ಮೈಸೂರು : ಮನೆ ಸಾಲದ ತೊಳಲಾಟದಲ್ಲಿ ಸೈನಿಕನ ದುರ್ಘಟನೆ!
Taluknewsmedia.comಮೈಸೂರು : ಮನೆ ಸಾಲದ ತೊಳಲಾಟದಲ್ಲಿ ಸೈನಿಕನ ದುರ್ಘಟನೆ! ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆ ನಿರ್ಮಾಣಕ್ಕಾಗಿ ಪಡೆದಿದ್ದ ಸಾಲ ತೀರಿಸಲಾಗದೆ ಪರದಾಡುತ್ತಿದ್ದ ಭೂ ಸೇನೆಯ ಸೈನಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು ನಂಜಾಪುರದ ನಿವಾಸಿ ಎಂ. ಚಂದ್ರಶೇಖರ್ (35). ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಂದ್ರಶೇಖರ್ ಅವರು ಎರಡು ವರ್ಷಗಳ ಹಿಂದೆ ಹುಣಸೂರಿನ ಹೊಸ ಬಡಾವಣೆಯಲ್ಲಿ ಹೊಸ ಮನೆ ನಿರ್ಮಿಸಿದ್ದರು. ಈ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿಯಿಂದ ಸಾಲ ತೆಗೆದುಕೊಂಡಿದ್ದರು. ಸಾಲದ ಬಾಧೆ ತೀರಿಸಲಾಗದೆ ಮನಸ್ಸಿಗೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಕಳೆದ 10 ವರ್ಷಗಳಿಂದ ಜಮ್ಮು–ಕಾಶ್ಮೀರ, ಆಗ್ರಾ ಹಾಗೂ ಚೀನಾ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸುಮಾರು ಒಂದು ತಿಂಗಳ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದರು. ದೀಪಾವಳಿ ಹಬ್ಬದ…
ಮುಂದೆ ಓದಿ..
