ಸುದ್ದಿ 

ಶಿವಮೊಗ್ಗ : ದೀಪಾವಳಿ ಸಂಭ್ರಮದ ಮಧ್ಯೆ ವಡ್ಡಿನಕೊಪ್ಪದಲ್ಲಿ ಕಳ್ಳತನದ ಘಟನೆ ನಡೆದಿದೆ. ಕರಿಯಪ್ಪ ಹಾಗೂ ಯಶೋದಮ್ಮ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಬಾಗಿಲಿನ ಬೀಗ ಒಡೆದು ನಗದು ಹಾಗೂ ಬಂಗಾರ ಎಗರಿಸಿದ್ದಾರೆ.

ಶಿವಮೊಗ್ಗ : ದೀಪಾವಳಿ ಸಂಭ್ರಮದ ಮಧ್ಯೆ ವಡ್ಡಿನಕೊಪ್ಪದಲ್ಲಿ ಕಳ್ಳತನದ ಘಟನೆ ನಡೆದಿದೆ. ಕರಿಯಪ್ಪ ಹಾಗೂ ಯಶೋದಮ್ಮ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಬಾಗಿಲಿನ ಬೀಗ ಒಡೆದು ನಗದು ಹಾಗೂ ಬಂಗಾರ ಎಗರಿಸಿದ್ದಾರೆ. ಮನೆಯವರು ಹಬ್ಬದ ನಿಮಿತ್ತ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದೆ. ಕಳ್ಳರು ಮನೆಯೊಳಗಿನಿಂದ ₹80,000 ನಗದು ಮತ್ತು ಸುಮಾರು 1 ತೊಲೆ ಬಂಗಾರವನ್ನು ಕಳವು ಮಾಡಿದ್ದಾರೆ. ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಬೆಳಗಿನ ಜಾವ ಬೀಗ ಒಡೆದಿರುವುದನ್ನು ಗಮನಿಸಿದ ನೆರೆಹೊರೆಯವರು ಮಾಲೀಕರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ತಕ್ಷಣ ತುಂಗಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಹಬ್ಬದ ಸಮಯದಲ್ಲಿ ಮನೆ ಬೀಗ ಹಾಕಿ ಹೊರಗೆ ಹೋಗುವ ನಾಗರಿಕರು ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರಿನಲ್ಲಿ ವೈದ್ಯನ ಬಂಧನ — ಯುವತಿಗೆ ಅಸಭ್ಯ ವರ್ತನೆ, ಲೈಂಗಿಕ ಬೇಡಿಕೆ ಆರೋಪ

ಬೆಂಗಳೂರಿನಲ್ಲಿ ವೈದ್ಯನ ಬಂಧನ — ಯುವತಿಗೆ ಅಸಭ್ಯ ವರ್ತನೆ, ಲೈಂಗಿಕ ಬೇಡಿಕೆ ಆರೋಪ ಬೆಂಗಳೂರು ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಚರ್ಮ ರೋಗ ತಜ್ಞ ವೈದ್ಯನೊಬ್ಬ ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಬಂಧಿತನನ್ನು ಅಸ್ಟೀನ್ ಟೌನ್ ನಿವಾಸಿ ಡಾ. ಪ್ರವೀಣ್ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಚಿಕಿತ್ಸೆಗೆಂದು ಈ ವೈದ್ಯನ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಚಿಕಿತ್ಸೆಯ ಸಮಯದಲ್ಲಿ ವೈದ್ಯ ಯುವತಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಷ್ಟೇ ಅಲ್ಲದೆ, ಲೈಂಗಿಕ ಕ್ರೀಯೆಗೆ ಬೇಡಿಕೆಯೂ ಇಟ್ಟಿದ್ದಾನೆಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಿಂದ ಬೆಚ್ಚಿಬಿದ್ದ ಯುವತಿ ವಿಷಯವನ್ನು ತಕ್ಷಣವೇ ತನ್ನ ಪೋಷಕರಿಗೆ ತಿಳಿಸಿದ್ದಾರೆ. ನಂತರ ಪೋಷಕರು ಕ್ಲಿನಿಕ್‌ಗೆ ಬಂದು ಪ್ರತಿಭಟಿಸಿದ ನಂತರ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ವೈದ್ಯ ಪ್ರವೀಣ್…

ಮುಂದೆ ಓದಿ..
ಸುದ್ದಿ 

ಮಂದಿ ಸಜೀವ ದಹನ, 12 ಮಂದಿ ಗಾಯಗೊಂಡರು..

