ಸುದ್ದಿ 

ಮಗಳು ಕಾಣೆ ತಂದೆಯಿಂದ ಪೊಲೀಸ್ ಕಂಪ್ಲೇಂಟ್

ಹಾವೇರಿ ಜಿಲ್ಲೆ ಶಿಗ್ಗಾಂವ ನಗರದಲ್ಲಿ 19 ವರ್ಷದ ಯುವಕಿಯೊಬ್ಬಳು ಕಾಣೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ತಂದೆಯಿಂದ ಸಂಶಯಾಸ್ಪದ ಪೊಲೀಸ್ ಕಂಪ್ಲೇಂಟ್ ಮೇಲೆ ಹೇಳಿರುವಂತೆ ಶಿಗ್ಗಾಂವ ನಗರದ ಮೂಲ ನಿವಾಸಿಗಳಾದ ನಾರಾಯಣ ಕಲಾಲ್ ಇವರ ಮಗಳಾದ ಕು: ಅಂಬಿಕಾ ತಂದೆ ನಾರಾಯಣ ಕಲಾಲ ವಯಸ್ಸು: 19 ವರ್ಷ ಜಾತಿ: ಹಿಂದೂ ಕಲಾಲ ಉದ್ಯೋಗ: ಮನೆ ಕೆಲಸ ಇವಳು 19-09-2025 ರಂದು ಮದ್ಯಾಹ್ನ 02-30 ಗಂಟೆಯಿಂದ 3-00 ನಡುವಿನ ಅವಧಿಯಲ್ಲಿ ಶಿಗ್ಗಾವಿಯ ಮಲ್ಲಿಕಾರ್ಜುನ ನಗರದಲ್ಲಿರುವ ಪರಶುರಾಮ ಕಲಾಲ ಇವರ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋದವಳು ವಾಪಸ ಮನೆಗೆ ಬಾರದೇ ತನಗೆ ಪರಿಚಯ ಇರುವ ಹುಬ್ಬಳ್ಳಿ ನವನಗರದಿಲ್ಲಿ ವಾಸವಿರುವ ಸುನೀಲ್ ಎಂಬುವನ ಜೊತೆ ಹೋಗಿರುವ ಬಗ್ಗೆ ಸಂಶಯ ಇದ್ದು. ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ನಾರಯಣ ಕಲಾಲ್ ಇವರು ಶಿಗ್ಗಾಂವಿ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ…

ಮುಂದೆ ಓದಿ..
ಅಂಕಣ 

ಮಹಾಲಯ ಅಮಾವಾಸ್ಯೆ -ಪಿತೃ ಪಕ್ಷ – ಎಡೆ ಹಬ್ಬ…………..

