ರೈಲ್ವೆ ಟ್ರ್ಯಾಕ್ ಬಳಿ ಗಾಂಜಾ ಸೇವೆ: ಸಯ್ಯದ್ ತಾರೀಕ್ ಜಮೀಲ್ ಬಂಧನ
Taluknewsmedia.comಬೆಂಗಳೂರು, ಆಗಸ್ಟ್ 2: 2025ನಗರದ ಶ್ರೀರಾಮಪುರ ರೈಲ್ವೆ ಬೀದಿಯ ರೈಲ್ವೆ ಟ್ರ್ಯಾಕ್ ಹತ್ತಿರ ಗಾಂಜಾ ಸೇವೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ಅಪರಿಚಿತ ವ್ಯಕ್ತಿಯು ಸಂಪಿಗೆಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದಾನೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಬಸವರಾಜ ಪೂಜಾರಿ ನೀಡಿದ ಮಾಹಿತಿಯ ಪ್ರಕಾರ, ಜುಲೈ 31ರಂದು ಬೆಳಿಗ್ಗೆ 10 ಗಂಟೆಯ ವೇಳೆಗೆ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಸಂಪಿಗೆಹಳ್ಳಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆಸಾಮಿ ಪೊಲೀಸರನ್ನು ಕಂಡು ಓಡಲು ಯತ್ನಿಸಿದ್ದರಾದರೂ ಕೂಡಲೇ ಬಂಧಿಸಲಾಯಿತು. ವಿಚಾರಣೆಯಲ್ಲಿ ಆತನು ಸಯ್ಯದ್ ತಾರೀಕ್ ಜಮೀಲ್ (30), ಮಂಜುನಾಥ್ ನಿಲಯ, 2ನೇ ಮಹಡಿ, 1ನೇ ಕ್ರಾಸ್, ಅಮರಜ್ಯೋತಿ ಲೇಔಟ್, ಬೆಂಗಳೂರು ನಿವಾಸಿಯಾಗಿರುವುದು ತಿಳಿದುಬಂದಿತು. ಪೊಲೀಸರು ಸ್ಥಳದಲ್ಲೇ ಆತನು ಅಮಲು ಪದಾರ್ಥ ಸೇವಿಸಿದ್ದನ್ನು ದೃಢಪಡಿಸಿದರು. ಸೂಕ್ತ ಮಾಹಿತಿ ನೀಡಲು ಆತನು ನಿರಾಕರಿಸಿದ ಕಾರಣ, ಮುಂದೆ ತನಿಖೆಗಾಗಿ…
ಮುಂದೆ ಓದಿ..
