೆಯ ಭರವಸೆ ನೀಡಿದ. ಮಾರ್ಚ್ 3, 2024 ರಂದು ರಾಧಿಕಾಳನ್ನು ಬೆಂಗಳೂರಿನ ಜಕ್ಕೂರು ತಲಕಾವೇರಿ ಲೇಔಟ್‌ಗೆ ಕರೆದುಕೊಂಡು ಹೋಗಿ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಮಾಡಿಕೊಂಡಿದ್ದಾನೆ. ಆ ಸಮಯದಲ್ಲಿ ಆತನು “ನಾನು ಮದುವೆಯಾಗುತ್ತೇನೆ” ಎಂದು ಪುನಃಪುನಃ ಭರವಸೆ ನೀಡುತ್ತಾ ದೈಹಿಕವಾಗಿ ಶೋಷಿಸಿದ್ದಾನೆ. ಆದರೆ, ಕೆಲ ತಿಂಗಳುಗಳ ನಂತರ ಆತನು ತನ್ನ ವಿವಾಹಿತನಾಗಿದ್ದು, ಮಕ್ಕಳೂ ಇದ್ದಾರೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾನೆ. ಜುಲೈ…

ಮುಂದೆ ಓದಿ..
ಸುದ್ದಿ 

ಫ್ಲೈಓವರ್‌ನಲ್ಲಿ ಅಪಘಾತ – ಬೈಕ್ ಸವಾರ ಗಂಭೀರ ಗಾಯ

ಬೆಂಗಳೂರು, ಜುಲೈ 14:2025 ರಾಜಾನುಕುಂಟೆ ಫ್ಲೈಓವರ್ ಮೇಲೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜುಲೈ 11ರಂದು ಸಂಜೆ ನಡೆದಿದೆ. ಮಂಜುನಾಥ ಗೌಡ ಅವರು ತಮ್ಮ ಬಾಬು ಅವರ KA50L1921 ಸಂಖ್ಯೆಯ ಸೆಂಡರ್ ಪ್ಲಸ್ ಮೋಟಾರ್ ಸೈಕಲ್‌ನಲ್ಲಿ ಹೆಸರಘಟ್ಟ ಕಡೆಗೆ ತೆರಳುತ್ತಿದ್ದಾಗ, ರಾಜಾನುಕುಂಟೆಯಿಂದ ಗಾನಹಳ್ಳಿಯ ದಿಕ್ಕಿಗೆ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದ KA41MA4855 ನಂಬರ್‌ನ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಿಂದಾಗಿ ಮಂಜುನಾಥ ಗೌಡ ಅವರಿಗೆ ತಲೆ, ಬಲಗಾಲು ಮತ್ತು ಪಾದದ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ರಾಜನಕುಂಟೆ ಬಳಿಯ ಚಿಗುರು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ವಿರುದ್ಧ BNS ಸೆಕ್ಷನ್ 281 ಮತ್ತು 125(A) ಪ್ರಕಾರ 203/2025ರಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.…