ಮಹಾಲಯ ಅಮಾವಾಸ್ಯೆ –ಪಿತೃ ಪಕ್ಷ – ಎಡೆ ಹಬ್ಬ………….. ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಬಹುತೇಕರ ಮನೆಯಲ್ಲಿ ಆಚರಿಸುವ ಒಂದು ಹಬ್ಬ…… ತೀರಿಹೋದ ಹಿರಿಯರ ನೆನಪಿನಲ್ಲಿ, ಅವರ ಇಷ್ಟದ ಊಟ, ಬಟ್ಟೆ, ವಸ್ತುಗಳು ಇತ್ಯಾದಿಗಳನ್ನು ಇಟ್ಟು ಅವರಿಗೆ ಅರ್ಪಿಸಿದಂತೆ ಮಾಡಿ ನಾವೇ ಉಪಯೋಗಿಸುವುದು…… ಜ್ಯೋತಿಷಿಗಳಂತು ಟಿವಿಗಳಲ್ಲಿ ಇದರ ಬಗ್ಗೆ ಇಲ್ಲಸಲ್ಲದ ಅನೇಕ ಮೌಢ್ಯಗಳನ್ನು ಹೇಳಿ ಜನರನ್ನು ಮತ್ತಷ್ಟು ದಿಕ್ಕು ತಪ್ಪಿಸುತ್ತಿದ್ದಾರೆ.ಪುನರ್ ಜನ್ಮ, ಆತ್ಮಗಳ ಅಲೆದಾಟ, ಶವಗಳ ಕನಸುಗಳು,.. ಇನ್ನೂ ಮುಂತಾದ ಭಯಂಕರ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ಭಯಗೊಳಿಸಿ ಹಬ್ಬದ ತೀವ್ರತೆ ಹೆಚ್ಚಿಸುತ್ತಿದ್ದಾರೆ. ‌ಒಂದೇ ಒಂದು ಟಿವಿ ವಾಹಿನಿ ವಿವೇಚನೆಯಿಂದ ಈ ಹಬ್ಬದ ವಿಮರ್ಶೆ ಮಾಡುತ್ತಿಲ್ಲ. ಊಹಾತ್ಮಕ ಮೂಡನಂಬಿಕೆಯನ್ನೇ ಮತ್ತಷ್ಟು ಆಳಕ್ಕೆ ಇಳಿಸುತ್ತಿದ್ದಾರೆ. ಬದಲಾದ ಕಾಲಮಾನದಲ್ಲಿ ಈ ಹಬ್ಬದ ಆಚರಣೆಯನ್ನು ಮತ್ತಷ್ಟು ವಿಶಾಲ, ಸರಳ, ಅರ್ಥಪೂರ್ಣ, ಪ್ರಾಯೋಗಿಕ ಮತ್ತು ಮಾನವೀಯಗೊಳಿಸಬಹುದಾದ ಒಂದು ಸಲಹೆ ಮತ್ತು ಮನವಿ…………

ಮುಂದೆ ಓದಿ..
ಅಂಕಣ 

ಮರು ಜಾತಿ ಜನಗಣತಿಯ ಮೌಲ್ಯವೆಷ್ಟು……

ಮರು ಜಾತಿ ಜನಗಣತಿಯ ಮೌಲ್ಯವೆಷ್ಟು…… ಮಾನವ ಧರ್ಮ, ನಾಗರಿಕ ನಡವಳಿಕೆ, ಜೀವಪರ ನಿಲುವಿನ ಪ್ರಬುದ್ಧ ಮನಸುಗಳಿಗೆ ಅಸಹ್ಯ ಹುಟ್ಟಿಸುವಷ್ಟು ಜಾತಿ ಜನಗಣತಿಯ ಅನಿವಾರ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಜಾತಿ ಮುಕ್ತ ಸಮ ಸಮಾಜದ ಕರ್ನಾಟಕ ಮತ್ತು ಭಾರತೀಯತೆಯ ಬಗ್ಗೆ ಕನಸು ಕಾಣುತ್ತಾ……… ಜಾತಿ ಆಧಾರಿತ ಮರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಸಮಾಜದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ರೀತಿಯ ಆತಂಕ, ಉದ್ವೇಗ, ಕುತೂಹಲ, ಅಸಹನೆ, ತಲ್ಲಣಗಳನ್ನು ಸೃಷ್ಟಿಸಿದೆ. ಮುಖ್ಯವಾಗಿ ಒಂದಷ್ಟು ಜಾತಿಗಳ ಜನನಾಯಕರಿಗೆ, ರಾಜಕೀಯ ಹಿತಾಸಕ್ತಿ ಹೊಂದಿರುವವರಿಗೆ ಇದೊಂದು ಬಹುದೊಡ್ಡ ಸವಾಲನ್ನು ಒಡ್ಡಿದೆ ಎಂಬ ರೀತಿಯ ಕ್ರಿಯೆ ಪ್ರತಿಕ್ರಿಯೆಗಳು ಮೂಡಿಬರುತ್ತಿವೆ. ಸಾಮಾಜಿಕ ನ್ಯಾಯಕ್ಕಾಗಿ ಆರ್ಥಿಕ ಮತ್ತು ಶೈಕ್ಷಣಿಕ ಸಮತೋಲನಕ್ಕಾಗಿ ಈ ಮರು ಜಾತಿ ಗಣತಿಯನ್ನು ಮಾಡಲಾಗುತ್ತಿದೆ ಎಂಬುದು ಮುಖ್ಯಮಂತ್ರಿಗಳ ವಿವರಣೆ. ಹಿಂದೆ ನಡೆದ ಕಾಂತರಾಜು ವರದಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದವು, ಅದು ಅವೈಜ್ಞಾನಿಕವಾಗಿತ್ತು ಎಂದು…

