ಸುದ್ದಿ 

ಅಂಗಡಿ ನೀಡುವ ನೆಪದಲ್ಲಿ ₹6.3 ಲಕ್ಷ ವಂಚನೆ – ವ್ಯಕ್ತಿ ವಿರುದ್ಧ ಎಫ್‌ಐಆರ್

ಬೆಂಗಳೂರು, ಜುಲೈ 21:2025 ಸ್ವ ಉದ್ಯೋಗಕ್ಕಾಗಿ ಅಂಗಡಿ ತೆಗೆಯಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು, ಅಂಗಡಿಯನ್ನು ನೀಡುವ ಭರವಸೆ ನೀಡಿದ ವ್ಯಕ್ತಿಯಿಂದ ₹6.30 ಲಕ್ಷ ವಂಚಿತರಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.ಶಮೀಲ ಎಂಎಸ್ ಪ್ರಕಾರ, ದಿನಾಂಕ 25-08-2023 ರಂದು ಫಿರೋಜ್ ಎಂಬ ವ್ಯಕ್ತಿ ಅಂಗಡಿ ನೀಡುವುದಾಗಿ ಭರವಸೆ ನೀಡಿ ₹5,000 ಟೋಕನ್ ಮೊತ್ತವನ್ನು Google Pay ಮೂಲಕ ಪಡೆದನು. ನಂತರ ಹಂತ ಹಂತವಾಗಿ ವಿವಿಧ ದಿನಾಂಕಗಳಲ್ಲಿ – ನಗದು, ಆನ್‌ಲೈನ್ ಪಾವತಿ ಮತ್ತು ಅಮೇಜಾನ್ ಪೇ ಮೂಲಕ ಒಟ್ಟು ₹6.3 ಲಕ್ಷ ಪಾವತಿಸಲಾಯಿತು. ಆದರೆ ಹಣ ಪಡೆದ ನಂತರ, ಫಿರೋಜ್ ಅಂಗಡಿಯನ್ನು ಬೇರೆಯವರಿಗೆ ಮಾರಾಟ ಮಾಡುವುದಾಗಿ ಹೇಳಿ ಹಣ ಹಿಂದಿರುಗಿಸಲು ನಿರಾಕರಿಸಿದನು. ಇದೇ ವಿಚಾರವಾಗಿ 17-09-2024 ರಂದು ಹಣ ಕೇಳಲು ಹೋದ ದೂರುದಾರರೊಂದಿಗೆ ಫಿರೋಜ್ ಅವಾಚ್ಯ ಶಬ್ದಗಳಿಂದ ಮಾತನಾಡಿ ಜೀವ ಬೆದರಿಕೆ ಹಾಕಿದ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, NCR…

ಮುಂದೆ ಓದಿ..
ಸುದ್ದಿ 

ಕಟ್ಟಿಗೇನಹಳ್ಳಿಯಲ್ಲಿ ಟೈಲರ್ ವಿರುದ್ಧ ದೌರ್ಜನ್ಯ ದೂರು: ಬಟ್ಟೆ ವಿಚಾರದಲ್ಲಿ ಜಗಳ, ಮಹಿಳೆಗೆ ಕಚ್ಚಿದ ಆರೋಪ

