ಬಿಎಂಟಿಸಿ ಚಾಲಕನಿಗೆ ರಸ್ತೆಯಲ್ಲಿ ಹಲ್ಲೆ: ದ್ವಿಚಕ್ರ ವಾಹನ ಸವಾರರ ವಿರುದ್ಧ ದೂರು
ಬೆಂಗಳೂರು, ಜುಲೈ 5, 2025 ಕಲ್ಯಾಣನಗರದ ಹೆಣ್ಣೂರು ಡಿಪೋ-10ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಕೋಪಳದ ಮೂಲದ ಚಾಲಕರು ಕಳೆದ 9 ತಿಂಗಳಿಂದ ಹೆಣ್ಣೂರು ಡಿಪೋ-10ರಲ್ಲಿ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜುಲೈ 1ರಂದು ಮಧ್ಯಾಹ್ನ 1:50ಕ್ಕೆ ಅವರು ಎಲೆಕ್ಟ್ರಿಕ್ ಬಸ್ ನಂಬರ್ KA-51-AJ-8594 ಅನ್ನು ಮೆಜೆಸ್ಟಿಕ್ ರಿಂದ ಯಲಹಂಕ ಮಾರ್ಗದಲ್ಲಿ ಚಲಾಯಿಸುತ್ತಿದ್ದರು. ಅವರು ಮೂರು ಟ್ರಿಪ್ ಪೂರೈಸಿದ ನಂತರ ನಾಲ್ಕನೇ ಟ್ರಿಪ್ ನ ವೇಳೆಯಲ್ಲಿ ಜೀಗದನಹಳ್ಳಿ ಹಜ್ ಭವನದ ಬಳಿ, ಏಕಾಏಕಿ ದ್ವಿಚಕ್ರ ವಾಹನ (ನಂ: KA-04-8280) ಬಸ್ ಮುಂದೆ ಬಿದ್ದು ಅಪಘಾತ ಸಂಭವಿಸಿತು. ಘಟನೆ ನಂತರ ಬಸ್ ಚಾಲಕ ವಾಹನದಿಂದ ಇಳಿದು ಪರಿಶೀಲನೆಗಾಗಿ ಹೋದಾಗ, ದ್ವಿಚಕ್ರ ವಾಹನ ಸವಾರರು ತಮ್ಮ ಸಹಚರರನ್ನು ಕರೆಸಿ ಬಸ್ ಚಾಲಕನನ್ನು ದುರ್ವಚನಗಳಿಂದ ನಿಂದಿಸಿ ಕೈ ಕಾಲುಗಳಿಂದ…
ಮುಂದೆ ಓದಿ..
