ಅಪರಾಧ ಶಾಸ್ತ್ರ -ಕ್ರಿಮಿನಾಲಜಿ (Criminology )…
ಅಪರಾಧ ಶಾಸ್ತ್ರ -ಕ್ರಿಮಿನಾಲಜಿ (Criminology )… ನಾಗರಿಕತೆಯ ಪ್ರಾರಂಭದಲ್ಲಿ ಇದು ಮಾನವರಲ್ಲಿ ಸಹಜ ಗುಣವಾಗಿಯೇ ಅಸ್ತಿತ್ವದಲ್ಲಿತ್ತು. ಎಲ್ಲಾ ಪ್ರಾಣಿಗಳೊಂದಿಗೆ ಮನುಷ್ಯ ಸಹ ತನ್ನ ಅಗತ್ಯತೆಗಳ ಪೂರೈಕೆ ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ತನ್ನ ಇತರ ಬುದ್ಧಿ ಶಕ್ತಿಯೊಂದಿಗೆ ತನಗರಿವಿಲ್ಲದೆ ಸ್ವಾಭಾವಿಕವಾಗಿಯೇ ಅಪರಾಧ ಶಾಸ್ತ್ರ ಸಹ ಬಲ್ಲವನಾಗಿದ್ದ ಮತ್ತು ಅದನ್ನು ಬದುಕಿನ ಭಾಗವಾಗಿ ಅಳವಡಿಸಿಕೊಂಡಿದ್ದ. ಆದರೆ ನಂತರದ ರಾಜಪ್ರಭುತ್ವದಲ್ಲಿ ಅಪರಾಧ ಶಾಸ್ತ್ರ ಅಧೀಕೃತತೆ ಪಡೆಯಿತು. ಹೊಟ್ಟೆ ಪಾಡಿಗಾಗಿ ಕೆಲವರು, ಹಿಂಸಾ ವಿಕಾರ, ವಿನೋದಗಳಿಗಾಗಿ ಕೆಲವರು, ವಿಸ್ತರಣೆಗಾಗಿ ಕೆಲವರು, ಸ್ವ ರಕ್ಷಣೆಗಾಗಿ ಕೆಲವರು ಅಪರಾಧ ಶಾಸ್ತ್ರಗಳ ಅರಿವಿನಡಿಯಲ್ಲಿ ಬದುಕುತ್ತಿದ್ದರು. ಪ್ರಜಾಪ್ರಭುತ್ವ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಒಂದು ಕ್ರಮಬದ್ಧತೆ ಪಡೆದ ಮೇಲೆ ಅಪರಾಧ ಶಾಸ್ತ್ರ ಮಹತ್ವವನ್ನು ಪಡೆಯಿತು. ಸಾಮಾನ್ಯವಾಗಿ ಅಪರಾಧ ಶಾಸ್ತ್ರವನ್ನು ಪೊಲೀಸರು ಮತ್ತು ಅದಕ್ಕೆ ಸಂಬಂಧಪಟ್ಟವರು ಮಾತ್ರ ಆಳವಾಗಿ ಅಧ್ಯಯನ ಮಾಡುತ್ತಿದ್ದರು. ಅದರ ಮುಖಾಂತರವೇ ಸಮಾಜದಲ್ಲಿ ಅಪರಾಧಿಗಳನ್ನು ಹಿಡಿಯುವ ಪ್ರಕ್ರಿಯೆ…
ಮುಂದೆ ಓದಿ..
