ಸಿನೆಮಾ ಸುದ್ದಿ 

ಫ್ಯಾಮಿಲಿ ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯರಾವ್ ಯೋಗರಾಜ ಭಟ್- ದಿನಕರ್ ಚಾಲನೆ

Taluknewsmedia.com

Taluknewsmedia.com ನನ್ ಮಗಳೇ ಹೀರೋಯಿನ್ ಸೇರಿದಂತೆ ಹಲವು ಸದಭಿರುಚಿಯ ಚಿತ್ರಗಳ ನಿರ್ದೇಶಕ ಎಸ್.ಕೆ. ಬಾಹುಬಲಿ ಇದೀಗ ಕೃಷ್ಣ ಅಜೇಯ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಿ.ಕೆ. ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕ ಕಿರಣ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಯೋಗರಾಜ ಭಟ್ಟರು ಕ್ಲಾಪ್ ಮಾಡಿದರೆ, ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕ ಎಂ.ಡಿ. ಶ್ರೀಧರ್, ಎಸ್. ನಾರಾಯಣ್, ಶಿವತೇಜಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫ್ಯಾಮಿಲಿ ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯರಾವ್ ಯೋಗರಾಜ ಭಟ್- ದಿನಕರ್ ಚಾಲನೆ. ಲವರ್ ಬಾಯ್, ಆಕ್ಷನ್ ಹೀರೋ, ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ ಅಜಯ್ ರಾವ್ ಈ ಚಿತ್ರದ ಮೂಲಕ ರಗಡ್ ಹೀರೋ ಆಗುತ್ತಿದ್ದಾರೆ. ಮುಹೂರ್ತದ ನಂತರ ನಿರ್ದೇಶಕ ಬಾಹುಬಲಿ…

ಮುಂದೆ ಓದಿ..
ಸುದ್ದಿ 

ವಿಚಾರಣೆಗೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಎ.ಎಸ್.ಐ.

Taluknewsmedia.com

Taluknewsmedia.comಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ವರ್ಷದಿಂದ ಎ.ಎಸ್.ಐ ಹುದ್ದೆಯಲ್ಲಿ ಪ್ರೊಕ್ರೋಮೇಷನ್ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ, ತಮ್ಮ ಕಾರ್ಯತತ್ಪರತೆ ಹಾಗೂ ಮಾಹಿತಿ ನೆಲೆಸಿದ ಕಾರ್ಯಾಚರಣೆ ಮೂಲಕ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಪಿಎಸ್‌ಐ ಶ್ರೀ ಶ್ರೀನಿವಾಸ ಕೆ.ಆರ್ ಅವರ ಮಾರ್ಗದರ್ಶನದಲ್ಲಿ, ಠಾಣೆಯ ಎಚ್‌.ಸಿ. ಪ್ರದೀಪ್ ಕುಮಾರ್ (ಸಿಪಾಯಿ ಸಂಖ್ಯೆ 8988) ಅವರ ಸಹಕಾರದೊಂದಿಗೆ, 2013ರ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಯನ್ನು ಬಂಧಿಸಲಾಗಿದೆ. ಈತನ ಮೇಲೆ ಥಾಣೆ ಮೊಕದ್ದಮೆ ಸಂಖ್ಯೆ 273/2013 ಅಡಿಯಲ್ಲಿ ಭದ್ರತಾ ಅಪರಾಧ IPC ಸೆಕ್ಷನ್ 392 ಅಡಿ ಪ್ರಕರಣ ದಾಖಲಿಸಲಾಗಿತ್ತು. ನಾಗೇಶ್ ಬಿನ್ ಪಾಪಣ್ಣ (ವಯಸ್ಸು 33), ಕೇರಾಫ್ ಜಯಮ್ಮ, ಮುನೇಶ್ವರ ಬಡಾವಣೆ, ಬನ್ನೇರುಘಟ್ಟ, ಬೆಂಗಳೂರು ಜಿಲ್ಲೆ ನಿವಾಸಿಯಾಗಿರುವ ಈತನು, ಮಾನ್ಯ ನ್ಯಾಯಾಲಯದಲ್ಲಿ ಜಾಮೀನು ಪಡೆದು ವಿಚಾರಣೆಗೆ ಹಾಜರಾಗಬೇಕಾಗಿದ್ದರೂ ನಿರಂತರ ಗೈರಾಗುತ್ತಾ ಬಂದಿದ್ದ. ನ್ಯಾಯಾಲಯವು ಈತನ ವಿರುದ್ಧ ಹಲವಾರು ಬಾರಿ ವಾರೆಂಟ್…

ಮುಂದೆ ಓದಿ..
ಸುದ್ದಿ 

ಯಶವಂತಪುರದಲ್ಲಿ ಗಾಂಜಾ ಮಾರಾಟ: ಬಿಹಾರ ಮೂಲದ ವ್ಯಕ್ತಿಯಿಂದ 1.9 ಕೆ.ಜಿ ಗಾಂಜಾ ವಶ.