ಮುಂದೆ ಓದಿ..
ಸುದ್ದಿ 

ಟವರ್‌ನಿಂದ ಕೇಬಲ್ ಕತ್ತರಿಸಿ ಕಳ್ಳತನ – Airtel BTS ನಿಂದ ₹25,000 ಮೌಲ್ಯದ ತಂತಿ ಕಳವು

ಬೆಂಗಳೂರು ಗ್ರಾಮಾಂತರ, ಜುಲೈ 14:2025 ಇಂಡಸ್ ಕಂಪನಿಗೆ ಸೇರಿದ ಗನ್ ಸೈಟ್ ಎಂಬ ಸಹಕಂಪನಿಯ ಪೆಟ್ರೋಲಿಂಗ್ ಸೂಪರ್‌ವೈಸರ್ ನೀಡಿದ ದೂರಿನ ಮೇರೆಗೆ, ದೊಡ್ಡಬಳ್ಳಾಪುರ–ದೇವನಹಳ್ಳಿ–ರಾಜಾನುಕುಂಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಪನಿಯ ಬಿಟಿಎಸ್ ಟವರ್‌ಗಳಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪೆಟ್ರೋಲಿಂಗ್ ಸೂಪರ್‌ವೈಸರ್‌ರಾಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನರಸಿಂಹಮೂರ್ತಿ ಬಿ ರ್ ಅವರು, ಜುಲೈ 10ರಂದು ಬೆಳಿಗ್ಗೆ ಟವರ್‌ ವೀಕ್ಷಣೆ ಮಾಡುವಾಗ ಶೆಲ್ಫ್‌ ಡೋರ್ ಮುರಿದು ಒಳನುಗ್ಗಿರುವುದು ಗಮನಿಸಿ ಪರಿಶೀಲನೆ ನಡೆಸಿದಾಗ, ಕಲಬುರ್ಗಿಯಿಂದ ಅಳವಡಿಸಲಾಗಿದ್ದ Airtel BTS ಗೆ ಸೇರಿದ ₹25,000 ಮೌಲ್ಯದ 450-500 ಮೀಟರ್ ಉದ್ದದ ಕೇಬಲ್‌ಗಳನ್ನು ಕತ್ತರಿಸಿಕೊಂಡು ಕಳ್ಳತನ ಮಾಡಲಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಕೂಡಲೇ ಕಂಪನಿಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ನರಸಿಂಹಮೂರ್ತಿ ಬಿ ಆರ್ ಜುಲೈ 11 ರಂದು ಮಧ್ಯಾಹ್ನ 12:20ಕ್ಕೆ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯಲಹಂಕ…

ಮುಂದೆ ಓದಿ..
ಸುದ್ದಿ 

ಕುವೈತ್‌ನಲ್ಲಿ ಉದ್ಯೋಗಿಯಾಗಿದ್ದ ಪತಿ ಸಂಪರ್ಕವಿಲ್ಲದೆ ಕಾಣೆ: ಪತ್ನಿಯಿಂದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು

ಬೆಂಗಳೂರು, ಜುಲೈ 14:2025 ಬೆಂಗಳೂರು ನಗರದಲ್ಲಿ ಭಾತರ್ ನಗರ, ಥಣಿಸಂದ್ರ ಮೈನ್‌ರೋಡ್‌ನ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಪತಿ ಕಳೆದ ಕೆಲವು ದಿನಗಳಿಂದ ಸಂಪರ್ಕವಿಲ್ಲದೇ ಕಾಣೆಯಾಗಿರುವ ಬಗ್ಗೆ ಯಲಹಂಕ ಉಪನಗರ ಸಂಪಿಗೆಹಳ್ಳಿಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೇಷ್ಮಾ ಅವರ ಹೇಳಿಕೆಯ ಪ್ರಕಾರ”ನಾನು ನಂ.32, ಅಬುಬಕರ್ ಮಸೀದಿ ಹತ್ತಿರ, ಭಾತರ್ ನಗರ, ಥಣಿಸಂದ್ರ ಮೈನ್‌ರೋಡ್, ಬೆಂಗಳೂರು ನಗರದಲ್ಲಿ ನನ್ನ ಪತಿ ಮತ್ತು ಮೂರು ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ಗೃಹಿಣಿಯಾಗಿರುವ ನಾನು, ನನ್ನ ಗಂಡರಾದ ಶೇಕ್ ಮುನ್ನ ಬಿನ್ ಶೇಕ್ ಅಬ್ದುಲ್ ಜೂರ್ (ವಯಸ್ಸು 50) ಅವರು ಕುವೈತ್‌ನಲ್ಲಿ ಡ್ರೈವರ್ ಆಗಿ ಉದ್ಯೋಗದಲ್ಲಿದ್ದಾರೆ. ದಿನಾಂಕ 10/07/2025ರಂದು ಬೆಳಿಗ್ಗೆ ಸುಮಾರು 7 ಗಂಟೆಯಿಂದ ಅವರಿಂದ ಯಾವುದೇ ರೀತಿಯ ಸಂಪರ್ಕ ಸಾಧ್ಯವಾಗುತ್ತಿಲ್ಲ. ಮೊಬೈಲ್ ಸಂಖ್ಯೆಯಾದ 9538775785 ಗೆ ಕರೆ ಮಾಡಿದರೂ ಅದು ಸ್ವಿಚ್ ಆಫ್ ಆಗಿದೆ.” ಅದರೊಂದಿಗೆ, “ನಾವು ನಮ್ಮ ಕುಟುಂಬದ ಸಂಬಂಧಿಕರು ಹಾಗೂ ಪರಿಚಿತರಿಂದ…

