ಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್
ಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್! ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಅಜಯ್ ರಾವ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾ ‘ರಾಧೇಯ’ ಟೀಸರ್ ಬಿಡುಗಡೆಯಾಗಿದೆ. ವೇದಗುರು ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಇದೇ ಅವರ ನಿರ್ದೇಶನದ ಮೊದಲ ಪ್ರಯತ್ನ. ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಅಜಯ್ ರಾವ್ ಜೊತೆ ಸೋನಾಲ್ ಮಾಂಟೆರೋ ನಾಯಕಿಯಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ವೇದಗುರು ಮಾತನಾಡಿ, “ಮಹಾಭಾರತದ ಕರ್ಣನ ಮತ್ತೊಂದು ಹೆಸರು ‘ರಾಧೇಯ’. ಆದರೆ ನಮ್ಮ ಚಿತ್ರದ ಕಥೆಗೆ ಕರ್ಣನೊಂದಿಗೆ ನೇರ ಸಂಬಂಧವಿಲ್ಲ. ಆದರೆ ಆತನ ತ್ಯಾಗದ ಅಂಶದಿಂದ ಪ್ರೇರಣೆ ಪಡೆದಿದ್ದೇವೆ. ಇದು ಲವ್ ಸ್ಟೋರಿಯಾದರೂ, ಹೊಸ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಮೊದಲಿಗೆ ಅಜಯ್ ರಾವ್ ಅವರಿಗೆ ಈ ಕಥೆ ಹೇಳಿದಾಗ ನಾನು ನಿರ್ದೇಶಕನಷ್ಟೇ ಇದ್ದೆ, ನಂತರ ನಿರ್ಮಾಪಕನಾದೆ. ಚಿತ್ರ ವಿತರಣೆಗೆ ಕಾಂತರಾಜು…
ಮುಂದೆ ಓದಿ..