ಮಂದಿ ಸಜೀವ ದಹನ, 12 ಮಂದಿ ಗಾಯಗೊಂಡರು ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬಳಿಯಲ್ಲಿ ನಡುರಾತ್ರಿಯಲ್ಲಿ ಸಂಭವಿಸಿದ ಭೀಕರ ಬಸ್‌ ಬೆಂಕಿ ದುರಂತದಲ್ಲಿ ಕನಿಷ್ಠ 20 ಮಂದಿ ಜೀವಂತವಾಗಿ ದಹನಗೊಂಡಿರುವ ಶೋಚನೀಯ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಕಾವೇರಿ ಟ್ರಾವೆಲ್ಸ್ ಖಾಸಗಿ ಬಸ್ ಈ ದುರಂತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್‌ನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಉಳಿಂದಕೊಂಡದ ಸಮೀಪ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸಿನ ಮುಂಭಾಗ ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿ ಪ್ರಯಾಣಿಕರು ಪಾರಾಗಲು ಸಾಧ್ಯವಾಗಲಿಲ್ಲ. ಸುಮಾರು 12 ಮಂದಿ ಕಿಟಕಿಗಳನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಂಡರೆ, ಉಳಿದವರು ಬೆಂಕಿಯಲ್ಲಿ ಸಿಲುಕಿಕೊಂಡು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರಮೇಶ್ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ…

ಮುಂದೆ ಓದಿ..
ಸುದ್ದಿ 

ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರ ದುರ್ಮರಣ

ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರ ದುರ್ಮರಣ ದೀಪಾವಳಿ ಸಂಭ್ರಮದಲ್ಲಿ ದುರಂತ — ಹಾವೇರಿ ಜಿಲ್ಲೆಯ ವಿವಿಧೆಡೆ ಹೋರಿ ಹಾವಳಿ ಮೂವರ ಜೀವ ಬಲಿ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆ ಹಾವೇರಿ ಜಿಲ್ಲೆಯ ಹಲವು ಭಾಗಗಳಲ್ಲಿ ದುರಂತಕ್ಕೆ ಕಾರಣವಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ಯುವಕನೊಬ್ಬನನ್ನು ಸೇರಿಸಿ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರಾಗಿ ಗುರುತಿಸಲಾದವರು — ಚಂದ್ರಶೇಖರ ಕೋಡಿಹಳ್ಳಿ (75), ಘನಿಸಾಬ್ (75) ಹಾಗೂ ಭರತ್ (22). ಮೃತರ ಪೈಕಿ ಇಬ್ಬರು ನಿನ್ನೆ ಮೃತಪಟ್ಟಿದ್ದು, ಇಂದು ಬೆಳಿಗ್ಗೆ ನಡೆದ ಅಪಘಾತದಲ್ಲಿ ಮತ್ತೊಬ್ಬ ಯುವಕ ಮೃತಪಟ್ಟಿದ್ದಾನೆ. ಹಾವೇರಿ ತಾಲ್ಲೂಕಿನ ದಾನೇಶ್ವರಿ ನಗರದ ನಿವಾಸಿ, ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ್ ಕೋಡಿಹಳ್ಳಿ ಅವರು ಮನೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಹೋರಿ ಹಾಯ್ದು ಗಂಭೀರವಾಗಿ ಗಾಯಗೊಳಿಸಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಪ್ರಾಣ ಕಳೆದುಕೊಂಡರು. ಇನ್ನೊಂದು ಘಟನೆಯಲ್ಲಿ,…

ಮುಂದೆ ಓದಿ..
ಸುದ್ದಿ 

ಪತ್ನಿಯ ಶೀಲದ ಬಗ್ಗೆ ಶಂಕೆ – ಗಂಡನಿಂದ ಪತ್ನಿ ಹತ್ಯೆ!