ಮುಂದೆ ಓದಿ..
ಸುದ್ದಿ 

ಮನೆಗೆ ಬೀಗ ಹಾಕಿದ್ದಾಗ ಕಳ್ಳತನ – 1.70 ಲಕ್ಷ ಮೌಲ್ಯದ ನಗದು ಹಾಗೂ ಬೆಳ್ಳಿ ವಸ್ತುಗಳ ಕಳ್ಳತನ

ಬೆಂಗಳೂರು, ಜುಲೈ 14:2025 ನಗರದ ಯಲಹಂಕದ ಬೆಳ್ಳಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಿಲಯದಲ್ಲಿ ಕುಟುಂಬ ಸಮೇತ ಹೊರಗೆ ಹೋಗಿದ್ದಾಗ, ಮನೆಯಲ್ಲಿ ಬೀಗ ಹಾಕಿದ್ದುದನ್ನು ಬಹುಶಃ ಗಮನಿಸಿದ ಕಳ್ಳರು, ಗೇಟ್ ಹಾಗೂ ಬಾಗಿಲಿನ ಬೀಗವನ್ನು ಒಡೆದು ಒಳನುಗ್ಗಿ ಸುಮಾರು ₹1,70,000 ಮೌಲ್ಯದ ನಗದು ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಹರೀಶ ಪದ್ಮನಾಭ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ 10 ಜುಲೈ 2025 ರಂದು ಬೆಳಿಗ್ಗೆ 11 ಗಂಟೆಗೆ ಬನಶಂಕರಿಗೆ ತೆರಳಿದ್ದರು. ಮನೆಗೆ ಬೀಗ ಹಾಕಿ ತೆರಳಿದ್ದ ಅವರು 11 ಜುಲೈ 2025 ರಂದು ಮಧ್ಯರಾತ್ರಿಯ ವೇಳೆ ಮನೆಗೆ ಹಿಂತಿರುಗಿದಾಗ ಗೇಟ್, ಬಾಗಿಲಿನ ಬೀಗಗಳು ಒಡೆಯಲಾಗಿದ್ದನ್ನು ಗಮನಿಸಿದರು. ತಕ್ಷಣವೇ ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಮೊದಲನೆ ಬೀರುವನ್ನು ಬಲವಂತವಾಗಿ ತೆರೆದು, ಅದರಲ್ಲಿ ಇಟ್ಟಿದ್ದ ₹1,00,000 ನಗದು, ₹20,000 ಚಿಲ್ಲರೆ ಹಣ ಹಾಗೂ ಸುಮಾರು 500ಗ್ರಾಂ ತೂಕದ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್‌ OLX ವಂಚನೆ: ದಂಪತಿಯ ₹4.15 ಲಕ್ಷ ನಷ್ಟ – ಸೈಬರ್ ಕ್ರೈಂ ಠಾಣೆಗೆ ದೂರು