Taluknewsmedia.com

Taluknewsmedia.comಯಶವಂತಪುರದ 90 ರೂಟ್ ರಸ್ತೆಯ ಚರ್ಚ್ ಮುಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದ ಚಟುವಟಿಕೆಯಲ್ಲಿ ತೊಡಗಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಆರೋಪಿತನಿಂದ 1.9 ಕೆ.ಜಿ ಗಾಂಜಾ ಹಾಗೂ ನಗದು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ (ಪಿಎಸ್‌ಐ) ಶ್ರೀ ಈರಣ್ಣ ನಣಜಗಿ ಅವರು ನೀಡಿದ ಮಾಹಿತಿ ಪ್ರಕಾರ, ದಿನಾಂಕ 19/06/2025 ರಂದು ಸಂಜೆ ಸುಮಾರು 6 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ವೇಳೆ ಖಚಿತ ಬಾತ್ಮೀದಾರರಿಂದ ಮಾದಕ ವಸ್ತು ಮಾರಾಟದ ಮಾಹಿತಿ ಲಭಿಸಿದ ತಕ್ಷಣ, ಸಹಾಯಕ ಪೊಲೀಸ್ ಆಯುಕ್ತರ ಅನುಮತಿಯನ್ನು ಪಡೆದು ತಂಡದೊಂದಿಗೆ ದಾಳಿ ನಡೆಸಲಾಯಿತು. ಪಂಚರರು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ, ಅಲ್ಲಿ ಇದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವನು ದಿನೇಶ್ ಮಂಡಲ್ (30 ವರ್ಷ) ಎಂಬ ಬಿಹಾರ…

ಮುಂದೆ ಓದಿ..
ಸುದ್ದಿ 

ಲಾರಿ ಸ್ಟ್ಯಾಂಡ್ ಬಳಿ ಅಕ್ರಮ ಗಾಂಜಾ ಮಾರಾಟ: ಇಬ್ಬರು ಯುವಕರು ಪೊಲೀಸರ ಬಲೆಗೆ..

Taluknewsmedia.com

Taluknewsmedia.comನಗರದ ಲಾರಿ ಸ್ಟ್ಯಾಂಡ್ ಬಳಿಯ ರವಿತೇಜ್ ಪೆಟ್ರೋಲ್ ಬಂಕ್ ಹತ್ತಿರದ ಖಾಲಿ ಜಾಗದಲ್ಲಿ ಅಕ್ರಮ ಗಾಂಜಾ ಸಾಗಣೆ ಮತ್ತು ಮಾರಾಟ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. R. M. C ಯಾರ್ಡ್ ಯ ಪೊಲೀಸ್ ಅಧಿಕಾರಿಗಳು ದಿನಾಂಕ 19/06/2025 ರಂದು ಸಂಜೆ ಸುಮಾರು 7.30ರ ಸುಮಾರಿಗೆ ಗಸ್ತಿನಲ್ಲಿ ಇದ್ದಾಗ, ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಅಲ್ಲಿಗೆ ಬೇಟಿ ನೀಡಿದಾಗ, ರಾಜುಕುಮಾರ್ ಮತ್ತು ಸೌರವ್ ಎಂಬ ಇಬ್ಬರು ವ್ಯಕ್ತಿಗಳು ಮಾಧಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ. ಈ ಮೂಲಕ ಅವರು ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರೆಂದು ತಿಳಿದುಬಂದಿದ್ದು, ಸಾಮಾಜಿಕ ಸ್ವಾಸ್ಥ್ಯತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಕ್ರಿಯೆಯಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ಸಂಬಂಧಿತ…

