ಸುದ್ದಿ 

ಬೆಂಗಳೂರು: ಲಾರಿ ಡಿಕ್ಕಿಯಿಂದ ಬೈಕ್ ಸವಾರ ಗಂಭೀರ ಗಾಯ

ಬೆಂಗಳೂರು, ಜುಲೈ 20:2025ನಗರದ ಕೋಗಿಲು ಸರ್ಕಲ್ ಬಳಿ ಇಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಇಂದು ಸಂಜೆ 4:10ರ ಸುಮಾರಿಗೆ ಬಿಬಿ ಮುಖ್ಯ ರಸ್ತೆ ಬಳಿ ನಡೆದಿದೆ. ವಿವರದ ಪ್ರಕಾರ, ದಿನೇಶ ಕುಮಾರ್ ಅವರು ನಂಬರ್ 6ಎ.01 ಇಬಿರಾ.3305 ಸಂಖ್ಯೆಯ ಬೈಕ್‌ನಲ್ಲಿ ಸಾಗುತ್ತಿದ್ದರು. ಇದೇ ವೇಳೆ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿ ಬಲಕ್ಕೆ ತಿರುಗಿ ಬೈಕ್ ಎಡಭಾಗಕ್ಕೆ ಡಿಕ್ಕಿಯಾಗಿ, ದಿನೇಶ್ ಕುಮಾರ್ ಅವರ ಎಡಕೈ ಹಾಗೂ ಶರೀರದ ಅನೇಕ ಭಾಗಗಳಿಗೆ ಗಂಭೀರ ಗಾಯಗಳು ಸಂಭವಿಸಿವೆ. ಅಪಘಾತದ ನಂತರ ಸ್ಥಳೀಯರು ಕೂಡಲೇ ಗಾಯಾಳುವನ್ನು ಕೆ.ಕೆ ಆಸ್ಪತ್ರೆಯ ಲೈಫ್ ಕೇರ್ ಯುನಿಟ್‌ಗೆ ದಾಖಲಿಸಿದ್ದಾರೆ. ಪ್ರಸ್ತುತ ಚಿಕಿತ್ಸೆ ನಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು…

ಮುಂದೆ ಓದಿ..
ಸುದ್ದಿ 

ಕಟ್ಟಡದಲ್ಲಿ ಕೆಲಸ ವೇಳೆ ಕಾರ್ಮಿಕನ ದುರ್ಘಟನೆ ಸಾವು

ಬೆಂಗಳೂರು, ಜುಲೈ 20–2025ಚಿಕ್ಕಜಾಲದ ಪುರವ ಏರೋಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಅಕ್ರಮುಲ್ ಹುಸೇನ್ (35) ಅವರು ದುರ್ಘಟನೆಯಿಂದ ಮೃತಪಟ್ಟಿದ್ದಾರೆ. ಮೃತನ ಪತ್ನಿಯ ದೂರಿನ ಪ್ರಕಾರ, ತಮ್ಮ ಗಂಡನು ಸ್ಟೀಲ್ ಹೋಲ್ಡಿಂಗ್ ಕೆಲಸ ಮಾಡುತ್ತಿದ್ದು, ಜುಲೈ 17 ರಂದು ಬೆಳಿಗ್ಗೆ 8:30ಕ್ಕೆ ಚಿಕ್ಕಜಾಲಕ್ಕೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2:00 ಗಂಟೆಗೆ ಕರೆಮಾಡಿ, ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕೆಲಸ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅದೇ ದಿನ ಸಂಜೆ 6:45ರ ಹೊತ್ತಿಗೆ, ಅಕ್ರಮುಲ್ ಅವರ ತಲೆಯ ಮೇಲೆ ಕಟ್ಟಡದ ಮೇಲಿನಿಂದ ಕಬ್ಬಿಣದ ಬಿಸಿ ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಅವರು ಮೃತರಾದರು. ಮೃತನ ಪತ್ನಿಯವರು, ಕಟ್ಟಡ ನಿರ್ಮಾಣ ಕಂಪನಿಗಳು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯದಿಂದ ಕೆಲಸ ಮಾಡಿಸುತ್ತಿದ್ದವು ಎಂದು ಆರೋಪಿಸಿದ್ದಾರೆ. ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ಮುಂದೆ ಓದಿ..
ಸುದ್ದಿ 