ಮುಂದೆ ಓದಿ..
ಅಂಕಣ 

ಮಾನ್ಯ ಅರಣ್ಯ ಸಚಿವರ ಗಮನಕ್ಕೆ……

ಒಂದು ಆಗ್ರಹ ಪೂರ್ವಕ ಮನವಿ……… ಮಾನ್ಯ ಅರಣ್ಯ ಸಚಿವರ ಗಮನಕ್ಕೆ…… ಒಂದು ಆಗ್ರಹ ಪೂರ್ವಕ ಮನವಿ……… ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳ ಮೇಲಿನ ಆರೋಪ ಮತ್ತು ಪರಿಸರ ಮತ್ತು ಜೀವ ಸಂಕುಲದ ರಕ್ಷಣಾ ಪ್ರಯತ್ನಗಳು……. ” ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು ” ಎಂದು 12ನೆಯ ಶತಮಾನದ ವಚನ ಸಾಹಿತ್ಯ ಮತ್ತು ಸಂಸ್ಕೃತಿ ಜನತೆಗೆ ಕರೆ ನೀಡುತ್ತದೆ. ಅಂದರೆ ಈ ಸೃಷ್ಟಿಯಲ್ಲಿ ಅತಿ ಮುಖ್ಯ ಪಾತ್ರವಾದ ಪರಿಸರದಲ್ಲಿರುವ ಪ್ರತಿಜೀವಿಗೂ ಬದುಕುವ ಸ್ವಾತಂತ್ರ್ಯ ಮತ್ತು ಹಕ್ಕು ಇದೆ. ಅದನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಆ ಮೂಲಕ ಸೃಷ್ಟಿಯ ಸಹಜತೆಯನ್ನು ಕಾಪಾಡಬೇಕು. ಉದ್ದೇಶಪೂರ್ವಕವಾಗಿ, ನಮ್ಮ ಅನುಕೂಲಕರ ಸ್ವಾರ್ಥಕ್ಕಾಗಿ ಯಾವುದೇ ಜೀವಿಯನ್ನು ನಾಶಪಡಿಸಿದರೆ ಪ್ರಕೃತಿಯ ಸಮತೋಲನ ತಪ್ಪುತ್ತದೆ. ಆದ್ದರಿಂದ ಯಾವುದೇ ಜೀವರಾಶಿಗಳಿಗೆ ತೊಂದರೆ ಕೊಡದೆ ನಮ್ಮ ಸ್ವಾತಂತ್ರ್ಯವನ್ನು ಅನುಭವಿಸಬೇಕು ಎಂಬುದು ಒಂದು ಅಲಿಖಿತ ಪ್ರಾಕೃತಿಕ ನಿಯಮ. ಆಹಾರದ ದೃಷ್ಟಿಯಿಂದ ಈ ನಿಯಮದಲ್ಲಿ…

ಮುಂದೆ ಓದಿ..
ಅಂಕಣ 

ನೋಟ್ಬುಕ್‌-ಪೆನ್‌ ಬೆಲೆ ಇಳಿಕೆ: ಕೇಂದ್ರದ GST ಕಡಿತ ನಿರ್ಧಾರ ವಿದ್ಯಾರ್ಥಿಗಳಿಗೆ ಶಿಸ್ತು ಪಾಠ.

