ಮನೆ ಬಾಗಿಲು ಮುರಿದು ಕಳ್ಳತನ – ರೂ.1.5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಕಳವು
Taluknewsmedia.comಆನೇಕಲ್, ಆಗಸ್ಟ್ 5:ದೊಮ್ಮಸಂದ್ರದಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಅಡಗಿ ನುಗ್ಗಿದ ಕಳ್ಳರು, ಬಾಗಿಲು ಮತ್ತು ಬೀರುವಿನ ಲಾಕರ್ ಮುರಿದು ರೂ.1.5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ಕದ್ದೊಯ್ಯಿರುವ ಘಟನೆ ನಡೆದಿದೆ. ವಸಂತಮ್ಮನವರು 04-08-2025 ರಂದು ಸಂಜೆ 5 ಗಂಟೆಗೆ ಆನೇಕಲ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ತನ್ನ ಗಂಡ ಮೃತಪಟ್ಟಿದ್ದು ತಾನು ಒಬ್ಬಳೇ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಅವರ ಮಗ ನರಸಿಂಹಯ್ಯ ಎಂಬವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ದಿನಾಂಕ 3-08-2025 ರಂದು ರಾತ್ರಿಯಲ್ಲಿ ತಮ್ಮ ಅಕ್ಕ ಕಮಲಮ್ಮರ ಆರೋಗ್ಯ ಸರಿ ಇಲ್ಲದ ಕಾರಣದಿಂದ ಅವರು ಅವರ ಮನೆಗೆ ತೆರಳಿ ಅಲ್ಲಿ ತಂಗಿದ್ದರು. ಹೋಗುವ ಮೊದಲು ತಮ್ಮ ಮನೆ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದರು. ಆದರೆ ಮುಂದಿನ ದಿನ ಬೆಳಿಗ್ಗೆ 6 ಗಂಟೆಗೆ ಮನೆಗೆ ಹಿಂತಿರುಗಿದಾಗ, ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿತು. ಒಳಗೆ ಹೋಗಿ ಪರಿಶೀಲಿಸಿದಾಗ, ಬೀರುವಿನಲ್ಲಿದ್ದ ಬಟ್ಟೆಗಳನ್ನು ಚಿತರಿ…
ಮುಂದೆ ಓದಿ..
