ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ – ಲಕ್ಷಾಂತರ ರೂಪಾಯಿ ವಂಚನೆಯ ಪ್ರಕರಣ ದಾಖಲೆ
Taluknewsmedia.comಬೆಂಗಳೂರು, ಜೂನ್ 19:ನಗರದ ಚಿಕ್ಕಪೇಟೆ ಪ್ರದೇಶದಲ್ಲಿರುವ ‘ಅರಾಧನಾ ಟೆಕ್ಸ್ಟೈಲ್ಸ್’ ಅಂಗಡಿಯಲ್ಲಿ ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ ಹಾಗೂ ಲಕ್ಷಾಂತರ ರೂಪಾಯಿಗಳ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಡಿಯ ಮಾಲಕರು ನಾಲ್ವರು ವ್ಯಕ್ತಿಗಳ ವಿರುದ್ಧ ಪಿಸಿಆರ್ (PCR) ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಮಾಹಿತಿ ಪ್ರಕಾರ, ಅಂಗಡಿಯ ನಿರ್ವಹಣೆಗೆ ನೇಮಿಸಲಾಗಿದ್ದ ಹರೇಂದ್ರನಾಥ ಎಂಬಾತನು ಮಾಲಕರ ವಿಶ್ವಾಸಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಲಾಗಿದೆ. ಅಂಗಡಿಯ ಕೀಲಿಯನ್ನು ಪಡೆದ ನಂತರ, ಮಾಲಿಕರ ಅನುಮತಿಯಿಲ್ಲದೆ ರೂ. 18 ಲಕ್ಷ ಮೌಲ್ಯದ ಸೀರೆಗಳನ್ನು ಯಾವುದೇ ಬಿಲ್ ರವಾನೆ ಇಲ್ಲದೇ ಮಾರಾಟ ಮಾಡಿದ್ದಾರೆ. ಅಷ್ಟರಲ್ಲಿ, ಕೌಟುಂಬಿಕ ಸಮಸ್ಯೆ ಹೆಸರಿನಲ್ಲಿ ಫೋನ್ ಪೇ ಮೂಲಕ ರೂ. 6,86,300/- ಹಣ ಪಡೆದಿದ್ದು, ಒಂದು ತಿಂಗಳಲ್ಲಿ ಹಿಂದಿರುಗಿಸುತ್ತೇನೆ ಎಂಬ ಭರವಸೆ ನೀಡಿದರೂ ಈವರೆಗೆ ಹಣ ವಾಪಸ್ಸಾಗಿಲ್ಲ. ಇದೇ ರೀತಿಯಲ್ಲಿ, ಇನ್ನಿಬ್ಬರು ಸೀರೆ ಏಜೆಂಟ್‌ಗಳಾದ ರಮೇಶ್…
ಮುಂದೆ ಓದಿ..