ಬೆಂಗಳೂರು, ಜುಲೈ 14:2025 ಆನ್‌ಲೈನ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತೀಚೆಗಷ್ಟೇ ಬೆಂಗಳೂರಿನ ದಂಪತಿ ಒಬ್ಬರು ಹಳೆಯ ವಾಹನ ಮಾರಾಟ ಮಾಡುವಾಗ OLX ಪ್ಲಾಟ್‌ಫಾರ್ಮ್‌ನಲ್ಲಿ ₹4.15 ಲಕ್ಷ ವಂಚಿತರಾಗಿರುವ ಘಟನೆ ನಡೆದಿದೆ. ಶೇಖರ್ ದುಗ್ಗಿರಲ ಅವರು ನೀಡಿರುವ ದೂರಿನ ಪ್ರಕಾರ, ಅವರು ದಿನಾಂಕ 04/07/2025 ರಂದು ತಮ್ಮ ಹಳೆಯ ವಾಹನವನ್ನು OLX ಮೂಲಕ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಖರೀದಿದಾರನಂತೆ ನಟನೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬನು ಅವರನ್ನು ಸಂಪರ್ಕಿಸಿ, ವಾಹನ ಖರೀದಿಸುವ ನೆಪದಲ್ಲಿ ನಂಬಿಕೆ ಮೂಡಿಸಿ ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾನೆ. ದಂಪತಿಗಳು ನಂಬಿಕೆಗೆ ಒಳಗಾಗಿ ತಮ್ಮಿಂದ ಕೆಳಗಿನಂತೆ ವಿವಿಧ ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಹಣ ವರ್ಗಾಯಿಸಿದ್ದಾರೆ: ₹2,00,000 – IMPS ಮೂಲಕ Sekhar Duggirala ಮತ್ತು Arti Duggirala ಅವರ ಜಂಟಿ ಬ್ಯಾಂಕ್ ಖಾತೆಗ ₹90,000 – Sekhar Duggirala ಗೆ UPI…

ಮುಂದೆ ಓದಿ..
ಸುದ್ದಿ 

ಬೆಳಿಕಾಂ ಲೇಔಟ್ ಮೆಡಿಕಲ್ ಅಂಗಡಿಯಲ್ಲಿ ₹3.7 ಲಕ್ಷ ನಗದು ಮತ್ತು ಮೊಬೈಲ್ ಕಳ್ಳತನ – ಕೆಲಸಗಾರನ ಮೇಲೆ ಪ್ರಕರಣ

ಬೆಂಗಳೂರು, ಜುಲೈ 14:2025 ನಗರದ ಬೆಳಿಕಾಂ ಲೇಔಟ್ 1ನೇ ಕ್ರಾಸ್‌ನಲ್ಲಿರುವ ಪಟೇಲ್ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಅಂಗಡಿಯ ಕ್ಯಾಷ್ ಕೌಂಟರ್‌ನಿಂದ ₹3.7 ಲಕ್ಷ ನಗದು ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. ಸಂಪಿಗೆಹಳ್ಳಿ ಪೋಲೀಸ್ ಠಾಣೆಗೆ ದೂರು ನೀಡಿದ ಅಂಗಡಿ ಮಾಲೀಕರ ಹೇಳಿಕೆಗೆ ಪ್ರಕಾರ, ದೋಲಾರಮ್ ಅಲಿಯಾಸ್ ದಿಲೀಫ್ ಪಟೇಲ್ ಎಂಬಾತ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. 08/07/2025ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ, ಅಂಗಡಿಯಲ್ಲಿ ಇಡಲಾಗಿದ್ದ ನಗದು ಮತ್ತು ಮೊಬೈಲ್ ಕಾಣೆಯಾಗಿದ್ದು, ಶಂಕೆ ವ್ಯಕ್ತಪಡಿಸಿದ ಮಾಲೀಕರು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಯು ಕಳ್ಳತನ ಮಾಡುತ್ತಿರುವ ದೃಶ್ಯಗಳು ಪತ್ತೆಯಾಗಿವೆ. ಕಳ್ಳತನದ ನಂತರ ಆರೋಪಿಗೆ ಸಂಪರ್ಕ ಸಾಧಿಸಲು ಯತ್ನಿಸಿದರೂ, ಅವನ ಫೋನ್ (7259528653) ಸ್ವಿಚ್ ಆಫ್ ಆಗಿತ್ತು. ಪರಿಣಾಮವಾಗಿ, ಮಾಲೀಕರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಫ್‌ಐಆರ್…