ಪತ್ನಿಯ ಶೀಲದ ಬಗ್ಗೆ ಶಂಕೆ – ಗಂಡನಿಂದ ಪತ್ನಿ ಹತ್ಯೆ! ಮಂಡ್ಯದಲ್ಲಿ ನಡೆದ ಕ್ರೂರ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ನಡೆದ ನೃಶಂಸ ಘಟನೆ ಒಂದು ಪೂರಾ ಪ್ರದೇಶವನ್ನು ಬೆಚ್ಚಿಬೀಳುವಂತೆ ಮಾಡಿದೆ. ಪತ್ನಿಯ ಶೀಲದ ಬಗ್ಗೆ ಶಂಕೆಗೊಂಡ ಗಂಡ ಕ್ರೂರವಾಗಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮೃತೆಯಾಗಿ ಗುರುತಿಸಲಾದ ಶ್ವೇತಾ ಕಳೆದ 17 ವರ್ಷಗಳಿಂದ ಆರೋಪಿ ಲೋಕೇಶ್‌ನ ಪತ್ನಿಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳ ಸಂಬಂಧ ಇತ್ತೀಚೆಗೆ ಗಲಭೆಗೆ ತುತ್ತಾಗಿತ್ತು. ಲೋಕೇಶ್ ದಿನವೂ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಶೀಲ ಶಂಕೆಯಿಂದಾಗಿ ಆಗಾಗ ಶ್ವೇತಾಳ ಮೇಲೆ ಹಿಂಸೆ ತೋರಿಸುತ್ತಿದ್ದ ಲೋಕೇಶ್, ಕೊನೆಗೆ ಆಕೆಯ ಜೀವವನ್ನೇ ತೆತ್ತಿದ್ದಾನೆ. ಘಟನೆ ನಡೆದ ರಾತ್ರಿ ಶ್ವೇತಾಳಿಗೆ ನಿದ್ರಾಮಾತ್ರೆ ನೀಡಿ, ಆಕೆ…

ಮುಂದೆ ಓದಿ..
ಸಿನೆಮಾ ಸುದ್ದಿ 

“ಫಸ್ಟ್ ಸ್ಯಾಲರಿ” – ತಾಯಿಯ ಕನಸುಗಳ ಹಾದಿಯಲ್ಲೊಂದು ಮನಮೋಹಕ ಕಿರುಚಿತ್ರ!

“ಫಸ್ಟ್ ಸ್ಯಾಲರಿ” – ತಾಯಿಯ ಕನಸುಗಳ ಹಾದಿಯಲ್ಲೊಂದು ಮನಮೋಹಕ ಕಿರುಚಿತ್ರ! ಕನ್ನಡ ಚಿತ್ರರಂಗದಲ್ಲಿ ಪ್ರಚಾರದ ಕ್ಷೇತ್ರದಲ್ಲಿ ವಿಶಿಷ್ಟ ಹೆಸರು ಗಳಿಸಿರುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕರಾದ ಡಿ.ವಿ. ಸುಧೀಂದ್ರ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ “ಒಲವಿನ ಉಡುಗೊರೆ”, “ಗಣೇಶನ ಮದುವೆ”, “ಗುಂಡನ ಮದುವೆ”, “ಪಟ್ಟಣಕ್ಕೆ ಬಂದ ಪುಟ್ಟ”, “ನಗು ನಗುತಾ ನಲಿ” ಮುಂತಾದ ಅನೇಕ ಹಿಟ್ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದ್ದರು. ಈಗ ಇದೇ ಸಂಸ್ಥೆಯ ಮುಂದಾಳತ್ವ ವಹಿಸಿರುವ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶನದ “ಫಸ್ಟ್ ಸ್ಯಾಲರಿ” (First Salary) ಎಂಬ ಕಿರುಚಿತ್ರಕ್ಕೆ ಬಂಡವಾಳ ಹೂಡಿ ಆಶೀರ್ವಾದ ನೀಡಿದ್ದಾರೆ. “ಕನಸುಗಳ ಹಾದಿ” ಎಂಬ ಅಡಿಬರಹದೊಂದಿಗೆ ಈ ಚಿತ್ರದ ಪೋಸ್ಟರ್ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದೆ. ಕರೋನ ಸಮಯದಲ್ಲಿ “ಕರಾಳ…