ಮಧ್ಯರಾತ್ರಿ ಮನೆ ಕಳ್ಳತನ – ಚಿನ್ನಾಭರಣ ಹಾಗೂ ನಗದು ಕಳವು

ಬೆಂಗಳೂರು ನಗರದತೋಟದಹಳ್ಳಿ ನಿವಾಸಿಯೊಬ್ಬರ ಮನೆಯಲ್ಲಿ ಮಧ್ಯರಾತ್ರಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ. ಕುಟುಂಬದ ಹಿರಿಯರಾದ ಶ್ರೀ ಟಿ. ಮಹಬೂಬ್ ಸಾಹೇಬ್ ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ಮತ್ತು ನಗದು ಕಸಿದುಕೊಂಡು ಹೋಗಿದ್ದಾರೆ. ಮೆಹಬೂಬ್ ಸಾಹೇಬ್ ರವರು ನೀಡಿದ ಮಾಹಿತಿಯಂತೆ, ದಿನಾಂಕ 14 ಜುಲೈ 2025 ರಂದು ಮಧ್ಯಾಹ್ನ 12:30 ಗಂಟೆಗೆ ಅವರು ತಮ್ಮ ಪತ್ನಿಯನ್ನು ಮಗಳ ಮನೆಗೆ ಬಿಟ್ಟು ವಾಪಸ್ಸು ಮನೆಗೆ ಬಂದಿದ್ದರು. ರಾತ್ರಿ 09:50 ಗಂಟೆಗೆ ಮನೆ ಬಾಗಿಲು ಲಾಕ್ ಮಾಡಿ ಮಲಗಿದ್ದರು. ಆದರೆ 15 ಜುಲೈ ಬೆಳಗಿನ ಜಾವ ಸುಮಾರು 01:30ರ ಸುಮಾರಿಗೆ ಕಿತ್ತಳೆ ಗಾಡಿಯ ಸ್ಟಾರ್ಟ್ ಶಬ್ದ ಕೇಳಿದಾಗ ಎಚ್ಚರವಾಗಿ ಬಾಗಿಲ ಬಳಿ ಬಂದಾಗ, ಒಬ್ಬ ಅಪರಿಚಿತ ವ್ಯಕ್ತಿ ಕಾಂಪೌಂಡ್ ಹಾರಿ ಓಡಿರುವುದನ್ನು ದರ್ಶಿಸಿದ್ದಾರೆ. ಬಳಿಕ ಮನೆ ಒಳಗೆ ಬಂದು ನೋಡಿದಾಗ ಹಾಲ್ ಹಾಗೂ ಎರಡು ರೂಮ್‌ಗಳ ಕಬೋರ್ಡ್‌ಗಳು ಮತ್ತು ಬೆಡ್‌ನಲ್ಲಿದ್ದ…