ಮುಂದೆ ಓದಿ..
ಸುದ್ದಿ 

ವಾಟ್ಸ್‌ಆಪ್ ಹ್ಯಾಕ್ ಮಾಡಿ, ಸ್ನೇಹಿತ ಎಂದು ನಂಬಿಸಿ ₹70,000 ಮೋಸ – ಸೈಬರ್ ಕ್ರೈಂನಲ್ಲಿ ದೂರು

Taluknewsmedia.com

Taluknewsmedia.comವಾಟ್ಸ್‌ಆಪ್ ಖಾತೆ ಹ್ಯಾಕ್ ಮಾಡಿ ಹಣದ ಬೇಡಿಕೆ ಇಟ್ಟು, ಆನ್‌ಲೈನ್ ಮೂಲಕ ₹70,000 ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಡೆಪಲ್ಲಿ ಮಧು ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಧು ರವರು ನೀಡಿರುವ ದೂರಿನ ಪ್ರಕಾರ, ಜೂನ್ 19, 2025 ರಂದು ಬೆಳಿಗ್ಗೆ ಸುಮಾರು 11:30ಕ್ಕೆ ಅವರ ಸ್ನೇಹಿತ ವೆಂಕಟಶಿವ ಪ್ರಸಾದ್ ಅವರ ವಾಟ್ಸ್‌ಆಪ್ ನಂಬರ್ (8197449432) ಮೂಲಕ ಹಣಕ್ಕಾಗಿ ಸಂದೇಶ ಬಂದಿದೆ. ಕೆಲಸದ ಒತ್ತಡದಲ್ಲಿದ್ದ ಮಧು, ಅದು ನಿಜವಾದ ಸಂದೇಶವೆಂದು ನಂಬಿ ಯಾವುದೇ ದೃಢೀಕರಣವಿಲ್ಲದೇ ಮೆಸೇಜಿನಲ್ಲಿ ನೀಡಲಾಗಿದ್ದ 8271987069 ನಂಬರ್‌ಗೆ PhonePe ಮತ್ತು Google Pay ಮೂಲಕ ಒಟ್ಟು ₹70,000 ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ ಸ್ವಲ್ಪ ಹೊತ್ತಿನ ನಂತರ, ಅವರ ಇತರ ಸ್ನೇಹಿತರೂ ಇದೇ ರೀತಿಯ ವಾಟ್ಸ್‌ಆಪ್ ಸಂದೇಶಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಮಧುವಿಗೆ ಲಭ್ಯವಾಗಿದ್ದು, ತಕ್ಷಣವೇ ಆತ…

ಮುಂದೆ ಓದಿ..
ಸುದ್ದಿ 

ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟಕ್ಕೆ ಸಿಸಿಬಿ ದಾಳಿ – ಇಬ್ಬರು ಆರೋಪಿತರ ಬಂಧನ…

Taluknewsmedia.com

Taluknewsmedia.comನಗರದ ನುರಾನಿ ಮಸೀದಿ ಹತ್ತಿರ, ಅಲ್‌ಅಮೀನ್ ಅಪಾರ್ಟ್‌ಮೆಂಟ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿದ್ದ ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟದ ಮೇಲೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ವಿಶೇಷ ವಿಚಾರಣಾ ದಳದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ದಿ. 18.06.2025 ರಂದು ಸಂಜೆ ಸುಮಾರು 4.45ರ ವೇಳೆಗೆ ಪ್ರಕರಣ ಸಂಬಂಧ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್‌ಪೆಕ್ಟರ್ ನಾಗಪ್ಪ ಅಂಬಿಗೇರ್ ಅವರು ದಳದ ಎಸಿಪಿ ಅವರಿಂದ ಶೋಧನಾ ವಾರೆಂಟ್ ಹಾಗೂ ದಾಳಿ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಸ್ಥಳಕ್ಕೆ ತೆರಳಿದರು. ಪೊಲೀಸರು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 6.40ರ ವೇಳೆಗೆ ದಾಳಿ ನಡೆಸಿ ಆರೋಪಿತರಾದ ಉಜ್ವಲ್ ಮತ್ತು ಮಂಜುನಾಥ್ ಎಂಬುವರನ್ನು ಸ್ಥಳದಲ್ಲಿಯೇ ಬಂಧಿಸಿದರು. ಬಂಧಿತರಿಂದ ₹9,300 ನಗದು, 2 ಮೊಬೈಲ್ ಫೋನ್‌ಗಳು ಹಾಗೂ 21 ಆನ್‌ಲೈನ್ ಬೆಟ್ಟಿಂಗ್ ಸ್ಕ್ರೀನ್‌ಶಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಯಾವುದೇ ವಿಧದ ಅಧಿಕೃತ…

ಮುಂದೆ ಓದಿ..
ಅಂಕಣ 

ಮೂರನೇ ಮ‌ಹಾಯುಧ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ……..

