ಎಲ್‌ಕೆಜಿ–ಯುಕೆಜಿ ಮಕ್ಕಳಿಗೂ ಮಧ್ಯಾಹ್ನದ ಊಟ: ಸರ್ಕಾರದ ಹೊಸ ಆದೇಶ ಜಾರಿ
ಎಲ್‌ಕೆಜಿ–ಯುಕೆಜಿ ಮಕ್ಕಳಿಗೂ ಮಧ್ಯಾಹ್ನದ ಊಟ: ಸರ್ಕಾರದ ಹೊಸ ಆದೇಶ ಜಾರಿ ಕುಂದಾಪುರ: ರಾಜ್ಯದ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬಲ ನೀಡುವ ಉದ್ದೇಶದಿಂದ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಬೇಕೆಂಬ ಮಹತ್ವದ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಇದುವರೆಗೂ 1ರಿಂದ 10ನೇ ತರಗತಿವರೆಗೆ ಸೀಮಿತವಾಗಿದ್ದ ಈ ಸೌಲಭ್ಯವನ್ನು ಇದೀಗ ಕಿರಿಯ ಮಕ್ಕಳಿಗೂ ವಿಸ್ತರಿಸಲಾಗಿದೆ. ಡಿ.1ರಿಂದಲೇ ಈ ಆದೇಶ ಜಾರಿಯಲ್ಲಿ ಇದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ 6.78 ರೂ. ವೆಚ್ಚ ನಿಗದಿಪಡಿಸಲಾಗಿದೆ. ಇದರಲ್ಲಿ 4.07 ರೂ. ಕೇಂದ್ರದಿಂದ ಮತ್ತು 2.71 ರೂ. ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ವಾರಕ್ಕೆ ನಾಲ್ಕು ದಿನ ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ಅಜೀಂ ಪ್ರೇಮ್‌ಜಿ ಫೌಂಡೇಶನ್ ಒದಗಿಸಲಿದ್ದು, ಉಳಿದ ದಿನಗಳಿಗೆ ರಾಜ್ಯ ಸರ್ಕಾರವೇ ಪೂರೈಕೆ ಮಾಡಲಿದೆ. ಕಳೆದ ವರ್ಷ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿ ತರಗತಿಗಳು ಆರಂಭವಾದರೂ ಮಧ್ಯಾಹ್ನದ ಊಟ ಯೋಜನೆ…
ಮುಂದೆ ಓದಿ..