ಮುಂದೆ ಓದಿ..
ಸುದ್ದಿ 

ಹೆಸರಘಟ್ಟ ರಸ್ತೆ ಬಳಿ ಯುವಕನ ಮೇಲೆ ಕಾರು ಚಲಾಯಿಸಿ ಕೊಲೆ ಯತ್ನ – ಮೂವರಿಗೆ ವಿರುದ್ಧ ದೂರು

ಬೆಂಗಳೂರು, ಜುಲೈ 17, 2025: ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಳಿ ಭಯಾನಕ ಘಟನೆ ನಡೆದಿದೆ. ಹಣದ ವಿವಾದದಿಂದ ಮೂವರು ವ್ಯಕ್ತಿಗಳು ಯುವಕನ ಮೇಲೆ ಕಾರು ಹರಿಸಿ ಕೊಲೆ ಯತ್ನ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೀಡಿತ ವ್ಯಕ್ತಿಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮಲ್ಲಿಕಾರ್ಜುನ ನವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಅವರ ತಂದೆಯೂ ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ‘ರಿಷಿ’ ಎಂಬಾತನು ಮಲ್ಲಿಕಾರ್ಜುನ ರಿಂದ ಹಣದ ಅಗತ್ಯವಿದೆ ಎಂದು ಹೇಳಿ ರೂ. 15,000 ಪಡೆದುಕೊಂಡಿದ್ದನು. ಆದರೆ ಹಣವನ್ನು ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ವಿಳಂಬ ಮಾಡುತ್ತಿದ್ದ ರಿಷಿ, ಮಲ್ಲಿಕಾರ್ಜುನ ನವರಿಗೆ ತಮ್ಮನಿಗೆ “ನಿನ್ನ ಅಣ್ಣನು ಮತ್ತೆ ಹಣ ಕೇಳಿದರೆ, ಕೊಲೆ ಮಾಡುತ್ತೇನೆ” ಎಂದು life-threatening ಬೆದರಿಕೆ ಹಾಕಿದ್ದನು. 06 ಜುಲೈ 2025 ರಂದು ಮಧ್ಯರಾತ್ರಿ, ರಿಷಿಯ…

ಮುಂದೆ ಓದಿ..
ಸುದ್ದಿ 

ವಿಜಯಪುರ ಉತ್ಸವ – 2025 ಕ್ಕೆ ಭವ್ಯ ಚಾಲನೆ ಶಾಮಿಯಾನ ಸಪ್ಲೈಯರ್ಸ್‌ ಮತ್ತು ಸಂಬಂಧಿತ ಉದ್ಯಮಗಳ ಸಾಂಸ್ಕೃತಿಕ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆ

ವಿಜಯಪುರ ಉತ್ಸವ – 2025’ಕ್ಕೆ ಭವ್ಯ ಚಾಲನೆಶಾಮಿಯಾನ ಸಪ್ಲೈಯರ್ಸ್‌ ಮತ್ತು ಸಂಬಂಧಿತ ಉದ್ಯಮಗಳ ಸಾಂಸ್ಕೃತಿಕ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆ ವಿಜಯಪುರ, ಜುಲೈ 19 – ವಿಜಯಪುರ ಜಿಲ್ಲಾ ಶಾಮಿಯಾನ ಸಪ್ಲೈಯರ್ಸ್ ಮಾಲೀಕರ ಸಂಘ ಹಾಗೂ ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಸೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ವಿಜಯಪುರ ಉತ್ಸವ – 2025’ಗೆ ಇಂದು ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಭವ್ಯ ಚಾಲನೆ ದೊರೆಯಿತು. ಈ ಐದನೇ ವರ್ಷದ ಉತ್ಸವವು ಶಾಮಿಯಾನ, ಲೈಟಿಂಗ್, ಮೈಕ್, ಡೆಕೋರೇಶನ್ ಮತ್ತು ಕೇಟರಿಂಗ್ ಉದ್ಯಮದಲ್ಲಿನವರಿಗೆ ಸಮರ್ಪಿತವಾದ ವಿಶೇಷ ವೇದಿಕೆಯಾಗಿದ್ದು, ಉತ್ತರ ಕರ್ನಾಟಕದ 14 ಜಿಲ್ಲೆಗಳ ಸುಮಾರು 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಪೂಜ್ಯ ಅಭಿನವ ಪುಂಡಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಾಹಿಸಿದ್ದರು. ಜಿಲ್ಲಾ ಶಾಮಿಯಾನ ಸಂಘದ ಅಧ್ಯಕ್ಷ ಶಿವಾನಂದ ಮಾನಕಾರ ಸೇರಿದಂತೆ ಅನೇಕ ಗಣ್ಯರು…

ಮುಂದೆ ಓದಿ..
ಸುದ್ದಿ 

ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ಕರ್ನಾಟಕ ಭೀಮ ರಕ್ಷಕ ಸಂಘಟನೆ..

ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ಕರ್ನಾಟಕ ಭೀಮ ರಕ್ಷಕ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ರಾಜಾ ಲಖಮಗೌಡ ಜಲಾಶಯದಿಂದ ಹುಬ್ಬಳ್ಳಿ – ಧಾರವಾಡ ನಗರಗಳಿಗೆ ಕೈಗಾರಿಕಾ ಉದ್ಯಮಕ್ಕೆ ನೀರು ಒಯ್ಯುವ ಪ್ರಕ್ರಿಯೆಯನ್ನು ಬಂದ ಮಾಡಬೇಕು ಎಂದು ಹಿಡಕಲ ಡ್ಯಾಂ ನಲ್ಲಿ ನಿರಂತರ ಹೋರಾಟ ನಿಲ್ಲದು ಎಂದು ಹೋರಾಟ ಮುಂದುವರೇಸೀದರು ಮತ್ತು ಈ ಜಲಾಶಯ ನೀರು ಇಲ್ಲಿನ ಸಾರ್ವಜನಿಕರಿಗೆ ಕುಡಿಯಲು , ದನಕರುಗಳಿಗೆ ಮತ್ತು ಕೃಷಿ ಭೂಮಿಗಳಿಗೆ ನೀರು ಸಮರ್ಪವಾಗಿ ದೊರಕುತ್ತಿಲ್ಲ ಹಿಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇಲ್ಲಿನ ಜನತೆಯ ಬಗ್ಗೆ ವಿಚಾರ ಬಿಟ್ಟು ಬೇರೆ ಜಿಲ್ಲೆಗೆ ನೀರು ಪೂರೈಸುವದು ಎಷ್ಟರಮಟ್ಟಿಗೆ ಸೂಕ್ತ, ಮತ್ತು ನಮ್ಮ ಬೆಳಗಾವಿ ಜಿಲ್ಲೆ ರೈತರು , ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಮಗೆ ಆಪತ್ತು ತಪ್ಪಿದ್ದಲ್ಲ ಮತ್ತು ಈ ಯೋಜನೆ ಪೂರ್ಣಗೊಂಡಲ್ಲಿ ಜಲಾಶಯದಲ್ಲಿ ನೀರು ಹೆಚ್ಚು…

ಮುಂದೆ ಓದಿ..
ಅಂಕಣ 

ನಿಮಿಷಾ ಪ್ರಿಯ……. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು

ನಿಮಿಷಾ ಪ್ರಿಯ……. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು,ಮದುವೆಗೋ ಮಸಣಕೋ, ಹೋಗೆಂದ ಕಡೆಗೋಡು, ಪದ ಕುಸಿಯೇ ನೆಲವಿಹುದು ಮಂಕು ತಿಮ್ಮ,……. ಡಿವಿಜಿ.ದೂರದ ಯೆಮೆನ್ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹೋದ ಕೇರಳದ ಪಾಲಕ್ಕಾಡಿನ ನಿಮಿಷಾ ಪ್ರಿಯ ಎಂಬ ದಾದಿ, ಬದುಕಿನ ಆಕಸ್ಮಿಕ ಹೊಡೆತಕ್ಕೆ ಸಿಲುಕಿ ಕೊಲೆ ಆರೋಪದ ಅಪರಾಧ ಸಾಬೀತಾಗಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿ, ಸಾವು ಬದುಕಿನ ನಡುವೆ ದಿನಗಳನ್ನು ದೂಡುತ್ತಾ ಯಾವುದೇ ಕ್ಷಣದಲ್ಲಿ ನೇಣುಗಂಬಕ್ಕೇರುವ ಅಥವಾ ಬಿಡುಗಡೆಯಾಗಿ ಹೊಸ ಬದುಕಿನೊಂದಿಗೆ ತನ್ನ ಹುಟ್ಟೂರಿಗೆ ಬರುವ ಅತ್ಯಂತ ತೆಳುವಾದ ಗೆರೆಯ ಮಧ್ಯೆ ನಿಂತಿದ್ದಾಳೆ. ಕೆಲವು ವಿಷಯಗಳೇ ಹಾಗೆ. ಇದ್ದಕ್ಕಿದ್ದಂತೆ ತುಂಬಾ ಪ್ರಚಾರಕ್ಕೆ ಬಂದು ಬಿಡುತ್ತವೆ. ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಿದ್ದರೂ ಕೆಲವೊಂದು ಘಟನೆಗಳು ಮಾತ್ರ ವಿಶೇಷ ಮಹತ್ವವನ್ನು ಪಡೆಯುತ್ತವೆ. ಉದಾಹರಣೆಗೆ ದೆಹಲಿಯಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ನಡೆದಿದ್ದರು ಜ್ಯೋತಿಸಿಂಗ್ ಎಂಬ ನಿರ್ಭಯ…