Taluknewsmedia.com

Taluknewsmedia.comಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ ಆಂತರಿಕ ಸಂಘರ್ಷಗಳು ಮುಂತಾದ ಈ ಎಲ್ಲವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗ ನಡೆಯುತ್ತಿರುವ ಘಟನೆಗಳು ಸ್ವಲ್ಪಮಟ್ಟಿಗೆ ಅದಕ್ಕೆ ತಾಳೆಯಾಗುತ್ತದೆ ಜೊತೆಗೆ ಕೆಲವು ಸನ್ನಿವೇಶಗಳು ಸಂಪೂರ್ಣ ಭಿನ್ನವೂ ಆಗಿದೆ…….ಎರಡೂ ಮಹಾ ಯುದ್ಧಗಳ ಕೇಂದ್ರ ಬಿಂದು ಯೂರೋಪ್ ಖಂಡವೇ ಆದರೂ ಜೊತೆಗೆ ಎರಡೂ ಮಹಾ ಯುದ್ಧಗಳ ಕೊನೆಯ ಹಂತದಲ್ಲಿ ಅಮೆರಿಕ ಪ್ರವೇಶ ಮಾಡಿರುವುದು, ತದನಂತರ ಅನಾಹುತಗಳಾದ ಮೇಲೆ ಯುದ್ಧ ಕೆಲವು ಒಪ್ಪಂದಗಳೊಂದಿಗೆ ಮುಕ್ತಾಯವಾಗಿದೆ…… ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿಯೇ ಅಮೆರಿಕ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಿ, ಅಲ್ಲಿಂದ ಇಲ್ಲಿಯವರೆಗೆ ಬಹುತೇಕ ವಿಶ್ವ ನಾಯಕತ್ವದ ಸ್ಥಾನವನ್ನು ನಿಭಾಯಿಸಿದೆ ಮತ್ತು ಉಳಿಸಿಕೊಂಡಿದೆ. ಅದಕ್ಕಾಗಿ ಎಲ್ಲಾ ರೀತಿಯ ತಂತ್ರ, ಕುತಂತ್ರ, ಚಾಣಕ್ಯ…

ಮುಂದೆ ಓದಿ..
ಸುದ್ದಿ 

ಬಸಾಪುರದಲ್ಲಿ ದ್ವಿಚಕ್ರ ವಾಹನ ಸುಜಿಕಿ ಆಕ್ಸಿಸ್ 125 ಕಳುವು : ಪ್ರಕರಣ ದಾಖಲು.

Taluknewsmedia.com

Taluknewsmedia.com.ಬೆಂಗಳೂರು, ಜೂನ್ 22 – ನಗರದ ಬಸಾಪುರದಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳುವು ಪ್ರಕರಣ ಬೆಳಕಿಗೆ ಬಂದಿದೆ. ವೇಣು ಕುಮಾರ್ Y M ಎಂಬುವರು ತಮ್ಮ ಸ್ವಂತ ಉಪಯೋಗಕ್ಕಾಗಿ ಖರೀದಿಸಿಕೊಂಡಿದ್ದ ಸುಜಿಕಿ ಆಕ್ಸಿಸ್ 125 ದ್ವಿಚಕ್ರ ವಾಹನವನ್ನು ಕಳ್ಳರು ಕದ್ದಿರುವ ಘಟನೆ ನಡೆದಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ. ವೇಣು ಕುಮಾರ್ ಪ್ರಕಾರ, ದಿನಾಂಕ 12/06/2025 ರಂದು ರಾತ್ರಿ 9:30 ಗಂಟೆಗೆ, ಅವರು ತಮ್ಮ KA 51 JH 6201 ನೋಂದಣಿ ಸಂಖ್ಯೆಯ ಸುಜಿಕಿ ಆಕ್ಸಿಸ್ 125 (ಮಾಡೆಲ್ 2025) ವಾಹನವನ್ನು ಬಸಾಪುರದ ಮೀನಾಕ್ಷಿ ಬಿಲ್ಡಿಂಗ್, ಬ್ರಿಟಿಷ್ ಸ್ಕೂಲ್ ಎದುರು 3ನೇ ಕ್ರಾಸ್‌ನಲ್ಲಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಆದರೆ, 13/06/2025 ಬೆಳಿಗ್ಗೆ 8:30 ಗಂಟೆಗೆ ಅವರು ವೀಕ್ಷಿಸಿದಾಗ ವಾಹನ ಅದರ ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿ, ಎಲ್ಲೆಲ್ಲೂ ಹುಡುಕಿದರೂ ಪತ್ತೆ ಮಾಡಲಾಗದ ಕಾರಣದಿಂದ,…

ಮುಂದೆ ಓದಿ..
ಸುದ್ದಿ 

ನಕಲಿ ‘ಮಫ್ತಿ’ ಬ್ರಾಂಡ್ ಬಟ್ಟೆಯ ಮಾರಾಟ: ಕಂಪನಿಯ ಪ್ರತಿನಿಧಿಯಿಂದ ಪೊಲೀಸರಿಗೆ ದೂರು.