ಬೆಂಗಳೂರು ಜುಲೈ 21:2025ಕಟ್ಟಿಗೇನಹಳ್ಳಿಯಲ್ಲಿರುವ ಕಮಲ ಟೈಲರ್ ವಿರುದ್ಧ ದೈಹಿಕ ದೌರ್ಜನ್ಯ ಆರೋಪದ ಮೂಲಕ ಎಫ್‌ಐಆರ್ ದಾಖಲಾಗಿದ್ದು, ಬಟ್ಟೆ ಹೊಲಿಸುವ ವಿಚಾರವಾಗಿ ಜಗಳ ಉಂಟಾದ ಘಟನೆ ಉದ್ಘಾಟನೆಯಾಗಿದೆ. ಅನಿಲ್ ಕುಮಾರ್ ಜೋನಾರಾಯಣ (56) ಅವರು ತಮ್ಮ ಪತ್ನಿಗೆ ಹೊಲಿಸಲು 3 ಜೋಡಿಗಳ ಬಟ್ಟೆಗಳನ್ನು ಜುಲೈ 10, 2024ರಂದು ಟೈಲರ್ ಕಮಲ ಅವರಿಗೆ ನೀಡಿದ್ದಾರೆ. ಬಟ್ಟೆಗಳಿಗಾಗಿ ಆಗಸ್ಟ್ 26, 2024ರಂದು ಬೆಳಗ್ಗೆ 11:45ಕ್ಕೆ ದಂಪತಿ ಟೈಲರ್ ಅಂಗಡಿಗೆ ತೆರಳಿದಾಗ, ಕಮಲ ಅವರು ಜೋರಾಗಿ ಮಾತನಾಡಿ ಜಗಳಕ್ಕೆ ಇಳಿದರು. ಘಟನೆಯ ವೇಳೆ ಪಿರ್ಯಾದಿದಾರರ ಪತ್ನಿಗೆ ಬಾಯಿಯಿಂದ ಕಚ್ಚಿ, ತಳ್ಳಿದ ಆರೋಪ ಕೇಳಿಬಂದಿದೆ. ಅನಿಲ್ ಕುಮಾರ್ ಅವರು ಈ ಕುರಿತು ಯಲಹಂಕ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಬಿಎನ್ಎಸ್ ಸೆಕ್ಷನ್ 115(2) ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯದ ಅನುಮತಿ ಪಡೆದು ತನಿಖೆ ಆರಂಭಿಸಿದ್ದಾರೆ

ಮುಂದೆ ಓದಿ..
ಸುದ್ದಿ 

ಸ್ವತ್ತಿನಲ್ಲಿ ಬೋರ್ಡ್ ಹಾಕಿ, ಬೆದರಿಕೆ ಹಾಕಿದ ಆರೋಪಿಗಳ ವಿರುದ್ಧ ಪೊಲೀಸ್‌ ದೂರು

ಬೆಂಗಳೂರು, ಜುಲೈ 21:2025ಮೂಲತಃ ನಗರದ ನಿವಾಸಿಯಾಗಿರುವ ಲಕ್ಷ್ಮಮ್ಮ ಅವರು ತಮ್ಮ ಮಗಳು ಶ್ರೀಮತಿ ನಂದಿನಿಯಿಂದ ದಿನಾಂಕ 30/05/2023 ರಂದು ಉಡುಗೊರೆಯ ಮುಖಾಂತರ ಪಡೆದಿದ್ದ, ಸುಮಾರು 2000 ಚದರ ಅಡಿಯುಳ ವಿಸ್ತೀರ್ಣದ ನಿವೇಶನವನ್ನು ನಿಯಮಿತವಾಗಿ ನೋಡಲು ಆಗಾಗ ಸ್ಥಳಕ್ಕೆ ಹೋಗುತ್ತಿದ್ದರು. ಆದರೆ 2024ರಿಂದ, ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂಬ ಬೋರ್ಡ್‌ಗಳನ್ನು ಸದರಿ ಸ್ಥಳದಲ್ಲಿ ಹಾಕಿದ್ದಾರೆಂದು ತಿಳಿದು ಬಂದಿದೆ. ಇದಾದಂತೆ, ದೂರುದಾರರು ದಿನಾಂಕ 21/04/2025ರಂದು ಸ್ಥಳಕ್ಕೆ ಭೇಟಿ ನೀಡಿದಾಗ, ಹರೀಶ್ ಕುಮಾರ್, ರವಿ ಮತ್ತು ನಾರಾಯಣ ಎಂಬವರು ಅವರಿಗೆ ಎದುರಾಗಿದ್ದು, “ನೀವು ನಮ್ಮ ಸ್ಥಳದಲ್ಲಿ ಬೋರ್ಡ್ ಏಕೆ ಹಾಕಿದ್ದೀರಿ? ಅದನ್ನು ತೆಗೆದು ಹಾಕಿ” ಎಂದು ಕೇಳಿ ನಂತರ “ಚಿಕ್ಕಜಾಲ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ನಿಮ್ಮನ್ನು ಕತ್ತಿಯಿಂದ ಕತ್ತರಿಸಿ ಕೊಲ್ಲುತ್ತೇವೆ” ಎಂಬದ್ದಾಗಿ ಬೆದರಿಕೆಯುಡಿಸಿದ್ದಾರೆ. ಮತ್ತೆ ದಿನಾಂಕ 10/05/2025 ರಂದು, ದೂರುದಾರರು ತಮ್ಮ ಮಗಳ ಆದೇಶದಂತೆ ನಿಕಟಪಾಲು…