ಮುಂದೆ ಓದಿ..
ಸುದ್ದಿ 

ಉದ್ಯೋಗದ ನಂಬಿಕೆ ಕಲ್ಪಿಸಿ ₹7 ಲಕ್ಷ ವಂಚನೆ – ಅಪರಿಚಿತ ವ್ಯಕ್ತಿಗೆ ಎಫ್‌ಐಆರ್

ಬೆಂಗಳೂರು, ಜುಲೈ 14:2025 ಉದ್ಯೋಗ ನೀಡುವ ನೆಪದಲ್ಲಿ ನಂಬಿಕೆ ಹುಟ್ಟುಹಾಕಿ ಒಟ್ಟು ₹7,00,000 ನಗದು ವಂಚಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ವಿದ್ಯಾರಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬೆಲೆಗ್ರಾಮ ನಲೆ ಮೂಲದ ಯುವಕನೊಬ್ಬನು ಕೆಲಸ ಹುಡುಕುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಮಿಷನ್ ಆಧಾರಿತ ಉದ್ಯೋಗ ನೀಡುತ್ತೇನೆಂದು ಹೇಳಿ ಪರಿಚಯಕ್ಕೆ ಬಂದಿದ್ದಾರೆ. ಮೊದಲ ಹಂತದಲ್ಲಿ ₹20,000, ನಂತರ ₹10,000, ₹5,00,000 ಮತ್ತು ₹13,50,000 ರಷ್ಟು ಹಣವನ್ನು ಹಂತ ಹಂತವಾಗಿ ಹೂಡಿಕೆಗೆ ರೂಪದಲ್ಲಿ ನೀಡಲಾಗಿದೆ. ಹೀಗಿರುವಾಗ, ಹೆಚ್ಚಿನ ಲಾಭದ ನಂಬಿಕೆ ಉಂಟುಮಾಡಿದ ವ್ಯಕ್ತಿಯು, “ಹೂಡಿದ ಹಣವನ್ನು ಹಿಂದಕ್ಕೆ ಪಡೆಯಬೇಕಾದರೆ ₹2,00,000 ಸೆಕ್ಯುರಿಟಿ ಡಿಪಾಸಿಟ್ ನೀಡಿ” ಎಂದು ಬೇಡಿಕೆ ಇಟ್ಟಿದ್ದಾನೆ. ಪೀಡಿತರು ಅದರಂತೆ ಸೆಕ್ಯುರಿಟಿ ಡಿಪಾಸಿಟ್ ರೂಪದಲ್ಲಿ ಹಣ ನೀಡಿದರೂ ಸಹ, ಯಾವುದೇ ಹಣವನ್ನು ಮರಳಿಸದೆ ನಾಪತ್ತೆಯಾಗಿದ್ದಾನೆ. ಒಟ್ಟು ₹7 ಲಕ್ಷದ ವಂಚನೆ ನಡೆದಿರುವ ಈ ಸಂಬಂಧ ಪೀಡಿತರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಮಹಿಳೆಯ ಮಾಂಗಲ್ಯ ಸರ ಕಳವಿಗೆ ಸಂಬಂಧಿಸಿ ಎಫ್‌ಐಆರ್