ಮುಂದೆ ಓದಿ..
ಅಂಕಣ 

ಕನ್ನಡ ರಾಜ್ಯೋತ್ಸವಕ್ಕೆ ಕೆಲವೇ ದಿನಗಳಿರುವಾಗ……..

ಕನ್ನಡ ರಾಜ್ಯೋತ್ಸವಕ್ಕೆ ಕೆಲವೇ ದಿನಗಳಿರುವಾಗ…….. ಕರ್ನಾಟಕದ ಜನ ಬಹಳ ಬುದ್ದಿವಂತರು – ಒಳ್ಳೆಯವರು,ಕನ್ನಡ ಭಾಷೆ ವಿಶ್ವ ಶ್ರೇಷ್ಠ,ಕನ್ನಡ ಇತಿಹಾಸ ಅದ್ಬುತ,ಕನ್ನಡ ಸಂಸ್ಕೃತಿ ವಿಶ್ವ ಮಾನ್ಯ,ಕನ್ನಡ ನೆಲದಲ್ಲಿ ಬಸವಣ್ಣ, ಕುವೆಂಪು, ಕೆಂಪೇಗೌಡ, ಕನಕ, ಪುರಂದರ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಮದಕರಿ ಮುಂತಾದ ಜಗತ್ ಪ್ರಸಿದ್ದ ನಾಯಕರು ಜನಿಸಿದ್ದಾರೆ,…. ಬೆಳಗಾವಿಯ ಕುಂದ,ಧಾರವಾಡದ ಪೇಡ,ಬಳ್ಳಾರಿ ಖಾರ ಮಂಡಕ್ಕಿ,ಮೈಸೂರು ಪಾಕು,ತುಮಕೂರಿನ ತಟ್ಟೆ ಇಡ್ಲಿ,ದಾವಣಗೆರೆಯ ಬೆಣ್ಣೆ ದೋಸೆ,ಕೋಲಾರದ ಬಂಗಾರ ಪೇಟೆ ಚಾಟ್ಸ್,ಕಲಬುರಗಿಯ ಖಡಕ್ ರೋಟಿ,ಕರಾವಳಿ ಭಾಗದ ಕಾಣೆ ಮೀನಿನ ಸಾರು, ಮಲೆನಾಡಿನ ಹಲಸಿನ ಕಡುಬು, ಶಿವಮೊಗ್ಗದ ಮಾವಿನ ಶೀಕರಣೆ, ಉತ್ತರ ಕನ್ನಡದ ಕೆಸುವಿನ ಪಲ್ಯ, ಹಾಸನದ ಬೈನೇ ಮರದ ಕಳ್ಳು,ಚಾಮರಾಜನಗರದ ಆದಿವಾಸಿಗಳ ಬೊಂಬು ಬಿರಿಯಾನಿ,ಕೊಡಗಿನ ಅಕ್ಕಿ ರೊಟ್ಟಿ ಹಂದಿ ಫ್ರೈ,ಬಿಜಾಪುರದ ಸಿಹಿ ಮಿಶ್ರಿತ ಉಪ್ಪಿನಕಾಯಿ,ಬೀದರಿನ ಗಡಿಗೆ ಮೊಸರು,ಯಾದಗಿರಿಯ ಎಣ್ಣಿ ಬದನೆಯಕಾಯಿ ಪಲ್ಯ, ಮಂಡ್ಯದ ರಾಗಿ ಮುದ್ದೆ, ಬನ್ನೂರು ಕುರಿಯ ತಲೆ ಮಾಂಸ,ಚಿತ್ರದುರ್ಗದ…