ಮುಂದೆ ಓದಿ..
ಸುದ್ದಿ 

ಜಮೀನು ವ್ಯವಹಾರದ ಹೆಸರಿನಲ್ಲಿ ₹1 ಕೋಟಿಯ ಮೋಸ: ಹಣ ಕೇಳಿದ ಕಛೇರಿಗೆ ನುಗ್ಗಿ ಗಲಾಟೆ, ಜೀವ ಬೆದರಿಕೆ

ಬೆಂಗಳೂರು, ಜುಲೈ 21:2025ಜಮೀನು ಮಾರಾಟದ ಹೆಸರಿನಲ್ಲಿ ₹1 ಕೋಟಿ ಮೊತ್ತದ ಹಣ ಪಡೆದುಕೊಂಡು, ನಂತರ ನಕಲಿ ದಾಖಲೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಮೋಸದ ಪ್ರಕರಣ ಬೆಳಕಿಗೆ ಬಂದಿದೆ. ಹಣ ವಾಪಸ್ ಕೇಳಿದ ಹೊತ್ತಿನಲ್ಲಿ, ಆರೋಪಿತರು ಕಛೇರಿಗೆ ನುಗ್ಗಿ ಗಲಾಟೆ ಮಾಡಿದ ಘಟನೆ 07 ಜುಲೈ 2025 ರಂದು ನಡೆದಿದೆ. ದೂರುದಾರರ ಪ್ರಕಾರ, 2025ರ ಜೂನ್ ತಿಂಗಳಲ್ಲಿ ಆರೋಪಿತರು ತಮಗೆ ಬಡಿದ ಕಟ್ಟಿಹೊಸಹಳ್ಳಿ ಗ್ರಾಮದ ಜಮೀನನ್ನು ಮಾರಾಟ ಮಾಡಲು ಪ್ರಸ್ತಾಪಿಸಿದರು. ಜಮೀನನ್ನು ಪರಿಶೀಲಿಸಿದ ನಂತರ, 24 ಜೂನ್ 2025 ರಂದು ₹1 ಕೋಟಿಯ ವ್ಯವಹಾರದ ಭಾಗವಾಗಿ ಮೊದಲ ಹಂತದಲ್ಲಿ ₹68 ಲಕ್ಷ ಹಣವನ್ನು ಪಾವತಿಸಿದರು. ಉಳಿದ ಹಣವನ್ನು ಮೂಲ ದಾಖಲೆಗಳೊಂದಿಗೆ ನಂತರ ನೀಡುವಂತೆ ಒಪ್ಪಂದವಾಯಿತು. ಆದರೆ, ಆರೋಪಿತರು ನಕಲಿ ದಾಖಲೆಗಳ ಜೆರಾಕ್ಸ್ ನಕಲನ್ನು ನೀಡಿದ ಬಳಿಕ, ದೂರುದಾರರು ಹಣ ವಾಪಸ್ ಕೇಳಿದಾಗ 6-7 ಅಪರಿಚಿತ ವ್ಯಕ್ತಿಗಳೊಂದಿಗೆ ಕಛೇರಿಗೆ…