ಮುಂದೆ ಓದಿ..
ಸುದ್ದಿ 

ಸಿಐಆರ್‌ಪಿಎಫ್ ಸೈನಿಕನ ಅನುಮಾನಾಸ್ಪದ ಸಾವು

ಬೆಂಗಳೂರು, ಜುಲೈ 19, 2025: ಸಿಆರ್‌ಪಿಎಫ್ (CRPF) ಸಿಬ್ಬಂದಿ ಫೋರ್ಸ್ ನಂ. 255050873 RT/GDGC ಆಗಿರುವ ಯೋಧನೊಬ್ಬನು ಇಂದು ಬೆಳಿಗ್ಗೆ ಸುಮಾರು 06:15 ಗಂಟೆಗೆ ಶಿಬಿರದಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಬೆಳಗಿನ ಜಾವ ನಡೆದಿದ್ದು, ಸಹೋದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಮರಣದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಘಟನಾ ಸ್ಥಳಕ್ಕೆ ಯಲಹಂಕ ಉಪನಗರ ಪೊಲೀಸರು ದೌಡಾಯಿಸಿದ್ದು, ಅಸ್ವಾಭಾವಿಕ ಮರಣ (U.D.) ಪ್ರಕರಣ ದಾಖಲಾಗಿದೆ. ಇನ್ನಷ್ಟು ಮಾಹಿತಿ ಕಲೆಹಾಕಲು ಪಂಚನಾಮೆ (Inquest Report) ಮತ್ತು ಪೋಸ್ಟ್‌ಮಾರ್ಟಂ ನಡೆಯುತ್ತಿದೆ. ಯಲಹಂಕ ಉಪನಗರ ಪೊಲೀಸರು ಈ ಪ್ರಕರಣದ ಕುರಿತಾಗಿ ತನಿಖೆ ಮುಂದುವರಿಸಿಕೊಂಡಿದ್ದಾರೆ. ಸಾವಿನ ಹಿನ್ನೆಲೆ ಕುರಿತು ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ, ಮೃತ್ಯುವಿಗೆ ಕಾರಣವಾದ ಸತ್ಯಾಂಶ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.