ನೋಟ್ಬುಕ್‌-ಪೆನ್‌ ಬೆಲೆ ಇಳಿಕೆ: ಕೇಂದ್ರದ GST ಕಡಿತ ನಿರ್ಧಾರ ವಿದ್ಯಾರ್ಥಿಗಳಿಗೆ ಶಿಸ್ತು ಪಾಠ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭಾರವನ್ನು ಕಡಿಮೆ ಮಾಡುವ ಮಹತ್ವದ ಹೆಜ್ಜೆ ಇಟ್ಟಿದೆ. ಪಠ್ಯ ಪುಸ್ತಕ, ನೋಟ್ಬುಕ್‌ಗಳು, ಪೆನ್‌ಗಳು ಹಾಗೂ ಸಾಮಾನ್ಯವಾಗಿ ಬಳಸುವ ಶೈಕ್ಷಣಿಕ ಸಾಮಗ್ರಿಗಳ ಮೇಲೆ ವಿಧಿಸುತ್ತಿದ್ದ GST ದರವನ್ನು ಕಡಿತಗೊಳಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಇದುವರೆಗೆ ನೋಟ್ಬುಕ್ ಹಾಗೂ ಪೆನ್‌ಗಳ ಮೇಲೆ 12 ಶೇಕಡಾ GST ವಿಧಿಸಲಾಗುತ್ತಿತ್ತು. ಇದೀಗ ಅದನ್ನು 5 ಶೇಕಡಾಕ್ಕೆ ಇಳಿಸಲಾಗಿದೆ. ಈ ಕ್ರಮದಿಂದ ಶೈಕ್ಷಣಿಕ ಸಾಮಗ್ರಿಗಳ ಬೆಲೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬರಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮಧ್ಯಮ ವರ್ಗ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇದು ದೊಡ್ಡ ನೆರವಿನಂತಾಗಿದೆ. ಪ್ರತಿ ವರ್ಷ ಶಾಲಾ ಆರಂಭದ ಸಮಯದಲ್ಲಿ ಪೋಷಕರು ಅನುಭವಿಸುತ್ತಿದ್ದ ಹೆಚ್ಚುವರಿ ಖರ್ಚು ಈಗ ಕಡಿಮೆಯಾಗಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಇದು ಪ್ರೇರಣೆಯಾಗಲಿದೆ. ಸಂಸದ…

ಮುಂದೆ ಓದಿ..
ಅಂಕಣ 

ಪ್ರಧಾನಿ ನರೇಂದ್ರ ದಾಮೋದರ ಮೋದಿ ಅವರಿಗೆ ಜನುಮದಿನದ ಶುಭಾಶಯಗಳನ್ನು ಕೋರುತ್ತಾ…..