ಮುಂದೆ ಓದಿ..
ಸುದ್ದಿ 

ಚಾಲಕನಿಂದ ₹3 ಲಕ್ಷ ಮೌಲ್ಯದ ಚಿನ್ನದ ಚೈನ್ ಕಳವು ಆರೋಪ

ಬೆಂಗಳೂರು, ಜುಲೈ 21: 2025ಕನ್ನೂರು ಗ್ರಾಮದ ಫೈಯರ್ ಬಂಗ್ ಕೆಫೆ ಅಂಡ್ ರೆಸ್ಟೋರೆಂಟ್ ಮಾಲೀಕರೊಬ್ಬರು, ತಮ್ಮ ಖಾಸಗಿ ಚಾಲಕನ ಮೇಲೆ 28.3 ಗ್ರಾಂ ತೂಕದ ಚಿನ್ನದ ಚೈನ್ ಕಳವು ಮಾಡಿದ ಆರೋಪ ಮಾಡಿಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಲೀಕರ ಪ್ರಕಾರ, ಪ್ರಕಾಶ್ ಬಿ.ಎನ್ (ವಯಸ್ಸು 37), ಎಂಬುವವರು ಕಾರ್ ಚಾಲಕರಾಗಿ ನೇಮಕಗೊಂಡಿದ್ದರು. ಮೇ 24ರಂದು ಅವರು ತಮ್ಮ ಕಾರು (ನಂ. ಕೆಎ-50-ಎನ್-7404)ನಲ್ಲಿ ಚಿನ್ನದ ಚೈನ್ ಇಡಲಾಗಿತ್ತು. ನಂತರ ಅದು ಕಾಣೆಯಾಗಿದ್ದು, ಕಾರಿನ ಎಲ್ಲಾ ಭಾಗಗಳಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಮೇ 31ರಂದು ಪ್ರಕಾಶ್ ತನ್ನ ಸಂಬಳ ಪಡೆದು ಯಾವುದೇ ಮಾಹಿತಿ ನೀಡದೇ ಕಾರು ಕಾಫೆ ಆವರಣದಲ್ಲಿ ಪಾರ್ಕ್ ಮಾಡಿ ಕೀಲಿಯನ್ನು ಸೆಕ್ಯೂರಿಟಿ ಗಾರ್ಡ್ ಹರೀಶ್ ಅವರ ಬಳಿ ಇಟ್ಟುಕೊಂಡು ಸ್ಥಳದಿಂದ ಹೊರಟಿದ್ದಾರೆ. ಪ್ರಕರಣ ಕುರಿತು ವಿಚಾರಣೆ ನಡೆಸಿದಾಗ, ರೆಸ್ಟೋರೆಂಟ್ ನ ಕಾರ್ಮಿಕ ಸುನೀಲ್ ಅವರ ಪ್ರಕಾರ ಪ್ರಕಾಶ್…

ಮುಂದೆ ಓದಿ..
ಸುದ್ದಿ 

ಕೊಡಿಗೇಹಳ್ಳಿಯಿಂದ ನಾಪತ್ತೆಯಾಗಿರುವ ವ್ಯಕ್ತಿಯ ಹುಡುಕಾಟಕ್ಕೆ ಕುಟುಂಬದಿಂದ ಮನವಿ

ಬೆಂಗಳೂರು, ಜುಲೈ 21 – 2025ಕುಟುಂಬದ ಸದಸ್ಯರ ಪ್ರಕಾರ, ಕೊಡಿಗೇಹಳ್ಳಿಯಲ್ಲಿ ವಾಸವಾಗಿದ್ದ 39 ವರ್ಷದ ನಾಗರಾಜ್ ಎಂಬವರು ಕಳೆದ ಜುಲೈ 17 ರಂದು ರಾತ್ರಿ 10 ಗಂಟೆ ಸಮಯದಲ್ಲಿ ಮನೆಬಿಟ್ಟು ಹೊರಟ್ಟಿದ ನಂತರ ಮರಳಿ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ದೊಡ್ಡಪ್ಪ ಕೊಡುಗೆಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಅರುಣ್ ಕುಮಾರ್ ಅವರ ಪ್ರಕಾರ, ನಾಗರಾಜ್ ತಮ್ಮ ಮಗ ವರುಣ್ ರಾಜ್ (17 ವರ್ಷ) ಜೊತೆ ಕಳೆದ ಒಂದು ವರ್ಷದಿಂದ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಗೌರಿ ಅವರು ಮಗಳು ಗಾಯತ್ರಿಯೊಂದಿಗೆ ಕಳೆದ ಮೂರು ತಿಂಗಳಿಂದ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದರು. ಈ ಮಧ್ಯೆ, ಕುಟುಂಬದಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ದಿನಾಂಕ ಜುಲೈ 18 ರಂದು, ವರುಣ್ ರಾಜ್ ತಮ್ಮ ದೊಡ್ಡಪ್ಪನಿಗೆ ಫೋನ್ ಮಾಡಿ, “ಅಪ್ಪ, ನಿನ್ನೆ ರಾತ್ರಿ ಫೋನ್ ನಲಿ ಮಾತನಾಡಿಕೊಂಡು…

ಮುಂದೆ ಓದಿ..
ಅಂಕಣ 

ಜೀವನಮಟ್ಟ ಸುಧಾರಣೆಯ ಆಯ್ಕೆಗಳು…..