ಮುಂದೆ ಓದಿ..
ಸುದ್ದಿ 

ಮದುವೆಯ ನಂಬಿಕೆಯಲ್ಲಿ ವಂಚನೆ ಆರೋಪ : ಡಿ.ಜೆ. ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳೆಯ ದೂರು

ಮದುವೆಯ ನಂಬಿಕೆಯಲ್ಲಿ ವಂಚನೆ ಆರೋಪ : ಡಿ.ಜೆ. ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಮಹಿಳೆಯ ದೂರು ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಹಾಗೂ ಬೆದರಿಕೆ ಹಾಕಿರುವ ಆರೋಪ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನಿಲ್ ವಿರುದ್ಧ ಕೇಳಿಬಂದಿದೆ. ಮೂಲಗಳ ಪ್ರಕಾರ, ಕಳೆದ ಒಂದು ವರ್ಷದಿಂದ ಇನ್ಸ್‌ಪೆಕ್ಟರ್ ಸುನಿಲ್ ಅವರು ಮುಸ್ಲಿಂ ಮಹಿಳೆಯೊಂದಿಗಿನ ಪರಿಚಯವನ್ನು ದುರುಪಯೋಗಪಡಿಸಿಕೊಂಡು, “ಮನೆ ಕೊಡ್ತೀನಿ, ಬ್ಯೂಟಿ ಪಾರ್ಲರ್ ಓಪನ್ ಮಾಡಿ ಕೊಡ್ತೀನಿ” ಎಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂಬ ಗಂಭೀರ ಆರೋಪ ಹೊರಬಿದ್ದಿದೆ. ಮದುವೆಯಾಗುವುದಾಗಿ ಭರವಸೆ ನೀಡಿದ ಇನ್ಸ್‌ಪೆಕ್ಟರ್, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳೋಣ ಎಂದು ಹೇಳಿ ಮಹಿಳೆಯನ್ನು ಮೋಸಗೊಳಿಸಿದ್ದಾರಂತೆ. ಮಹಿಳೆ ನೀಡಿರುವ ದೂರಿನ ಪ್ರಕಾರ, 8ನೇ ಮೈಲಿಯಲ್ಲಿರುವ ಇನ್ಸ್‌ಪೆಕ್ಟರ್ ಅವರ ಮನೆ ಹಾಗೂ ಹೊಟೆಲ್‌ಗೆ ಕರೆಸಿ ಹಲವು ಬಾರಿ ದೌರ್ಜನ್ಯ ಎಸಗಲಾಗಿದೆ. ಇದರ ಜೊತೆಗೆ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಲವಂತವಾಗಿ ಸೆರೆಹಿಡಿದು, ಅವುಗಳನ್ನು ಬಳಸಿ…

ಮುಂದೆ ಓದಿ..
ಸಿನೆಮಾ 

ಫುಡ್ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ನೇಪಾಳಿ ಗ್ಯಾಂಗ್‌ವೊಂದು ನಗರದ ಬೆಳ್ಳಂದೂರು ಪೊಲೀಸ್‌ಗಳ ಬಲೆಗೆ ಸಿಕ್ಕಿದೆ.