ಪ್ರಧಾನಿ ನರೇಂದ್ರ ದಾಮೋದರ ಮೋದಿ ಅವರಿಗೆ ಜನುಮದಿನದ ಶುಭಾಶಯಗಳನ್ನು ಕೋರುತ್ತಾ….. ನರೇಂದ್ರ ಮೋದಿ ಎಂಬ ಮನುಷ್ಯ ಸಾಮರ್ಥ್ಯದ ಅದ್ಭುತ ಜೀವಿಯ ಉದಾಹರಣೆ, ವೈಯಕ್ತಿಕವಾಗಿ ಎತ್ತರದ ಸಾಧನೆ, ಸಾಮಾಜಿಕ ಮೌಲ್ಯಗಳ ವಿಫಲತೆ, ಒಳಗಿನ ಕ್ರೌರ್ಯ ಎಲ್ಲವುಗಳ ಬಗ್ಗೆ ಒಂದು ಸಂಕ್ಷಿಪ್ತ ಅನಿಸಿಕೆ…… ಅದೃಷ್ಟದ ಬೆಂಬಲದೊಂದಿಗೆ, ಶ್ರಮ, ಕ್ರಿಯಾಶೀಲತೆ, ಆರೋಗ್ಯ, ತಂತ್ರ, ಪ್ರತಿತಂತ್ರ, ಕುಟಿಲ ತಂತ್ರ, ದ್ವೇಷ, ಅಸೂಯೆ, ಕ್ರೌರ್ಯ, ಭಂಡತನ, ಶತ್ರು ನಾಶ, ದೂರದೃಷ್ಟಿ, ಸಂಕುಚಿತತೆ, ಛಲ, ಉತ್ಸಾಹ ಎಲ್ಲವನ್ನು ಒಟ್ಟಿಗೆ ಮೇಳೈಸಿಕೊಂಡು ತನ್ನ ವ್ಯಕ್ತಿತ್ವದಲ್ಲಿ ಅಡಕಗೊಳಿಸಿ, ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿ ಸುಮಾರು 13 ವರ್ಷಗಳು, ಭಾರತ ದೇಶದ ಪ್ರಧಾನಿಯಾಗಿ 12 ವರ್ಷಗಳ ಒಟ್ಟು ಸುಮಾರು 25 ವರ್ಷಗಳ ಸೋಲರಿಯದ ಸರದಾರನಾಗಿ, ಜಾಗತಿಕವಾಗಿ ಈ ಕ್ಷಣದಲ್ಲಿ ಮಹತ್ವದ ವ್ಯಕ್ತಿಯಾಗಿ ಭಾರತ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ದಾಮೋದರ ಮೋದಿಯವರಿಗೆ ಹುಟ್ಟು ಹಬ್ಬದ…

ಮುಂದೆ ಓದಿ..
ಅಂಕಣ 

ಅಯ್ಯೋ, ಯಾವುದೀ ಪ್ರವಾಹವು,ಯಾವುದೀ ಮೇಘ ಸ್ಫೋಟಗಳು…..

ಅಯ್ಯೋ, ಯಾವುದೀ ಪ್ರವಾಹವು,ಯಾವುದೀ ಮೇಘ ಸ್ಫೋಟಗಳು….. ಇತ್ತೀಚೆಗೆ ಪ್ರತಿನಿತ್ಯ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಈ ರೀತಿಯ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಪ್ರವಾಹ, ಪ್ರಳಯ ಅಥವಾ ಆ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಸಾಧ್ಯವೇ ? ಇಲ್ಲ, ಬಹುಶಃ ವಿಶ್ವದ ಯಾವುದೇ ದೇಶ ಮತ್ತು ಮಾನವ ಕುಲ ಇನ್ನೂವರೆಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ದೇಶಗಳೇ ಅದನ್ನು ಮಾಡಲು ಸಾಧ್ಯವಾಗಿಲ್ಲ. ಭೂಕಂಪ, ಸುನಾಮಿ, ಚಂಡಮಾರುತ, ಮೇಘ ಸ್ಪೋಟ, ಕಾಳ್ಗಿಚ್ಚು ಎಲ್ಲವೂ ಯಾವುದೇ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅದು ತನ್ನ ಕೆಲಸ ಪೂರೈಸಿದ ನಂತರ ತಾನೇ ಕಡಿಮೆಯಾಗುತ್ತದೆ. ಭಾರತದ ದೇಶದಲ್ಲಿ ಪ್ರಕೃತಿಯ ಜೊತೆ ಮನುಷ್ಯ ಮತ್ತು ಸರ್ಕಾರಗಳಆಸೆಬುರುಕತನ ಸೇರಿ ಇನ್ನೂ ಹೆಚ್ಚುವರಿಯಾಗಿ ಕೆಲವು ಪ್ರಾಕೃತಿಕ ವಿಕೋಪಗಳು ಸೇರುತ್ತವೆ. ಅದು ರಣಭೀಕರ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೆಲವು ಸ್ಥಳಗಳು ಭೂಪಟದಿಂದಲೇ ನಾಶವಾಗಿಬಿಡುತ್ತದೆ. ಜನರ ಬದುಕು ಗಂಜಿ…