ನಾವು ನಮ್ಮ ಜೀವನದ ಸಾಕಷ್ಟು ಸಮಯವನ್ನು ಯಾವ ಸ್ಥಳದಲ್ಲಿ, ಯಾವ ಪ್ರದೇಶದಲ್ಲಿ, ಯಾವ ವ್ಯಕ್ತಿಗಳೊಂದಿಗೆ, ಯಾವ ಭಾವದೊಂದಿಗೆ ಹೆಚ್ಚು ಹೆಚ್ಚು ಕಳೆಯುತ್ತೇವೆಯೋ ಅದರ ಪ್ರಭಾವ ನಮ್ಮ ಬದುಕಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಬಹುತೇಕ ಅನಿವಾರ್ಯವಾಗಿ ಸಹಜವಾಗಿಯೇ, ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ಇವುಗಳ ಮೇಲೆ ನಿಯಂತ್ರಣ ಸಾಧಿಸಬೇಕಿರುವುದು ನಮ್ಮ ಆಯ್ಕೆ ಮತ್ತು ವಿವೇಚನೆಗೆ ಬಿಟ್ಟಿದ್ದು. ಕೆಲವು ಉದಾಹರಣೆಗಳೆಂದರೆ……… ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ,ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌.ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು ಉಳಿಸುತ್ತದೆ.ಗ್ರಂಥಾಲಯದಲ್ಲಿ ಸವೆಸುವ ಸಮಯ ಯಾವಾಗಲೂ ಜ್ಞಾನವನ್ನು ವೃದ್ಧಿಸುತ್ತದೆ.ಸಾವು, ಸ್ಮಶಾನ, ತಿಥಿಗಳಲ್ಲಿ ಭಾಗವಹಿಸಿದಾಗ ಹೃದಯ ಭಾರವಾಗುತ್ತದೆ.ಮದುವೆ, ನಾಮಕರಣ, ಗೃಹ ಪ್ರವೇಶ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.ಸಿನಿಮಾ, ನಾಟಕ, ಸರ್ಕಸ್ ಮುಂತಾದ ಸ್ಥಳಗಳು ಭಾವನೆಗಳನ್ನು ಕೆರಳಿಸುತ್ತವೆ,ದೇವ ಮಂದಿರ, ಚರ್ಚು, ಮಸೀದಿ, ಮಠ…

ಮುಂದೆ ಓದಿ..
ಸುದ್ದಿ 

ಹೊಸಕೋಟೆ ಪಾಠಶಾಲೆಯಲ್ಲಿ ಮಾದಕ ವ್ಯಸನ ತಡೆ ಜಾಗೃತಿ ಕಾರ್ಯಕ್ರಮ

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸಕೋಟೆಯಲ್ಲಿ ಜುಲೈ 19, 2025 ರಂದು ‘ಸಂಭ್ರಮ ಶನಿವಾರ’ದ ಅಂಗವಾಗಿ “ಮಾದಕ ವಸ್ತುಗಳ ದುರುಪಯೋಗ ತಡೆಗೆ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಸನದ ವಿರುದ್ಧ ಚೇತನತ್ಮಕ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿತ್ತು. ಕಾರ್ಯಕ್ರಮಕ್ಕೆ ಎಲೆರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀ ಗಂಗಾಧರ್ ಸಿಎಚ್ಒ ಮತ್ತು ಉಮಾಪತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಕ್ಕಳಿಗೆ ಮಾದಕ ವಸ್ತುಗಳ ಹಾನಿಕರ ಪರಿಣಾಮಗಳ ಕುರಿತು ಸಮರ್ಪಕವಾದ ಮಾಹಿತಿ ನೀಡಿದರು. ಅವರು ವ್ಯಸನದ ಗೀಳು ಹೇಗೆ ಪ್ರಾರಂಭವಾಗುತ್ತದೆ ಮತ್ತು ಅದು ವ್ಯಕ್ತಿ ಹಾಗೂ ಕುಟುಂಬದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬ ಕುರಿತು ಮನ ಮುಟ್ಟುವಂತೆ ವಿವರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತಾದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ನಾಟಕದ ಮೂಲಕ ಮಕ್ಕಳಿಗೆ ನೈಜ ಜೀವನದ ಉದಾಹರಣೆಗಳ ಮೂಲಕ ವ್ಯಸನದ…

