ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ – ಮಹಾರಾಷ್ಟ್ರದ ಯುವಕ ಬಂಧನ!
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ – ಮಹಾರಾಷ್ಟ್ರದ ಯುವಕ ಬಂಧನ! ಸರ್ಕಾರಿ ಕಚೇರಿಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ವಿರಾಮ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆ ಇದೀಗ ವಿವಾದದ ಸುಳಿಗಾಳಿಯನ್ನು ಎಬ್ಬಿಸಿದೆ. ಈ ಹೇಳಿಕೆಯ ವಿರುದ್ಧ ಭುಗಿಲೆದ್ದಿದ್ದ ಕೆಲ ಹಿಂದೂಪರ ಸಂಘಟನೆಗಳ ಆಕ್ರೋಶವು ಇದೀಗ ಬೆದರಿಕೆ ಕರೆ ರೂಪದಲ್ಲಿ ಸಚಿವರಿಗೆ ತಲುಪಿತ್ತು. ಬೆದರಿಕೆ ಕರೆ ಮಾಡಿದ ಆರೋಪಿ ಮಹಾರಾಷ್ಟ್ರದ ಸೋಲಾಪುರ ಮೂಲದ ದಾನಪ್ಪ ಅಲಿಯಾಸ್ ದಾನೇಶ್. ಈತ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದನೆ ನಡೆಸಿದ್ದಾನೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ಸಂಬಂಧ, ಸಚಿವರ ಪರವಾಗಿ ಕಾಂಗ್ರೆಸ್ ಮುಖಂಡ ಮನೋಹರ್ ಅವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಬೆಂಗಳೂರು ಮತ್ತು ಕಲಬುರ್ಗಿ ಘಟಕಗಳ ಜಂಟಿ ಕಾರ್ಯಾಚರಣೆಯಡಿ ದಾನೇಶನ್ನು ಮಹಾರಾಷ್ಟ್ರದ ಲಾತೂರ್ ನಗರದಲ್ಲಿ ಬಂಧಿಸಿದ್ದಾರೆ.…
ಮುಂದೆ ಓದಿ..