ಮುಂದೆ ಓದಿ..
ಸುದ್ದಿ 

ಬಂಕಾಪುರ ಸಮೀಪದ ನಿಡಗುಂದಿಲೀ ಹೆಚ್ಚಿದ ಅಂದರ ಬಾಹರ್ ಇಸ್ಪೀಟು ಜೂಜಾಟ, ಕೇಸ್ ದಾಖಲು

ಬಂಕಾಪುರ ಸಮೀಪದ ನಿಡಗುಂದಿಲೀ ಹೆಚ್ಚಿದ ಅಂದರ ಬಾಹರ್ ಇಸ್ಪೀಟು ಜೂಜಾಟ, ಕೇಸ್ ದಾಖಲು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣ ಸಮೀಪದ ನಿಡಗುಂದಿ ಲೀ ಸಾರ್ವಜನಿಕ ಸ್ಥಳದಲ್ಲೇ,ಸಾರ್ವಜನಿಕ ರಸ್ತೆಗಳ ಮೇಲೆ ಕೆಲವು ಗ್ರಾಮಸ್ಥರು ಇಸ್ಪೀಟು ಕಾರ್ಡ್ ಜೂಜಾಟ ಆಡುತ್ತಿರುವ ಘಟನೆ ಕಂಡುಬಂದಿದೆದಿ ನಾಂಕ: 01-09-2025 ರಂದು ಮುಂಜಾನೆ 11-00 ಗಂಟೆಯಿಂದ ನೀಡಗುಂದ ಕ್ರಾಸದ ಸಾರ್ವಜನಿಕ ರಸ್ತೆ ಮೇಲೆ ಆ ಊರಿನ ಕೆಲವು ಗ್ರಾಮಸ್ಥರು ಗುಂಪಾಗಿ ಕುಳಿತು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ-ಬಾಹರ ಎಂಬ ಜೂಜಾಟ ಆಡುತ್ತಾ ಕಾನೂನು ಬಾಹಿರವಾದ ಚಟುವಟಿಕೆಯನ್ನು ಮಾಡುತ್ತಿರುತ್ತಾರೆ. ಅಂತಾ ಊರಿನ ಒಬ್ಬ ವ್ಯಕ್ತಿಯಿಂದ ಮಾಹಿತಿ ಬಂದಿದ್ದು ಆ ವ್ಯಕ್ತಿ ಸ್ಥಳದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಿ ಮಾಹಿತಿ ಖಚಿತ ಮಾಡಿಕೊಂಡು ಇಂತವರ ಮೇಲೆ ಕ್ರಮ ಕೈಕೊಳ್ಳಲು ಪೊಲೀಸರಿಗೆ ಮಾಹಿತಿ ಸೂಚಿಸಿದ್ದಾನೆ. ಕಲಂ 87 ಕೆಪಿ ಆ್ಯಕ್ಟ್…

ಮುಂದೆ ಓದಿ..
ಸುದ್ದಿ 

ಬಂಕಾಪುರ ಧಾಬಾದಲ್ಲಿ ಅಕ್ರಮ ಕಳ್ಳ ಮದ್ಯ ಮಾರಾಟ ಪೊಲೀಸ್ ರೇಡ್ ಗೆ ಸಿಕ್ಕ ವಿಸ್ಕಿ ಮಾಲ್, ಕೇಸ್ ದಾಖಲು