Taluknewsmedia.com

Taluknewsmedia.comನಗರದ ಬಿ.ಎಸ್.ಕೆ-1ನೇ ಹಂತದ 22ನೇ ಮುಖ್ಯರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ, ಪ್ರಸಿದ್ಧ ಮಫ್ತಿ (Muffthi) ಬ್ರಾಂಡ್ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕಂಪನಿಯ ಪ್ರತಿನಿಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೆ/ಎಸ್ ಬ್ರಾಂಡ್ ಪ್ರೋಡಕ್ಟೋರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೀ ಸ್ಟೀಫನ್ ರಾಜ್ ಅವರು ದಿನಾಂಕ 20.06.2025 ರಂದು ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದಾರೆ. ಅವರ ಪ್ರಕಾರ, ಅಲ್ವೇಸ್ ಎಂಬ ಬಟ್ಟೆ ಅಂಗಡಿಯಲ್ಲಿ ಮಫ್ತಿ ಬ್ರಾಂಡ್ ಹೆಸರಿನಲ್ಲಿ ನಕಲಿ ಗಾರ್ಮೆಂಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದ್ದು, ಈ ಮೂಲಕ ಕಂಪನಿಯ ಬ್ರಾಂಡ್ ಮೌಲ್ಯವನ್ನು ಹಾನಿಗೊಳಿಸುತ್ತಿರುವುದರ ಜೊತೆಗೆ ಗ್ರಾಹಕರನ್ನೂ ಮೋಸಗೊಳಿಸಲಾಗುತ್ತಿದೆ. ಈ ನಕಲಿ ಉತ್ಪನ್ನಗಳ ಮಾರಾಟದಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆ, ಸರಿಯಾದ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ…

ಮುಂದೆ ಓದಿ..
ಸುದ್ದಿ 

ಮಧ್ಯರಾತ್ರಿ ಯುವತಿಯ ಮನೆ ಮೇಲೆ ದಾಳಿ: ಮಾಜಿ ಪ್ರೇಮಿಯಿಂದ ಕಿರುಕುಳ, ಹಲ್ಲೆ ಯತ್ನ..

Taluknewsmedia.com

Taluknewsmedia.comಒಂದು ಕಾಲದ ಪ್ರೇಮಿ ಮಧ್ಯರಾತ್ರಿ ಯುವತಿಯ ಮನೆಗೆ ನುಗ್ಗಿ ಕಿರುಕುಳ ನೀಡಿದ ಹಾಗೂ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ಯುವತಿ ವೈಷ್ಣವಿ ಅವರು ಹನುಮಂತನಗರದ ಪೊಲೀಸರಿಗೆ ದೂರು ನೀಡಿದ್ದು, ಯೋಗೇಶ್ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವೈಷ್ಣವಿಯವರ ಮಾಹಿತಿ ಪ್ರಕಾರ, ವೈಷ್ಣವಿ ಮತ್ತು ಯೋಗೇಶ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯೋಗೇಶ್ ನಡತೆ ಸರಿ ಇಲ್ಲದ ಕಾರಣ ಸಂಬಂಧ ಮುರಿದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಯೋಗೇಶ್ ನಿರಂತರವಾಗಿ ವಿವಿಧ ಅಪರಿಚಿತ ನಂಬರ್‌ಗಳಿಂದ ಕರೆಮಾಡಿ ಅವಳಿಗೆ ಕಿರುಕುಳ ನೀಡುತ್ತಿದ್ದನು. ದಿನಾಂಕ 20ರಂದು ರಾತ್ರಿ ಸುಮಾರು 12:30ರ ಸುಮಾರಿಗೆ, ಯೋಗೇಶ್ ವೈಷ್ಣವಿಯ ಮನೆಯ ಬಳಿಗೆ ಬಂದು ಜೋರಾಗಿ ಕೂಗಾಡುತ್ತಿದ್ದನು. ಈ ವಿಷಯವನ್ನು ತಾಯಿ ಗಮನಿಸಿದಾಗ, ಯಾಕೆ ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಿದಕ್ಕೆ ಅವನು ಅವಾಚ್ಯ ಶಬ್ದಗಳಿಂದ ಬೈದು, ಸಮೀಪದಲ್ಲಿದ್ದ ಕಲ್ಲಿನಿಂದ ವೈಷ್ಣವಿಯ…

ಮುಂದೆ ಓದಿ..