– ಬೆಂಗಳೂರು, ಜುಲೈ 14:2025 ನಗರದ ಹಲಸೂರು ಪ್ರದೇಶದಲ್ಲಿ ನಿದ್ರೆ ಮಧ್ಯೆ ಕಳ್ಳತನ ನಡೆದಿರುವ ಘಟನೆ ವರದಿಯಾಗಿದ್ದು, ಮಹಿಳೆಯ ಮಾಂಗಲ್ಯ ಸರ ಕಳವಾಗಿರುವ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಶ್ರೀಮತಿ ಸರಸ್ವತಿ ಎ. ಆರ್. ಎಂಬವರ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರು ಹಲಸೂರಿನಲ್ಲಿರುವ ಪಿಎಂಎಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಗಂಡ ಮತ್ತು ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಘಟನೆ ನಡೆದಿದೆ ಎನ್ನಲಾಗಿದೆ. ಸರಸ್ವತಿ ಅವರ ಪತಿ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರು 10-07-2025 ರಂದು ರಾತ್ರಿ ಪಾಳಿಯ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ, ಮನೆಯಲ್ಲಿ ಸರಸ್ವತಿ ಅವರು ತಮ್ಮ ರೂಮ್‌ನ ಕಿಟಕಿಯನ್ನು ತೆರೆದು ಮಲಗಿದ್ದರು. ಮಧ್ಯರಾತ್ರಿ ಸುಮಾರು 2:00 ಗಂಟೆಗೆ ನಿದ್ರೆಗೆ ಹೋಗಿದ್ದ ಅವರು, ಸುಮಾರು 3:45ರ ವೇಳೆಗೆ ಎಚ್ಚರಗೊಂಡಾಗ, ಅವರ ಕುತ್ರಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ…

ಮುಂದೆ ಓದಿ..
ಅಂಕಣ 

ಸಮಸ್ಯೆಗಳು – ಸಲಹೆಗಳು – ಮನವಿ..

ಸಮಸ್ಯೆಗಳು – ಸಲಹೆಗಳು – ಮನವಿ. ಶಿಕ್ಷಣ ಸಂಘಟನೆಗಳು – ಶಿಕ್ಷಕರು – ಪೋಷಕರು – ಸಾಮಾಜಿಕ ಕಾರ್ಯಕರ್ತರು – ಚಿಂತಕರು – ಶಿಕ್ಷಣ ತಜ್ಞರು – ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು… ಮಾನ್ಯ ಮುಖ್ಯಮಂತ್ರಿಗಳು,ಮಾನ್ಯ ಶಿಕ್ಷಣ ಸಚಿವರು,ಮಾನ್ಯ ಮುಖ್ಯ ಕಾರ್ಯದರ್ಶಿಗಳು,ಮಾನ್ಯ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಶಿಕ್ಷಣ ಕ್ಷೇತ್ರದಸಂಬಂಧಪಟ್ಟವರು……. ( ಇವರಿಗೆ ದಯವಿಟ್ಟು ತಲುಪಿಸಿ ) ಚುನಾವಣೆ ಮತ್ತು ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಕಡ್ಡಾಯವಾಗಿ ಉಪಯೋಗಿಸಿಕೊಳ್ಳಬೇಕು ಏಕೆಂದರೆ ಅವರಿದ್ದಲ್ಲಿ ಹೆಚ್ಚು ನಿಖರತೆ ಇರುತ್ತದೆ ಎನ್ನುವ ಕಾರಣದಿಂದ ಅವರಿಗೆ ಈ ವಿಷಯದಲ್ಲಿ ಯಾವುದೇ ವಿನಾಯಿತಿ ನೀಡಬಾರದು ಎಂದು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವಾಗ ಶಿಕ್ಷಕರ ಸಮಸ್ಯೆಗಳ ಕುರಿತು ಒಂದು ಟಿಪ್ಪಣಿ……. ರಾಜ್ಯದ ವಿವಿಧ ಭಾಗಗಳ ನನ್ನ ಕೆಲವು ಆತ್ಮೀಯ ಶಿಕ್ಷಕರುಗಳೊಂದಿಗೆ ಖಾಸಗಿಯಾಗಿ ಮಾತನಾಡಿದ ನಂತರ ಅವರುಗಳು ನೀಡಿದ ಕೆಲವು ಸಲಹೆಗಳನ್ನು ಕ್ರೋಢೀಕರಿಸಿ ಈ ಸಮಸ್ಯೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು…

ಮುಂದೆ ಓದಿ..