ಫುಡ್ ಡೆಲಿವರಿ ಬಾಯ್‌ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ನೇಪಾಳಿ ಗ್ಯಾಂಗ್‌ವೊಂದು ನಗರದ ಬೆಳ್ಳಂದೂರು ಪೊಲೀಸ್‌ಗಳ ಬಲೆಗೆ ಸಿಕ್ಕಿದೆ. ಮೂವರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಪಾರಸ್ ಸಿಂಗ್ (25), ಮುಕೇಶ್ ಸಾಯಿ (19), ಬಿಪಿನ್ ಕರ್ಕಿ (20) ಹಾಗೂ ಸಮೀರ್ ಲೋಹಾರ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನೇಪಾಳ ಮೂಲದವರಾಗಿದ್ದು, ನಗರದ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯುರಿಟಿ ಹಾಗೂ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು. ಆದರೆ ಕೆಲಸದ ಹೊರತಾಗಿ ಫುಡ್ ಡೆಲಿವರಿ ಬಾಯ್‌ಗಳನ್ನೇ ಅಡ್ಡಗಟ್ಟಿ ಮೊಬೈಲ್, ಹಣವನ್ನು ಕಸಿದು ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕಳೆದ ಸೆಪ್ಟೆಂಬರ್ 13ರ ರಾತ್ರಿ ಕಸವನಹಳ್ಳಿ ರಸ್ತೆಯಲ್ಲಿ ಡೆಲಿವರಿ ಬಾಯ್ ಸುರೇಶ್ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾದ ಪ್ರಕರಣದ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಬೆಳ್ಳಂದೂರು ಪೊಲೀಸರು ಬಲಿಷ್ಠ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಒಟ್ಟು 9…

ಮುಂದೆ ಓದಿ..
ಸುದ್ದಿ 

ತವರು ಮನೆಯಿಂದ ಬರಲು ನಿರಾಕರಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಲೆ – ನಂತರ ಪೊಲೀಸ್ ಠಾಣೆಗೆ ಶರಣಾದ ಆರೋಪಿ

ತವರು ಮನೆಯಿಂದ ಬರಲು ನಿರಾಕರಿಸಿದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಲೆ – ನಂತರ ಪೊಲೀಸ್ ಠಾಣೆಗೆ ಶರಣಾದ ಆರೋಪಿ. ಯಾದಗಿರಿ: ಪತ್ನಿಯು ತವರು ಮನೆಯಿಂದ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪತಿ ಆಕೆಯನ್ನೇ ಕೊಲೆ ಮಾಡಿದ ಘಟನೆ ಸುರಪುರ ತಾಲೂಕಿನ ಡೋಣಿಗೇರಾದಲ್ಲಿ ನಡೆದಿದೆ. ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸ್ವಯಂ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮೃತ ಮಹಿಳೆಯನ್ನು ಮರಿಯಮ್ಮ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಸಂಗಪ್ಪ (40) ಸುರಪುರ ತಾಲೂಕಿನ ಕಕ್ಕೇರಿ ಗ್ರಾಮದ ನಿವಾಸಿ. ಕಳೆದ ಕೆಲವು ತಿಂಗಳಿನಿಂದ ದಂಪತಿಗಳ ನಡುವೆ ಅನೇಕ ಗಲಾಟೆಗಳು ನಡೆಯುತ್ತಿದ್ದವು. ಇದರಿಂದ ಬೇಸತ್ತ ಮರಿಯಮ್ಮ ತವರು ಮನೆಗೆ ತೆರಳಿ ಅಲ್ಲೇ ವಾಸಿಸುತ್ತಿದ್ದಳು. ಶನಿವಾರ ರಾತ್ರಿ ಸಂಗಪ್ಪ ಪತ್ನಿಯನ್ನು ಮನೆಗೆ ಕರೆತರಲು ಡೋಣಿಗೇರಾದ ಆಕೆಯ ತವರು ಮನೆಗೆ ಹೋಗಿದ್ದಾನೆ. ಆದರೆ ಮರಿಯಮ್ಮ ಗಂಡನ ಮನೆಗೆ ಹಿಂತಿರುಗಲು ನಿರಾಕರಿಸಿದ್ದಾಳೆ. ಮಾತಿನ ಜಟಾಪಟಿಯು…

ಮುಂದೆ ಓದಿ..