ಕಳೆದ ಇಷ್ಟು ವರ್ಷಗಳಲ್ಲೂ ನಾವು ಇಂತಹ ದೊಡ್ಡ ಹಾಸ್ಪಿಟಲ್‌ನ್ನು ಕಟ್ಟಲು ಯಾರೂ ಮುಂದಾಗಿಲ್ಲ.
ಕಳೆದ ಇಷ್ಟು ವರ್ಷಗಳಲ್ಲೂ ನಾವು ಇಂತಹ ದೊಡ್ಡ ಹಾಸ್ಪಿಟಲ್‌ನ್ನು ಕಟ್ಟಲು ಯಾರೂ ಮುಂದಾಗಿಲ್ಲ. ನಮಗೆ ಯೋಗ್ಯತೆ, ಸಾಮರ್ಥ್ಯ ಇದ್ರೂ ನಮ್ಮನ್ನು ಒಳಗೊಳ್ಳಲು ಯಾರೂ ಮುಂದೆ ಬಂದಿಲ್ಲ. ಆ ಕಾಲದಲ್ಲೇ ಮೈಸೂರು ಮಹಾರಾಜರು ಈ ಜನರಿಗೋಸ್ಕರ, ಕೊಲಾರ ಜಿಲ್ಲೆ ಜನರಿಗಾಗಿ ಈ ಹಾಸ್ಪಿಟಲ್ ಕಟ್ಟಿಸಿ ಕೊಟ್ಟಿದ್ದಾರೆ. ಆ ಕಾಲದಲ್ಲಿ ಸರ್ಕಾರಕ್ಕೂ ಹಣ ಕಡಿಮೆ, ಜನರಲ್ಲೂ ಹಣ ಇರಲಿಲ್ಲ. ಆದರೂ ಅವರು ಜನರ ಕಾಯಿಲೆ ನೋಡಿಕೊಂಡು ಈ ಆಸ್ಪತ್ರೆಯನ್ನು ನಿರ್ಮಿಸಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಬಳಿ ಸಾಕಷ್ಟು ಸರ್ಕಾರದ ಹಣವೂ ಇದೆ, ಜನರಲ್ಲೂ ಸಾಮರ್ಥ್ಯ ಇದೆ. ಆದರೆ ಇವತ್ತಿನ ಜನಸಂಖ್ಯೆಗೆ ಈ ಒಂದು ಹಾಸ್ಪಿಟಲ್ ಸಾಲುವುದಿಲ್ಲ. ಆಗಿನ ಪಾಪುಲೇಶನ್‌ಗೇ ಈ ಮಟ್ಟದ ಹಾಸ್ಪಿಟಲ್ ಕೊಟ್ಟಿದ್ದರೆ, ಇಂದಿನ ಜನಸಂಖ್ಯೆಗೆ ಕನಿಷ್ಠ ಹತ್ತು ಇಂತಹ ಹಾಸ್ಪಿಟಲ್‌ಗಳು ಬೇಕು. ದುಡ್ಡಿರುವವರು ಪ್ರೈವೇಟ್ ಆಸ್ಪತ್ರೆಗೆ ಹೋಗ್ತಾರೆ, ಆದರೆ ಬಡಜನರಿಗೆ ಈ ಸರ್ಕಾರಿ ಆಸ್ಪತ್ರೆಯೇ ಭರವಸೆ.…
ಮುಂದೆ ಓದಿ..