ಮುಂದೆ ಓದಿ..
ಸುದ್ದಿ 

ಪ್ರೇಮ ಸಂಬಂಧದ ಹೆಸರಲ್ಲಿ ಲೈಂಗಿಕ ಕಿರುಕುಳ – ಯುವತಿ ನೀಡಿದ ದೂರು

ಬೆಂಗಳೂರು, ಜುಲೈ 19:2025ನಗರದ ಯುವತಿ ನೀಡಿದ ದೂರಿನ ಪ್ರಕಾರ, ಜೆಬಿನ್ ಎಂಬ ಯುವಕನೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ ಅವಳು, ಅವನಿಂದ ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ಹಾಗೂ ಬೆದರಿಕೆಗಳನ್ನು ಅನುಭವಿಸಿದ್ದಾಳೆ. 2024ರಿಂದಲೇ ಅವನು ಆಕೆಯ ಮೇಲೆ ಹಿಂಸಾತ್ಮಕ ವರ್ತನೆ ತೋರಿಸುತ್ತಿದ್ದನು. 2025ರ ಮೇ 14 ರಂದು ತನ್ನ ರೂಂನಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಆಗಾಗ ದೈಹಿಕವಾಗಿ ಹಾನಿಯನ್ನೂ ಮಾಡಿದ್ದಾನೆ. ಜುಲೈ 17 ರಂದು ರಾತ್ರಿ 12ರಿಂದ ಬೆಳಿಗ್ಗೆ 5ರವರೆಗೆ ಆಕೆಯ ಮನೆ ಬಳಿ ಬಂದು “ನನ್ನ ಜೊತೆ ಬಾ” ಎಂದು ಒತ್ತಾಯಿಸಿದ್ದು, ನಿರಾಕರಣೆ ಮಾಡಿದಾಗ “ನಾನು ಸತ್ತು ಹೋಗುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಇದಕ್ಕೂ ಮೀರಿಯೂ, ಆಕೆಯ ಮೊಬೈಲ್ ಹೊಡೆದು ನಾಶಪಡಿಸಿದ್ದಾನೆ ಮತ್ತು ಖಾಸಗಿ ಫೋಟೋಗಳನ್ನು ಹರಡುವ ಬೆದರಿಕೆಯನ್ನೂ ನೀಡಿದ್ದಾನೆ.ಈ ಕುರಿತು ಯುವತಿ ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದು, ಜೆಬಿನ್ ವಿರುದ್ಧ…

ಮುಂದೆ ಓದಿ..
ಸುದ್ದಿ 

ಸ್ವತ್ತಿನ ವಿವಾದದಲ್ಲಿ ಬೆದರಿಕೆ – ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು, ಜುಲೈ 19:2025ನಗರದ ಉಪನಗರದಲ್ಲೊಂದು ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಭಾರೀ ಗಂಭೀರತೆಯ ಕಡೆಗೆ ತಿರುಗಿದ್ದು, ಈ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳ ವಿರುದ್ಧ ಬೆದರಿಕೆ ಹಾಗೂ ಸ್ವತ್ತಿಗೆ ಸಂಬಂಧಿಸಿದ ಕಳಪೆ ಚಟುವಟಿಕೆ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಾಕಮ್ಮ ವರದಿಯ ಪ್ರಕಾರ, 50 x 31 ಅಡಿ ಅಳತೆಯ (ಒಟ್ಟು 1550 ಚದರ ಅಡಿ) ನಿವೇಶನವನ್ನು ಅವರು ತಮ್ಮ ಪುತ್ರ ಯಲಪ್ರಾರವರಿಂದ 2023ರ ಜನವರಿ 11ರಂದು ಹಕ್ಕು ಬಿಡುಗಡೆ ಪತ್ರದ ಮೂಲಕ ಪಡೆದಿದ್ದರು. ತಮ್ಮ ಸ್ವತ್ತನ್ನು ಆರೈಕೆ ಮಾಡಲು ದೂರುದಾರರು ಆಗಾಗ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, 2024ರಿಂದ ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂಬ ಸೂಚನೆ ಇರುವ ಬೋರ್ಡ್ ಅನ್ನು ಅಲ್ಲಿ ಸ್ಥಾಪಿಸಿದ್ದರು. ಹೆಚ್ಚಿನ ತನಿಖೆಯಲ್ಲಿ, ಈ ಬೋರ್ಡ್ ಆರೋಪಿ ಹರೀಶ್ ಕುಮಾರ್ ಎಂಬವರಿಂದ ಹಾಕಲಾಗಿದೆ ಎಂಬ ಮಾಹಿತಿ ಸಂಬಂಧಿಕರು ಹಾಗೂ ಸ್ಥಳೀಯರಿಂದ…

ಮುಂದೆ ಓದಿ..