ಬಂಕಾಪುರ ಧಾಬಾದಲ್ಲಿ ಅಕ್ರಮ ಕಳ್ಳ ಮದ್ಯ ಮಾರಾಟ ಪೊಲೀಸ್ ರೇಡ್ ಗೆ ಸಿಕ್ಕ ವಿಸ್ಕಿ ಮಾಲ್, ಕೇಸ್ ದಾಖಲು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ದಲ್ಲಿ ಇತ್ತೀಚಿಗೆ ಧಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಪರಮಿಷನ್ ಇಲ್ಲದಿದ್ದರೂ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಪೊಲೀಸರ ದಾಳಿಗೆ ಸಿಕ್ಕಿಬಿದ್ದ ವಿಸ್ಕಿ, ರಮ್ ಬಾಟಲ್ಗಳು. ಇದರಲ್ಲಿಯ ಧಾಬಾ ಓನರ್ ಮತ್ತು ಆರೋಪಿಯಾದ ಬಸವರಾಜ ದೇವಪ್ಪ ಕಲಕಂಡಿ ಇವರು ದಿನಾಂಕ: 28-08-2025 ರಂದು ರಾತ್ರಿ 08-30 ಗಂಟೆಗೆ ಬಂಕಾಪೂರ ಶಹರದ ಮುಂಡಗೋಡ ಕ್ರಾಸ್ ಹತ್ತಿರ ಇರುವ ತಮ್ಮ ಗಣೇಶ ದಾಬಾದಲ್ಲಿ ಓಲ್ಡ್ ಟಾವೆರನ್ ವಿಸ್ಕಿ ಅಂತಾ ಇದ್ದ ಸರಾಯಿ ತುಂಬಿದ ಟೆಟ್ರಾ ಪೌಚಗಳನ್ನು ಇಟ್ಟುಕೊಂಡು ಮಾರಾಟ ಮತ್ತು ಮದ್ಯ ಸೇವೆನೆಗೆ ಅವಕಾಶ ನೀಡುತ್ತಿರುವಾಗ ಮದ್ಯ ತುಂಬಿದ ಪೌಚ ಮತ್ತು ವಸ್ತುಗಳ ಸಮೇತ ಪೊಲೀಸ್ ದಾಳಿಗೆ ಸಿಕ್ಕಿಬಿದ್ದಿದ್ದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..…

ಮುಂದೆ ಓದಿ..
ಸುದ್ದಿ 

ಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು

ಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಹೆಂಡತಿಯ ಮೇಲೆ ಸಂಶಯ ಪಟ್ಟು ಮಾನಸಿಕ,ದೈಹಿಕ ಹಿಂಸೆ ನೀಡಿ ಕಿರುಕುಳ ನೀಡಿದ್ದು ನೊಂದ ಮಹಿಳೆ ಗಂಡನ ವಿರುದ್ಧ ಮಾಡಿದ ಆರೋಪ ಬಂಕಾಪುರ ಪಟ್ಟಣದ ನಿವಾಸಿಗಳಾಗಿರುವ ಪ್ರಕಾಶ ಬಸವಣ್ಣೆಪ್ಪ ನವಲಗುಂದ ಹಾಗು ಚೇತನಾ ನವಲಗುಂದ ಇಬ್ಬರಿಗೂ ಗುರುಹಿರಿಯರ ಸಮ್ಮುಖದಲ್ಲಿ ದಿನಾಂಕ 07-02-2025 ರಂದು ಅರೇಂಜ್ ಮದುವೆ ಆಗಿರುತ್ತದೆ. ಮದುವೆಯಾದ ನಂತರ ಆರೋಪಿತನಾದ ಪ್ರಕಾಶ ನವಲಗುಂದ ಹೆಂಡತಿಯನ್ನು ಒಂದೆರೆಡು ತಿಂಗಳ ಚನ್ನಾಗಿ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ನಿನಗೆ ಕೆಲಸ ಮಾಡಲು ಬರೋದಿಲ್ಲ ಹಾಗೇ ಹೀಗೆ ಅಂತಾ ವಿನಾಕಾರಣ ಬೈದಾಡುತ್ತಾ ಕೈಯಿಂದ ಹೊಡಿ ಬಡಿ ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು ಅಲ್ಲದೆ ದಿನಾಂಕ 13-04-2025 ರಂದು ರಾತ್ರಿ ಬೆಳಗಿನ 1-00 ಗಂಟೆಯ ಸುಮಾರಿಗೆ ತನ್ನ ಹೆಂಡತಿಗೆ…

ಮುಂದೆ ಓದಿ..