ಮುಂದೆ ಓದಿ..
ಅಂಕಣ 

ಹೇಳುವುದು ಒಂದು ಮಾಡುವುದು ಇನ್ನೊಂದು ಏಕೋ ಕಾಣೆ…….

ಟಿ ವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ……. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ,ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿಂಬಾಲಕರಾಗಿರುವಿರಿ……. ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ,ಆದರೆ ವಾಸ್ತವದಲ್ಲಿ ಎಲ್ಲವೂ ನನಗೇ ಇರಲಿ ಎಂದು ದುರಾಸೆ ಪಡುವಿರಿ.ಪತ್ರಿಕೆ, ಟಿವಿಗಳಲ್ಲಿ ವೃದ್ದ ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ,ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ……. ವರದಕ್ಷಿಣೆ ಸಾವುಗಳನ್ನುವ ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ,ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆಂದು ಆಸೆ ಪಡುವಿರಿ…… ಬೇರೆ ಶ್ರೀಮಂತ ಸಮಾರಂಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ,ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ….. ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ,ನಿಜ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹೂಡಿಕೆ ಮೋಸ – ಫೇಸ್‌ಬುಕ್ ಲಿಂಕ್ ಮೂಲಕ ₹1.8 ಲಕ್ಷ ಕಳೆದುಕೊಂಡ ವ್ಯಕ್ತಿ

ಬೆಂಗಳೂರು, 20 ಜುಲೈ 2025ಫೇಸ್‌ಬುಕ್‌ನಲ್ಲಿ ಬಂದ OTC ಟ್ರೇಡಿಂಗ್ ಲಿಂಕ್ ಮೂಲಕ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ₹1,80,000 ರಷ್ಟು ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪೀಡಿತರು 09/06/2025 ರಂದು “L317-Kuvera Wealth Strategy Community” ಎಂಬ ಫೇಸ್‌ಬುಕ್ ಗುಂಪಿನಿಂದ OTC ಟ್ರೇಡಿಂಗ್ ಲಿಂಕ್‌ ಅನ್ನು ಪಡೆದಿದ್ದರು. ಅದರ ಮೂಲಕ ಒಂದು ತಿಂಗಳಲ್ಲಿ 300% ಲಾಭದ ಭರವಸೆ ನೀಡಲಾಗಿತ್ತು. ಇದರೊಂದಿಗೆ ಮತ್ತೊಂದು ಗುಂಪಾದ “Kuvera Hub” ಅನ್ನು ಮಾರ್ಗದರ್ಶನಕ್ಕಾಗಿ ರಚಿಸಲಾಗಿದ್ದು, ಅದರ ಮೊಬೈಲ್ ಆಪ್ ಡೌನ್‌ಲೋಡ್ ಮಾಡಲು ಸೂಚಿಸಲಾಗಿತ್ತು. ಪೀಡಿತರು ಆಪ್ ಮೂಲಕ 10/06/2025 ರಿಂದ 25/06/2025 ರವರೆಗೆ ಹಂತ ಹಂತವಾಗಿ ಒಟ್ಟು ₹1,80,000 ಹಣವನ್ನು UPI ಮತ್ತು NEFT ಮೂಲಕ ಪಾವತಿಸಿದರು. ಆದರೆ ನಂತರ ಲಾಭ ತೋರಿಸಲಾಗಿದರೂ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಆಪ್‌ನಲ್ಲಿ ಹಣ ‘ಫ್ರೀಜ್’ ಆಗಿದೆಯೆಂದು ತೋರಿಸಲಾಯಿತು.…

ಮುಂದೆ ಓದಿ..