ಪಂಥಗಳಾಚೆಯ ಬದುಕು,ಇಸಂ ಮುಕ್ತ ಜೀವನ..
ಪಂಥಗಳಾಚೆಯ ಬದುಕು, ಇಸಂ ಮುಕ್ತ ಜೀವನ, ದೀರ್ಘವಾದರೂ ಗಂಭೀರ ವಿಷಯ, ದಯವಿಟ್ಟು ಗೌರಿ ಹಬ್ಬದ ವಿರಾಮದಲ್ಲಿ ಸ್ವಲ್ಪ ಸಮಯ ನೀಡಿ… ಸಮಾಜ ಮಾನಸಿಕ ವಿಭಜನೆ ಆಗುವ ಮುನ್ನ ಎಚ್ಚರವಿರಲಿ, ನಾವೆಲ್ಲರೂ ಒಂದೇ ಬಳ್ಳಿಯ ಹೂಗಳು, ಒಂದೇ ದೋಣಿಯ ಪಯಣಿಗರು, ನಮ್ಮ ಅಜ್ಞಾನದಿಂದ ದೋಣಿ ಮುಳುಗದಿರಲಿ……. ಎಡಪಂಥೀಯರು, ಎಡಚರರು, ಅರ್ಬನ್ ನಕ್ಸಲರು ಇತ್ಯಾದಿ ಮಾತುಗಳು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಕೇಳಿ ಬರುತ್ತಿವೆ. ಇವರು ಧರ್ಮ ವಿರೋಧಿಗಳು, ದೇಶದ್ರೋಹಿಗಳು, ಹಿಂಸಾವಾದಿಗಳು ಎಂಬ ಅರ್ಥದಲ್ಲಿ ಇದರ ವಿರುದ್ಧ ಚಿಂತನೆಯವರು ಮಾತನಾಡುತ್ತಿದ್ದಾರೆ. ಹಾಗೆಯೇ, ಬಲಪಂಥೀಯರು, ರೈಟ್ ವಿಂಗ್ ನವರು, ರಾಷ್ಟ್ರೀಯ ವಾದಿಗಳು, ಧರ್ಮ ರಕ್ಷಕರು ಮುಂತಾದ ಹೆಸರುಗಳಿಂದ ಕೆಲವರನ್ನು ಕರೆಯಲಾಗುತ್ತದೆ. ಇವರು ಕೋಮುವಾದಿಗಳು, ಗಲಭೆಕೋರರು, ವಿಭಜಕ ಮನಸ್ಥಿತಿಯವರು, ಮಾನವ ವಿರೋಧಿಗಳು, ಅಸಮಾನತೆಯ ಜನಕರು ಎಂದು ಅವರ ವಿರೋಧಿಗಳು ಹೇಳುತ್ತಾರೆ. ಇದು ಖಂಡಿತ ತಪ್ಪು ಮತ್ತು ವಿಭಜನಾತ್ಮಕ ಮನಸ್ಥಿತಿ. ಈ ರೀತಿ ಯಾವುದೋ…
ಮುಂದೆ ಓದಿ..
