ಐವಿಎಫ್ ವಿಧಾನ, ಭಾವನಾ ರಾಮಣ್ಣ, ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯ ಹಾಗು ಭಾರತದ ಕೌಟುಂಬಿಕ ವ್ಯವಸ್ಥೆ……….
ಐವಿಎಫ್ ( I V F ) ಎಂಬ ವೈದ್ಯಕೀಯ ಸಂಶೋಧನಾ ವಿಧಾನದ ಮೂಲಕ ಮದುವೆಯಾಗದೆ, ಅಧಿಕೃತವಾಗಿ ಗಂಡ ಎನ್ನುವ ಗಂಡಿನ ಸಂಬಂಧವಿಲ್ಲದೆ, ಪರಿಚಿತ ಅಥವಾ ಅಪರಿಚಿತ ಪುರುಷನ ಸಂಗ್ರಹಿತ ವೀರ್ಯಾಣುವಿನ ಸಹಾಯದಿಂದ ಮಹಿಳೆಯೊಬ್ಬರು ಮಕ್ಕಳಿಗೆ ಜನ್ಮ ನೀಡುವುದು ವೈದ್ಯಕೀಯ ಕ್ಷೇತ್ರದ ಒಂದು ಸಾಧನೆಯಾಗಿದೆ. ನಾನಾ ಕಾರಣಗಳಿಂದ ಮಕ್ಕಳನ್ನು ಪಡೆಯಲಾಗದ ಕೆಲವು ದಂಪತಿಗಳಿಗೆ ಈ ವಿಧಾನ ಒಂದು ವರವಾಗಿದೆ. ಆದರೆ ಕೆಲವರು ಮದುವೆಯಾಗದೆ, ಗಂಡನಿಲ್ಲದೆ ಒಂಟಿಯಾಗಿ ಮಕ್ಕಳನ್ನು ಹೆತ್ತು ಸಾಕಿ ಸಲಹುವುದು ಈ ಸಮಾಜದಲ್ಲಿ, ಮುಖ್ಯವಾಗಿ ಭಾರತೀಯ ಸಮಾಜದಲ್ಲಿ ಎಷ್ಟು ಸರಿ ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತಿರಬಹುದು. ಒಂದು ಹಂತದ ಇತಿಹಾಸ ಪ್ರಜ್ಞೆಯ ಮೂಲಕ ಈ ವಿಷಯವನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು. ವಿಶ್ವದ ನಾಗರಿಕ ಮಾನವ ಇತಿಹಾಸ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ ಇಡೀ ಸಮಾಜದ ಅತ್ಯಂತ ಮಹತ್ವದ ಘಟಕ ಮತ್ತು ಆಧಾರ ಸ್ತಂಭ ಕುಟುಂಬವೇ ಆಗಿದೆ. ಅಂದರೆ ಗಂಡ…
ಮುಂದೆ ಓದಿ..
